ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಶಾಲಿನಿ ಕೆಮ್ಮಣ್ಣು- ಹೊಸತನದ ಗಮಲು

ಹಗಲು ಸೂರ್ಯನ ಜ್ವಾಲೆ
ಮುಸ್ಸಂಜೆಯ ತಂಪು ಜಡಿ ಮಳೆ
ರಾತ್ರಿ ಸುಂದರ ದೀಪಗಳ ಸಾಲೆ
ಈ ಬಾರಿಯ ದೀಪಾವಳಿಯ ವಿನೂತನ ಕಳೆ

ಎಲ್ಲೆಲ್ಲೂ ಉತ್ಸಾಹದ ಹೊಳಪಿನ ರಂಗೋಲೆ
ಬಣ್ಣದ ಗೂಡು ದೀಪಗಳ ತೋರಣದ
ಊರೆಲ್ಲಾ ಸದ್ದಿನ ಪಟಾಕಿಯ ಸುರಿಮಳೆ
ಅಂಗಡಿ ಮಳಿಗೆಗಳಲ್ಲಿ ಜಂಗುಳಿಯ ಜನಸಾಲೆ

ದೀಪೋಲಿಯ ಕಂಬಗಳಲ್ಲಿ ಮಿನುಗುವ ಗದ್ದೆಸಾಲು ಹಣತೆಗಳಿಂದ ಸಿಂಗರಿಸಿದ ಮನೆಗಳ ಹೊಸಿಲು
ವಿದ್ಯುತ್ ದೀಪಗಳಿಂದ ಮಿನುಗುವ ಕಟ್ಟಡಗಳು
ಆಹಾ! ಫಸಲುನಿಸಿದ ಧರೆಗೆ ಹಬ್ಬ ತಂದ ಸಂತಸದ ಹೊನಲು
ಮನೆ ಮನಗಳಲ್ಲಿ ಹೊಸತನದ ಹುರುಪಿನ ಗಮಲು

ಬದಲಾದ ಋತುವಲಿ ಆರೋಗ್ಯ ಮಾತೆ ಧನವಂತರಿಯ ಮೊರೆ ಇಡುವ ಧಾಂತೆರಾಸ್
ಪಿತ್ರ್ ಗಳ ಸ್ಮರಿಸಿ ಭಕ್ತಿಯಿಂದ ಖಾದ್ಯಗಳ ಬಡಿಸಿ ವಸ್ತ್ರಗಳ ಅರ್ಪಿಸಿ ಕೃತಾರ್ಥರಾಗುವ ದಿನ
ನರಕನ ವಧಿಸಿ ಕೊಳೆಯನ್ನು ತೊಳೆದ ಕೃಷ್ಣನ ನಮಿಸುತ ಗಂಗೆಯ ವಂದಿಸಿ ಅಭ್ಯಂಜನ

ಯುವತಿಯರ ಸಲಹಿ ಅಂಧಕಾರವ ಅಳಿಸಿದಕೆ
ಸಾಲು ಹಣತೆಯ ಬೆಳಕು ಚೆಲ್ಲುವ ದೀಪಾವಳಿ
ಲಂಕೆಯ ಜಯಿಸಿದ ರಾಮನ ವಿಜಯೋತ್ಸವದ ಭಕ್ತಿಯ ಸಡಗರ
ಧನಲಕ್ಷ್ಮಿಯ ಇಷ್ಟದಿ ನೆನೆಯುವ ಲಕ್ಷ್ಮಿ ಪೂಜೆ

ತುಳಸಿಯೊಳು ವೆಂಕಟರಮಣನ ಆರಾಧಿಸುವ ಕಟ್ಟೆ ಪೂಜೆ
ಬಲಿಯನು ತುಳಿದು ಭುವಿಯನು ಉಳಿಸಿದ ತ್ರಿವಿಕ್ರಮ ವಾಮನನ ಸ್ಮರಿಸುತ ಬೇಡುವ ಅಭಯ
ದೀಪ, ತಾಂಬೂಲವನಿಟ್ಟು ಒಕ್ಕೊರಲಲಿ ಮಾರ್ಮಿಕವಾಗಿ ಬಲಿಂದ್ರನ ಕರೆಯುತ ಸಂತಸ ಪಡುವ
ತ್ಯಾಗಮಯಿ ಗೋಮಾತೆಯ ಸಿಂಗರಿಸಿ ಶ್ರದ್ಧೆಯಿಂದ ಪೂಜಿಸಿ ಕೃತಜ್ಞರಾಗುವ

ವಿಧವಿಧ ಆಚರಣೆಯಲ್ಲೂ ಬಗೆಬಗೆ ನೀತಿಯ ಸಾರುವ
ಪೂಜೆ ಆಚರಣೆಗಳ ಸದ್ದು ಗದ್ದಲದ ವಿಜೃಂಭಣೆಯ

ನೋವನು ಮರೆಯುತ ನೆಮ್ಮದಿಯ ಕಾಣುವ
ಹರುಷ ಹಂಚುತ ಪ್ರೇಮದಿ ಬೆರೆಯುವ
ದುಷ್ಟ ಶಿಕ್ಷಣ ಶಿಷ್ಟ ರಕ್ಷಣದ ನೀತಿಯ ಕಲಿಸುವ
ತ್ಯಾಗದ ದುಡಿಮೆಯ ಒಲವಿನ ಗೆಲುವಿನ
ಆರೋಗ್ಯ ಐಶ್ವರ್ಯ ಸಿದ್ಧಿ ಬುದ್ಧಿಯ
ಹರಕೆ ಇಷ್ಟಾರ್ಥಗಳ ಈಡೇರಿಸುವ
ವೃದ್ಧಿ- ಸಮೃದ್ಧಿಯ ಸಂಕೇತದ
ಹಬ್ಬಗಳ ಹಬ್ಬ….ದೀಪಾವಳಿ.


About The Author

Leave a Reply

You cannot copy content of this page

Scroll to Top