ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯ ಸಂಗಾತಿ ತೀರವಿರದ ಕಡಲು ಅರುಣಾ ನರೇಂದ್ರ ಆಡದೇ ಉಳಿದ ಮಾತುಗಳು ನಿನ್ನ ನೆನಪಲ್ಲೇಕಳೆದು ಹೋಗುತ್ತೇನೆಸಾಗರವ ಸೇರಿದಹನಿಯಂತೆನಿನ್ನೊಳಗೆಒಂದಾಗಿ ಬಿಡುತ್ತೇನೆ ನನ್ನ ಕಾವ್ಯದಲ್ಲಿಓದುಗರ ಮನಸೂರೆಗೊಂಡುವಿಜೃಂಭಿಸುವಪದಗಳುಅದೇಕೊ ಕಾಣೆಅವನ ಹಿಂದೆ ಹಿಂದೆಅಲೆಯುತ್ತಿವೆನೆಲೆ ಇಲ್ಲವೆಂಬಂತೆ ದಿನ ರಾತ್ರಿ ನಾನುನಿದ್ರಿಸುವುದಿಲ್ಲನಿನ್ನ ಕುರಿತಾಗಿಭಗವಂತನೊಡನೆಮಾತಾಡುತ್ತಿರುತ್ತೇನೆಧ್ಯಾನಸ್ಥ ಸ್ಥಿತಿಯಲ್ಲಿ ಆಡದೆ ಉಳಿದಒಡಲ ಮಾತುಬೋರಾಡಿ ಅಳುತ್ತಿದೆಕಣ್ಣೀರಲ್ಲೇ ಮುಳುಗಿ ಮಿಂದುಹಸಿಯಾಗುವುದರಲ್ಲೇನಾಲಿಗೆ ಖುಷಿ ಕಾಣುತ್ತಿದೆ ಅರುಣಾ ನರೇಂದ್ರ

Read Post »

ಕಾವ್ಯಯಾನ

ನಡೀ….!!-ದೇವರಾಜ್ ಹುಣಸಿಕಟ್ಟಿ ಕವಿತೆ

ಕಾವ್ಯ ಸಂಗಾತಿ ನಡೀ….!!- ದೇವರಾಜ್ ಹುಣಸಿಕಟ್ಟಿ ಕವಿತೆ ನಡೀ ಇಡೀ ಜೀವನವನ್ನೇಅನಾಮತ್ತ ಎತ್ತಿಪ್ರೀತಿಯಾಗಿಸಿ ಬಿಡುವ…!ಬದುಕಿನ ಪ್ರತಿ ತಿರುವಿಗೆಸಿಗುವ ದುಃಖವನ್ನೇಸಿಂಗರಿಸಿ ಬಿಡುವ….!ದಾರಿಯ ಮುಳ್ಳನ್ನೇ ಎತ್ತಿಹೂವಾಗಿಸಿ ಬಿಡುವ….!! ನಡೀ ಶಿಕ್ಷೆಯೋ ವರವೋಅವನ ಭಿಕ್ಷೆಯೆಂದುನಂಬಿ ನಡೆದು ಬಿಡುವ..! ಭೂಮಿ ಮ್ಯಾಲ ಬಿದ್ದಮಳಿ ಹನಿ ಎಲ್ಲಮುತ್ತಾಗಬೇಕಿಲ್ಲ ಗೆಳತಿನಡೀ ಮೊಳೆಯೋ ಬೀಜಕ್ಕಜೀವ ಜಲವಾಗಿ ಬಿಡುವ…!! ನೆರೆತ ಗಡ್ಡ ಮುಪ್ಪಿನಕುರುಹಲ್ಲ ಈಗೀಗ ಫ್ಯಾಷನ್ಅಂತ ಗೊತ್ತಿಲ್ಲ ಮರಳ…..!!ನಡೀ ಬಿಳಿಯ ಕೂದಲಿಗೆ ಡೈಹಾಕಬೇಕಿಲ್ಲ ಹೃದಯದಿಂದಹರೆಯಕ್ಕೆ ಮರಳಿ ಬಿಡುವ…!! ಕರ್ತಾರನ ಕಮ್ಮಟವಂತೆಬದುಕು…!ಏನಾದರೂ ಒಂದುಮಾಡಲಿ ಬಿಡುನಡೀ ಅವ್ಹಾ ಬಯಸಿದಂತೆಇದ್ದು ಬಿಡುವ….!! ನನ್ನನ್ನೇ ನಾನು ಮರೆತರೆಏನೂ ಮರೆತಿಲ್ಲಎಂದು ಅರಿತು ಬಿಡುವ…!ನಿನ್ನ ಪ್ರೀತಿಯಲ್ಲಿ ದೇವರನ್ನೂಮರೆತರೇ ಮಾತ್ರ ನಡೀ ಅದನ್ನೇಪ್ರೀತಿಯೆಂದು ತಿಳಿದು ಬಿಡುವ…..!

