ಅಂಕಣ ಸಂಗಾತಿ ಪ್ರಸ್ತುತ ಆಚರಣೆ ಅರ್ಥಪೂರ್ಣವಾಗಿರಲಿ ಆಚರಣೆ ಅರ್ಥಪೂರ್ಣವಾಗಿರಲಿ ಇನ್ನೇನು ಬಹುತೇಕ ಈ ಸಲದ ಪ೦ಚವಾಣಿ ತಲುಪಿದ ಒಂದೆರಡು ದಿನಗಳಲ್ಲೆ ನಾಗರ ಪಂಚಮಿ ಬ೦ದೇ ಬಿಡ್ತು , ಈ ಮಾಸದಲ್ಲಿ ಎಲ್ಲಾ ಹೆಣ್ಣುಮಕ್ಕಳು ಅತ್ಯಂತ ಸಡಗರದಿಂದ ಒಂದಾಗಿ ನಾಗರಕಲ್ಲು ಅರಸಿಕೊ೦ಡು ಹೋಗಿ ಅಳ್ಳಿಟ್ಟು, ಎಳ್ಳು ಚಿಗಳಿ ,ತಂಬಿಟ್ಟು , ಸಜ್ಜಿ ರೊಟ್ಟಿ . ಕಡ್ಲೆ ಕಾಳು , ಅಳ್ಳು ಎಲ್ಲವನ್ನೂ ಮಕ್ಕಳು ಮುಟ್ಟದಂತೆ ಶುಧ್ಧಿಯಿಂದ ಮಾಡಿಕೊಂಡು ತಲೆ ಸ್ನಾನ ಮಾಡಿ ಹೊಸ ಸೀರೆ ಉಟ್ಟುಕೊಂಡು ಮಕ್ಕಳೊಂದಿಗೆ ಹೋಗಿ ಆ ಕಲ್ಲಿಗೆ ತಣಿ ಎರೆದು ಪೂಜೆ ಮಾಡಿ ಎಲ್ಲಾ ಸಿಹಿ ಖಾದ್ತಗಳ ನೈವೇದ್ತ ಮಾಡುತ್ತಾರೆ . ನೊತರ ಕೊಬ್ಬರಿ ಬಟ್ಟಲಲ್ಲಿ ಹಾಲು ಹಾಕಿಕೊಂಡು ಆಕಲ್ಲಿ ಎರೆಯುತ್ತಾ …ಅಮ್ಮನ ಪಾಲು , ಅಪ್ಪನ ಪಾಲು , ಗುರುವಿನ ಪಾಲು , ಎಂದು ಇದ್ದವರ , ಇಲ್ಲದವರ ಪಾಲು ಎಲ್ಲರ ಪಲು ಎಂದು ಹಾಕುತ್ತೀರಲ್ಲವೇ ? ಅಲ್ಲಿ ನೋಡಿ ಗೆಳತಿಯರೇ …ಕಲ್ಲು ನೆನೆದು ಕೆಳಗೆ ಹರಿದು , ನೀವು ಎರೆದ ಹಾಲು ಮಣ್ಣಿನ ಪಾಲಾಗುತ್ತಿದೆ . ಹೌದು ತಾನೆ ? ನಿಜ ಹೇಳಿ ನೀವು ಎರೆದ ಹಾಲು ಯಾರ ಪಾಲಾಯಿತೂ ? ಅಲ್ಲಿ ಹಳ್ಳಿಗಳಲ್ಲಿ ಹಾಲಿಲ್ಲದೆ ಕೊಳ್ಳಲಾಗದೆ(ಹಳ್ಳಿಗಳಲ್ಲಿ ಹೈನು ಬಹಳ ಅನ್ನೊದು ಆ ಕಾಲ ಈಗೆಲ್ಲ ತುಂಬ ಕಡಿಮೆ) ಕರಿ (ಕಪ್ಪು) ಚಹ ಕುಡಿಯುವ ಜನರಿದ್ದಾರೆ ಅಲ್ಲಿ ಮಗುವಿಗೆ ಅನ್ನ ಕಲೆಸಲು ಹಾಲಿಲ್ಲದೆ ಕಣ್ಣೀರಿಡುವ ಅಮ್ಮಂದಿರಿದ್ದಾರೆ ,ನಿಮ್ಮ ಊರ ಆಸ್ಪತ್ರ‍್ರೆಯಲ್ಲೇ ಹಾಲು ಕಾಣದ ರೋಗಿಗಳಿದ್ದಾರೆ, ಅಂತಹದರಲ್ಲಿ ನಾವು ಹೀಗೆ ಈತರ ಹಾಲು ಎರೆಯುವ, ಅಂತಹ ಆಚರಣೆಯ ನೆವದಲ್ಲಿ ಹಾಲು ಮಣ್ಣಿಗೆ ಚೆಲ್ಲುವುದು ಸರಿಯೆ ? ಹೌದು ಇದು ಹಿಂದಿನಿಂದ ಬಂದ ಸಂಪ್ರದಾಯ ಪದ್ದತಿ ಆದರೆ ಇಂದು ನಾವು ವಿಜ್ಞಾನ ಯುಗದಲ್ಲಿದ್ದು