ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ನಯನ. ಜಿ. ಎಸ್

ಗಜಲ್

ಚಂದ್ರಮನಿಗೂ ಪಕ್ಷದಲಿ ಕತ್ತಲೆಯ ಅಭಿಶಾಪ ಕಷ್ಟಗಳ ಲೆಕ್ಕಿಸದಿರು ಜೀವಾತ್ಮ
ಬಾನ್ಮಣಿಗೂ ಮುಗಿಲ ಕೌದಿ ಋತುಗಳೊಳು ನೋವಿಗೆ ಮರುಗದಿರು ಜೀವಾತ್ಮ

ಹಗಲಿರುಳು ತಿರುಗದಿದ್ದರೆ ಮಾಸಗಳ ಮಜಲುಗಳಿಗೆ ಕಾಯ್ವವರುಂಟೆ ಮರುಳೆ
ಏಳು ಬೀಳುಗಳ ಠೀವಿಗಳಿಗೆ ಅಸ್ಮೆತೆಗಾಗಿ ಕದನ ತ್ರಾಸಗಳ ವೀಕ್ಷಿಸದಿರು ಜೀವಾತ್ಮ

ತುಡಿಯುವ ಮನಕೆ ನೂರೆಂಟು ಭವ್ಯ ಭಾಷ್ಯ ಮಿಡಿಯುವವರು ಯಾರಿಲ್ಲ ಕೊನೆಗೆ
ಕನಸುಗಳ ಕಾಣುವುದು ಚಿರಂತನತೆಗೆ ಸ್ಪೂರ್ತಿ ಸೋಲುಗಳಿಗೆ ಮರುಗದಿರು ಜೀವಾತ್ಮ

ಭಾವದೋಘ ಸಾಗುತಿದೆ ಪರಿವರ್ತನೆಯ ಜಾಡಿನಲಿ ಫಲಾಪೇಕ್ಷೆ ಬಯಸಿದೆ ನವ್ಯತೆ
ಸಿಕ್ಕಾಗುತಿದೆ ತಿರುಚುವ ನಂಟುಗಳ ಗಂಟು ಭಾವಗಳ ಗುಜರಿಗಿಡದಿರು ಜೀವಾತ್ಮ

ಸವಿಯಲಿಚ್ಛಿಸದ ತಿರುವುಗಳ ಅಪೇಕ್ಷಿಸದಿದ್ದರೂ ಸಾಕ್ಷಿಯಾಗಬೇಕಿದೆ ನಯನಗಳು
ದ್ವಂದ್ವ ಯಾಣಕೆ ನಿಶ್ಚಿತತೆ ಸಿದ್ಧ ಹೊಂಬಿಸಿಲಿನಲಿ ತತ್ವಗಳ ಸಡಿಲಿಸದಿರು ಜೀವಾತ್ಮ


About The Author

3 thoughts on “ನಯನ. ಜಿ. ಎಸ್-ಗಜಲ್”

Leave a Reply

You cannot copy content of this page

Scroll to Top