ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಸಂ ಕಷ್ಟಹರನ ಮೆನಿ ಕಷ್ಟ! 

ಸಂ ಕಷ್ಟಹರನ ಮೆನಿ ಕಷ್ಟ! ರೂಪ ಮಂಜುನಾಥ ಹದ್ನೈದು ದಿನವಾದ್ರೂ ಗಣಪ್ಪನ್ನ ನೋಡೋಕೆ ಹೋಗೋಕಾಗ್ಲೇ ಇಲ್ಲ. ಒಂದಲ್ಲಾ ಒಂದು ಕೆಲಸ,ಕಾರ್ಯ, ತಾಪತ್ರಯ!ಅಲ್ಲಾ ಮೂರು ಮತ್ತೊಂದ್ ಜನರ ನಿಗಾ ಮಾಡೋಕೇ ನಮ್ಗೆ ಇಷ್ಟೆಲ್ಲಾ ಮುಗಿಯದ ಪಾಡು!ಹೀಗಿದ್ದಾಗ,ಲೋಕವೆಲ್ಲಾ ಕಾಯೋ ಸರ್ವೇಶ್ವರನಿಗೆ ಅದೆಷ್ಟು ಕೆಲಸಾ…ಕಾರ್ಯಾ …..ತಾಪತ್ರಯವೋ?????ಅದೆಲ್ಲಾ ಅದ್ ಹ್ಯಾಗ್ ನಿಭಾಯಿಸ್ತಾನೋ, ಅದ್ಯಾವ್ ಮ್ಯಾನೇಜ್ಮೆಂಟ್ ವಿಶ್ವವಿದ್ಯಾಲಯಕ್ಕೆ ಹೋಗಿ ಡಿಸ್ಟಿಂಗ್ಷನ್ ನಾಗೆ ಪಾಸಾಗಿ ಬಂದೌನೋ, ಏನೋ, ಆ ಭಗವಂತನಿಗೇ ಗೊತ್ತು!ಪ್ರತಿದಿನ ಗಣಪನ ಹೋಗಿ ಮಾತಾಡಿಸೋಣವೆಂದು  ಮನಸ್ಸು ತುಡೀತಾ ಇತ್ತಾ, ಅಂತೂ ಇಂತೂ ಕೊನೆಗೆ ಈ ದಿನ ಸಂಜೆ ಸೊಲ್ಪೊತ್ತಾದ್ರೂ ಪೆಂಡಾಲಿಗ್ ಹೋಗಿ, ಗಣಪ್ಪನ್ ಜೊತೇಲಿ ಇದ್ದು ಮಾತಾಡ್ ಬರೋಣಾಂತ ನಿರ್ಧಾರ ಮಾಡಿದೋಳೇ, ಹೇಗೋ ಹೋದೆ. ಗಣಪನ ಮುಂದೆ ಹೋಗಿ, ನಗುತ್ತಾ ಕೈ ಅಲ್ಲಾಡಿಸಿದೆ.ನನ್ನ ನೋಡುತ್ತಲೇ ದೂರ್ವಪ್ರಿಯ ಗಜಾನನ, ದುರ್ದಾನ ತೆಗೆದುಕೊಂಡಂತೆ ತನ್ನ ಕತ್ತನ್ನ ಪಕ್ಕಕ್ಕೆ ತಿರುಗಿಸಿಯೇಬಿಟ್ಟ!ನನ್ ಮುಖಕ್ಕೆ ತಣ್ಣೀರೆರಚಿದಂತಾಯಿತು.ಆದರೂ,ಮುದ್ದು ಗಣಪ ಮುಖ ಊದಿಸಿಕೊಂಡ ಕಾರಣವಾದ್ರೂ ಕೇಳೋಣ, ನನ್ ತಪ್ಪಿದ್ರೆ ಸಾರಿ ಕೇಳ್ಕೊಂಡು ಸರಿ ಪಡಿಸಿಕೊಳ್ಳೋಣ, ಅದ್ರಲ್ಲೇನ್ ತಪ್ಪೂ….., ಅಂತ ಅವನು ಮುಖ ತಿರುಗಿಸಿದ ಕಡೆಗೇ ಹೋಗಿ ಮತ್ತೊಮ್ಮೆ ಅವನನ್ನೇ ನೋಡುತ್ತಾ ನಿಂತೆ.ದೃಷ್ಟಿ ಬೇರೆ ಕಡೆ ಬದಲಿಸಿದ.