ನಡೀ….!!-ದೇವರಾಜ್ ಹುಣಸಿಕಟ್ಟಿ ಕವಿತೆ Read Post »

ಕಾವ್ಯಯಾನ

ದಕ್ಕಿಸಿಕೊಂಡಂತೆ…

ಕಾವ್ಯ ಸಂಗಾತಿ ದಕ್ಕಿಸಿಕೊಂಡಂತೆ… ವಸುಂಧರಾ ಕದಲೂರು ಒಮ್ಮೆ ತಾಕಿಸಿಕೊಂಡ ಮೇಲೆಮುರಳಿ ಕೊರಳಾಗಿ, ವೀಣೆಇಂಪಾಗಿ ಮೃದಂಗ ಮೃದುವಾಗಿಪ್ರತಿ ಚಲನೆಯೂ ನಾದವಾಯಿತು ಒಮ್ಮೆ ಸೋಕಿಸಿಕೊಂಡ ಮೇಲೆಪರಾಗ ಹೂವಾಗಿ; ಹೂ ಹಣ್ಣಾಗಿಮರವಾಗಿ ಬೇರಾಗಿ, ಬೇರು ತಾಆಳದಲಿ ಮರೆಯಾಗಿ ಉಸಿರಾಯಿತು ಒಮ್ಮೆ ನಿನ್ನ ಎದೆಗೆ ಇಳಿಸಿಕೊಂಡಮೇಲೆ ಪ್ರತಿ ಮಿಡಿತ ಹಾಡಾಗಿ,ಸೊಗಸು ಕನಸಾಯಿತು; ಸಾಗದನನಸಾಗದ ಕನಸುಗಳು ನೆನಪಿಗೆಬಂದು ಸುಖಾಸುಮ್ಮನೆ ಬೇಸರಹೊತ್ತು ತಂದಿತು… ದಕ್ಕಿಸಿಕೊಂಡಂತೆ ದಿಕ್ಕುಗಳೂದಕ್ಕುವವು

ದಕ್ಕಿಸಿಕೊಂಡಂತೆ… Read Post »

ಕಾವ್ಯಯಾನ, ಗಝಲ್

ಗಜಲ್-ಎ . ಹೇಮಗಂಗಾ

ಕಾವ್ಯಸಂಗಾತಿ ಎ . ಹೇಮಗಂಗಾರಬರ ಗಜಲ್ ಭಾವಬಳ್ಳಿಗೆ ನೇಹದ ಜೀವಜಲ ಹನಿಸಿದ ನೆನಪಿಂದ ನೀ ಮರೆಯಾದೆಬಾಳ ಇರುಳಿಗೆ ನಲ್ಮೆ ಬೆಳಕನು ಹರಿಸಿದ ನೆನಪಿಂದ ನೀ ಮರೆಯಾದೆ ಭೂತದಾ ಭೂತ ಬೇತಾಳದಂತೆ ಹಗಲಿರುಳೂ ಕಾಡುತ್ತಲೇ ಇತ್ತುಕಣ್ಸನ್ನೆಯಲೇ ಕೆಂಪೇರಿಸಿ ನಕ್ಕು ನಗಿಸಿದ ನೆನಪಿಂದ ನೀ ಮರೆಯಾದೆ ನೀನಿಲ್ಲದ ನನ್ನಿರುವಿಕೆಗೆ ಅರ್ಥವೇ ಇಲ್ಲವೆಂಬ ಭ್ರಮೆ ಕಾಡಿತ್ತೇಕೆ ?ಕೊರಗಿ ನಲುಗಿದವಳ ಅಪ್ಪಿ ಸಂತೈಸಿದ ನೆನಪಿಂದ ನೀ ಮರೆಯಾದೆ ಸವೆಸಿದ ಮುಳ್ಳು ಹಾದಿಯ ಇನ್ನೆಂದೂ ಹಿಂತಿರುಗಿ ನೋಡಲಾರೆಸಿಹಿ ಮುತ್ತನಿತ್ತು ಕಹಿಯೆಲ್ಲ ಮರೆಸಿದ ನೆನಪಿಂದ ನೀ ಮರೆಯಾದೆ ಸಾವಿಗೆ ಬೆನ್ನು ತಿರುವಿ ಹೊಸ ಬದುಕ ಬದುಕಲು ಕಾತರಿಸಿದ್ದೇನೆಜೊತೆ ಇರುವೆನೆಂಬ ವಚನವ ಉಳಿಸಿದ ನೆನಪಿಂದ ನೀ ಮರೆಯಾದೆ ಅವನ ಅಖಂಡ ಪ್ರೀತಿ ಲೇಪನದಿ ಹೃದಯದ ಗಾಯಗಳು ಮಾಗಿವೆನಡೆ, ನುಡಿಯಲಿ ನಿಷ್ಠೆ ತೋರಿ ಮೆಚ್ಚಿಸಿದ ನೆನಪಿಂದ ನೀ ಮರೆಯಾದೆ ಕಾರಣವಿಲ್ಲದೇ ನಿರ್ದಯಿ ನೀ ತೊರೆದುದೇ ಹೇಮ ಳಿಗೆ ಒಳಿತಾಗಿದೆಸವಿ ದಾಂಪತ್ಯ ಬಂಧನದಿ ನನ್ನ ಬಂಧಿಸಿದ ನೆನಪಿಂದ ನೀ ಮರೆಯಾದೆ

ಗಜಲ್-ಎ . ಹೇಮಗಂಗಾ Read Post »

