ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಗಜಲ್

ಬಾಗೇಪಲ್ಲಿ

ಕಾಲೇಜು ಹೆಣ್ಣು ಸಹಪಾಠಿಗಳು ಚಂದವಿದ್ದರು ಎಂದೆ ಅದಕ್ಯಾಕ ನೀ ಹಿಂಗಾಡ್ತೀ
ನಮ್ಮ ಗಾಯನ ಗುಂಪಿನ ಹುಡಿಗ್ಯಾರು ಅಂದವಿದ್ದರು ಅಂದೆ ಅದಕ್ಯಾಕ ನೀ ಹಿಂಗಾಡ್ತೀ

ಒಬ್ಬ ಕಿರಿ ಸಹಪಾಠಿಣಿ ಬಡವಳಿದ್ದು ಬಲು ಚೆಲುವೆ ಆಗಿದ್ದು ತಂದೆ ತೀರಿಕೊಂಡಿದ್ದಿ ಖರೆ ಅಷ್ಟೇ
ಹಳೇ ನೋಟ್ಸ ಅವಳಿಗೆ ನೀಡ್ತಿದ್ದೆ ಅಂತ ಹೇಳ್ಲಿಕ್ಕಷ್ಟೇ ಬಂದೆ ಅದಕ್ಯಾಕ ನೀ ಹಿಂಗಾಡ್ತೀ

ಕೀಟಲೇ ಹುಡುಗರು ಹೆಚ್ಚಾಗಿರ್ತಾರ ಕಾಲೇಜಿನಾಗ ನಮ್ಮಲ್ಲೂ ಇದ್ದರ ಸಹಜವದು
ಮೋಜಿಗಾಗಿ ಒಂದು ಹುಡುಗಿಕೂಡ ಲವ್ ಅಂತ ಹಚ್ಚಿದ್ದರು ನಿಂದೆ ಅದಕ್ಯಾಕ ನೀ ಹಿಂಗಾಡ್ತೀ

ಗಾಳಿ ಸುದ್ದಿ ಆದರೂ ಹುಡುಗಿ ರೂಪವತಿ ಆಗಿದ್ದರಿಂದ ಆಗಲಿಬಿಡೆಂದು ಖುಷಿಯಾಗಿದ್ದೆ
ಓದು ಮುಗಿದ ಮೇಲೆ ಗೆಳೆಯನ ಕೂಡ ಅಯ್ತು ಲಗ್ನ ಮುಂದೆ ಅದಕ್ಯಾಕ ನೀ ಹಿಂಗಾಡ್ತೀ

ಕೃಷ್ಣಾನಿಜ ಹೇಳಲಾಗದ ಕಾಲ ತಂದಿಟ್ಟೆಲ್ಲೋ ಸಹಾಯ ಮಾಡೋ ರಸಿಕಪ್ಪ
ನೀನಲ್ಲದೆ ವಿಶ್ವ ಸುಂದರಿ ಇನ್ನಾರಿಲ್ಲಾ ಪ್ರಮಾಣ ಮಾಡುವೆ ಈಗಲೇ ಇಂದೆ ಅದಕ್ಯಾಕ ನೀ ಹಿಂಗಾಡ್ತೀ

(Frailty thy name is woman, dialogue in Hamlet by Shakespeare ನೆನಪಿಸಿಕೊಂಡು)


About The Author

Leave a Reply

You cannot copy content of this page

Scroll to Top