ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ರದ್ದಿ ಕಾಗದ

ಶಂಕರಾನಂದ ಹೆಬ್ಬಾಳ

ನಾ ಗೀಚಿದ ಬರಹ
ಬರಿಪ್ರೇಮವಾಗಿ
ಉಳಿಯಲಿಲ್ಲ..?
ಸವಿಯಾಲಿಂಗನ
ಬಯಸಿ ನಿಂತಿರಲು ತನು
ಬೆರೆಯಲಿಲ್ಲ…?

ಅಪಧಮನಿ ಅಭಿದಮನಿಯ
ಕವಾಟದಲಿ ಚಲಿಸುವ
ರುಧಿರದಂತೆ ನೀನಾದೆ..?
ಮುಗ್ದತೆ ತೋರುತ
ಮನವ ಗೆಲ್ಲುತಲಿ
ಮತ್ತೇಕೆ ಈ ಇರಾದೆ..?

ಕಾರ್ಮಳೆಗೆ ಸಿಕ್ಕ
ಒಣಕಡ್ಡಿಯಂತಾದೆ
ನೋಡಲೆಯಿಲ್ಲ ನೀನು…?
ಬಾಷ್ಪಲೋಚನಳಾಗಿ
ಕೂಗಿ ಕರೆಯುವೆ
ಒಡಲು ರೋಧಿಸುತ್ತಿದೆ ಕಾರಣವೇನು..?

ಅರಿಯದ ಪ್ರೇಮಭಾವದ
ಪತ್ರ ಸೂತ್ರಹರಿದ
ಗಾಳಿಪಟವಾಯಿತು…
ದಕ್ಕದ ಬಂಧವನರಸಿದ
ನನ್ನ ಪ್ರೀತಿಯ ಪತ್ರ
ರದ್ದಿ ಕಾಗದವಾಯಿತು..


About The Author

Leave a Reply

You cannot copy content of this page

Scroll to Top