ಇತರೆ

ಸಂಗೀತ ಒಂದು ಅಧ್ಬುತ ಶಕ್ತಿ ಡಾ.ಸುನಂದಾ ಬಿ.ಸಾಲವಾಡಗಿ

ವಿಶೇಷ ಲೇಖನ ಸಂಗೀತ ಒಂದು ಅಧ್ಬುತ ಶಕ್ತಿ ಡಾ.ಸುನಂದಾ ಬಿ.ಸಾಲವಾಡಗಿ ಸಂಗೀತ ಒಂದು ಅಧ್ಬುತ ಶಕ್ತಿ ನಮ್ಮ ಪುರಾತನ ಋಷಿ ಮುನಿಗಳು ಸಂಗೀತವನ್ನು “ಗಂಧರ್ವ ವಿದ್ಯೆ” ಎಂದೂ “ಸಂಗೀತ ಕಲೆ” ಎಂದೂ ಗುರುತಿಸಿದ್ದಾರೆ. ಸಂಗೀತದ ಮೂಲಕ ಅವರು ಲೌಕಿಕ ಮತ್ತು ಪಾರಮಾರ್ಥಿಕ ಜೀವನದ ಅರ್ಥವನ್ನು ಅರಿತು ಕೊಂಡಿದ್ದರು. ಸಂಗೀತದಲ್ಲಿಯ ಅಲೌಕಿಕ ಶಕ್ತಿಯನ್ನು ಗುರುತಿಸಿ, ತನ್ಮೂಲಕ ಶಿವ ಸಾಕ್ಷಾತ್ಕಾರವನ್ನು ಸಾಧಿಸಿದ್ದರು. ಈ ದೃಷ್ಟಿಯಲ್ಲಿ ಅವರಿಗೆ ಸಂಗೀತವು ನಾದಾಂತವೂ ಆಗಿತ್ತು. ವೇದಾಂತವೂ ಆಗಿತ್ತು. ಸಂಗೀತದಲ್ಲಿ ಅಧ್ಯಾತ್ಮಿಕ ರಸಾಭಿವ್ಯಕ್ತಿ ಮತ್ತು ರಸಾನುಭಾವಗಳೇ ಮೂಲವಾದ ಅಂಶಗಳಾಗಿದ್ದವು. ಅಲ್ಲದೆ ನಮ್ಮ ಪುರಾತನ ರಸಋಷಿಗಳಿಗೆ “ರಸ ಗ್ರಹಣಕ್ಕೆ ವ್ಯತಿರಿಕ್ತವಾಗಿ ಅಧ್ಯಾತ್ಮ ಅಥವಾ ದೈವೀ ಸಾಕ್ಷಾತ್ಕಾರವೇ ಸಂಗೀತದ ಚರವೋದ್ದೇಶವಾಗಿತ್ತು” ಎಂಬ ಮಾತು ಭಾರತೀಯ ಸಂಗೀತದ ಇತಿಹಾಸವನ್ನು ಅವಲೋಕಿಸಿದಾಗ ತಿಳಿದು ಬರುತ್ತದೆ. ಸಂಗೀತ ಕಲೆ, ಸ್ವರ, ಭಾವ, ಲಯ ಹಾಗೂ ಶೃತಿಗಳಿಂದ ಕೂಡಿದ ಧ್ವನಿ ಸಮನ್ವಯವಾಗಿದೆ. ಧ್ವನಿಯು ಮಾನವನ ದೈಹಿಕ ಬೌದ್ಧಿಕ ಹಾಗೂ ಮಾನಸಿಕ ಆರೋಗ್ಯದ ಸಮತೋಲನವನ್ನು ಕಾಯ್ದುಕೊಂಡು ಹೋಗುವಲ್ಲಿ ಅತ್ಯಂತ ಮಹತ್ವದ ಪಾತ್ರವನ್ನು ನಿರ್ವಹಿಸುತ್ತದೆ. ಸೂಕ್ಷ್ಮತೆಯಿಂದ ನೋಡಿದಾಗ ಎಲ್ಲ ವಿದ್ಯೆ ಮತ್ತು ಕಲೆಗಳು ಈ ಜೀವ ಜಗತ್ತು ಮತ್ತು ದೇವರ ರಹಸ್ಯವನ್ನು ತಿಳಿದುಕೊಳ್ಳುವುದರಲ್ಲಿ ಪರ‍್ಯಾವಸಾನಗೊಳ್ಳುತ್ತವೆಂಬುದು ಅರಿವಿಗೆ ಬರುತ್ತದೆ. ವಿಜ್ಞಾನವು ವ್ಯಾಖ್ಯೆ ಅಥವಾ ಸೂತ್ರವನ್ನು ಸಮರ್ಥಿಸುತ್ತದೆ. ಸಂಗೀತವು ಕಲಾವಿದನ ರಚನಾತ್ಮಕ ಬುದ್ಧಿಯ ಒಂದು ಭಾಗವಾಗಿಯೂ ರಸಭಾವಾಭಿವ್ಯಕ್ತಿಯ ಒಂದು ಸಚೇತನ ಶಕ್ತಿಯಾಗಿದೆ. ಕಲೆಯು ಭಾವನಾ ಪ್ರಧಾನವಾಗಿರುತ್ತದೆ. ಮೊದಲನೆಯದಾಗಿ ಅದು ವಿಜ್ಞಾನಕ್ಕೆ ವ್ಯತಿರಿಕ್ತವಾಗಿ , ವ್ಯಕ್ತಿನಿಷ್ಠೆವಾಗಿ, ವ್ಯಕ್ತಿಯ ಅಥವಾ ಕಲಾವಿದನ ಸ್ವತಂತ್ರವಾದ ವ್ಯಕ್ತಿತ್ವದ ವಿಕಾಸವರ್ದನೆಗೆ ಅವಕಾಶವನ್ನು