ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಪ್ರಶ್ನೋತ್ತರ

ಸಂಗಾತಿಯ ಪ್ರಶ್ನೆಗಳಿಗೆ ಉತ್ತರ ನೀಡಿರುವ-

ಮಂದಾರ(ಕಾಲೇಜು ಉಪನ್ಯಾಸಕರು)

ಮಂದಾರ

ಸಂಗಾತಿಯ ಪ್ರಶ್ನೆಗಳಿಗೆ ಉತ್ತರ ನೀಡಿರುವ-ಮಂದಾರ

೧.ಸರಕಾರಿ  ಕನ್ನಡ ಶಾಲೆ ಬಲಪಡಿಸುವುದು ಹೇಗೆ?

ಕಡಿಮೆ ವಿಧ್ಯಾಥಿ೯ಗಳನ್ನು  ಸೇರಿಸಿಕೊಳ್ಳಿ. ಅವರ ಬಗ್ಗೆ ತುಂಬಾ ಕಾಳಜಿ, ಪ್ರೀತಿ ಇರಲಿ. ಅವರ ಮೌಲ್ಯಗಳ ಬಗ್ಗೆ ಗಮನ ಹರಿಸಿ, ವ್ಯಕ್ತಿತ್ವ ವಿಕಸನ ಮಾಡಿ. ನಿಮ್ಮ ಗುರುವಿನ ಕಾಯಕದಲ್ಲಿ ಶ್ರದ್ಧೆ ಇರಲಿ. ಕನ್ನಡ ಶಾಲೆಗಳು ಹಾಗೇ ಇರಲಿ. ಬದಲಾವಣೆ ಬೇಡ.

ಶಿಕ್ಷಕ ವೃತ್ತಿ ಮಾಡುತ್ತ ಶೇ. ೯೭% ರಷ್ಟು ನೌಕರರು ತಮ್ಮ ಮಕ್ಕನ್ನೇಕೆ ಶಾಲೆಗಳಿಗೆ ಸೇರಿಸಿಲ್ಲ.

ಸೇರಿಸಲು ಅವರಿಗೆ ಅಸಹ್ಯ, ಯಾಕೆ ಹೇಳಿ ಜನಗಳ ಮಾತು ಕೇಳ್ತಾರೆ… ಹಣ ಇಲ್ಲದವರು ಸರಕಾರಿ ಶಾಲೆಗೆ ಅನ್ನೋ ಭಾವ. ಈಗ ಇಲ್ಲ ಬಿಡಿ ಎಲ್ಲರೂ ಕನ್ನಡಿಕ್ಕೆ ಬೆಲೆ ಜಾಸ್ತಿ. ಒಂದಾನೊಂದು ಕಾಲದಲ್ಲಿ ಕನ್ನಡದ ಶಾಲೆಗಳ ಒಂದೆರಡು ನ್ಯೂನ್ಯತೆಗಳನ್ನು ಬಂಡವಾಳ ಮಾಡಿಕೊಂಡಿರುವ ಮುಖ೯ ಶಿಖಾಮಣಿಗಳೇ, ನಿಮ್ಮನ್ನು ಇಂಗ್ಲೀಷ್ ಮಾಧ್ಯಮಗಳೂ ಗೆಲ್ಲಲು ಕಾರಣ ನಮ್ಮೊಳಗೆ ಕನ್ನಡತನವೆಂಬ ಗಟ್ಟಿತನಅದರಲ್ಲಿತ್ತು.ಇಂಗ್ಲೀಷ್ನಲ್ಲಿ ಬರೀ ಬಣ್ಣ,ಟೊಳ್ಳು. ಈಗಲಾದರೂ ಇದರರಿವೂ ನಿಮಗಿರಲಿ.ಎಷ್ಟೇ ಆಗಲಿ ಎಲ್ಲ ಜೀವನದ ಮೌಲ್ಯಗಳು ಸಿಗುವುದು,ಶಿಸ್ತು,ನಾಡಿನ ಗಟ್ಟಿತನ ಉಳಿಯುವುದು ಕನ್ನಡ ಶಾಲೆಗಳಲ್ಲಿ. ನಾಡು ಕೈ ಜಾರುವ ಮುನ್ನ ಎಚ್ಚೆತ್ತುಕೊಂಡು ಬಿಡಿ

..ಶಿಕ್ಷಣ ಸಚಿವರು ಮತ್ತು ಅಧಿಕಾರಿಗಳು ಯಾಕೆ ಸರಕಾರಿ ಶಾಲೆಗಳಿಗೆ ನಿಮ್ಮ ಮಕ್ಕಳನ್ನು ಕಳುಹಿಸಿ  ಎಂದು ನೌಕರರಿಗೆ ಒತ್ತಾಯ ಮಾಡುವುದಿಲ್ಲ.

ಅದರ ಮಹತ್ವ ಅರಿಯಬೇಕಷ್ಟೇ.ಇದು ಪ್ರಜಾಪ್ರಭುತ್ವ.ನಮ್ಮತನ ನಮ್ಮನ್ನು ಉಳಿಸಬಲ್ಲದು. ನಮ್ಮ ಜೀವ, ಜೀವನದ ಭಾಷೆ ಕನ್ನಡ,, ನೆನಪಿರಲಿ. ಇಲ್ಲವಾದರೆ ಪರಕೀಯರ ಧಾಳಿಗೆ ಬಲಿ ಬೀಳಬೇಕಾಗುವುದು. ಮನೆಮನೆಗೆ ಗಣತಿ ಮಾಡುವ ರೀತಿ ಹೆಣ್ಣುಮಕ್ಕಳನ್ನು ಕನ್ನಡ ಶಾಲೆಗೆ ಕಳುಹಿಸುವಂತೆ ಪ್ರೇರೇಪಿಸಬೇಕು.

ಕನ್ನಡ ಒಂದು ಸಂಸ್ಕೃತಿ ಉಳಿಸುವ ಗಣ್ಯ, ಗಮ್ಯ, ಭಾಷೆ ಎಂದು ಅರಿಯುವ ಕಾರ್ಯಕ್ರಮಗಳಾಗಬೇಕು. ಶಾಲೆಗಳಲ್ಲಿ ಸಹ ವಿಷಯ ಆಯ್ಕೆಗಳು ಆಯಾ ಧರ್ಮಕ್ಕೆ ಅನುಸಾರವಾಗಿ, ಸಂಗೀತ, ಸಾಹಿತ್ಯ, ಕಲೆ ತರಗತಿಗಳು ಇರುವಂತೆ ಹೆಚ್ಚು ಪ್ರಾಧಾನ್ಯ ಇರಲಿ.

ಕನ್ನಡ ಉಳಿಸಲು ಸಕ೯ರ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಏನುಮಾಡಬೇಕು.

ಮನೆಮನೆಗೂ ಅಲೆದಾಡುವ ಉಚಿತ ಗ್ರಂಥಾಲಯ ಬರಬೇಕು. ಉಚಿತ ಪುಸ್ತಕ ನೀಡುವ ಅಭಿಯಾನಗಳಾಗಬೇಕು. ಕನ್ನಡಿಗರು ಕಡ್ಡಾಯವಾಗಿ ಕನ್ನಡ ಭಾಷೆ ಬಳಿಗೆ, ಸಾಹಿತ್ಯ ಆಸಕ್ತಿ ಬೆಳಿಸಿಕೊಳ್ಳಲು ನಿಯಮ ತರಬೇಕು


About The Author

Leave a Reply

You cannot copy content of this page

Scroll to Top