ಯಾಕೋ ಶೂರ್ಪಕರ್ಣನ ಮುಖವೆಲ್ಲಾ ವಿವರ್ಣವಾಗಿ, ಕಣ್ಣುಗಳೆಲ್ಲಾ ಬಾತುಕೊಂಡಂತೆ, ಕೆಂಪಗಾಗಿ ಹೋಗಿದ್ದವು. ಅವನ ಅವಸ್ಥೆ ನೋಡಿ, ನನಗೆ ಮನಸಿಗಾದ ನೋವು ,ಅವಮಾನ ಮರೆತೇ ಹೋಗಿ, ಪಾಪ, ಅವನನ್ನ ಕಂಡು ಸಂಕಟವಾಯಿತು. ಹತ್ತಿರ ಹೋಗಿ,”ಯಾಕೋ ಗಣಪ್ಪಾ, ಯಾಕೋ ಹಿಂಗಿದ್ದೀಯಾ?”, ಅಂದೆ, ಆ….ಬಿಗಿಯಾದ ಮುಖವೇನೂ ಸಡಿಲವಾಗಲಿಲ್ಲ. “ಅಲ್ಲ ಕಣೋ ಗಣಪ್ಪಾ,ಅಕ್ಕಾ ಅಕ್ಕಾ ಅಂತೀಯಾ, ನಿನ್ ಪ್ರಾಬ್ಲಮ್ ನನ್ ಹತ್ರ ಹೇಳ್ಕೋಬಾರ್ದೇನಯ್ಯಾ?”,ಅಂತ ಕಕ್ಕುಲಾತಿಯಿಂದ ಕೇಳಿದೆ.ಅದಕ್ಕೆ ಕುಂಬಳಕಾಯಿ ಮುಖ ಮಾಡಿಕೊಂಡ ಗಣಪ,”ನೀನ್ ಮಾತ್ರ ಏನಕ್ಕಾ ,ತಮ್ಮಾ ತಮ್ಮಾಅಂತೀಯಾ? ಬರಬೇಕೂಂತ ಮನ್ಸು ಮಾಡುದ್ರೆ ಎಷ್ಟೊತ್ತೂ?  ಐದಾರು ನಿಮ್ಷ ಹೆಜ್ಜೆ ಹಾಕುದ್ರೆ, ಪೆಂಡಾಲ್ ಸಿಗುತ್ತೆ. ಹದ್ನೈದ್ ದಿನ ಆಗ್ಬೇಕಾ? ಈ ಕಡೆ ಬರಕ್ಕೇ?ನನ್ ಮಾತಾಡ್ಸೋಕೇ”,ಅಂತ ಮೂತೀನ ಬೋರಲು ಹಾಕಿಕೊಂಡ ಚೌತಿ ಚಂದ್ರನಂತೆ ಶೇಪು ಮಾಡಿದ. ನಾನು,”ಏನ್ಮಾಡ್ಲೋ ಯಪ್ಪಾ,   ದಿನಾ ದಿನಾ ಏನೇನೋ ಎಂಗೇಜ್ಮೆಂಟ್ಸು. ಸಂಸಾರದಲ್ಲಿನ ಕೆಲಸ ಬೊಗ್ಸೆ, ಇದ್ರ ಮಧ್ಯೆ ನವ್ರಾತ್ರಿ,ಪೂಜೆ, ದೇವಿ ಮಹಾತ್ಮೆ ಇದೆಲ್ಲಾ ಓದೋದಿರುತ್ತಲ್ಲಾ. ಸಂಜೆ ಮೇಲೆ ಅಮ್ನೋರ್ ಗುಡೀಗ್ ನಡೀ, ಅಂತ ಹೀಗೇ…..ಏನೋ ಒಂದು. ಲೈಫಲ್ಲಿ ಸ್ಟ್ರಕ್ಕಾಗ್ಬಿಟೀದೀನೋ ಮಾರಾಯಾ! ಯಾವಾಗ ಎಲ್ಲಾ ರೆಸ್ಪಾನ್ಸಿಬಿಲಿಟಿಯಿಂದ ರಿಟೈರ್ಮೆಂಟ್ ಸಿಗುತ್ತೋ.ಯಾವಾಗ್ ಆರಾಮಾಗ್ ನಿಮ್ಗುಳ್ ಜೊತೆ ಕಾಲ ಕಳಿಯೋ ಸಮಯ ಬರುತ್ತೋ ಕಾಣೆ ಕಣಪ್ಪ.ಮೋದಕ ಪ್ರಿಯಾ. ಯಾವ್ದಕ್ಕೂ ಉತ್ಸಾಹವೇ ಇಲ್ದಂಗಾಗೋಗಿದೆಯಯ್ಯಾ….”, ಅಂತ ಟೈಯರ್ಡ್ ಆದ ಭಾವನೆಯಲ್ಲಿ ಹೇಳಿಕೊಳ್ಳುತ್ತಿದ್ದೋಳು,”ಅಯ್ಯೋ ಬಿಡು, ಈ ನರಮಾನವಳಿಗೆ ಬವಣೆ ಇದ್ದಿದ್ದೇ. ನಿನ್ಗೆಂಥ ಅನುಭವಿಸೋ ಬವಣೆಯೋ ಬೆನಕಪ್ಪಾ?”, ಅಂದೆ. ಗಣಪನ ಕಣ್ಣಿಂದ ಬಳಬಳನೇ ನೀರು ಸುರಿಯತೊಡಗಿತು.”