ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಗಜಲ್

ಜಯಶ್ರೀ ಭ ಭಂಡಾರಿ

ಹೂವಿನ ಸುಗಂಧ ಬೇನೆಯ ನೀಗುತ ಹೊಸತು ಬರೆಸಲಿ ಗೆಳೆಯಾ.
ನೋವಿನ ಬಂಧ ಹಳತು ಮಾಗುತ ಸುಖದಿ ಮೆರೆಸಲಿ ಗೆಳೆಯಾ.

ಪರಿವಾರವೇ ಪರಿಹಾರ ನೀಡಿ ಹೊಂಗಿರಣ ತೂರಿ ತೋರುವುದಲ್ಲವೇ .
ಅರಿವಾದಾಗ ಜೀವನ ಸುಖ ದುಃಖಗಳ ಮಿಶ್ರಣ ಮರೆಸಲಿ ಗೆಳೆಯಾ.

ಸಿಹಿಯೊಂದೇ ಬಾಳಿನ ಬಂಡಿಯಲಿ ಬೇಡಿದರೆ ಸಿಗದು ನೆನಪಿರಲಿ 
ಕಹಿಯ ಖಳನ  ಕಾಣಿಕೆ ಬೆರೆತಾಗ ಮೌಲ್ಯವು ತೆರೆಸಲಿ ಗೆಳೆಯಾ

ನೋವೇನೇ ಅಪ್ಪಳಿಸಿದರೂ ದೇವನ ಅಪ್ಪಣೆಯೆಂದು ಮಾಸದ ನಗೆಯಿರಲಿ 
ನಲಿವನು ಅಪ್ಪಿ ಚಪ್ಪರಿಸಿ ಹೂಬನದಂತೆ ಅರಳುತ ಒಪ್ಪಿ ಎರೆಸಲಿ ಗೆಳೆಯಾ.

ಕರುಣಾಕರನ ದಯೆಯಲಿ ಏನಡಗಿದೆಯೋ ಬಲ್ಲವರಿಲ್ಲ ಜಯಾ ತಿಳಿದುಕೋ.
ಅರುಣನ ಅಣತಿಯು ಜಗವ  ಕಾಯ್ದು ಮುನ್ನಡೆಸಿ ಎಲ್ಲರ ಬೆರೆಸಲಿ  ಗೆಳೆಯಾ.


About The Author

1 thought on “ಜಯಶ್ರೀ ಭ ಭಂಡಾರಿ-ಗಜಲ್”

Leave a Reply

You cannot copy content of this page

Scroll to Top