ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಸಂಗಾತಿ

ಗಜಲ್

ಮುತ್ತು ಬಳ್ಳಾ ಕಮತಪುರ

ನೀ ಬರುವಿಕೆ ಹಾದಿಯಲಿ ಏನೋ ಜೀವಂತಿಕೆ ಈ ಮಣ್ಣ ಋಣ |
ಕಾಯುವ ಕಾತುರದಲಿ ಕಳಚಿದ ಮಡಿವಂತಿಕೆ ಈ ಮಣ್ಣ ಋಣ |

ನಿಲುಕದ ದಾರಿಯಲಿ ಹೇಳದೆ ಉಳಿದ ಕ್ಷಣಗಳಿಗೆ ಸಾಕ್ಷಿ ಬೇಕಿದೆ |
ಜನರ ನಡುವೆ ಅರಳಿದ ಹೂವಿನ ಸಿರಿವಂತಿಕೆ ಈ ಮಣ್ಣ ಖುಣ ||

ಒಂಟಿ ಪೋರನ ಊರಾಚೆಯ ಕಲ್ಲುಬಂಡೆಗೂ ನೂರಾರು ಕಥೆ |
ಮುಗಿಯದ ನೋವಿಗೆ ಶಿಲೆಗಳೆ ಗುಣವಂತಿಕೆ ಈ ಮಣ್ಣ ಋಣ ||

ಜೋಡಿಸುವವರ ನುಡಿಗಿಂತ ಒಡೆಯುವವರ ಮಾತು ಭೂಮಿಗೆ |
ಕೂಡುಕೊಳ್ಳುವಿಕೆ ಸಂಗಮ ನೆಲದ ಛಲವಂತಿಕೆ ಈ ಮಣ್ಣ ಋಣ ||

ಕಣ್ಣ ಗಡಿಯೊಳಗೆ ಜಗದ ರೂಪವನು ನಿಭಾಯಿಸುವ ಶಕ್ತಿ ಮುತ್ತು |
ಕನಸುಗಳ ಸೃತಿಪಟಲ ಭೂರಮೆ ಹೃದಯವಂತಿಕೆ ಈ ಮಣ್ಣ ಋಣ ||


About The Author

1 thought on “ಮುತ್ತು ಬಳ್ಳಾ ಕಮತಪುರ -ಗಜಲ್”

Leave a Reply

You cannot copy content of this page

Scroll to Top