ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ನೆನಪಿನ ಬುತ್ತಿ

ಪುಷ್ಪಾ ಮಾಳಕೊಪ್ಪ

ಮತ್ತೆ ಏನಿಹುದು ನಿನ್ನೊಡನೆ ಕಳೆದಿಹ ದಿನವ
ಹೊತ್ತಸಿಹಿ ನೆನಪುಗಳ ಬುತ್ತಿಯೊಂದನು ಬಿಟ್ಟು |
ಒತ್ತಿ ಬರುಬರುತಿಹುದು ಘಳಿಗೆ ಕಳೆದಂತೆಲ್ಲ
ಕಿತ್ತು ಕಾಡಿದೆ ಎನ್ನ ಬಿಡದೆ ಮಾಯೆ||

ಹತ್ತು ವರುಷಗಳು ಕಳೆದಾರು ಜೊತೆಗೂಡಿರುವ
ಹೊತ್ತಲೆನ್ನಯ ಬಳಿಗೆ ಬಂದು ಸಾರಿ |
ಇತ್ತು ಒಲವಿನಲಂದು ಶಿರದಲಿಹ ನವಿಲುಗರಿ
ಚಿತ್ತ ಸೆಳೆದೋಡಿದೆಯೊ ನೀನೆತ್ತ ಜಾರಿ ||

ಬರುವೆ ನೀ ಎಂಬ ಒಂದಾಸೆಯಲಿ ಕಳೆದ ಚಣ
ಇರುತಿಹುದು ಬಿಸಿಲಲ್ಲು ಬೆಳದಿಂಗಳು |
ಬರಲಾರೆ ಎಂಬರಿವು ಅರೆಘಳಿಗೆ ಮೂಡಿರಲು
ಕರಗಿಹುದು ಕಾಯುತಿಹ ಬಿರಿಗಂಗಳು ||

ಸುರಿದೊಲವ ಇಬ್ಬನಿಯ ಎದೆಯ ಬೇಗುದಿಯನ್ನು
ಬರುವೆ ತಣಿಸುವೆಯೆಂಬ ಭರವಸೆಯ ತುಣುಕು |
ಚರಣದಾಸಿಯ ಬಾಳ ಕತ್ತಲೆಯ ಗೂಡಿನಲಿ
ಬರುವುದೆಂದಾದರೂ ಕಪ್ಪು ಬೆಳಕು||


About The Author

1 thought on “ಪುಷ್ಪಾ ಮಾಳಕೊಪ್ಪ-ಕವಿತೆ-ನೆನಪಿನ ಬುತ್ತಿ”

Leave a Reply

You cannot copy content of this page

Scroll to Top