ಕಲ್ಪಿಸಿಕೊಡುವುದು, ಸಂಗೀತವು ಒಂದು ವಿಜ್ಞಾನವೇ ಆಗಿದೆ. ಆದರೆ, ಅದರ ಸಿದ್ದಿಗಾಗಿ, ವರ್ಷಗಳ ತಪಸ್ಸು ಅವಶ್ಯವಾಗಿದೆ. ಇಲ್ಲಿ ಕೆಲವು ಸಮಯದಿಂದ ವಿಜ್ಞಾನಿಗಳ ಧ್ಯಾನ ಸಂಗೀತದ ಕಡೆಗೆ ವಾಲುತ್ತಿದೆ. ಆದರೆ, ಸಂಗೀತದ ಕ್ರಿಯಾತ್ಮಕ ಜ್ಞಾನದ ಅಭಾವದಿಂದಾಗಿ ವಿಜ್ಞಾನಿಗಳ ಸಂಗೀತದ ಕಡೆಗೆ ಗಮನ ಕೊಡಲಾಗುತ್ತಿಲ್ಲ. ನಾದದ ವಿಲಕ್ಷಣ ಶಕ್ತಿ ಇನ್ನೂ ಅಪ್ರಕಟಿತವಾಗಿದೆ. ಯಾವಾಗ ಅದು ಪ್ರಕಟವಾಗುವುದೋ ಆಗ ಪ್ರತಿಯೊಬ್ಬರು ಸಂಗೀತವನ್ನು ವಿಜ್ಞಾನವೆಂದು ಸ್ವೀಕಾರಮಾಡುವರು. ಅಣು ಹಾಗು ಪರಮಾಣುವಿನ ಅಸ್ಥಿತ್ವ ಸಂಗೀತದ ಮುಂದೆ ನಗಣ್ಯವಾಗುವುದು. ನಮ್ಮ ಪುರಾತನ ಆಚಾರ್ಯ ಹಾಗೂ ಮಹಿರ್ಷಿಗಳು ಹೈಡ್ರೋಜನ ಬಾಂಬ ತಯಾರಿಸಿಲ್ಲ, ಆದರೆ ಧ್ವನಿ ವಿಜ್ಞಾನದ ಮೇಲೆ ವಿಚಾರ ಮಾಡಿದ್ದಾರೋ ಅದು ಈಗಲೂ ಮಹತ್ವವನ್ನು ಹೊಂದಿದೆ. ನಾದವೇ ಒಂದು ಶಕ್ತಿ ಎನ್ನುವ ವಿಚಾರ ಮಾಡುವ ಅನೇಕ ಗ್ರಂಥಗಳು ಈಗಲೂ ಉಪಲಬ್ದ ಇವೆ.  ಇಂಗ್ಲೆಡಿನ ಒಬ್ಬ ಮಹಿಳೆ ಏಲಿಯೆಸ್ ಸಂಗೀತದಿಂದ ದೂರದರ್ಶನದ ಗ್ಲಾಸ್‌ನ್ನು ಪುಡಿ ಮಾಡಿದ ಆಶ್ಚರ್ಯಕರವಾದ ಪ್ರದರ್ಶನವನ್ನು ನೀಡಿದ್ದರು. ಸ್ಟುಡಿಯೋದಲ್ಲಿ ನಾಲ್ಕು ಗಾಜಿನ ಗ್ಲಾಸಗಳನ್ನು ಇಡಲಾಗಿತ್ತು. ಅವುಗಳನ್ನು ಪುಡಿ ಪುಡಿ ಮಾಡಬೇಕಿತ್ತು. ಏಲಿಯಸ್ ಗಾಯನ ಪ್ರಾರಂಭ ಮಾಡಿದರು, ಸಾವಿರಾರು ಜನ ತಮ್ಮ ತಮ್ಮ ಮನೆಯಲ್ಲಿ ಕುಳಿತು ಈ ದೃಷ್ಯವನ್ನು ನೋಡುತ್ತಿದ್ದರು. ಆದರೆ ಏಲಿಯಸ್ ಸ್ಟುಡಿಯೋದಲ್ಲಿ ಇಡಲಾದ ಗ್ಲಾಸಗಳನ್ನು ಪುಡಿ ಪುಡಿ ಮಾಡಲಾಗಲಿಲ್ಲ. ನಂತರ ಒಬ್ಬ ಮಹಿಳೆ ದೂರದರ್ಶನಕ್ಕೆ ಪತ್ರ ಬರೆದು ಏಲಿಯಾಸ್ ಅವರ ಎತ್ತರದ ಸ್ವರಗಳಿಂದ ನಮ್ಮ ಮನೆಯ ನಾಲ್ಕು ಗ್ಲಾಸಗಳನ್ನು ಪುಡಿ ಮಾಡಿದ್ದಾರೆ ಎಂದು , ಇದಲ್ಲದೆ ಇನ್ನೂ ಅನೇಕ ಮನೆಯಲ್ಲಿ ಇದೇ ರೀತಿ ಏಲಿಯಾಸ್ ಗಾಯನದಿಂದಾಗಿ ಗ್ಲಾಸಗಳು ಒಡೆದು ಪುಡಿಯಾಗಿತ್ತು. ಸಂಗೀತಕ್ಕಿರುವ ಶಕ್ತಿಯೇ ಅಂತದ್ದು. ಅವರು ಮಾಡಿದ ಪ್ರಯೋಗ ಸ್ಟುಡಿಯೋದಲ್ಲಿ ಫಲಿಸಲಿಲ್ಲ. ಸ್ಟುಡಿಯೋದ ಕೋಣೆ ವಿಶೇಷ ಪ್ರಕಾರದಿಂದ ಮಾಡಲಾಗಿತ್ತು. ಆದ್ದರಿಂದ ಧ್ವನಿಯ ಪ್ರಭಾವ ಪೂರ್ಣರೂಪದಿಂದ ಗ್ಲಾಸ ಮೇಲೆ ಆಗಲಿಲ್ಲ. ಆದರೆ ಮನೆಯಲ್ಲಿ ಕುಳಿತು ಕೇಳುತ್ತಿದ್ದವರ ಮನೆಯ ಗ್ಲಾಸಗಳ ಮೇಲೆ ಪ್ರಭಾವ ಬೀರಿರುವುದು ಆಶ್ಚರ್ಯ ಹಾಗೂ ಸಂತೋಷದ ಸಂಗತಿ. ಭಾರತೀಯ ಸಂಗೀತ ಸಾಹಿತ್ಯದಲ್ಲಿ ತಾನಸೇನ ಅವರಿಗೆ ಸಂಬಂಧಿಸಿದಂತೆ ಅನೇಕ ಚಮತ್ಕಾರಿಕ ಘಟನೆಗಳು ಇವೆ. ಅದರಲ್ಲಿ ದೀಪಕರಾಗವನ್ನು  ಹಾಡಿ ದೀಪ ಬೆಳಗಿಸಿದ್ದಾಗಿರಬಹುದು, ಮೇಘರಾಗದಿಂದ ಮಳೆಯನ್ನು ತರಿಸಿದ್ದು, ಕೊಳಲನಾದದಿಂದ ಪಶು, ಪಕ್ಷಿಗಳು ತಲೆದೂಗಿದ್ದು, ಸಂಗೀತದಿಂದ ಸಮುದ್ರದ ಅಬ್ಬರದ ಅಲೆಗಳನ್ನು ಸಹ ಶಾಂತಗೊಳಿಸುವ ಶಕ್ತಿಯಿದೆ. ಅಲ್ಲದೆ ವಾಯುವಿನ ವೇಗವನ್ನು ಕಡಿಮೆಗೊಳಿಸುವ ಶಕ್ತಿ ಸಂಗಿತಕ್ಕಿದೆ. ಹೇಗೆ ಸಂಗೀತ ಭೌತಿಕ ತತ್ವಗಳನ್ನು   ಸಮನ್ವಯಗೊಳಿಸುತ್ತೋ      ಹಾಗೆ ಆಧ್ಯಾತ್ಮಿಕ     ತತ್ವಗಳನ್ನು ಸಮನ್ವಯಗೊಳಿಸುತ್ತದೆ. ಸ್ಥೂಲ ಹಾಗೂ ಸೂಕ್ಷ್ಮ ಎರಡೂ ಸೃಷ್ಠಿ, ಸಂಗೀತದ ಶಕ್ತಿಯ ಆಧಿನದಲ್ಲಿದೆ. ಈ ಸತ್ಯವನ್ನು ಸ್ಟೀವೆನ್‌ಸನ್ ಅವರು ಸಹ ಸ್ವೀಕಾರ ಮಾಡಿದ್ದಾರೆ. ಅವರು ತಮ್ಮ “ಪೈಸ ಪಾಯಿಪ್ಪ” ಎನ್ನುವ ಲೇಖನದಲ್ಲಿ ಪ್ರಕೃತಿ ದೇವನ ಕಲ್ಪನೆಯನ್ನು ಮಾಡಿದ್ದಾರೆ.  ದಕ್ಷಿಣದ “ಅನ್ನಮಲಾಯಿ” ವಿಶ್ವವಿದ್ಯಾಲಯದಲ್ಲಿ ಜೀವಶಾಸ್ತ್ರ ಕೆಲವು ವಿದ್ಯಾರ್ಥಿಗಳು ಸಂಗೀತ ಮೂಲಕ ಸಸ್ಯಗಳ ಮೇಲೆ ಅದ್ಭುತವಾದ ಸಂಶೋಧನೆಯನ್ನು ಮಾಡಿದ್ದಾರೆ. ಒಂದೆ ತರಹದ ಎರಡು ಗಿಡಗಳನ್ನು ತೆಗೆದುಕೊಂಡು, ಒಂದು ಗಿಡಕ್ಕೆ ಪ್ರತಿ ದಿನವು ಸಂಗೀತದ ಸ್ವರಗಳ ಮೂಲಕ ಗಿಡಗಳನ್ನು ಸಂರಕ್ಷಿಸಿದರು ಹಾಗೂ ಇನ್ನೊಂದು ಗಿಡಕ್ಕೆ ಪ್ರಕೃತಿದತ್ತವಾಗಿ ಬೆಳೆಯಲು ಬಿಟ್ಟರು. ಈ ಪ್ರಯೋಗವನ್ನು ಮಾಡಿದಾಗ ಸಂಗೀತದ ಸ್ವರಗಳನ್ನು ಆಲಿಸಿದಂತ ಗಿಡವು ೧೦ ಪಟ್ಟು ಚೆನ್ನಾಗಿ ಬೆಳೆದಿರುವುದು ಕಂಡು ಬಂದಿತು.  ಇಂದಿನ ದಿನಗಳಲ್ಲಿ ಕೆಲವರು ಪಶು-ಪಕ್ಷಿ ಹಾಗೂ ಹುಳು-ಹುಪ್ಪಟ್ಟಿಗಳ ಧ್ವನಿಯನ್ನು ಧ್ವನಿ ಮುದ್ರಿಸುತ್ತಿದ್ದಾರೆ. ಇದರಿಂದ ಅವರಿಗೆ ಸಂಗೀತ ಪ್ರಭಾವದ ಅನುಸಂಧಾನದಲ್ಲಿ ಸಹಾಯತೆ ಸಿಗುತ್ತದೆ. ಚೀನಾದ ಚಾಂಗಪೊ ಅವರು ಹುಳುಗಳ ಅನೇಕ ಧ್ವನಿ ಮುದ್ರಣ ಮಾಡಿದ್ದಾರೆ. ಅನೇಕ ಹುಳುಗಳು ಸಂಗೀತವನ್ನು ಬಹಳ ಪ್ರೇಮಿಸುತ್ತವೆ. ಹೀಗಾಗಿ ಸೊಳ್ಳೆಗಳು ಮಧುರವಾದ ಸಂಗೀತವನ್ನು ಕೇಳಲು ತಮ್ಮ ಪ್ರಾಣವನ್ನೇ ತ್ಯಾಗ ಮಾಡುತ್ತವೆಯಂತೆ.  