ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಮಾನವೀಯತೆಯ ಮೆರೆಯೋಣ

ದೀಪಿಕಾ ಚಾಟೆ

ಹುಣ್ಣಿಮೆಯ ಬೆಳ್ಳಬೆಳದಿಂಗಿನಲಿ
ಸೂರ್ಯರಷ್ಮಿಯ ತುಣುಕೊಂದು
ಮಾಯಾದೇವಿಯ ಮಡಿಲಲಿ
ಬಂದಾಕ್ಷಣ ಯಾರಿಗರಿವಿತ್ತು?
ರಾಜನಾಗಿ ಮೆರೆಯಬೇಕಾದ ಹೊತ್ತು
ಮಡಿಯುಟ್ಟು ವೈರಾಗ್ಯವೇ ಮೈಮೆತ್ತು
ಕಾಡಲಿ ಅಡಿ ಇಡುವನೆಂದು
ಜಗಕೆ ಶಾಂತಿಯ ಬೆಳಕಾಗುವನೆಂದು
ದುಃಖವೆಂದರಿಯದ ರಾಜಕುವರ
ದುಗ್ಧತೆಯಿಂದ ಮನನೊಂದು
ಶಾಂತಿಯನರಸುತ ನಡೆದ ವೀರ
ಯಾಕಾಗಿ ? ಯಾಕಾಗಿ?
ತನ್ನಂತರಂಗದ ಕದವ ತೆರೆದು
ಹೊಸಗಾಳಿ ಮೈಮನದಿ

ಹೊಸಯುಗದಿ ಅಡಿಯನಿಡುತ
ಬೋಧಿಯಡಿ ಬುದ್ಧನಾದ ಅನವರತ
ಶಾಂತಿಯ ಚುಲುಮೆಯಾದ
ಜಗದ ಉದ್ಧಾರವಾಯಿತೇ?
ಜನರ ಬವಣೆ ಅಳಿಯಿತೇ?
ಸಿದ್ಧಾರ್ಥ ಬುದ್ಧನಾದ
ಬುದ್ಧ ಮಹಾಪುರುಷನಾದ
ಧರ್ಮಗಳ ಸಮಷ್ಠಿಗಳಲಿ
ಮತ್ತೊಂದು ಧರ್ಮದ ಸೃಷ್ಟಿ ಯಾಯಿತಲ್ಲಿ!

ಎಲ್ಲ ಧರ್ಮಗಳ ತಿರುಳೂ ಒಂದೇ
ಶಾಂತಿ ಸೌಹಾರ್ದತೆಯ ಸೆಲೆ
ಆದರೆ ಇದೇನಿದು? ಆದರೆ ಇದೇನಿದು?
ಆಯಾ ಧರ್ಮಗಳ ನೆರಳಲಿ
ಅಸಹನೆಯ ಬಲೆ
ಮಾನವ ನಿರ್ಮಿತ ಗೋಡೆ
ಗಿರಿಕಂದರಗಳ ತಡೆ
ನಾಹೆಚ್ಚು ನೀ ಹೆಚ್ಚು
ಎಂಬ ಹುಚ್ಚು ಬೇಕೇ?
ಒಂದೇ ತಾಯ ಮಕ್ಕಳಲಿ
ವಿಷ ಬೀಜವೇಕೆ?
ನೀಲನಭದ ಅಗಾಧತೆಯಲಿ
ಪ್ರಚ್ಛನ್ನ ಅಂಬುಧಿಯ ವಿಶಾಲತೆಯಲಿ
ನಾವೆಲ್ಲ ಒಂದಗೋಣ
ಮಾನವೀಯತೆಯ ಮೆರೆಯೋಣ
ಮಾನವೀಯತೆಯ ಮೆರೆಯೋಣ


About The Author

Leave a Reply

You cannot copy content of this page

Scroll to Top