ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಡಾ. ನಿರ್ಮಲ ಬಟ್ಟಲ-ಹಚ್ಚಬೇಕು ಹಣತೆ

ಹಚ್ಚಬೇಕು ಹಣತೆ
ಕಾರ್ತೀಕದಲಿ ಅವಸರದಿ
ಪಡುವಣಕೆ ಜಾರುವ ನೇಸರನ
ಪರವಾಗಿ ತುಸು ಹೊತ್ತು ಬೆಳಕಿಗಾಗಿ…..!

ಹಚ್ಚಬೇಕು ಹಣತೆ
ಅಮಾವಾಸ್ಯೆಯ ಕತ್ತಲೆಗೆ
ಸೆಡ್ಡು ಹೊಡೆದು ಬೆಳಕು ನೀಡುವ
ಪುಟ್ಟ ಹಣತೆಯಿಂದ ಪ್ರೇರಣೆ ಪಡೆಯಲು……!

ಹಚ್ಚಬೇಕು ಹಣತೆ
ಶತಮಾನದ ಅಸಮತೆ
ಕಳೆದು ಸಮತೆಯ ಬೆಳಕನೀಡುವ
ಭರವಸೆಯ ಬೆಳಕಾಗಿ…..

ಹಚ್ಚಬೇಕು ಹಣತೆ
ಸುಜ್ಞಾನದ ಬೆಳಕು ಪಸರಿಸುವ
ಪ್ರೀತಿಯ ಪ್ರಭಾವಳಿಯಲ್ಲಿ
ನನ್ನ ನಾನರಿಯಲು
ನನ್ನಾತ್ಮ ಜ್ಯೋತಿ ಬೆಳಗಿಸಲು…!


About The Author

8 thoughts on “ಡಾ. ನಿರ್ಮಲ ಬಟ್ಟಲ-ಹಚ್ಚಬೇಕು ಹಣತೆ”

  1. Narsingrao Hemnur

    ಹಚ್ಚ ಬೇಕು ಹಣತೆ ನನ್ನ ನಾನರಿಯಲು….
    ಉತ್ತಮ ರಚನೆ.

  2. ಓದಿ ಪ್ರತಿಕ್ರಿಯಿಸಿದ ಎಲ್ಲ ಸಹೃದಯರಿಗೂ ಧನ್ಯವಾದಗಳು

Leave a Reply

You cannot copy content of this page

Scroll to Top