ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಸಂಗಾತಿ

ಡಾ.ಮಮತಾ (ಕಾವ್ಯ ಬುದ್ಧ)

ಗಜಲ್

ಸೂರ್ಯರಶ್ಮಿಯು ಹಣೆಮೇಲೆ ಬೀಳುವಂತಿದೆ ನಿನ್ನ ಮೊಗದ ಮಾಂತ್ರಿಕ ನಗು
ನನ್ನ ಹೃದಯದ ಗೂಡಿನಲ್ಲಿ ಅಚ್ಚಳಿಯದಂತಿದೆ ನಿನ್ನ ಮೊಗದ ಮಾಂತ್ರಿಕ ನಗು

ಸುಂದರ ಹೂದೋಟದಲ್ಲಿ ಅರಳುವ ಪುಷ್ಪಗಳಾಗಿ ಹೋಯಿತೇಕೆ
ಜೀವನದಲಿ ಹೊಸಹುರುಪು ನೀಡುವಂತಿದೆ ನಿನ್ನ ಮೊಗದ ಮಾಂತ್ರಿಕ ನಗು

ಮರುಭೂಮಿಯ ಓಯಸಿಸನಂತ ನಗೆಗೆ ನಾ ಬಂಧಿಯಾದೆ
ಹೊಸಚೈತನ್ಯದ ಚಿಲುಮೆ ಮೂಡಿಸುವಂತಿದೆ ನಿನ್ನ ಮೊಗದ ಮಾಂತ್ರಿಕ ನಗು

ಸಾಗರದಿಂದ ಉದ್ಬವಿಸಿದ ಮುತ್ತಂತೆ ಭಾವನಾತ್ಮಕ ನೋವಿದು
ದೂರಸರಿಯುವ ಸಮಯದಿ ಕಾಡಿಸುವಂತಿದೆ ನಿನ್ನ ಮೊಗದ ಮಾಂತ್ರಿಕ ನಗು

ನಕ್ಷತ್ರಗಳಿಗೂ ಹೊಳಪು ಕೊಟ್ಟು ಪೌರ್ಣಿಮೆಯ ಚಂದ್ರಳಾದೆಯಲ್ಲ
ಮಮತೆಯ ಕೀರ್ತಿ ಉತ್ತುಂಗಕ್ಕೆ ಏರಿಸುವಂತಿದೆ ನಿನ್ನ ಮೊಗದ ಮಾಂತ್ರಿಕ ನಗು

ಡಾ.ಮಮತಾ (ಕಾವ್ಯ ಬುದ್ಧ)


About The Author

4 thoughts on “ಡಾ.ಮಮತಾ (ಕಾವ್ಯ ಬುದ್ಧ)-ಗಝಲ್”

    1. ನಗು ಜೀವನದ ಬಹು ಮುಖ್ಯವಾದ ಅಂಶ,, ಆದರೆ ನಗುವಿಲ್ಲಿ ಹಲವಾರು ರೀತಿಯ ನಗುವಿದೆ. ಒಬ್ಬರ ನಗುವಿನಿಂದ ಮನ ಸೆಲೆಯಲುಬಹುದು ಮನಮುರಿಯಲುಬಹುದು.ನಗುವಿನಿಂದ ಆರೋಗ್ಯವಿದೆ ನಮಗೆ ಎಷ್ಟೇ ನೋವಿದ್ದರೂ ಎಲ್ಲರಿಗಾಗಿ ನಗಿಸುವವರ ನಗುವಿನ ಅರ್ಥ ತ್ಯಾಗ..!

Leave a Reply

You cannot copy content of this page

Scroll to Top