ಇದೇನಿದೂ, ವಿಘ್‌ನೇಷಾ, ನಿನಗ್ಯಾಕೆ ಇಂಥ ಭಾವಾವೇಶ? ನೀನು ಅಳೋದಾ? ನಾನ್ ನಂಬಕ್ಕಾಗ್ತಿಲ್ಲಾ!! ಇದೇನ್ ಸತ್ಯಾನೋ, ಕನ್ಸೋ?  ಏನಪ್ಪಾ ನಿನ್ ಪ್ರಾಬ್ಲಮೂ?ಅಪ್ಪ, ಅಮ್ಮನ್ನ ನೋಡೋ ಹಂಗಾಗಿದೆಯಾ? ತಮ್ಮಂದಿರನ್ನ ಮಿಸ್ ಮಾಡ್ತಿದೀಯಾ? ಕೈಲಾಸಕ್ಕೆ ಹೋಗ್ಬೇಕಾ? ಹೋಮ್ ಸಿಕ್ಕಾ ವಿನಾಯಕಾ…..ಯಾಕಯ್ಯಾ ಈ ಶೋಕಾ?”, ಅಂತ ಶಾಕಾಗಿ ಮತ್ತೊಮ್ಮೆ ಪ್ರಶ್ನೆ ಮೇಲ್ ಪ್ರಶ್ನೆ ಹಾಕಿ ಕಂಟಿನೂಯಸ್ ಕಾಳಜಿ ತೋರ್ಸಿ  ಕೇಳಿದೆ.ಗಣೇಶ ಎಲ್ಲದಕ್ಕೂ ತಲೆ ಅಡ್ಡಡ್ಡ ಆಡಿಸಿ,”ಅಕ್ಕಾ, ಅರೆತಲೆ ನೋವಕ್ಕಾ ತಡ್ಕೊಳಕ್ಕಾಗ್ತಿಲ್ಲ”, ಅಂತ ಮುಖ ಹಿಂಡಿ ಹೇಳಿದ. ನಾನೂ,”ಏನೂ, ಮೈಗ್ರೇನಾ? ನಿಂಗ್ಯಾಕ್ ಬಂತೋ ದೇವಾ ಈ ತೊಂದ್ರೆ?”, ಅಂದೆ.ಅದಕ್ಕೆ,”ಅಕ್ಕಾ, ದಿನಾ ಪೆಂಡಾಲ್ ನಲ್ಲಿ ನನ್ ಬಲ್ಗಡೆಗೆ ಹಾಕಿರೋ ಸ್ಟೇಜ್ ಮೇಲೆ ನಡ್ಯೋ ಕಾರ್ಯಕ್ರಮದ ಸೌಂಡು  ಕೇಳೀ ಕೇಳೀ   ರೈಟ್ ಸೈಡ್ ಹೆಡ್ಡು ಸಿಡಸಿಡಾಂತ ಸಿಡ್ದೋಗ್ತಾ ಇದೆ ಕಣಕ್ಕಾ.”ಅಂದ. ನಾನು,”ಅಯ್ಯೋ……ಹೌದೇನಪ್ಪಾ? ನಿನ್ ಎಂಟರ್ಟೇನ್ಮೆಂಟಿಗೇಂತ, ನಿನ್ಗೆ ಕುಶ್ಕುಶಿಯಾಗಿ ಇಡಬೇಕೂಂತಾ ಪಾಪ ಮಂಡಲಿಯೋರು ಎಲ್ಲೆಲ್ಲಿಂದ್ಲೋ ಕಲಾಕಾರರನ್ನ  ಕರ್ಸಿ, ಸಾವ್ರಾರು ರೂಪಾಯಿ ಸುರ್ದು, ಅವ್ರ ಕೆಲ್ಸ ಕಾರ್ಯಗಳ್ನೆಲ್ಲಾ ಬಿಟ್ ಬಂದು, ನಿನ್ಗೋಸ್ಕರ ಟೈಮ್ ಕೊಟ್ಟು, ಪ್ರೋಗ್ರಾಮಗುಳ್ನ ಅರೇಂಜ್ ಮಾಡಿದಾರೆ. ನೀನೇನ್ ಅವ್ರ ಶ್ರಮಕ್ಕೆ ಮೆಚ್ಚಿಕೆ ಸೂಚಿಸೋದ್ ಬಿಟ್ಟು ಹಿಂಗ್ ವಕ್ರ ಮಾತಾಡ್ತಿದೀಯೋ ವಕ್ರತುಂಡಾ?”, ಅಂದೇ. ಅದಕ್ಕೆ ಗಣಪ,”ಅಯ್ಯಯ್ಯೋ ನಿಮ್ ದಮ್ಮಯ್ಯಾ! ನಾನ್ ಯಾವಾಗ್ ಕೇಳ್ಕಂಡಿದೀನಕ್ಕಾ ಈ ಪ್ರೋಗ್ರಾಮ್ಗುಳ್ನಾ? ಸ್ವಾಮಿ ಕಾರ್ಯಾಂತ ಹೇಳಿ, ನೀವ್ಗುಳ್ ಬೇಜಾನ್ ಮಜಾ ಮಾಡಿ, ಸ್ವಕಾರ್ಯ ಪೊರೈಸಿಕೊಳ್ತಿದೀರೀ. ಐ ಆಮ್ ನಾಟ್ ಅಟಾಲ್ ಹ್ಯಾಪಿ.