ರಾಗ ಪದ್ಧತಿಯನ್ನು ಕುರಿತು ೯ ನೇ ಶತಮಾನದಲ್ಲಿ ಮತಂಗ ಮುನಿಯು ಹೀಗೆ ಹೇಳಿದ್ದಾರೆ ‘ರಾಗವು ಸುಮಧುರವಾದ ಧ್ವನಿಯ ಸಂಯೋಜನೆಯಾಗಿದ್ದು, ಮಾನವನ ಹೃದಯವನ್ನು ಪ್ರಪುಲ್ಲಿತವಾಗಿ ಮಾಡುವ ಶಕ್ತಿ ಹೊಂದಿದೆ. ಯಾವುದಾದರೂ ಒಂದು ರಾಗವನ್ನು ಪದೇ ಪದೇ ಶ್ರವಣ ಮಾಡುವುದರಿಂದ ನಿರ್ದಿಷ್ಟವಾದ ತರಂಗಗಳು ಉತ್ಪತ್ತಿಯಾಗಿ ರೋಗ ಪೀಡಿತ ನರಗಳಿಗೆ ಹಾಗೂ ಸ್ನಾಯುಗಳಿಗೆ ವಿಶೇಷ ಸಂವೇದನೆಯನ್ನು ನೀಡಿ ಅವುಗಳಲ್ಲಿ ಹೆಚ್ಚಿನ ರಕ್ತ ಪರಿಚಲನೆಯನ್ನು ಹಾಗೂ ಶಕ್ತಿಯನ್ನು ಉಂಟು ಮಾಡುತ್ತದೆ. ಹೀಗಾಗಿ, ಸಂಗೀತಕ್ಕೆ ರೋಗಗಳನ್ನು ಗುಣಪಡಿಸುವ ಅದ್ಭುತವಾದ ಶಕ್ತಿಯಿದೆ’.  ಪಾಶ್ವಿಮಾತ್ಯರಿಗೆ ಅನಾದಿ ಕಾಲದಿಂದಲೂ ಆರೋಗ್ಯ ಮತ್ತು ಸಂಗೀತದ ಮಧ್ಯೆ ಇರುವ ಸಂಬಂಧ ಎಂತದ್ದು ಎನ್ನುವ ತಿಳುವಳಿಕೆ ಇತ್ತು. ಉದಾಹರಣೆಗೆ : ಗ್ರೀಕರ ‘ಅಪೊಲೋ” ,ಸಂಗೀತ ಮತ್ತು ಕಲೆಗೆ ಮಾತ್ರವಲ್ಲ ಗುಣಪಡಿಸುವ ಕ್ರಿಯೆಗೆ ಆಧಿದೇವನಾಗಿರುವುದು.  ಸಂಗೀತದಿಂದ ಅನೇಕ ರೋಗಗಳು ಗುಣವಾಗುತ್ತಾ ಇದೆ ಎನ್ನುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಪ್ರತಿಯೊಬ್ಬ  ವೈದ್ಯರು ಸಂಗೀತ ಪ್ರೀಯರು ಅನೇಕ ವೈದ್ಯರು ತಮ್ಮ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಸಂಗೀತವನ್ನು ಕೇಳಿಸುತ್ತಾರೆ. ಪ್ರತಿಯೊಂದು ರಾಗಕ್ಕೂ ಒಂದೊಂದು ರೋಗ ಗುಣಪಡಿಸುವ ಶಕ್ತಿ ಇದೆ. ಸಾವೇರಿ ರಾಗವನ್ನು ಅರ್ಥೆಟಿಸ್‌ನಿಂದ ಬಳಲುವವರಿಗೆ ಕೇಳಿಸಿದ್ದಾದರೆ, ಹೆಚ್ಚಿನ ಪರಿಣಾಮ ಕಂಡು ಬರುತ್ತದೆ. ಮಧ್ಯಮಾವಲತಿಯು ಉತ್ತೇಜಿತ ಮನಸ್ಸನ್ನು ಶಾಂತಗೊಳಿಸುತ್ತದೆ. ಕಫ ದೋಷಕ್ಕೆ ಸಂಬಂಧಿಸಿದ ಖಾಯಿಲೆಗಳಾಗಿರುವ ಅಸ್ತಮಾ, ಕೆಮ್ಮು, ಶೀತ, ಕ್ಷಯರೋಗ ಮುಂತಾದ ಸಮಸ್ಯೆಗಳಿಗೆ ಭೈರವಿ ರಾಗವು ಅತ್ಯಂತ ಉಪಯುಕ್ತವಾಗಿದೆ. ಮಲ್ಹಾರ ರಾಗದಿಂದ ಸಿಟ್ಟು ಮತ್ತು ಒತ್ತಡಗಳು ದೂರಾದರೆ ಜೈಜೈವಂತಿ ಹಾಗೂ ಸೌರವ ರಾಗದಿಂದ ಮಾನಸಿಕ ರೋಗವನ್ನು ಕಡಿಮೆ ಮಾಡುತ್ತವೆ. ಶ್ರೀರಾಗದಿಂದ ಎಸಿಡಿಟಿ ಶಮನವಾಗುತ್ತದೆ. ಹಿಂಡೋಳ ರಾಗವನ್ನು ಆಲಿಸುವುದರಿಂದ ಏಕಾಗ್ರತೆ ಹೆಚ್ಚುತ್ತದೆ. ಅಲ್ಲದೆ ಈ ರಾಗವು ಯಕೃತ ಸಂಬಂಧಿ ಕಾಯಿಲೆಗಳಿಗೆ ಮದ್ದಾಗುತ್ತದೆ.  