ಒಂಚೂರು ವೈಜ್ಞಾನಿವಾಗಿ ಯೋಚಿಸದಿದ್ದರೆ ನಾವು ಮುಂದುವರೆದವರೆAದು ಹೇಳೀಕೊಳ್ಳಲು ನಾಚಿಕೆ ಎನಿಸುವುದಿಲ್ಲವೇ ? ಒಂದೆ ಸಾರಿ ತಿರುಗಿ ನೋಡಿ ಅಲ್ಲಿ ನೀವು ಎರೆದ,ಹರಿದ ಹಾಲು ನೆಕ್ಕಿ ನೀವಿತ್ತ ಆ ರುಚಿಯಾದ ಪೌಷ್ಠಿಕವಾದ ಖಾದ್ಯವನ್ನು ನಾಯಿಗಳು ತಿಂದು ಮತ್ತೆ ಹಾಲು ಹಾಕಲು ಬರುವ ಪೆದ್ದು ಹೆಂಗಸರ ದಾರಿ ನೋಡುತ್ತಿವೆ ಅಲ್ಲವೇ ? ಈಗ ಎನು ಅನಿಸುತ್ತೆ ? ನೀವು ಮಾಡಿದ್ದೆ ಸರಿ ಅಂತಾನ ? ಅಥವಾ ಛೇ! ಅಂತಾನ ? ಹಾಲು ಹಾಕದಿದ್ದರೆ ಏನಾಗುತ್ತೋ ? ಹಾವು ಕಾಡುತ್ತೋ ?, ಕಚ್ಚುತ್‌ತೋ ? ಅನ್ನೊ, ಭಯ ಹಿಂದಿನಿAದ ಬಂದ ಪದ್ದತಿ ಹೇಗೆ ಬಿಡುವುದು ವರ್ಷಕ್ಕೋಮ್ಮೆ ಹಾಲು ಹಾಕಿದರೆನಾಯಿತು ? ಅನಿಸಿದರೆ ನೀವು ಮೂರ್ತಿಯಾಗದ ಕಲ್ಲು ಅಂತಾಯ್ತು. ಕಲ್ಲ ನಾಗರ ಕಂಡರೆ ಹಾಲನೆರೆ ಎಂಬರಯ್ಯ ದಿಟದ ನಾಗರ ಕಂಡರೆ ಕೊಲ್ಲು ಕೊಲ್ಲೆಂಬರಯ್ಯ….. ಬಸವಣ್ಣನವರು ಆಕಾಲಕ್ಕೆ ಅಂದರೆ ೯೦೦ವರ್ಷಗಳ ಹಿಂದೆಯೇ ಈ ಮೂಢ ನಂಬಿಕೆಯನ್ನು ತಡೆಯಲು ಯತ್ನಿಸಿದರೂ ಇಂದಿಗೂ ಆ ಮೌಢ್ಯತೆಯಿಂದ ಹೊರ ಬಂದಿಲ್ಲ ಎನ್ನುವುದು ವಿಷಾದನೀಯ ಹೌದು ಹಾಲು ನೆಕ್ಕಿ ಎಲ್ಲಾ ನೈವೆದ್ಯ ತಿನ್ನುವ ನಾಯಿಗೆ ಹಾವು ಏನೂ ಮಾಡುವುದಿಲ್ಲ ಯಾಕೆ ? ಹಸಿದವರಿಗೆ ಅನ್ನವಿಕ್ಕಿ ಅವರುಂಡು ತೇಗಿಬಿಟ್ಟ ತೃಪ್ತಿ ನಿಮ್ಮ ಕಾವುದು ಏನು ಕೊಟ್ಟರೆಸಿಕ್ಕಿತು ಆ ಹಾರೈಕೆ ಹೇಳು ಗುರುದೇವ ಹಸಿದವರಿಗೆ ಅನ್ನ ಕೊಡಿ ಬಂದವರಿಗೆ ನೀರು ಕೊಡಿ ಅವರು ತಿಂದು ಕುಡಿದು ತೃಪ್ತಿಗೊಂಡು ಖುಷಿಯಾಗಿ’ ಒಳ್ಳೆಯದಾಗಲಿ ನನ್ನವ್ವ’ ಎನ್ನುವ ಆ ಮನಸು ಅದೇನು ಕೊಟ್ಟರೆ ಸಿಕ್ಕೀತು ಹೇಳಿ…ಆ ಕೊಡುವ ಖುಷಿಗೆ ಸಾಟಿಯೆ ಇಲ್ಲ. ಆ ಧನ್ಯತಾ ಭಾವವೇ ಆರೋಗ್ಯ . ಇದೊಂದೆ ಅಲ್ಲ ನಾವು ಮಾಡುವ ಎಲ್ಲಾ ಆಚರಣೆಗಳೂ ಅರ್ಥಪೂರ್ಣವಾಗಿರಬೇಕು ಮುಂದೆ ಬರುವ ದಸರಾ ಹಬ್ಬ…… ಅವಾಗ ಬಹುತೇಕ ಹೆಣ್ಣು ಮಕ್ಕಳು ನಸುಕಿನಲ್ಲೆ ಎದ್ದು , ಹತ್ತು ದಿನಗಳು ಬನ್ನಿ ಗಿಡಕ್ಕೆ ಪೂಜೆ ಮಡಿ ದಿನಾಲು ಒಂದು ಸಹಿ ಅಡುಗೆ ನೈವೇದ್ಯ ಮಾಡಿ ,ಆ ಗಿಡದ ಕೆಳಗಿಟ್ಟು ನಾಲ್ಕೆöÊದು ಸುತ್ತು ಹಾಕಿ ಏನೋ ಒಂದು ಶಾಂತಿ ಹೊಂದಿದ ಭಾವದಲ್ಲಿ ಬರುತ್ತಾರೆ . ಅವರಿನ್ನು ಮನೆ ಮುಟ್ಟಿರುವುದಿಲ್ಲ ನಾಯಿ ಹಂದಿಗಳು ಆ ಸಿಹಿ ತಿಂದು ಉಚ್ಚೆ ಮಾಡಿ ಮರುದಿನದ ನಸುಕಿಗಾಗಿ ಕಾಯುತ್ತವೆ . ಏನಿದೆಲ್ಲಾ ? ಒಂದು ವಿಚಾರ , ಬನ್ನಿ ಗಿಡದ ಕೆಳಗೆ ಪಾಂಡವರು ತಮ್ಮ ಆಯುಧಗಳನ್ನು ಅಡಗಿಸಿಟಿದ್ದ್ಟರೆಂದು ಪ್ರತೀತಿ , ಅದಕ್ಕೆ ಅದನ್ನು ಪೂಜಿಸಿ ತಮ್ಮ ಆಯುಧಗಳನ್ನು ಇಷ್ಟು ದಿನ ಕಾಯ್ದದಕ್ಕೆ ಕೃತಜ್ಞತೆ ತೋರಿರಬಹುದು . ನಸುಕಿನಲ್ಲಿ ಒಳ್ಳೆ ಶುಧ್ಧ ವಾತಾವರಣದಲ್ಲಿ ಗಿಡ ಸುತ್ತುವದರಿಂದ ಶುಧ್ಧ ಆಮ್ಲಜನಕ ದೊರೆತು ಆರೋಗ್ಯ ಸುದಾರಿಸುವುದು . ಸುತ್ತುವ ನಡಿಗೆಯಿಂದ ವ್ಯಾಯಾಮ ವಾಗುವುದು . ಬೇಗ ಏಳುವ ಅಭ್ಯಾಸವಾಗುವುದು . ಮೌನವಾಗಿ ಬಂದು ಹೋಗುವುದರಿಂದ ಶಕ್ತಿ ಸಂಗ್ರಹವಾಗುವುದು . ಈ ವ್ರತದ ಅನುಕೂಲತೆಗಳು ಇದ್ದಾವು . ಇದು ಹೋಗ್ಲಿ ಬಿಡಿ , ಕೊನೆಯ ದಿನ ಅಂದರೆ ವಿಜಯದಶಮಿಯ ಹತ್ತನೆಯ ದಿನ ಬಹುತೇಕರು ಬನ್ನಿಗಿಡಕ್ಕೆ ಸೀರೆ ಉಡಿಸಿ ಪೂಜಿಸಿ ವ್ರತ ಸಂಪನ್ನಗೊಳಿಸುತ್ತಾರೆ . ಇದೆಂತಹ ಮೌಢ್ಯ ? ಕಳೆದ ವರ್ಷ ಉಡಿಸಿದ ಸೀರೆ ಬಿಸಿಲು ಗಾಳಿ ಮಳೆಗೆ ಸುಟ್ಟು ಸವೆದು ಹರಿದು ಹಾಳಾಗಿದೆ . ಮತ್ತೆ ಈಗ ಹೊಸ ಸೀರೆ . ಮನೆಯಲ್ಲಿ ಅತ್ತೆ ಅಥವಾ ಅಮ್ಮ ಹರಿದ ಸೀರೆ ಕಾಲಿಗೆ ತೊಡರಿ ಎಡವಿದ್ದು ಕಾಣುವುದಿಲ್ಲ , ತಲೆಯ ಮೇಲೆ ಸೆರಗು ಹರಿದು ಬಿಳಿ ತಲೆ ನಗುವುದು ಕಾಣುವುದುಲ್ಲವೇ ? ಅದು ಬಿಡಿ ಎಲ್ಲಾ ಸರಿ ಇದೆ . ಮನೆಗೆ ಹಾಲು ತರುವ ಅಜ್ಜಿ ಯ ಹರಿದ ಸೀರೆ , ಅವಳ ಜೊತೆ ಬರುವ ಆ ಹುಡಿಗಿಯ ಹರಿದ ಅಂಗಿ ಕಾಣುವುದಿಲ್ಲವೇ ? ಅವರಲ್ಲಿ ಒಬ್ಬರಿಗೆ ಆ ಬಟ್ಟಿ ಕೊಟ್ಟರೆ …? ಅನುಕೂಲವಾಗುತ್ತಲ್ಲವಾ ? ಗೆಳತಿಯರೇ ನಾನು ವೇದಾಂತ ಹೇಳುತಿಲ್ಲ ಸತ್ಯ ಅನಾವರಣಗೊಳಿದೆ ಅಷ್ಟೆ , ಬದಲಾಗೋಣ ಗೆಳತಿಯರೇ …ಸರಿ ತಪ್ಪುಗಳ ಪರಾಮರ್ಶಿಸಿ ನಡೆಯೋಣ . ಏನಂತೀರಿ ? ಕಲ್ಲು ದೇವರೂ ದೇವರಲ್ಲ ಮಣ್ಣು ದೇವರು ದೇವರಲ್ಲ ಮರ ದೇವರು ದೇವರಲ್ಲ ….. ತನ್ನ ತಾನರಿದು ತಾನಾರೆಂದು ತಿಳಿದೊಡೆ ತಾನೆ ದೇವ ಅಪ್ರಮಾಣ ಕೂಡಲ ಸಂಗಮದೇವ . ನಿಂಗಮ್ಮ ಭಾವಿಕಟ್ಟಿ . ನಿಂಗಮ್ಮ ಭಾವಿಕಟ್ಟಿ ಅವರು ಪಂಚ ವಾಣಿ ಪತ್ರಿಕೆಯಲ್ಲಿ ಅಂಕಣ ಬರಹಗಾರ್ತಿ. ‘ಕುಶಲೋಪರಿ’ ‘ಹಾರೈಕೆ’ ಅವರ ಕವನ ಸಂಕಲನಗಳು ‘ವಚನ ಸಂಭ್ರಮ ಆಧುನಿಕ ವಚನಗಳು’ ಎಂಬ ಪುಸ್ತಕಗಳನ್ನು ಬರೆದಿದ್ದಾರೆ. ಹೈಕುಗಳು, ಹನಿಗಳನ್ನು ಮನಮುಟ್ಟುವಂತೆ ಕಟ್ಟುವ ಲೇಖಕಿ ಬಾಗಲಕೋಟೆ ಜಿಲ್ಲೆಯ ಹುನಗುಂದದವರು. ಓದು, ಬರಹ, ಪ್ರವಾಸ ಅವರ ಹವ್ಯಾಸಗಳಾಗಿದ್ದು ಅವರಿಗೆ ‘ಕಾವ್ಯಶ್ರೀ’ ‘ರಾಜ್ಯೋತ್ಸವ ಪ್ರಶಸ್ತಿ’ ‘ಆಜೂರ್’ ಪ್ರಶಸ್ತಿಗಳು ಅರಸಿ ಬಂದಿವೆ ಆಕಾಶವಾಣಿಯಲ್ಲಿ ಅವರ ಚಿಂತನ ಸಂದರ್ಶನಗಳು ಮೂಡಿಬಂದಿವೆ.
ಬೇಲಿಯ ಗೂಟದ ಮೇಲೊಂದು ಚಿಟ್ಟೆ-ಡಾ. ನಾ .ಮೊಗಸಾಲೆಯವರ ಸಂಕಲನ
ಪುಸ್ತಕ ಸಂಗಾತಿ
ಬೇಲಿಯ ಗೂಟದ ಮೇಲೊಂದು ಚಿಟ್ಟೆ-ಡಾ. ನಾ .ಮೊಗಸಾಲೆಯವರ ಕವಿತೆಗಳ ಗುಚ್ಛದ ಬಗ್ಗೆ ಸ್ಮಿತಾ ಅಮೃತರಾಜ್ ಅವರು ಬರೆದಿದ್ದಾರೆ
ಬೇಲಿಯ ಗೂಟದ ಮೇಲೊಂದು ಚಿಟ್ಟೆ–
ಡಾ. ನಾ .ಮೊಗಸಾಲೆಯವರ ಕವಿತೆಗಳ ಗುಚ್ಛ
ಬೇಲಿಯ ಗೂಟದ ಮೇಲೊಂದು ಚಿಟ್ಟೆ-ಡಾ. ನಾ .ಮೊಗಸಾಲೆಯವರ ಸಂಕಲನ Read Post »
ಒಂದಲ್ಲ ಎರಡಲ್ಲ-ಸಿನಿಮಾ
