ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಲೇಖನ

ಸಂಗಾತಿ ಸಾಹಿತ್ಯ ಪತ್ರಿಕೆಯ ವಾರ್ಷಿಕ ವಿಶೇಷ ಬರಹ

ಮಾಲಾ. ಕಮಲಾಪೂರಕರ್

ತಾಳ್ಮೆ

ನಾವು ಜೀವನದಲ್ಲಿ ಎಲ್ಲವನ್ನೂ ಸಾಧಿಸಲು ಆಗುವುದಿಲ್ಲ ಆದರೂ ಸಾಧಿಸಲು ಅನುಕೂಲವಾದ  ಮಾರ್ಗದಲ್ಲಿ ಉನ್ನತ ಮಟ್ಟದ ಸಿದ್ಧಿ ಬೇಕಾದರೆ ಆ ವಿಷಯದಲ್ಲಿ ನಿಧಾನವಾಗಿ ತಿಳಿದುಕೊಂಡು ನಡೆಯಲು ತಾಳ್ಮೆ ಬೇಕು. ಈ ತಾಳ್ಮೆ ಎನ್ನುವುದು ಮಹಾನಪುರುಷರು, ಜ್ಞಾನಿಗಳು, ದಾಸರು, ಶರಣರಲ್ಲಿ ಕಾಣುತ್ತೇವೆ. ಸರ್ವೆ ಸಾಮಾನ್ಯನಮ್ಮಲ್ಲಿ ಯಾವ ವಿಷಯದಲ್ಲಿಯೂ ಪೂರ್ಣವಾಗಿ ಸಮಾಧಾನದಿಂದ ತಿಳಿದು ನೋಡುವ ತಾಳ್ಮೆ ನಮಗೆ ಕೆಲವರಲ್ಲಿ ಕಡಿಮೆ. ಅದು ಇತ್ತೀಚಿನ ಜನರಲ್ಲಿ ಯಾವುದಕ್ಕೂ ಅಷ್ಟೊಂದು ಕಾಯುವುದು ತಾಳಿಕೊಳ್ಳುವ ಸ್ವಭಾವ ಕಡಿಮೆ. ಗಾಳಿಗಿಂತ ವೇಗವಾಗಿ ಮನಸ್ಸು ಹಿಡಿತವಿಲ್ಲದೆ ಓಡಿಬಿಡುತ್ತದೆ.ಅದರಿಂದ ಏನೇನು ಆವೇಶ ಆಘಾತ ಅನುಭವಿಸಿಬಿಡುತ್ತೇವೆ ಕಾರಣ ಇಷ್ಟೇ ನಮ್ಮಲಿ ತಾಳ್ಮೆ ಕಡಿಮೆ. ಆದರೆ ನಮ್ಮ ಪೂರ್ವಜರನ್ನು ನೋಡಿದಾಗ ಅವರು ಅನುಭವಿಸಿದ ಕಷ್ಟ, ನೋವುಗಳು ಯಾವತ್ತೂ ಅದನ್ನು ಮತ್ತೊಬ್ಬರಿಗೆ ಹೇಳಿಕೊಳ್ಳದೆ ತನ್ನ ಸ್ವಾಭಿಮಾನ, ಧೃತಿ, ಸಂಸ್ಕಾರ, ಶೃದ್ಧೆ,ಸಾಮರ್ಥ್ಯ, ವಾತ್ಸಲ್ಯಕ್ಕೆ ಹೆಸರು ಮಾಡಿದವರು ಇದಕ್ಕೆ ಮೂಲ ಕಾರಣ ತಾಳ್ಮೆ, ಏನೇ ಬರಲಿ ಎದೆಗುಂದದೇ ಜೀವನದಲ್ಲಿ ಸಾಧಿಸುವ ಛಲ ಅವರಲ್ಲಿ ಇತ್ತು.

ತಾಳ್ಮೆಯ ಕುರಿತು ಒಂದೆಡೆ ಶ್ರೀ ವಾದಿರಾಜಯತಿವರ್ಯರು ತಾಳಿ ಬಾಳಲು ಒಂದು ಸಂದೇಶ ಹೇಳಿದ್ದಾರೆ.

