ಕಾವ್ಯಸಂಗಾತಿ
ಗಜಲ್
ಶಾಲಿನಿ ರುದ್ರಮುನಿ

ಬಿಡಿಯಾಗಿ ಅಂಗೈಯಲ್ಲಿ ಹಿಡಿದ ಮರಳಲಿ ಬಂಧಗಳ ಸೊಬಗಿದೆ ದೊರೆ
ಹಿಡಿದ ಮುಷ್ಟಿಯ ಬಚ್ಚಿಟ್ಟ ಭಾವಗಳಲಿಬಿಡಿಯಾದ ಬೆರಗಿದೆ ದೊರೆ
ನಿತ್ಯ ಸತ್ಯತೇಲಿ ಏಕಾಂಗಿ ಮನದಿಂಪಿನ ಧುನಿ ಭರವಸೆಯಾಗಿದೆ
ನಿನ್ನ ಕಂಡ ಮನವು ಜೊನ್ನ ಹಂಬಲದ ತಿಳಿ ಬಾನಾಗಿದೆ ದೊರೆ
ಮೊಗೆದಂತೆ ಬಗೆಬಗೆಯಲಿ ತೀಡುತ ಪದಗಳ ತೀರದಲಿ ತಣ್ಣೆಲರಿದೆ
ನಾನಿನ್ನ ನೆನೆವೆನೆ ನೀನೆನ್ನ ನೆನೆಯುತಿರುವಂತೆ ಪ್ರೀತಿ ನದಿಯಾಗಿದೆ ದೊರೆ
ಸಾಗರವ ಅರಸುವಂತೆ ತೊರೆ ಬೆಟ್ಟ ಕಣಿವೆಗಳ ದಾಟಿ ಮೀಂಟಿ ಬರುತಿದೆ
ಬೆಂದ ಮನಕೆ ಸಾಂತ್ವಾನಿಸುತ ಮಳೆ ತಂಪಿನಮೃತವಾಗಿದೆ ದೊರೆ
ಸಾಗುತಿದೆ ಶಾರು ಭಾವ ನಿನ್ನೊಲುಮೆಯ ಪದದನಿಲಿ ದನಿಪದವಾಗಿಸಿದೆ
ಕಲ್ಲರೆಯ ಮೇಲೆ ಪಾದ ಸೋಕಿದ ನೀರಲೆಯಲುನಿನ್ನ ಕಂಡ ಭಾಸವಾಗಿದೆ ದೊರೆ




1 thought on “ಶಾಲಿನಿ ರುದ್ರಮುನಿ-ಗಜಲ್”