ಅಂಕಣ ಸಂಗಾತಿ ಸಿನಿ ಸಂಗಾತಿ ಒಂದಲ್ಲ ಎರಡಲ್ಲ. ಅದೊಂದು ಪುಟ್ಟ ಪೇಟೆ, ಪೇಟೆಯ ಹೊರ ಭಾಗದಲ್ಲಿ ಪುಟ್ಟ ಮನೆ, ಅಲ್ಲೊಬ್ಬ ಪುಟ್ಟ ಹುಡುಗ ಸಮೀರ, ಅವನ ಮುದ್ದಿನ ಹಸು ಬಾನು, ಸಮೀರನೊಂದಿಗೆ ಅವನ ಅಕ್ಕ ತಂದೆ ತಾತ ಎಲ್ಲರೂ ಇದ್ದಾರೆ, ಸಮೀರನ ಜೀವ ಬಾನು, ಬಾನುವೆಂದರೆ ಮನೆಯವರಿಗೆಲ್ಲ ಅಚ್ಚು ಮೆಚ್ಚು, ಸಮೀರನ ಆಟವೆಲ್ಲ ಅವನ ಹಸುವಿನ ಜೊತೆಗೆ, ಒಂದು ದಿನ ಬಾನುವಿನೊಂದಿಗೆ ಕಣ್ಣಾ ಮುಚ್ಚಾಲೆ ಆಡುವಾಗ ಆಕಸ್ಮಿಕವಾಗಿ ಬಾನು ನಿಂತಿದ್ದ ರಿಕ್ಷಾದೊಂದಿಗೆ ಏರಿ ಪೇಟೆ ಸೇರಿಬಿಡುತ್ತದೆ…! ಕಂಗಾಲಾದ ಸಮೀರ ಬಾನುವನ್ನ ಅರಸುತ್ತಾ ಪೇಟೆಗೆ ಬರುತ್ತಾನೆ. ಅಲ್ಲಿ ಅವನ ಪರದಾಟದ ಚಿತ್ರಣವೇ ಈ ಚಿತ್ರ. ಹಾಗೆ ಅವನು ಭೇಟಿಯಾಗುವ ವ್ಯಕ್ತಿಗಳು ಸನ್ನಿವೇಶಗಳು ಒಂದಲ್ಲ ಎರಡಲ್ಲ, ಅಂತೆಯೇ ಈ ಸಿನಿಮಾದ ಹೆಸರು “ಒಂದಲ್ಲ ಎರಡಲ್ಲ” ಚಿತ್ರದ ನಿರ್ದೇಶನ ಸತ್ಯ ಪ್ರಕಾಶ್ ಅವರಿಂದ. ಚಿತ್ರದ ನಾಯಕ ಪುಟ್ಟ ಬಾಲಕ ಸಮೀರ, ಇವನು ಮುಸ್ಲಿಂ ಸಮುದಾಯಕ್ಕೆ ಸೇರಿದವನು, ಅವನು ಭೇಟಿಯಾಗುವ ವ್ಯಕ್ತಿಗಳು ಇತರ ಸಮುದಾಯಗಳಿಗೆ ಸೇರಿದವರು. ಅವರೆಲ್ಲ ಇವನ ನಿಷ್ಕಲ್ಮಶ ಶುದ್ಧ ಮುಗ್ಧ ಮನಸ್ಸಿನ ಮುಂದೆ ತಮ್ಮಲ್ಲಿನ ಸಣ್ಣತನ ಮೋಸ ಕಪಟಗಳನ್ನು ಕಳೆದುಕೊಳ್ಳುತ್ತಾ ಜಾತಿ ಧರ್ಮವನ್ನು ಮೀರಿದ ಮನುಷ್ಯತ್ವಕ್ಕೆ ತಲೆಬಾಗಿ ಸಮೀರನ ಬಾನುವನ್ನು ಹುಡುಕುವ ಕೆಲಸದಲ್ಲಿ ಹೇಗೆ ಜೊತೆಯಾಗುತ್ತಾರೆ ಎಂಬುದು ಚಿತ್ರದ ತಿರುಳು. ಸಮೀರನ ಹುಡುಕಾಟದ ಯಾನದಲ್ಲಿ ಭೇಟಿಯಾಗುವ ವ್ಯಕ್ತಿ ಹುಲಿ, ಅವನಾದರೋ ಆ ಪೇಟೆಯಲ್ಲಿ ನಡೆಯುತ್ತಿರುವ ಚುನಾವಣೆಯ ಒಂದು ಪಕ್ಷದ ಚಿನ್ಹೆಯ ವೇಷಧಾರಿ, ಮುಂದಿನ ನಾಟಕೀಯ ಸನ್ನಿವೇಶದಲ್ಲಿ ಸಮೀರನು ಸಹ ಹಸುವಿನ ವೇಷದಾರಿಯಾಗುತ್ತಾನೆ, ಹುಲಿ ಹಾಗೂ ಹಸುವಿನ ವೇಷದಾರಿಗಳು ಮುಖಾಮುಖಿಯಾಗುತ್ತಾರೆ. ಇಲ್ಲಿ ಹುಲಿ ದಂಪತಿಗಳಿಗೆ ಮಕ್ಕಳಿಲ್ಲ, ಹುಲಿಯನ ಹೆಂಡತಿ ಸಮೀರನಲ್ಲಿ ತನ್ನ ಮಗನನ್ನು ಕಾಣುತ್ತಾಳೆ, ತಾಯಿ ಪ್ರೀತಿಯನ್ನು ತೋರುತ್ತಾಳೆ. ಮತ್ತೊಂದು ಕಡೆ ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದ “ಡೇವಿಡ್”ಎಂಬ ಪಾತ್ರ ಬರುತ್ತದೆ. ವಯಸ್ಸಾದ ಈ ವ್ಯಕ್ತಿ ತನ್ನ ಮಗನನ್ನು ಅವನು ಏಳು -ಎಂಟು ವರ್ಷದ ಬಾಲಕನಾಗಿದ್ದಾಗ ಕಳೆದುಕೊಂಡಿರುತ್ತಾನೆ, ಕಂಡ ಕಂಡ ಬಾಲಕರನ್ನೆಲ್ಲ ತನ್ನ ಮಗನೆಂದು ಅವನು ಭ್ರಮಿಸುತ್ತಾನೆ.ಯ, ಅವನು ಸಹ ಸಮೀರನನ್ನು ಮಗನೆಂದು ತಿಳಿಯುತ್ತಾನೆ. ತನ್ನ ಹಸು ಬಾನುವಿನ ಹುಡುಕಾಟದಲ್ಲಿ ಸಮೀರ ದೇವಸ್ಥಾನವನ್ನು ಪ್ರವೇಶಿಸುತ್ತಾನೆ, ಅವನನ್ನು ಪ್ರೀತಿಯಿಂದ ಕಾಣುವ ಅಲ್ಲಿನ ಪುರೋಹಿತರು ಅವನಿಗೆ ಅವನ ಹಸು ಸಿಗುವುದೆಂಬ ಭರವಸೆಯನ್ನು ನೀಡಿ ಸಮಾಧಾನ ಮಾಡುತ್ತಾರೆ. ಹೀಗೆ ಹಲವು ಸಣ್ಣ ಸಣ್ಣ ಪಾತ್ರಗಳು ಚಿತ್ರದ ಮುಖ್ಯ ಪಾತ್ರ ಸಮೀರನನ್ನುಮುಖಾಮುಖಿಯಾಗುತ್ತವೆ. ಇಲ್ಲಿ ಕೆಲವು ಪಾತ್ರಗಳು ತಮ್ಮ ಮುಗ್ಧತೆ ಒಳ್ಳೆಯತನಗಳಿಂದ ಅವನಿಗೆ ಜೊತೆಯಾದರೆ ಕೆಲವು ಪಾತ್ರಗಳು ಹಾಗಲ್ಲ. ಸಾಲ ಮಸೂಲಿ ಮಾಡುವ ಯಜಮಾನ, ಸಾಲಕ್ಕೆ ಸಿಕ್ಕ ಆಟೋ ಚಾಲಕ, ಇವರೆಲ್ಲ ಸಮೀರನಿಗೆ ಮೋಸ ಮಾಡಲು ಪ್ರಯತ್ನಿಸುತ್ತಾರೆ. ಆದರೆ ಸಮೀರನ ಮುಗ್ದತೆಗೆ ಅವರು ಕರಗುತ್ತಾರೆ. ಇಷ್ಟು ಒಳ್ಳೆಯತನ, ಒಳ್ಳೆಯದು ಸಾಧ್ಯವೇ ಎಂಬ ಭಾವ ನಮ್ಮಲ್ಲಿ ಮೂಡುತ್ತದೆ, ಹೌದು ಅದು ಇಂದಿನ ಸಮಾಜದ ಅಗತ್ಯವು ಆಗಿದೆ, ಅದು ನಿರ್ದೇಶಕರ ಆಶಯವು ಆಗಿರುವುದರಿಂದ ಚಿತ್ರವು ಜಾತಿ ಧರ್ಮಗಳಿಗಿಂತ ಮನುಷ್ಯ ಧರ್ಮವೇ ಮೇಲೆಂಬುದನ್ನು ಎತ್ತಿ ಹಿಡಿಯುತ್ತದೆ. ಈ ಪ್ರಯತ್ನದಲ್ಲಿ ಕೆಲವೊಂದು ದೃಶ್ಯಗಳು ನಾಟಕೀಯವೆನಿಸುತ್ತದೆ. ಚಿತ್ರವು ಹಾಸ್ಯಭರಿತ ಸನ್ನಿವೇಶಗಳಿಂದ ಕೂಡಿದ್ದು ಬಹಳ ಲವಲವಿಕೆಯಿಂದ ಮೂಡಿದೆ. ಒಂದೆಡೆ ಹಾಸ್ಯ, ವಿಡಂಬನೆ, ಭಾವುಕತೆ ಎಲ್ಲವುಗಳ ಸಮ್ಮಿಲನ ಇಲ್ಲಿದೆ, ಗಂಭೀರ ಸಂದೇಶವನ್ನು ಹೊಂದಿದ್ದರೂ ಚಿತ್ರ ಶುದ್ಧ ಮನರಂಜನೆಯದ್ದಾಗಿದೆ. ಚಿತ್ರದ ಮುಖ್ಯ ಪಾತ್ರ ಸಮೀರನಾಗಿ ಬಾಲ ನಟ ರೋಹಿತ್ ಅತ್ಯುತ್ತಮ ನಟನೆ ನೀಡಿದ್ದಾರೆ, ಚಿತ್ರದಲ್ಲಿ ಹಲವಾರು ಪಾತ್ರಧಾರಿಗಳಿದ್ದಾರೆ, ಎಲವೂ ಹೊಸ ಮುಖಗಳು, ಎಲ್ಲರ ನಟನೆ ಬಹಳ ಸಹಜ. ಕಥೆ, ಚಿತ್ರಕಥೆ ಅಚ್ಚುಕಟ್ಟಾಗಿದೆ, ಚಿತ್ರದಲ್ಲಿ ಸಂಗೀತ ಅತ್ಯುತ್ತಮವಾಗಿದೆ, ನೋಬಿನ್ ಪೌಲ್ ಹಾಗೂ ವಾಸುಕಿ ವೈಭವ್ ಜೊತೆಯಾಗಿ ನೀಡಿರುವ ಸಂಗೀತ ಚೆನ್ನಾಗಿದೆ. ಉಮಾಪತಿಯವರ ನಿರ್ಮಾಣದಲ್ಲಿ ಸತ್ಯಪ್ರಕಾಶ್ ಅವರ ನಿರ್ದೇಶನದಲ್ಲಿ ಈ ಚಿತ್ರ ತಯಾರಾಗಿದ್ದು ಶ್ರೇಷ್ಠ ಚಿತ್ರವೆಂದು ರಾಷ್ಟ್ರ ಪ್ರಶಸ್ತಿಯನ್ನು ಪಡೆದಿದೆ. ಇದೊಂದು ಅತ್ಯುತ್ತಮ ಮಕ್ಕಳ ಚಿತ್ರವು ಆಗಿದೆ. ಈ ಚಿತ್ರದ ಅಭಿನಯಕ್ಕಾಗಿ ಮಾಸ್ಟರ್ ರೋಹಿತ್ ಗೆ ಶ್ರೇಷ್ಠ ಬಾಲ ನಟ ಪುರಸ್ಕಾರ ದೊರೆತಿದೆ. ಜಾತಿ ಜಾತಿಗಳ ನಡುವೆ ಧರ್ಮ ಧರ್ಮಗಳ ನಡುವೆ ಈಗ ಎದ್ದಿರುವ ಸಂಘರ್ಷಗಳನ್ನು ನೋಡುವಾಗ ಇಂತಹ ಸಿನಿಮಾಗಳು ಗಾಯಕ್ಕೆ ಮುಲಾಮು ಹಚ್ಚುವಂತೆ ಕಾಣುತ್ತವೆ. ಭರವಸೆಯನ್ನು ಮೂಡಿಸುತ್ತವೆ… ಕುಸುಮಾ ಮಂಜುನಾಥ್ ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದ ಕುಸುಮಾ ಮಂಜುನಾಥ್ ರವರು ಪ್ರವೃತ್ತಿಯಲ್ಲಿ ಸಾಹಿತ್ಯಾಸಕ್ತಿ ಯನ್ನು ಹೊಂದಿದ್ದಾರೆ. ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇವರಿಗೆ “ಸಾಧನ ವಿದ್ಯಾ” ಮಾಸ ಪತ್ರಿಕೆಯಲ್ಲಿ ಉಪಸಂಪಾದಕರಾಗಿ ನಾಲ್ಕೈದು ವರ್ಷಗಳು ಕೆಲಸ ಮಾಡಿದ ಅನುಭವವಿದೆ. ರೋಟರಿ ಸಹಯೋಗದಲ್ಲಿ ಸಾಕ್ಷರತಾ ಮಿಷನ್ ಕಾರ್ಯಕ್ರಮದಡಿ ಕೂಲಿ ಕಾರ್ಮಿಕರಿಗೆ ಅಕ್ಷರ ಕಲಿಸುವ ಸೇವೆ ಮಾಡಿದ್ದಾರೆ. ಕಥೆ ,ಕವನ, ಲೇಖನ ಬರೆಯುವುದು ಇವರ ಹವ್ಯಾಸ. ಹಲವು ಬ್ಲಾಗ್ ಗಳಲ್ಲಿ ,ನಿಯತ ಕಾಲಿಕೆಗಳಲ್ಲಿ ಇವರ ಲೇಖನ ಪ್ರಕಟವಾಗಿದೆ. ಸಂಗೀತ ಕೇಳುವುದು ,ಪತ್ರಿಕೆ ಓದುವುದು ಇವರ ಇತರೆ ಹವ್ಯಾಸ.
