ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಪುಟ್ಟ ಕಥೆ- ವಿದ್ಯಾರ್ಥಿ ವಿಭಾಗ

ಡ ಕುಟುಂಬದ ಹುಡುಗಿ..

ದಿವ್ಯಾ ಶೆಟ್ಟಿ

ರಾಮತೀರ್ಥ  ಎಂಬ ಒಂದು ಪುಟ್ಟ ಹಳ್ಳಿಯಲ್ಲಿ ಒಂದು ಬಡ ಕುಟುಂಬ ಇತ್ತು.ಈ ಕುಟುಂಬದಲ್ಲಿ ತಂದೆ, ತಾಯಿ ವಿಜಯ ಎಂಬ ಒಬ್ಬಳು ಮಗಳು ಇದ್ದಳು. ತಂದೆಗೆ ಹುಷಾರು ಇಲ್ಲ ಮಲಗಿದ್ದಲ್ಲಿಯೇ ಇದ್ದರೆ. ತಾಯಿ ಕೂಲಿ ಕೆಲಸ ಮಾಡಿ ಮಗಳನ್ನು ಮತ್ತು ತನ್ನ ಗಂಡನನ್ನು ಸಾಕುತಿದ್ದಳು. ಮಗಳಿಗೆ ಐ. ಎ. ಎಸ್ ಆಫೀಸರ್ ಆಗಬೇಕು ಅಂತ ತುಂಬಾ ಆಸೆ ಆದ್ರೆ ಮನೆಯಲ್ಲಿ ತುಂಬಾ ಬಡತನ ಇತ್ತು. ಆದರೂ ವಿಜಯ ನಾನು ಐ. ಎ. ಎಸ್ ಆಫೀಸರ್ ಹಾಗೆ ಆಗುತ್ತೆನೆ ಎಂಬ ದೃಢ ನಿರ್ಧಾರವನ್ನು ಮಾಡಿಕೊಂಡಿದ್ದಳು. ಆ ಆಸು ಪಾಸುವಿನಲ್ಲಿ ಇದ್ದ ಜನರಿಗೆ ಇವರು ಅಂದರೆ ಅಸಡ್ಡೆ ಬಡವರು ಅಂತ ಎಲ್ಲರೂ ಕೀಳಾಗಿ ನೋಡುತಿದ್ದರು. ಯಾವ ಮಕ್ಕಳು ವಿಜಯ ಜೊತೆ ಗೆಳೆತನ ಮಾಡಿ ಕೊಳ್ಳುತಿರಲಿಲ್ಲ. ಎಲ್ಲಿ ಹೋದರು ಅವಮಾನವಾಗುತಿತ್ತು. ವಿಜಯ ಕಾಲೇಜಿನಲ್ಲಿ ಪದವಿಯನ್ನು ಕಲಿಯುತಿದ್ದಳು. ಒಂದು ದಿವಸ ಕಾಲೇಜಿ ನಿಂದ ಬರುವಾಗ ಒಬ್ಬರು ಮೇಷ್ಟ್ರು  ವಿಜಯ ನೀನು ಏನು ಆಗಬೇಕಂತ ಇದ್ದೀಯಮ್ಮ ಎಂದು ಕೇಳಿದರು. ಆಗ ನಾನು ಐ. ಎ. ಎಸ್  ಆಫೀಸರ್ ಆಗಬೇಕು ಅಂತ ಇದ್ದೀನಿ ಸರ್ ಎಂದು ಹೇಳಿದಳು. ಆಗ ಅವಳ ಅಕ್ಕ ಪಕ್ಕದ  ಮನೆಯವರ  ಮಕ್ಕಳು  ದಾರಿಯಲ್ಲಿ ಹೋಗುವವರು ಇಷ್ಟು ಬಡವಳು ಐ. ಎ. ಎಸ್ ಆಫೀಸರ್ ಆಗುದಕ್ಕಿಂತ  ಮುಸುರೆ ತಿಕ್ಕ ಬೇಕು ಎಂದು ಅವಮಾನ ಮಾಡಿದರು. ಮೇಷ್ಟ್ರುಗೆ  ಬೇಸರ ಆಯಿತು. ಮೇಷ್ಟ್ರು ನೀನು ಅವರ ಮಾತಿಗೆ  ಬೇಸರ ಮಾಡ್ಕೋಬೇಡ  ಪ್ರಯತ್ನ ಪಟ್ಟರೆ ನೀನು ಸಾಧನೆ ಮಾಡುತ್ತೀಯ ಎಂದು ಹೇಳಿ ಹೊರಟು ಹೋದರು.