ದಿಸ್ ಪ್ರೋಗ್ರಾಮ್ಸ್‌ ಆರ್ ರೈಸಿಂಗ್ ಮೈ ಬಿಪಿ”, ಅಂದು,”ಏನಕ್ಕಾ, ವಾರುಕ್ ನಾಕ್ ನಾಕ್ ಆರ್ಕೇಸ್ಟ್ರಾ ಮತ್ತೆ ಕುಣಿತದ್ ಪ್ರೋಗ್ರಾಮೂ!ಅಬ್ಬಬ್ಬಬ್ಬಬ್ಬಾ, ಆ ಬೀಟ್ಸೂ, ಆ ನಾಯ್ಸೂ,ಆ ವಾಯ್ಸ್ ಗೆ, ನನ್ ಪುಣ್ಯ, ಇನ್ನೂ ಕಿವಿ ತೂತ್ ಬಿದ್ದಿಲ್ಲ.ಇದ್ರ ಜೊತ್ಗೆ ಅದೇನ್ ಸ್ಟೇಜ್ ಅದುರೋ ಹಂಗೆ ಹುಚ್ಚುಚ್ಚು ಕುಣಿತಾ,ಆ ಚಿತ್ರ ವಿಚಿತ್ರ ಉಪೇಂದ್ರನ ವೇಷ  ಮೀರ್ಸೋ ಕಾಸ್ಟೂಮ್ಸೂ!ಅಲ್ಲ ಕಣಕ್ಕಾ, ನಾನು ಬ್ರಹ್ಮಚಾರೀಂತ ಗೊತ್ತಿದ್ದೂ, ಅದೇನ್ ಹೆಣ್ಮಕ್ಕಳು ಎಂತೆಂಥವೋ ತುಂಡುಡುಗೆ ಹಾಕೊಂಡ್ , ಗಂಡು ಮಕ್ಕಳು ಚಿತ್ರವಿಚಿತ್ರವಾಗಿ ಬಾಲಿವುಡ್ಡು, ಹಾಲಿವುಡ್ಡು, ಸ್ಯಾಂಡಲ್ವುಡ್ಡು, ಕಾಲಿವುಡ್ಡೂ, ಟಾಲಿವುಡ್ಡೂ ಎಲ್ಲಾ ವುಡ್ಡುಗಳ ಟಪಾಂಗುಚ್ಚಿ, ಐಟಮ್ ಸಾಂಗುಗಳಿಗೆ ನನ್ನ ಮುಂದೆ  ನುಲಿಯುವುದೂ, ಕುಣಿಯುವುದೂ…….ಅಬ್ಬಬ್ಬಬ್ಬಬ್ಬಾ, ಇದೆಲ್ಲಾ ನೋಡ್ಲಾರ್ದೆ, ನಾನೇ ಹೋಗಿ ಹೊಳೆಗೆ ಹಾರ್ಕೊಂಬಿಡೋಣಾಂತ ಎಷ್ಟೋ ಸಾರಿ ಅನ್ಸುತ್ತೆ.ಏನೋ ಇದ್ರ ಮಧ್ಯ ಅಲ್ಲಿ ಇಲ್ಲಿ ಒಂದೊಂದಿನ ಹರಿಕಥೆ, ಭಕ್ತಿಗೀತೆ, ಭರತನಾಟ್ಯ, ಯಕ್ಷಗಾನ ಇಂಥವು ನನ್ ತಲೆ ನೋವಿಗೆ ಸ್ವಲ್ಪ ಮುಲಾಮು ಹಚ್ದಂತೆ ಹಾಯನ್ಸುತ್ತೆ ಅಷ್ಟೇ”, ಅಂದ. ಅದಕ್ಕೆ ನಾನು,”ಅಷ್ಟು ದೊಡ್ಡದಾಗಿ ಮೊರದಗಲ ಕರ್ಣಗಳಿದೆ ಸುಮ್ನೆ ಅವುಗಳ್ನ ಮುಚ್ಕೊಂಡು ಶಿವಾ….ಂತ  ಕೂತ್ಬಿಡೋದಲ್ವೇನಪ್ಪಾ ಗಜಕರ್ಣಾ? “ಅಂದೆ. ಅದಕ್ಕೆ ಈ ಶೂರ್ಪಕರ್ಣ ತನ್  ಕೆಂಪಗಾದ ಕಣ್ಬಿಟ್ಟು,”ಏನಕ್ಕಾ ನಿನ್ಗೆ ತಮಾಷೆ ಮಾಡೋಕೆ ಟೈಮ್ ಸೆನ್ಸೂ ಇಲ್ವಾ?ನಾನ್ ಪಡ್ತಿರೋ ಪಾಡ್ನ ಹೇಳ್ಕೊಂಡ್ರೆ, ನಿನ್ಗೆ ನಿನ್ದೇ ಕಾಮಿಡಿ, ಏ……ಹೋಗಕ್ಕಾ ನೀನೊಂದು ”, ಅಂತ ಉಗ್ರನಾಗಿ ಬೈದೇಬಿಟ್ನಾ…!  