ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಜಲ್

ಗಜಲ್

ದೀಪಿಕಾ ಚಾಟೆ

ಪಟ್ಟದಲ್ಲಿರಲು ಅಪವಾದಕೆ ಅಂಜಿ ನೀತಿಯ ತೊರೆಯದಿರು ನೀನು
ಬೆಟ್ಟದಲ್ಲಿರಲು ಮೃಗಗಳಿಗೆ ಹೆದರಿ ಪ್ರೀತಿಯ ಮರೆಯದಿರು ನೀನು

ಕಷ್ಟದಲ್ಲಿರಲು ಉಪಕಾರವ ಮಾಡದೇ ಇರುವುದುಂಟೇ ಹೇಳು
ಮುಷ್ಠಿಯಲ್ಲಿರಲು ಧನಕನಕವ ದಾನಮಾಡದೇ ಮೆರೆಯದಿರು ನೀನು

ಮನಸನು ಮಾಗಿಸುತ ಸಂಬಂಧಗಳ ಬೆಸೆಯಲು ಬಂಧವದು ಮೆಚ್ಚುವುದು ಕಾಣಾ
ಕನಸನು ಕಾಣುತ ಬಾಂಧವ್ಯಗಳಲಿ ಕಹಿಯಂಥ ವಿಷವನು ಬೆರೆಸದಿರು ನೀನು

ಒಲವ ಬಳ್ಳಿಯಲಿ ಕಾಮನಬಿಲ್ಲಿನಂತಹ ಗೆರೆಯು ಮೂಡಿದರೆ ಚೆಂದಲ್ಲವೇ
ಚೆಲುವ ಕಳೆಯಲಿ ಬೇಸರದ ಮುನ್ನುಡಿಯನು ಬರೆಯದಿರು ನೀನು

ಹೊನ್ನ ದೀಪವು ಬೆಳಗಿ ಪ್ರಶಾಂತತೆಯ ಹರಡುವುದು ಕಾಣುತಿದೆ ನೋಡು
ಕಣ್ಣ ಹೊಳಪಲಿ ಅನುರಾಗ ಅರಳಿರಲು ಬದಿಗೆ ಸರಿಯದಿರು ನೀನು


About The Author

Leave a Reply

You cannot copy content of this page

Scroll to Top