    ವಿಜಯ ಎಲ್ಲ ಅವಮಾನಗಳನ್ನು ಮನಸ್ಸಿನಲ್ಲಿ ಇಟ್ಟು ಕೊಂಡಳು. ಪದವಿ ಪರೀಕ್ಷೆ ಶುರು ಆಯಿತು. ಮನೆಯಲ್ಲಿ ವಿದ್ಯುತ್ ಇಲ್ಲದಿದ್ದರೂ ಚಿಮಿನಿಯ ಬೆಳಕಿನಲ್ಲಿ ಹಗಲು ರಾತ್ರಿ ಓದಿದಳು. ಪದವಿಯನ್ನು  ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದು ಮುಗಿಸಿದಳು. ನಂತರ ಐ. ಎ. ಎಸ್ ಪರೀಕ್ಷೆಗೆ ತಯಾರಾಗಲು  ಪುಸ್ತಕವನ್ನು ಕೊಳ್ಳಲು ಹಣವನ್ನು  ಹೊಂದಿಸಲು ಕೂಲಿ ಕೆಲಸ ಮಾಡಿದಳು  ಸ್ವಲ್ಪ ಹಣವನ್ನು ಸಾಲವಾಗಿ ತೆಗೆದು ಕೊಂಡಳು ಐ. ಎ. ಎಸ್ ಪರೀಕ್ಷೆಗೆ ಅಪ್ಲಿಕೇಶನ್ ಹಾಕಿದಳು. ಪರೀಕ್ಷೆಗೆ ತಯಾರಾದಳು ನಂತರ ಪರೀಕ್ಷೆ ಬರೆದಳು ಐ. ಎ. ಎಸ್ ಪರೀಕ್ಷೆಯ ಫಲಿತಾಂಶ ಎರಡು ತಿಂಗಳ ನಂತರ ಪ್ರಕಟವಾಯಿತು ವಿಜಯ ಉತ್ತಮ ಅಂಕ ಪಡೆದು ಉತ್ತೀರ್ಣ ಆದಳು. ಐ. ಎ. ಎಸ್ ಕೆಲಸ ಸಿಕ್ಕಿತು ತನಗೆ ಅವಮಾನ ಮಾಡಿದವರ ಎದುರು ಬಂದು   ಶ್ರೀಮಂತರು ಮಾತ್ರ ಕನಸು ಕಂಡು ಐ. ಎ. ಎಸ್ ಮತ್ತಿತರ ದೊಡ್ಡ ದೊಡ್ಡ ಹುದ್ದೆಗಳಿಗೆ ಹೋಗುವುದು ಮಾತ್ರವಲ್ಲ ಬಡವರಿಗೂ ಕನಸು ಕಂಡು ಅದನ್ನು ನನಸು ಮಾಡಬಹುದು. ಮನಸ್ಸಿನಲ್ಲಿ ದೃಢ ನಿರ್ಧಾರ ಸಾಧನೆ ಒಂದು ಇದ್ದರೆ ಸಾಕು ಎಂದು ಹೇಳಿದಳು. ಎಲ್ಲರೂ ಮುಖ ಮುಖ ನೋಡಿ ಆಶ್ಚರ್ಯಗೊಂಡ

 (  ಸಾಧನೆ ಮಾಡುವ ಮನಸ್ಸು ಇದ್ದರೆ ಕಂಡ ಕನಸನ್ನು ನನಸು ಮಾಡಬಹುದು.)


About The Author

1 thought on “ದಿವ್ಯಾ ಶೆಟ್ಟಿ ಕಥೆ- ಬಡ ಕುಟುಂಬದ ಹುಡುಗಿ..”

  1. D N Venkatesha Rao

    ದಿವ್ಯಾ ರವರ ಕಥೆ ಹೇಳುವ
    ಪ್ರಯತ್ನ ಚೆನ್ನಾಗಿದೆ

Leave a Reply

You cannot copy content of this page

Scroll to Top