ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ನವಿಲುಗರಿ

(ಅಷ್ಟ ಷಟ್ಪದಿಯ ರಚನೆಯ ಕವನ )

ಸವಿತಾ ಮುದ್ಗಲ್

ನೀನೊಬ್ಬಳು ಕಲ್ಪನೆಯ ಚೆಲುವಿನ ಬೆಡಗಿ
ನನಗಾಗೆ ಹುಟ್ಟಿದಿಯ ಹೊಂಬ್ಬಣ್ಣದ ಹುಡುಗಿ!
ನಿನ್ನ ಒಲುಮೆಯ ಪದಗಳ ಜೋಡಿಸಲು
ನಾ ತಂದಿರುವೆ ನವಿಲುಗರಿಯ ಬರೆಯಲು!

ನೀಹೇಳದ ಮೌನದ ಪದಗಳೇ ಸವಾಲು
ಹೇಳುತ್ತಿವೆ ಮೆಲ್ಲನೆ ಜಾರಲು ಹೃದಯದಲು!
ನಿನ್ನಂದವ ವರ್ಣಿಸಲು ನಾಚುವ ಗರಿಯು
ಪಿಸುಗುಡುತ ಗೀಚುತಿವೆ ಭಾವದ ಝರಿಯು!

Beautiful peacock feather isolated on white

ಕಣಕಣದಿ ಕೂಡಿದೆ ನಮ್ಮಿಬ್ಬರ ಪ್ರೇಮವು
ಪ್ರತಿಕ್ಷಣ ಸಾರಿಹೇಳಲು ಮೇಘಗಳ ನರ್ತನವು!
ಕಾಮನಬಿಲ್ಲಿನ ನವಬಣ್ಣದ ಅಮೋಘ ಪ್ರೀತಿಯು
ನಂದಕಿಶೋರನು ನಾಚುವಂತ ಇಳೆಯ ಪ್ರೇಮವು!

ಮುಕ್ಕೋಟಿ ದೇವತೆಯರು ಅಸ್ತು ಎನ್ನಲು
ತಡವೇಕೆ ಕಂಕಣ ಕಟ್ಟಲು ವಾಲುಗ ಊದಿಸಲು!

—————————–

.

About The Author

1 thought on “ಸವಿತಾ ಮುದ್ಗಲ್-ನವಿಲುಗರಿ”

  1. ಧನ್ಯವಾದಗಳು ಸರ್ ನಿಮ್ಮ ಅಂಕಣದಲ್ಲಿ ನನ್ನ ಕವನ ಪ್ರಕಟಿಸಿದ್ದಕ್ಕೆ

Leave a Reply

You cannot copy content of this page

Scroll to Top