ನನಗಿದು ಬೇಕಿತ್ತೇ? ಅಂತ ನಾನೇ ಸಮಾಧಾನ ಮಾಡಿಕೊಂಡು,”ನಿನ್ ಮನ್ಸಿಗೆ ನೋವಾಗಿದ್ರೆ ಕ್ಷಮಿಸಪ್ಪಾ,ಬುದ್ದಿ ಇಲ್ದೆ ಮಾತಾಡ್ದೆ ಕಣೋ ಸಿದ್ದಿ ವಿನಾಯಕ”, ಅಂದು ಎರಡು ಕಪಾಳಕ್ಕೆ ನಾನೇ ಹೊಡೆದುಕೊಂಡೆ.” ಹೋಗ್ಲಿ ಬಿಡಕ್ಕಾ, ನಾನೂ ಸದರದಲ್ಲಿ ಬೈದೇ”, ಅಂತ, ಸಮಾಧಾನ ಮಾಡಿಕೊಂಡು ಮತ್ತೆ ತನ್ನ  ಅಸಮಾಧಾನ ತೋಡಿಕೊಳ್ಳೋಕೆ ಶುರುಮಾಡಿಕೊಂಡ.”ಅದ್ ಹೋಗ್ಲೀಂದ್ರೆ, ಇವ್ರ ಕುಣಿತವೆಲ್ಲ ಮುಗಿದು,ಅಷ್ಟು ಸ್ಟೇಜೆಲ್ಲಾ ಅದ್ರಿ ಹೋಗುವಂತೆ  ಕುಣಿದಿದ್ದಕ್ಕೆ ಅವರಿಗೆ ಹಾರ ,ತುರಾಯಿ, ಹಣ್ಣು ಕಾಯಿಯೊಂದಿಗೆ ಆನರ್ ಮಾಡಿ, ಎಲ್ಲರನ್ನ ಮನೆಗೆ ಕಳಿಸಿ, ನನಗೆ ತೆರೆ ಎಳೆಯುವ ಹೊತ್ತಿಗೆ ಮಧ್ಯರಾತ್ರಿ ದಾಟ್ಹೋಗುತ್ತೆ. ನಿನ್ ಹತ್ರ ನಿಜ ಹೇಳ್ತೀನಕ್ಕಾ, ಕಣ್ ತುಂಬ ನಿದ್ದೆ ಮಾಡಿ ಎರಡ್ ವಾರದ್ ಮೇಲಾಯ್ತು. ಏನೋ ಕಣಕ್ಕಾ ಈ ಪಿರಿಪಿರಿ ನನ್ಗೆ ಸರಿ ಹೋಗ್ತಲೇ ಇಲ್ಲ.”ಅಂದ ನೊಂದು ನುಡಿದ ಕರಿವದನ!  ನಾನು,”ನಿಜ ಕಣೋ, ನಾನೂ ಇಲ್ಲಿಗೆ ಬಂದ್ ನಿನ್ ಮಾತಾಡ್ಸದೇ ಇರೋಕೆ, ಅದೂ ಒಂದ್ ಕಾರ್ಣ! ಆರ್ಕೇಸ್ಟ್ರಾ ಶುರ್ವಾಗ ಅರ್ಧ ಗಂಟೆ ಮುಂಚಿಂದ್ಲೇ ಅರ್ಧ ಮುಕ್ಕಾಲ್ ಊರ್ ಜನಾ ಎಲ್ಲಾ ಇಲ್ಲೇ ಸೇರ್ಕೊಂಡು, ಒಂದು ಗುಂಡ್ ಸೂಜೀನೂ ನುಸ್ಳೋಕೆ ಆಗ್ದಿರುವಷ್ಟು ಜನಜಾತ್ರೆ. ಆ ಜಾತ್ರೆ ಸಂದೀಲ್ ಬಂದು, ನಾನ್ ನಿನ್ನ ಹತ್ರ  ಮಾತಾಡೋದಾದ್ರೂ ಹಂಗೇಳೋ ಗೌರೀಪುತ್ರಾ? “, ಅಂದೆ. ಅದಕ್ಕೆ,”ಅದೂ ಸರೀನೇ.ಹೋಗ್ಲಿ ಬಿಡಕ್ಕಾ. ನಂಗಂತೂ ಅನುಭವಿಸ್ದೆ ಬೇರೆ ದಾರಿ ಇಲ್ಲ. ನೀನಾದ್ರೂ ಮನೇಲಿ ನೆಮ್ದೀಲಿರು”, ಅಂದ.ನಾನು,”ಅಯ್ಯೋ ಮನೇ ಹತ್ರ ಮಾತ್ರುಕ್ಕೆ ಏ…..