ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಸುಕನಸು-ಗಜಲ್

ಕಾವ್ಯ ಸಂಗಾತಿ ಗಜಲ್ ಸುಕನಸು ಅಕ್ಕರೆಯ ಸಕ್ಕರೆ ಬೊಂಬೆಯವನುಮುದ್ದಿನ ಮುತ್ತಿನ ಕಣ್ಮಣಿಯವನು ಜೊತೆಯಲಿರೆ ಸಗ್ಗಕೆ ದಾರಿಯವನುಜೀವಕೆ ಜೀವ ಸಂಜೀವಿನಿಯವನು ಕೋಪದಲಿ ಪುಟಾಣಿ ಕಂದನವನುನಕಲಿ ನಟರ ನಂಬುವ ಮುಗ್ಧನವನು ಸಂಬಂಧದಲಿ ತ್ಯಾಗಿ ಕರ್ಣನವನುಪ್ರಣಯದಲಿ ಮನ್ಮಥ ರಸಿಕನವನು ಬರಹದಲಿ ಸರಸ್ವತಿಯ ಪುತ್ರನವನುಸುಮಾಳ ಬಾಳಿಗೆ ಭಗವಂತನವನು

ಸುಕನಸು-ಗಜಲ್ Read Post »

ಇತರೆ

“ಸಂಗಂ”ಸಾಹಿತ್ಯ ಪುರಸ್ಕಾರಕ್ಕೆ ಕವನ ಸಂಕಲನಗಳ  ಆಹ್ವಾನ

“ಸಂಗಂ”ಸಾಹಿತ್ಯ ಪುರಸ್ಕಾರಕ್ಕೆ ಕವನ ಸಂಕಲನಗಳ ಆಹ್ವಾನ
(ಸಂಜೆವಾಣಿ ವಾರ್ತೆ)
ಬಳ್ಳಾರಿ: ಇಲ್ಲಿನ ಅರಿವು ಟ್ರಸ್ಟ್ ಸಾಹಿತ್ಯ ಬಳಗದಿಂದ “ಸಂಗಂ”ಸಾಹಿತ್ಯ ರಾಷ್ಟ್ರೀಯ ಪುರಸ್ಕಾರಕ್ಕೆ ಕವನ ಸಂಕಲಗಳನ್ನು ಆಹ್ವಾನಿಸಲಾಗಿದೆ.

ಆಸಕ್ತರು
೨೦೨೦,೨೦೨೧ ಹಾಗೂ ೨೦೨೨ ನೇ ಸಾಲಿನಲ್ಲಿ ಪ್ರಥಮ ಮುದ್ರಣ ಕಂಡ ಕವನ‌ ಸಂಕಲನಗಳನ್ನು ಮಾತ್ರ ಆಯ್ಕೆಗೆ ಪರಿಗಣಿಸಲಾಗುವುದು.

ಪ್ರಶಸ್ತಿಯ ಮೊತ್ತ 25 ಸಾವಿರ ರೂಪಾಯಿಗಳಾಗಿದ್ದು ಆಸಕ್ತ ಬರಹಗಾರರು,ಪ್ರಕಾಶಕರು,ಓದುಗರು ತಮ್ಮ ನೆಚ್ಚಿನ ಕೃತಿಗಳ 4 ಪ್ರತಿಗಳನ್ನು ಸ್ಪರ್ಧೆಗೆ ಕಳುಹಿಸಲು ಕೋರಿದೆ.

ಸೆಪ್ಟೆಂಬರ್ ೨೫ ಕೃತಿಗಳನ್ನು ಕಳುಹಿಸಲು ಕಡೆಯ ದಿನಾಂಕವಾಗಿದೆ. ಮರುಮುದ್ರಣಗೊಂಡ ಕೃತಿಗಳಿಗೆ,ಹಸ್ತಪ್ರತಿಗಳಿಗೆ,ಅನುವಾದಿತ ಹಾಗೂ ಸಂಪಾದಿತ ಕೃತಿಗಳಿಗೆ ಅವಕಾಶವಿರುವುದಿಲ್ಲ. ಅಕ್ಟೋಬರ್ 21.22.23 ರಂದು ಬಳ್ಳಾರಿಯಲ್ಲಿ‌ ಜರುಗಲಿರುವ “ಸಂಗಂ”ವಿಶ್ವ ಕವಿ ಸಮ್ಮೇಳನದಲ್ಲಿ ಆಯ್ಕೆಗೊಂಡ ಕೃತಿಯ ಲೇಕಕರಿಗೆ ಪ್ರಶಸ್ತಿ ಪ್ರದಾನ ಮಾಡಲಿದೆ ಎಂದು ಅರಿವು ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.
ಪುಸ್ತಕಗಳನ್ನು ಕಳಿಸುವ ವಿಳಾಸ:
ಅರಿವು, 004 ಮರ್ಚೇಡ್ ರೀನೋ, 2 ನೇ ಅಡ್ಡ ರಸ್ತೆ, ಗಾಂಧಿನಗರ, ಬಳ್ಳಾರಿ-583103
ಮೊಬೈಲ್: 9449622737

“ಸಂಗಂ”ಸಾಹಿತ್ಯ ಪುರಸ್ಕಾರಕ್ಕೆ ಕವನ ಸಂಕಲನಗಳ  ಆಹ್ವಾನ Read Post »

You cannot copy content of this page

Scroll to Top