ನೆಟ್ಟ ಸಸಿ ಫಲ ಬರುವತನಕ ಶಾಂತಿಯ ತಾಳು,

ಕಟ್ಟು ಬುತ್ತಿಯ ಮುಂದೆ ಉಣಲಂಟು ತಾಳು,

ಕಷ್ಟ ಬಂದರೆ ತಾಳು ಕಂಗೆಡದೆ ತಾಳು, ದುಷ್ಟ ಮನುಜರು ಪೇಳ್ವ ನಿಷ್ಠುರದ ನುಡಿ ತಾಳು,

ಎಂದು ಅವರು ಹೇಳುವಂತೆ ನಾವು ಸ್ವಲ್ಪ ತಾಳ್ಮೆಯನ್ನು ನಮ್ಮ ಸ್ವಭಾವದಲ್ಲಿ ಬೆಳಿಸಿಕೊಂಡಾಗ ನಾವು ಜೀವನದಲ್ಲಿ ಬಾಳುತ್ತೇವೆ ಅದಕ್ಕೆ ನಮ್ಮಲ್ಲಿ ಒಂದು ಗಾದೆ ಮಾತು ಇದೆ ತಾಳಿದವನು ಬಾಳಿಯಾನು.

ಇನ್ನು ಕನಕದಾಸರು ರಚಿಸಿದ ತಲ್ಲಣಿಸ  ದಿರು ಕಂಡ್ಯ ತಾಳು ಮನವೇ, ಎಲ್ಲರನು ಸಲಹುವವನು ಇದಕೆ ಸಂಶಯ ಇಲ್ಲಎನ್ನುವ ಸಂದೇಶ ತಿಳಿಸಿದ್ದಾರೆ.

ಎಲ್ಲ ಸದ್ಗುಣಗಳು ತಾಳ್ಮೆಯಿಂದ ಬರುತ್ತವೆ. ಜಗತ್ತಿನಲ್ಲಿ ಕೆಲವರು ನಮಗೆ ಗೌರವಿಸದಿರಬಹುದು, ಕೆಲವರು ಅವರು ಆಡುವ ಬಿರುಸು ನುಡಿಗಳಿಗೆ ನಮ್ಮ ಪ್ರತಿಕ್ರಿಯೆ ನೋಡಬಹುದು ಇದ್ದೆಲ್ಲಕ್ಕೂ ನಾವು ಕಿವಿಕೊಡದೆ ಇದ್ದಾಗ ನಮ್ಮ ತಾಳ್ಮೆ ಪರೀಕ್ಷಿಸಬಹುದು. ಆದರೂ ಸಹ ನಮ್ಮ ಸಹನೆ,ಸೌಜನ್ಯ, ಎಂದೂ ಮರೆಯಬಾರದು ಎಲ್ಲದಕ್ಕೂ ಪ್ರಾಮಾಣಿಕ ಪ್ರಯತ್ನ, ಧೃಡ ಪ್ರಜ್ಞೆ ಇರುವುದು ಮುಖ್ಯ. ಮನುಷ್ಯನ ಅಂತರಂಗ ಆಳದಲ್ಲಿ ಒಂದು ದಿವ್ಯ ಬೆಳಕು ಇದೆ, ಭವ್ಯ ಬದುಕಿನಲಿ ಭರವಸೆ ಇದ್ದಾಗ ಶಾಂತ ಮನಸ್ಸು ನಮ್ಮಲ್ಲಿ ಬೆಳಿಸಿದಾಗ ನಿಜಕ್ಕೂ ನಮ್ಮ ಬದುಕಿಗೆ ಅರ್ಥ ಬರುತ್ತದೆ ಜೀವನದಲ್ಲಿ ಸೋಲನ್ನು ಅನುಭವಿಸಿದರೂ ಆ ಸೋಲಿನ ಕಾರಣವನ್ನು ಕಂಡುಹಿಡಿದು ತಾಳ್ಮೆಯಿಂದ ಗೆಲುವಿನತ್ತ ಸಾಗುತ್ತೇವೆ.

