ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಜಲ್ ದುನಿಯಾ

ಗಜಲ್ ಜುಗಲ್ ಬಂದಿ

ಗಜಲ್ ಜುಗಲ್ ಬಂದಿ ಜುಲ್ ಕಾಫಿಯಾ ಗಝಲ್ ಸದ್ಭಾವಗಳ ತುಂಬಿಟ್ಟ ಮಾತಲ್ಲಿ ಹೃದಯಗಳ ಗೆಲ್ಲುವುದು ಖಾತ್ರಿಯಾಗಿದೆಸ್ವಾರ್ಥಿಗಳ ಲೋಕದಲ್ಲಿ ಮುಗ್ದ ಮನಸ್ಸುಗಳ ಕದಡುವುದು ಖಾತ್ರಿಯಾಗಿದೆ ಸ್ಫುರಿಸುತಿದೆ ಮನದೊಳಗೆ ಅನುಕ್ಷಣ ನೂತನ ಕನಸುಗಳ ನಿರವದ್ಯ ಚಿಲುಮೆಉದರದ ಕ್ಷುಧೆಗೆ ಕೈಗೂಡದ ಬಯಕೆಗಳ ಹೋಮಿಸುವುದು ಖಾತ್ರಿಯಾಗಿದೆ ಬೆರಗು ಕಣ್ಗಳಿಗೆ ಸಡಗರವು ತೀರವಿಲ್ಲದ ಜ್ಞಾನ ಸಾಗರದ ಸ್ವಚ್ಚಂದ ವಿಹಾರಹರಕಲು ಜೇಬಿಂದ ಆಸರೆಯಿಲ್ಲದ ಆಸೆಗಳ ಬೀಳಿಸುವುದು ಖಾತ್ರಿಯಾಗಿದೆ ಮುರುಕಲು ಮನೆಯೆದುರು ಜಗದ ತಾಪಕೆ ನಲುಗಿದ ಹೂವುಗಳ ತೋರಣಮರಣವೂ ಕರುಣೆ ತೋರದಂತೆ ಜೀವಗಳ ಹಿಂಸಿಸುವುದು ಖಾತ್ರಿಯಾಗಿದೆ ಅಲೆಯುತಿವೆ ನಿರಂತರ ನಿಶ್ಯಕ್ತ ಕಾಲ್ಗಳು ‘ವಿಜಯ’ ಪಥದ ಜಾಡು ಹಿಡಿದುಅಗಮ್ಯವ ಸೇರುವ ಭ್ರಮೆಯಲ್ಲಿ ಕನಸುಗಳ ಕಮರಿಸುವುದು ಖಾತ್ರಿಯಾಗಿದೆ. ———————————— ವಿಜಯಪ್ರಕಾಶ್ ಕೆ ರೆಪ್ಪೆಗಳನು ಮಿಟುಕಿಸದ ಕಂಗಳಲಿ ಅಪೇಕ್ಷೆಗಳ ಕೊಲ್ಲುವುದು ಖಾತ್ರಿಯಾಗಿದೆತುಡಿತಕೆ ಮಿಡಿಯದ ಮನದಿ ಮರುಕಗಳ ಮುದುಡಿಸುವುದು ಖಾತ್ರಿಯಾಗಿದೆ ಸ್ವೇಚ್ಛೆಯಲಿ ಘೀಳಿಡುತಿಹುದು ಮುಗ್ಧತೆಯ ಛಾಯೆ ಕುಣಿಕೆಗೆ ಕೊರಳೊಡ್ಡಿದಂತೆಆಸರೆಗಾಣದ ಅಕ್ಕರೆಯಲಿ ಹಿಂಜಿ ಭಾವನೆಗಳ ಹಿಸುಕುವುದು ಖಾತ್ರಿಯಾಗಿದೆ ಅನತಿ ದೂರದಲೇ ಹೊಳೆಯುತಿಹುದು ಹೊಂಗನಸು ಮುಗಿಲ ಚೆಲುವಿಗೆ ನೆಚ್ಚಿಬೆಚ್ಚಗಾಗದ ವಾಂಛೆಗಳೊಳು ಕ್ಲೇಶ ಅಶ್ರುಗಳ ಕುಂದಿಸುವುದು ಖಾತ್ರಿಯಾಗಿದೆ ನಂಟ ಸೆಳೆದ ಅಸುವಿನಲಿ ಮರೀಚಿಕೆಯಾಗುತಲಿದೆ ಹಿತದ ಸಖ್ಯ ಕಳಚಿ ಬೆಸುಗೆಹರೆಯದ ಹಂಬಲಿಕೆಯಲಿ ಹುಸಿಬಣ್ಣಗಳ ಮಸುಕಾಗಿಸುವುದು ಖಾತ್ರಿಯಾಗಿದೆ ಅಂಕೆ ಮೀರುತಿಹ ಚಲನೆಯಲಿ ಸ್ಥಿತಪ್ರಜ್ಞಳಾಗು ‘ನಯನ’ ಉತ್ಸುಕತೆಯ ಸೌಖ್ಯಕೆಹುಂಬತನದ ಪರಮಾವಧಿಯಲಿ ಹಸಿಸಂಚುಗಳ ಕಿವುಚುವುದು ಖಾತ್ರಿಯಾಗಿದೆ. ————————– ನಯನ. ಜಿ. ಎಸ್.

ಗಜಲ್ ಜುಗಲ್ ಬಂದಿ Read Post »

You cannot copy content of this page

Scroll to Top