ನ್ ನೆಮ್ದಿ ಬಿಡು. ಸೋ ಕಾಲ್ಡ್ ನಿನ್ ಭಕ್ತರ್ ಟಾರ್ಚರ್ ತಡ್ಕೊಳಕ್ಕಾಗ್ತಿಲ್ಲ ಕಣಪ್ಪಾ. ನಾನು ರೋಸೋಗ್ಬಿಟಿದೀನೋ ಲಂಬೋದರಾ…”, ಅಂದೆ. ಅದಕ್ಕೆ ಗಣಪ,”ಯಾಕಕ್ಕಾ ನನ್ ಭಕ್ತರಿಂದ  ನಿಂಗೇನಂಥ ಪ್ರಾಬ್ಲಮ್?”, ಅಂದ. ಅದಕ್ಕೆ,”ಅಲ್ವೋ ಮರೀ, ದಿನ್ದಿನಾ ನಿನ್ ಹೆಸ್ರೇಳ್ಕೊಂಡು ಒಳ್ಳೆ ರೌಡಿಗಳ ಥರ ಹಫ಼್ತಾ ವಸೂಲಿ ಮಾಡೋ ರೀತೀಲಿ  ಮನೆಯೊಳಗೆ ನುಗ್ಗೋ ಹಂಗೇ ಬರ್ತಾರೆ ಕಣೋ. ಅವ್ರನ್ನ ನೋಡಿದ್ರೆ,ನಿನ್ ಭಕ್ತರೂಂತ ಹೇಳ್ಕೊಳಕ್ಕೆ ನಿನ್ಗೂ ನಾಚ್ಗೆ ಆಗೋಗುತ್ತೆ ಗ್ಯಾರಂಟಿ.ಹಿಂಗೆ ಮೊನ್ನೆ ನಾಕ್ ಜನ ಹುಡುಗ್ರು ಜೋರಾಗಿ ಗೇಟ್ ತೆಗ್ದು, ಬಂದು,ಲಾಂ….ಗು ಕಾಲಿಂಗ್ ಬೆಲ್ಲು ಹೊಡುದ್ರು.ಮಹಡಿ ಮೇಲಿದ್ದೋಳು ಒಂದೇ ಉಸ್ರಿಗೆ ದಡದಡ ಕೆಳಗೋಡಿ ಬಂದು ಬಾಗಿಲು ತೆಗ್ದೆ. “ಮೇಡಾ…….ಮ್ ಹೌಸಿಂಗ್ ಬೋರ್ಡಿನಲ್ಲಿ ಗಣಪನ್ನ  ಕೂರ್ಸಿದೀವ್ರೀ. ಟೂ…ಮಚ್ಚೇನ್ ಬೇ..ಡಾ, ಎರಡು ಸಾವಿರ ಕಾಣಿಕೆ ಕೊಡಿ, ರಸೀತಿ ಬರ್ದು, ನಿಮ್ ಹೆಸ್ರಲ್ಲಿ ಪೂಜೆ ಮಾಡ್ಸಿ, ಭಕ್ತಮಹಾಶಯರಿಗೆ ಪ್ರಸಾದ ಹಂಚೀ, ಹಾಗೆ ನಿಮ್ಗೆ ಪ್ರಸಾದಾನೂ ಮನೆ ಬಾಗ್ಲಿಗೇ ತಂದ್ ಕೊಡ್ತೀವೀ”, ಅಂತ ಪೂರಾ ಪ್ಯಾಕೇಜ್ ರೇಟ್ನ ತುಂಬಾ ನೀಯತ್ತಾಗ್ ಹೇಳಿ, ಬಡಾ…… ಮನ್ಸು ತೋರ್ಸುದ್ರು. ನಾನು,”ಊರಿನ ದೊಡ್ಡ ಗಣಪತಿಗೆ ನಾವು ಪೂಜೆ ಮಾಡುಸ್ತೀವಲ್ಲಾಪ್ಪಾ, ನಮ್ಗೆ ಅದೇ ಸಾಕು. ನೀವೂ ಕೂಡಾ ನಿಮ್ ಸೇವೆ ಏನಿದೆಯೋ ಅದನ್ನ ಆ ಗಣಪತಿಗೇ ಮಾಡಬಹುದಲ್ಲಾ”, ಅಂದೆ.ಹಂಗಂದಿದ್ದೇ ತಡ,ಇದ್ಕಿದಂಗೆ ಮುಖದ್ ಶೇಪೇ ಚೇಂಜ್ ಆಗೋದೇ??? ಮುಸುಡೀನ ಒಂಥರಾ ಸೀರಿಯಸ್ಸಾಗ್ ಮಾಡ್ಕೊಂಡು,ಕೆಕ್ಕರಿಸಿ ನೋಡುತ್ತಾ, ದುರ್ದಾನ ತೆಗೆದುಕೊಂಡವರಂತೆ, ಸಿರ್ ಎಂದು ಬಾಡೀನ ಹಂಗೇ….