ನಾವು ಅರಿತವರಿಂದ ಜ್ಞಾನಿಗಳಿಂದ ಗುರುಗಳ ಹಿತ ವಚನ ಆಲಿಸಿದಾಗ ನಮಗೆ ಸ್ವಲ್ಪ ಮಟ್ಟಿಗೆ ನಮ್ಮಲ್ಲಿ ಧೈರ್ಯ ಬರುತ್ತದೆ,ಅಹಂಕಾರ ವೆಂಬುದು ವ್ಯಕ್ತಿತ್ವವನ್ನು ಕಬಳಿಸಿಬಿಡುತ್ತದೆ. ನಮ್ಮ ಸಿಟ್ಟು ನಮ್ಮ ಮಾತಿನ ಒರಟುತನ ಮತ್ತೊಬ್ಬರ ಏಳ್ಗೆ ಸಹಿಸದಿರುವುದು, ನನ್ನ ಮಾತೇ ನಡೆಯಬೇಕು ಅನ್ನುವ ಹಠ ಇದೆಲ್ಲವೂ ಕೆಲವರಲ್ಲಿ ಕಾಣುತ್ತೇವೆ ನಾವು ಆಡುವ ಮಾತು ಕೇಳಿಸಿಕೊಳ್ಳದೆ ತನ್ನದೇ ಹೇಳಿಕೊಳ್ಳವ ಜನರು ಇರುವ ಜನರು ನಮ್ಮೊಡನೆ ಇದ್ದಾಗ ನಾವು ಶಾಂತಚಿತ್ತಾರಾಗಿ ತಾಳ್ಮೆಯಿಂದ ಕೇಳಬೇಕು ನಮ್ಮ ಸಹನೆ, ತಾಳ್ಮೆ ನಮ್ಮ ಯಶಸ್ಸಿನ ಮೆಟ್ಟಲುಗಳು.


ಮಾಲಾ. ಕಮಲಾಪೂರಕರ್

About The Author

1 thought on “”

  1. Dr GS Kulkarni, Kalaburagi.

    ನಿಮ್ಮ ಮನದಾಳ ದಿಂದ ಬಂದ ತಾಳ್ಮೆ ಕುರಿತು ಲೇಖನ ಒಂದು ಸಾತ್ವಿಕ ಮತ್ತು ಅದ್ಭುತ ಚಿಂತನ ಎಂದರೆ ತಪ್ಪಾಗಲಾರದು . ತಾಳ್ಮೆಯ ತಳಹದಿ ಜಾಣ್ಮೆ . ತಾಳ್ಮೆ ಹಾಗು ಜಾಣ್ಮೆ ಸೇರಿ ಉನ್ನತ ವ್ಯಕ್ತಿತ್ವ ರೂಪಿಸ ಬಲ್ಲವು ಎಂಬುದನ್ನು ತುಂಬಾ ಸೊಗಸಾಗಿ ವಿವರಿಸಿದ್ದೀರಿ . ಜಾಣ್ಮೆ ಹಾಗೂ ತಾಳ್ಮೆಯ ಜೊತೆ ಕ್ಷಮೆ ಒಂದು ಸೇರಿ ಬಿಟ್ಟರೆ , ಅವು ನಮ್ಮನ್ನು ದೈವತ್ವದ ಕಡೆ ನಡೆಸಬಲ್ಲವು ಸಂಧ್ಯಾ ಅವರೆ . ಉತ್ತಮ ಸಮಾಜ ನಿರ್ಮಾಣದತ್ತ ಅನೇಕರಿಗೆ, ನಿಮ್ಮ ಲೇಖನ ಪ್ರೇರಣೆ ಆಗಬಲ್ಲದು . ಬರೆಯುತ್ತಿರಿ . ಬರೆಯಬೇಕು ಎನ್ನುವವರಿಗೆ ಬರೆಯದೇ ಇರಲಿಕ್ಕೆ ಆಗದು ಅಲ್ಲವೇ ? ಮತ್ತೊಮ್ಮೆ ಅಭಿನಂದನೆಗಳು .

Leave a Reply

You cannot copy content of this page

Scroll to Top