ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಗಜಲ್

ಜಯಶ್ರೀ.ಭ.ಭಂಡಾರಿ

ಸಾಹಿತ್ಯದ ಪಥದಲ್ಲಿ ಸಾಧನೆ ಶಿಖರವನೇರಿ ಮೆರೆಯುತಿರು ನೀನು 
ನಿತ್ಯವೂ ಸಾಧಕರ ಬರಹಗಳನ್ನು ಓದುತ್ತಾ ಬರೆಯುತಿರು ನೀನು.

ಉತ್ತಮ ಪುಸ್ತಕಗಳಿಂದ ಮಸ್ತಕದಿ ಜ್ಞಾನವನ್ನು ಹೆಚ್ಚಿಸಬಹುದಲ್ಲವೇ.
ಅತ್ತಿತ್ತ ತಿರುಗಾಡದೆ ಕವನ ಕಥೆ ಕಾದಂಬರಿ ಕೃತಿಗಳ ಪೊರೆಯುತಿರು ನೀನು.

ಎದೆಗೆ ಬಿದ್ದ ಅಕ್ಷರಗಳ‌ ಕಾವ್ಯ ರಚಿಸಿ ರಮ್ಯದಿ ನಾಚದೆ ವಾಚಿಸು
ಸುಧೆಯ ಅಕ್ಕರ ಅಂಗಳದಿ ಭವ್ಯ ಭಾರತದ ಚಲುವ ಸುರೆಯುತಿರು ನೀನು

ಬರವಣಿಗೆ ಬಾಳಿನ ಬೆಳಕಾಗಿ ಬೆಳೆದು  ಮಾರ್ದನಿಸಿ ಮುನ್ನಡೆಸಲಿ 
ಅರಿತು ಬೆರೆತು ಪುಟಗಳಲಿ ಇತಿಹಾಸ ಮಥಿಸುತ ಬರೆಯುತಿರು ನೀನು.

ಭಾಷೆಯ ಭಾವವ ಬೀರುತ ಜಯಳು ಎಲ್ಲೆಡೆಯೂ ಪಸರಿಸುತ ಸಾಗಿಹಳು.
ಆಮೀಷದಿ ಕೀರ್ತಿಶನಿಯ ಬೆನ್ನತ್ತಿ ಲೋಕದಿ ಅವಮಾನ ತೊರೆಯುತಿರು ನೀನು


About The Author

Leave a Reply

You cannot copy content of this page

Scroll to Top