ಒಂದಲ್ಲ ಎರಡಲ್ಲ-ಸಿನಿಮಾ Read Post »
ಟೆಂಟ್ ಸಿನಿಮಾ-ಡಾ. ಅರಕಲಗೂಡು ನೀಲಕಂಠ ಮೂರ್ತಿ
ಕಾವ್ಯ ಸಂಗಾತಿ
ಟೆಂಟ್ ಸಿನಿಮಾ
ಡಾ. ಅರಕಲಗೂಡು ನೀಲಕಂಠ ಮೂರ್ತಿ
ಟೆಂಟ್ ಸಿನಿಮಾ-ಡಾ. ಅರಕಲಗೂಡು ನೀಲಕಂಠ ಮೂರ್ತಿ Read Post »
ಅಬಾಬಿಗಳು-ಧನಪಾಲ ನಾಗರಾಜಪ್ಪ
ಕಾವ್ಯ ಸಂಗಾತಿ
ಅಬಾಬಿಗಳು
ಧನಪಾಲ ನಾಗರಾಜಪ್ಪ
ಅಬಾಬಿಗಳು-ಧನಪಾಲ ನಾಗರಾಜಪ್ಪ Read Post »
ಗಡಿ ಮೀರಿದ್ದು.ಸ್ಮಿತಾಭಟ್ ಕವಿತೆ
ಕಾವ್ಯ ಸಂಗಾತಿ ಗಡಿ ಮೀರಿದ್ದು. ಸ್ಮಿತಾಭಟ್ ಒಲವಿಗೆ ಕಸಿ ಮಾಡುವ ಯೋಜನೆ ಕೈಗೊಳ್ಳಬಾರದುನೆಲದ ಕಾವಿನಲಿ ಒಡೆದ ಮೊಳಕೆ ಚಿವುಟಬಾರದುಬೆಳಕಿನ ಗೆರೆ ಹಿಡಿದು ಸಾಗಿಮತ್ತೆ ನೆಲಕ್ಕೆ ಅಪ್ಪಳಿಸುವ ಬಿಂದುಅಲ್ಲಿ ಕೈ ಗೊಂಡಿದ್ದು ಏನುಒಂದು ಭರವಸೆ ಮತ್ತು ಪ್ರೀತಿನಂಬಿ ಕಾಯುವ ಬುವಿ,ಬಾನುಎಲ್ಲವೂ ಗಡಿ ಮೀರಿದ್ದು ಗಡಿ ಗೆರೆಗಳನೇ ಬದುಕಾಗಿಸಿಕೊಂಡಮನುಷ್ಯ ಸ್ವಾರ್ಥಕ್ಕಷ್ಟೆ ಸೀಮಿತಯುಗಗಳೇ ಕಳೆದಿವೆಪ್ರೇಮದ ಸರಹದ್ದು ದಾಟಿ.ಬರೀ ಭ್ರಮೆಗಳಲೇ ಬದುಕುಹಾಸಿಕೊಳ್ಳಲಾಗದು.ಆಗೀಗ ಆತು ಕೊಳ್ಳಲಾದಾರೂನಂಬಿಕೆಗಳು ಬೇಕು.ಭಾವಗಳ ಬದಿಗೊತ್ತಿ,ಕಳಚಿ ಕೊಳ್ಳುವ ಪೊರೆಹಾವು, ಚಿಟ್ಟೆ ಏನು ಬೇಕಾದರೂಆಗಬಹುದು. ಪ್ರತೀ ಗಡಿಗೂ ಫಲಕಗಳ ಕೆತ್ತುತ್ತಾರೆಹೆಜ್ಜೆ ಇಟ್ಟಲೆಲ್ಲ ಗಡಿ ದಾಟಿದ ಭಾವಆಗಸವನ್ನಷ್ಟೇ ನೋಡ ಬಯಸುವ ನಾನುಒಸರುತ್ತದೆ ಹೆಬ್ಬೆರಳು ಕಗ್ಗಲ್ಲು ತಾಕಿಒಲವಿಗೆ ಗಡಿ ಗೆರೆಗಳಿಲ್ಲಮುಕ್ತಾಯ ಆರಂಭಗಳಿಲ್ಲಸ್ವಾಗತ ಬೀಳ್ಕೊಡುಗೆಗಳೂ ಇಲ್ಲನೆಲದ ಹಂಗು ತೊರೆದ ಹಕ್ಕಿ ಸದಾ ಸುಖಿ. ಸ್ಮಿತಾಭಟ್
ಗಡಿ ಮೀರಿದ್ದು.ಸ್ಮಿತಾಭಟ್ ಕವಿತೆ Read Post »