ಪಾಶ್ಚಿಮಾತ್ಯರದೇ ಆದ ಪೈಥಾಗೋರಸ್ ತತ್ವ ಶಾಸ್ತ್ರ ದರ್ಶನವು ಭಾರತೀಯ ಅನಾಹತನಾದ ಪರಿ ಕಲ್ಪನೆಯನ್ನು ಬಹು ಪಾಲು ಹೋಲುತ್ತದೆ. ಅರಿಸ್ಟಾಟಲ್ ಮತ್ತು ಪ್ಲೆಟೊನ ಬರಹಗಳಲ್ಲಿಯೂ ಸಂಗೀತ ಹಾಗೂ ಆರೋಗ್ಯದ ಸಂಬಂಧವನ್ನು ಚರ್ಚಿಸಲಾಗಿದೆ. ಇದಲ್ಲದೆ ಆಧುನಿಕ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಸಂಗೀತ ಚಿಕಿತ್ಸೆ ಖ್ಯಾತಿಯನ್ನು ಪಡೆದಿದೆ.  ಭಾರತೀಯ ಸಂಗೀತದಲ್ಲಿ ತತ್ವಶಾಸ್ತ್ರ ಮನೋಶಾಸ್ತ್ರ ಸೌಂದರ್ಯ ಶಾಸ್ತ್ರ ಎಲ್ಲವೂ ಸಮ್ಮಿಳಿತವಾಗಿದೆ.  ಭಾರತೀಯ ಸಂಗೀತದ ರಾಗಗಳು ಸಾಮಗಾನ ರೂಪದಲ್ಲಿದ್ದವು ಮೇಲೆ ಹೇಳಿದ್ದಂತೆ ಭಾರತದಲ್ಲಿ “ರಾಗ ಚಿಕಿತ್ಸೆ” ಎಂಬ ಹೆಸರಿನಲ್ಲಿ ಪ್ರಚಲಿತದಲ್ಲಿದೆ. ಚೆನೈನ ‘ನಾವ್ ಸೆಂಟ್’ ನಲ್ಲಿ ನಾದರೋಗವನ್ನು ಶಾಸ್ತಿಯವಾಗಿ, ಅಭ್ಯಶಿಸಲಾಗುತ್ತದೆ. ಸಂಗೀತವು ಮಾನವನ ದೇಹದ ಪ್ರತಿಯೊಂದು ಹಂತದ ಚೇತನಕ್ಕೆ ಸಂಚಲತೆಯನ್ನು ಉಂಟು ಮಾಡುತ್ತದೆ ಎನ್ನುವುದಕ್ಕೆ ನಾದಯೋಗದಲ್ಲಿಯ ಈ ಪರಿಕಲ್ಪನೆ ಹೆಚ್ಚು ಪರಿಣಾಮ ಬೀರುತ್ತದೆ.  ಇತ್ತೀಚಿನ ದಿನಗಳಲ್ಲಿ ಅನೇಕ ಆಸ್ಪತ್ರೆಗಳಲ್ಲಿ ಸಂಗೀತ ಚಿಕಿತ್ಸೆಯನ್ನು ಬಳಸಲಾಗುತ್ತಿದೆ. ದೆಹಲಿಯ ಅಪೊಲೊ ಆಸ್ಪತ್ರೆಯಲ್ಲಿ ಸಂಗೀತ ಚಿಕಿತ್ಸೆಯದೇ ಒಂದೇ ವಿಭಾಗವಿದ್ದು ಅಲ್ಲಿ ಅಧಿಕ ರಕ್ತದೊತ್ತಡ, ಉಗ್ಗು, ನೋವು, ಮೈಗ್ರೇನ, ತಲೆ ನೋವು, ಅರ್ಥಟಿಸ್ ಹೀಗೆ ಇನ್ನೂ ಅನೇಕ ಕಾಯಿಲೆಗಳಿಗೆ ಸಂಗೀತದ ಮೂಲಕ ಚಿಕಿತ್ಸೆ ನೀಡಲಾಗುತ್ತದೆ.  ಒಮ್ಮೆ ಹಿಂಸಾಕಾರಕವಾದ ಸಿಂಹದ ಮೇಲೆ ಭಾರತೀಯ ಸಂಗೀತದ ಆಚಾರ್ಯ ಪಂಡಿತ ಓಂಕಾರನಾಥ ಠಾಕೂರ ಅವರು ಲಖನೌದ ಮೃಗಾಲಯದಲ್ಲಿ ಒಂದು ಪ್ರಯೋಗವನ್ನು ಮಾಡುತ್ತಾರೆ. ಸಿಂಹದ ಹತ್ತಿರ ಹೋದಾಗ ಆ ಸಿಂಹವು ಮುಖದಲ್ಲಿ ಹಿಂಸಾಕಾರಕ ಭಾವನೆಯಿತ್ತು, ಆದರೆ ಕೋಮಲ ಗಾಂಧಾರದ ವಿಶೇಷ ಪ್ರಯೋಗದ ಮೂಲಕ ಆ ಸಿಂಹದ ಕಣ್ಣಲ್ಲಿ ಕೆಲವೇ ಕ್ಷಣಗಳ ನಂತರ ಪರಿವರ್ತನೆ ಆಗ ತೊಡಗಿತು. ಅದರ ಕಣ್ಣಿನಲ್ಲಿ ವಾತ್ಸಲ್ಯಮಯವಾದ ಭಾವನೆ ಪ್ರಕಟವಾಗತೊಡಗಿತು. ಹೀಗೆ ಸಂಗೀತಕ್ಕಿರುವ ಅದ್ಭುತ ಶಕ್ತಿಯಿಂದ ಏನೆಲ್ಲ ಪವಾಡಗಳು ನಡೆಯುತ್ತಿವೆ, ನಡೆದಿವೆ.  