ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಗಜಲ್

ಅನಸೂಯ ಜಹಗೀರದಾರ

ಸ್ವಲ್ಪ ಮಾತನಾಡುವದ ನಿಲ್ಲಿಸು
ಗೋಡೆಗಳೂ ಮಾತನಾಡುತಿವೆ
ಅಂತರಂಗ ತರಂಗಗಳ ಗಮನಿಸು
ರಾಗಗಳೂ ಜೊತೆಗೂಡುತಿವೆ

ಒಂದೇ ಸಮನೆ ಬೀಳುವ ಮಳೆಗೆ
ನಿಂತ ನೆಲ ಕೊಚ್ಚಿ ಸವೆಯುತಿದೆ
ಬಿಸಿಲ ಕಿರಣಗಳ ವೀಕ್ಷಿಸು ಬೆಳಕ
ಬಣ್ಣಗಳೂ ನರ್ತಿಸುತ್ತಿವೆ

ಬೀಸಿ ಹೊಡೆವ ಚಂಡಮಾರುತಕೆ
ಬಂಡೆಯೂ ತುಣುಕಾಗುತ್ತಿದೆ
ನಿರುಮ್ಮಳ ನಾದವ ಆಲಿಸು
ಸತ್ಯಗಳು ಬಯಲಾಗುತ್ತಿವೆ

ನನ್ನದೆನ್ನುವ ಗಣಿತ ಗುಣಿತಕೆ
ಸಹಸ್ರ ಸಹಸ್ರ ಸೇರುತಿದೆ
ಉಸಿರ ಹಸಿರಲಿ ಚಲಿಸು ಲತೆ
ಮರಗಳೂ ಮುಸಿ ನಗುತಲಿವೆ

ಬಿಸಿಲು ಚಂದ್ರಿಕೆಗೆ ಲಕ್ಷಾಂತರ
ವಿದ್ಯುದ್ದೀಪಗಳು ಸಮವೆ ಅನು
ನಿನ್ನ ಅತಿರೇಕದಾಟವ ನಿಲ್ಲಿಸು ಮಣ್ಣ
ಕಣಗಳೂ ಏರೇರಿ ಹೊಡೆಯುತ್ತಿವೆ


About The Author

2 thoughts on “ಅನಸೂಯ ಜಹಗೀರದಾರ-ಗಜಲ್”

Leave a Reply

You cannot copy content of this page

Scroll to Top