ರಿವರ್ಸ್ ತಿರುಗಿಸ್ಕೊಂಡು ಗೇಟನ್ನ ದಢಾರ್ ಅಂತ ಹಾಕಿ, ತಮ್ಮ ಜರ್ದಾ ತುಂಬಿದ ಬಾಯಲ್ಲಿ,”ತೂ ಇವ್ರ್ ಮುಕಾ ಮುಚ್ಚಾ….. ನೋಡಕ್ಕೆ ಅಷ್ಟ್ ದೊಡ್ಡ ಮನೇಲಿದಾರೆ, ದೇವುರ್ಗೆ ಖರ್ಚು ಮಾಡಿ  ಅಂದ್ರೂನೂವಾ, ಕಾಸು ಬಿಚ್ಚ ಯೋಗ್ತಿ ಇಲ್ದಿರಾ ವೇಸ್ಟ್ ಬಿಕನಾಸಿಗುಳೂ”, ಅಂತ ಜರ್ದಾ ತುಂಬಿದ್ ಬಾಯಿಂದ ನಿನ್ಗೆ ಪೂಜೆ ಮಾಡುಸ್ದೇ ಇದ್ ಕೋಪುಕ್ಕೆ ನನ್ಗೆ ಸಖತ್ತಾಗ್ ಪೂಜೆ ಮಾಡಿ ತುಪುಕ್ ಅಂತ ಉಗಿದು ಹೋಗಬೇಕೇ? ಎಂಥಾ ಭಕ್ತರೋ ಗಣೇಶ? ಈ ಪೋಕ್ರಿಗುಳ್ ಹತ್ರ ನಮ್ಗೆ ದಿನ ದಿನಾ ಅಷ್ಟೋತ್ತರ, ಶತನಾಮಾವಳಿ, ಮಹಾ ಮಂಗಳಾರತಿ!ಬೇಕಾ  ಗಣೇಶಾ? ಅದ್ರೂ, ಸಾವಿರಗಳಿಗೆ ಬೆಲೆನೇ     ಇಲ್ವೇನಪ್ಪಾ? ಪ್ರತಿ ದಿನ ಬೀದಿ ಬೀದಿಗಳಲ್ಲಿ ಗಣಪತಿ   ಇಟ್ಟೋರು   ವಸೂಲಿಗೆ ಬರ್ತಿದ್ರೆ,ಕುಡಿಕೆ ಹೊನ್ನಿದ್ರೂ ಸಾಲ್ದು ಕಣಯ್ಯಾ.ಹಿಂಗಿದ್ದಾಗ,ನಮ್ ಹೋಮ್ ಗೇ ಬಂದು ನಮ್ಗೆ  ಉಗ್ದೋಗೋದು ಯಾವ್  ನ್ಯಾಯ್ವೋ ಮಹರಾಯಾ?ಇವ್ರು ಕೇಳ್ ಕೇಳ್ದಷ್ಟು ದುಡ್ ಕೊಡಕ್ಕೆ ನಮ್ ಮನೇಲ್ ಏನ್ ಮನಿ ಗಾಡೆಸ್ ಲೆಗ್ ಫ್ರಾಕ್ಚರ್ ಮಾಡ್ಕೊಂಡು ಕೂತಿದ್ದಾಳ್ಯೇ??? ನಮ್ ಕಷ್ಟ ನಮ್ಗೇ,ಯಾರಿಗ್ ಹೇಳೋದೋ ಮಾತಂಗವದನಾ? ”,ಅಂತ ನನ್ನ ಅಸಮಾಧಾನವನ್ನ ತೋಡ್ಕೊಂಡೆ. ಅದಕ್ಕೆ ಗಣಪ ತಾನೇ ಏನೂಂತ ಮಾಡ್ತಾನೇ? ಅಸಹಾಯಕ! ,”ಯಾಕೋ ಇತ್ತೀಚೆಗೆ ನನ್ ಹಬ್ಬ ಬಂದ್ರೆ ಯಾವ್ ಥ್ರಿಲ್ಲೂ ಆಗಲ್ಲ ಕಣಕ್ಕ. ಏನೋ, ಶಾಸ್ತ್ರಕ್ಕೆ ಬಂದಾ ಪುಟ್ಟಾ, ಇದ್ದಾ ಪುಟ್ಟಾ,ಹೋದಾ ಪುಟ್ಟಾ , ಅನ್ನೋ ಹಂಗಾಗಿದೆ. ಯಾವಾಗಿಂದ್ಲೋ  ನಡುಸ್ಕೊಂಬಂದಿರೋ ಪದ್ದತಿ ಬಿಡ್ಬಾರ್ದಲ್ಲಾ ಅಂದ್ಕೊಂಡ್ ಬರ್ಬೇಕು, ಬರ್ತೀನಷ್ಟೇ”, ಅಂತ ಮುಖ ಸಣ್ಣಗೆ ಮಾಡಿಕೊಂಡು,”ಇನ್ನೊಂದ್ ವಿಷ್ಯ ಕಣಕ್ಕಾ, ಅಲ್ಲಾ ಬೀದಿಬೀದಿ ಗಣೇಶರನ್ನ ಉತ್ಸವ ಕರಕೋಂಡ್ ಹೋಗ್ತಾ,ಅದೇನಕ್ಕಾ ಹೆಂಗುಸ್ರು, ಉತ್ಸವಕ್ಕಾದ್ರೂ ಅಟ್ಲೀಸ್ಟ್ ಅಚ್ಕಟ್ಟಾಗ್ ಸೀರೆ ಉಟ್ಕೊಂಬರ್ಬಾರ್ದೇನಕ್ಕಾ? ಕೊನೆ ಪಕ್ಷ ಚೂಡೀ! ಅದೂ ಬೇಡ ಮಿಡಿ, ಮ್ಯಾಕ್ಸಿ, ಜೀನ್ಸೂ???? ಶಿವ ಶಿವಾ…..!