ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ನೆನಪುಗಳು

ಡಾ ಡೋ ನಾ ವೆಂಕಟೇಶ

ನೆನಪುಗಳ ಬುತ್ತಿ
ಕನಸುಗಳ ಜಳಕ

ಭಂಡಾರಕ್ಕೆ ಬೀಗ ಹಾಕಿ ಕೀಲಿಕೈ
ಮರೆತ ಜೀವನಾನುಭವ
ಮೊರೆತಗಳ ಭೋರ್ಗೆರೆವ
ರೌರವ

ಹಗಲಲ್ಲಿ ಕಂಡ
ನಟ್ಟಿರುಳ ಕನಸು
ಬೆಳಗಿನ ಜಾವದ ಕೆಂಡ
ಸಂಪಿಗೆಯ ಸುವಾಸನೆ
ಹಾವು ಹಾಡುತ್ತಾವೆ

ಹಾಗೇ
ಹಗಲು ಕಂದುವ ಹೊತ್ತು
ನರಸಿಂಹ ಕನಸ ಕೂಸನ್ನ
ಮಡಿಲಲ್ಲಿ ಹೊತ್ತು
ಉಗ್ರನಾಗಿದ್ದು, ವ್ಯಗ್ರನಾಗಿದ್ದು

ನಿನ್ನ ನೆನಪಿನ ಹಿರಣ್ಯ ಕಶ್ಯಪನಿಗೆ
ನನಸಿನ ಸಾತ್ವಿಕ ಕಯಾದು
ಉಪಮಾನ ಉಪಮೇಯಗಳ ಬಯಲಾಟ

ಹೋದ ಜನ್ಮದ ಪ್ರಿಯೆ ಹೇಳೆ
ನೀ ಯಾರು
ನರಸಿಂಹಳೇ ಯಾ
ಕಯಾದು ವೇ

ಫಲಿತಾಂಶ ಬಂದಾಗಿದೆ
ಪ್ರಹ್ಲಾದ ಹೇಳಿ ಆಗಿದೆ


About The Author

10 thoughts on “ಡಾ ಡೋ ನಾ ವೆಂಕಟೇಶ ಕವಿತೆ-ನೆನಪುಗಳು!”

  1. ನಿಮ್ಮ ನೆನಪಿನ ಬುತ್ತಿಯಲ್ಲಿ ಪ್ರಲ್ಲಾದ ಮಹಾರಾಜರ
    ದರ್ಶನ ಪಡೆದು ಈ ದಿನ ಸಾರ್ಥಕವಾಯಿತು.

  2. ತುಂಬ ಚೆನ್ನಾಗಿ ಮೂಡಿ ಬಂದಿದೆ ಫೊ ನಾ ,ಅಭಿನಂದನೆಗಳು..ನಿಮ್ಮ ಕವನಗಳ ಕೃಷಿ ಮುಂಫುವತೆಯಲಿ

  3. D N Venkatesha Rao

    ನಿಮ್ಮ ಚಪ್ಪಾಳೇಗಳ ಮಿಡಿತ ತುಡಿಯುತ್ತಲೇ ಇದೆ ,ಸೂರ್ಯ
    ಧನ್ಯವಾದಗಳು!

Leave a Reply

You cannot copy content of this page

Scroll to Top