ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸಂಗಾತಿ ಸಾಹಿತ್ಯ ಪತ್ರಿಕೆಯ ವಾರ್ಷಿಕ ವಿಶೇಷ ಬರಹ

ಗಝಲ್

ಜಯಶ್ರೀ ಭ ಭಂಡಾರಿ.

ಬೀಗರು ಬಿಜ್ಜರು ಬರುವರೆಂಬ ಸುಳಿವು ನೀಡಿ  ಕೂಗುತಿರುವೆಯಾ ನೀನು
ಬಾಗದೆ  ಹೆಜ್ಜೆ ಊರುತ ಹಳೆಯ ನೆನಪುಗಳ ತೀಡಿ ನಗುತಿರುವೆಯಾ ನೀನು

ಅಂಗಳದಿ ಅಗುಳುಗಳ ಆರಿಸುತ ಬಳಗವನ್ನೆಲ್ಲ ಕಾ ಕಾ ಕರೆದೆಯಲ್ಲವೇ
ಮಂಗಳದಿ  ಆಳುಗಳ ಕರೆಯಿಸಿ ದೂರ ಓಡಿಸುತ  ಏಗುತಿರುವೆಯಾ ನೀನು.

ಪಿತೃ ಪಕ್ಷದಿ ದಂಡೆಯಲಿ ಪಿಂಡವನಿಟ್ಟು  ಕರೆಯುತ ಅರಸುವವರೆಲ್ಲರು
ಅತೃಪ್ತ ಆತ್ಮಗಳ ಸಂತೃಪ್ತ ಕಾರ್ಯಕೆ ಭರವಸೆ ಕಿರಣ ನೀಗುತಿರುವೆಯಾ ನೀನು

ಒಮ್ಮೊಮ್ಮೆ ಶುಭದಿ ಸುಸ್ವರವೆನಿಸಿ ಪುರಸ್ಕಾರ ಪಡೆದು ಮೆರೆಯುವೆ
ಮತ್ತೊಮ್ಮೆ ಭಯದಿ ಸ್ವರ ಕರ್ಕಶವೆನಿಸಿ ತಾತ್ಸಾರ ತಡೆದು ತೂಗುತಿರುವೆಯಾ ನೀನು 

ಕಪ್ಪೆಂದು ಜರೆದು ಮೂಢನಂಬಿಕೆಯ  ಬಿಡರೆಂಬುದನು ಜಯಳು ಬಲ್ಲಳು
ತಪ್ಪೆಂದು ಕರೆದು ಡಾಂಭಿಕದ  ಸೋಗಿನಲ್ಲಿ ಕಾಡಿಸುತ  ಸಾಗುತಿರುವಿಯಾ ನೀನು


About The Author

Leave a Reply

You cannot copy content of this page

Scroll to Top