ಅಯ್ಯೋ…..ಸಾರಿ,ಸಾರಿ, ಹೆಂಗ್ಸರ ಸಾರಿ  ವಿಷ್ಯ ಅಲ್ವೇ, ಇಲ್ಲಿ ನಮ್ಮ್ ಡ್ಯಾಡೀನ್ ಯಾಕ್ ನೆನೆಸ್ಕೋಬೇಕೂ? ಓ ಮೈ ಗ್ರೇ..ಟ್ ಮಮ್ಮೀ……ಏನಕ್ಕಾ ಇವ್ರ ವೇಷಾ? ಹೆಂಗುಸ್ರು ನೈಟಿ ಮೇಲೊಂದ್ ಟವಲ್ಲು, ಗಂಡುಸ್ರು ನೈನ್ಟಿ ಮೇಲ್ ನೈಂಟಿ ಮೇಲ್ ಮತ್ತೊಂದ್ ನೈಂಟಿ ಸುರ್ಕೊಂಡು ಪ್ರೊಸೆಷನ್ ನಲ್ಲಿ ನನ್ ಮುಂದೆ ಗುಡ್ಡೆ ಹಾಕೊಂಡ್ ತೂರಾಡ್ಕೊಂಡ್ ಹೋಗ್ತಾ ಇದ್ರೆ, ನನ್ ಕಣ್ಣ್ ಹಂಗೇ…..ಇಂಗೋಗದ್ ಒಂದೇ ಬಾಕಿ ಕಣಕ್ಕಾ!ಆನ್ ರೋಡ್ ಮೊಬೈಲ್ ಗಡಂಗು, ಪಬ್ಬು, ಬಾರ್ ನೋಡ್ದಂಗೆ ಫೀಲ್ ಆಗುತ್ತಲ್ಲಕ್ಕಾ! ಗಬ್ಬೋ….

ಸಂ ಕಷ್ಟಹರನ ಮೆನಿ ಕಷ್ಟ!  Read Post »

ಕಾವ್ಯಯಾನ, ಗಝಲ್

ಜಯಶ್ರೀ.ಭ.ಭಂಡಾರಿ ಗಜಲ್

ಕಾವ್ಯ ಸಂಗಾತಿ ಗಜಲ್ ಜಯಶ್ರೀ.ಭ.ಭಂಡಾರಿ ಕೂಡು ಕುಟುಂಬದಂತೆ ವಿವಿಧ ಫಲಗಳ ಹೊತ್ತು ತೋರಿದೆ ನೋಡು.ಕೂಡಿ ಬಾಳುವ ಉದಾತ್ತ ನೀತಿಯ ಮನುಜ ಬಾಳಿಗೆ ಸಾರಿದೆ ನೋಡು ತೆಂಗು ಎತ್ತರವಾಗಿ ಬೆಳೆದರೂ ನೆರಳು ನೀಡುವುದಿಲ್ಲ ಧನಿಕನಂತೆ ಅಲ್ಲವೇಸಂಗದಿ ಉತ್ತರವಾಗಿ ಸ್ವಾದಿಷ್ಟಕರ ಹಣ್ಣುಗಳ ಮೀರಿದೆ ನೋಡು. ಪ್ರಕೃತಿಯ ವಿಸ್ಮಯ ಉಸಿರಲಿ ಏನೇನು ಅಡಗಿದೆಯೋ ಕಾಣೆವು.ಸುಕೃತಿಯ ಹಸಿರ ಬಸಿರಲಿ ಮರದಿ ನಗುವ ತೋರಣ ಬೀರಿದೆ ನೋಡು . ಹಣ್ಣುಗಳಲ್ಲಿ ಮರವೋ ಮರದಲಿ ಹಣ್ಣುಗಳೋ ಅರಿಯದೇ ಪೆಚ್ಚಾದೆ ಮಣ್ಣಿನ ಸಾರ ಸತ್ವವು ತೋಟದ ಅಂದವ ಹೆಚ್ಚಿಸಿ ಹರುಷ ಊರಿದೆ ನೋಡು ಭಾರವಾದ ಕಾಯಿಗಳ ಮುತ್ತಿಕೊಂಡ ಗಿಡದ ಸಂದೇಶ ಜಯಳು ಕೇಳಿಹಳು.ಹಾರವಾಗಿ ಸುತ್ತುವರಿದು ಹಗುರವಾದ ಉದ್ದೇಶ ಪಸರಿಸಿ ಏರಿದೆ ನೋಡು

ಜಯಶ್ರೀ.ಭ.ಭಂಡಾರಿ ಗಜಲ್ Read Post »

You cannot copy content of this page

Scroll to Top