ಸಂಗೀತವು ಅನೇಕ ರೋಗಗಳನ್ನು ಶಮನ ಮಾಡುವಲ್ಲಿ, ಮನಸ್ಸಿನ ಅಹ್ಲಾದತೆಗೆ, ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ವೃದ್ಧಿಸಲು, ಒತ್ತಡ ದೂರ ಮಾಡುವಲ್ಲಿ, ನೋವನ್ನು ಉಪಶಮನ ಮಾಡುವಲ್ಲಿ, ನೆನಪಿನ ಶಕ್ತಿಯನ್ನು ವೃದ್ಧಿಸುವಲ್ಲಿ ಸಹಾಯಕಾರಿಯಾಗಿದೆ. ಸಂಗೀತದ ಬೆಳಗಿನ ರಾಗಗಳು ದಿನವಿಡೀ ಉಲ್ಲಾಸದಿಂದ ಇರಲು ಸಹಾಯ ಮಾಡಿದರೆ, ಸಾಯಂಕಾಲದ ರಾಗಗಳು ದಿನದ ಬಳಲಿಕೆಯನ್ನು ನಿವಾರಿಸಿ ಮನಸ್ಸನ್ನು ಪ್ರಫುಲ್ಲಗೊಳಿಸುತ್ತವೆ. ಉತ್ತಮ ಸಂಗೀತದಿಂದ ಗರ್ಭದಲ್ಲಿರುವ ಮಗುವಿನ ಭಾವನೆಗಳಿಗೆ ಸ್ಪಂದಿಸಿ, ಆರೋಗ್ಯಯುತ ಬೆಳವಣಿಗೆಗೆ ಸಹಕರಿಸುತ್ತದೆ. ಒಟ್ಟಿನಲ್ಲಿ ಸಂಗೀತದಲ್ಲಿ ಅದ್ಭುತವಾದ ಶಕ್ತಿ ಇದೆ ಎನ್ನುವುದು ನೂರಕ್ಕೆ ನೂರು ಸತ್ಯ. ಇಹಪರಗಳಲ್ಲಿ ಜೀವನ ಸಾರ್ಥಕ ಮಾಡಿಕೊಳ್ಳುವ ಸಾಧನಾ ಮಾರ್ಗಗಳಲ್ಲಿ ಶ್ರೇಷ್ಠತಮವಾದ ಸಂಗೀತ. ಭಾರತೀಯರ ಬದುಕು ಸಂಗೀತಮಯವಾಗಿದೆ. ಕಲೆಗಳಲ್ಲಿ ಅತಿ ಶ್ರೇಷ್ಟವಾದ, ದೈವದತ್ತವಾದ ಕಲೆ ಎಂದರೆ ಸಂಗೀತವೆಂದೆ ಹೇಳಬಹುದು. ಸಂಗೀತ ನಮ್ಮ ಮನಸ್ಸಿನ ಮೆಲೆ ನೇರವಾಗಿ ಹಾಗೂ ಆ ಕ್ಷಣದಲ್ಲೆ ಪರಿಣಾಮ ಬೀರುತ್ತದೆ. ಸಾಮಾನ್ಯ ಮಾನವರು ಸಹ ಹಾಡುಗಳನ್ನು ಮೆಲಕು ಹಾಕುತ್ತಾರೆ. ಗೋವುಗಳನ್ನು ಕಾಯುವ ಗೋಪಾಲಕರಿಂದ ಪಂಡಿತರವರೆಗೂ ಸಹ ಹಾಡುಗಳನ್ನು ಮೆಲುಕು ಹಾಕುತ್ತಾರೆ. ಯಾವುದಾದರೊಂದು ಒಳ್ಳೆಯ ಸಂಗೀತವನ್ನು ಕೇಳಿದಾಗ ಮನಸ್ಸು ಎಷ್ಟೆ ಮುನಿಸಿಕೊಂಡಿರಲಿ, ಆಳುತ್ತಿರಲು, ಖಿನ್ನತೆಯಿಂದ ಕೂಡಿರಲಿ, ಸಂಗೀತ ಮನಸ್ಸನ್ನು ಮುಟ್ಟಿ ಅಳು, ಮುನಿಸು, ಖಿನ್ನತೆಯನ್ನು ದೂರಮಾಡಿ ಸಂತೋಷ ಸಾಗರದಲ್ಲಿ ತೇಲಿಸುತ್ತದೆ. ಸಂಗೀತದಲ್ಲಿರುವ ಸಾಹಿತ್ಯ ನಮ್ಮನ್ನು ಚಿಂತೆಗಳಿಂದ ದೂರ ಮಾಡುತ್ತದೆ.  ಸಂಗೀತಗಾರರು ರಾಗಗಳನ್ನಾಗಲು, ಕೃತಿಗಳನ್ನಾಗಲಿ ಪ್ರಸ್ತುತ ಪಡಿಸುವಾಗ ಉಸಿರಾಟದಿಂದ ಪ್ರಾಣ ವಾಯು ಹೆಚ್ಚಾಗಿ, ರಕ್ತ ಪರಿಚಲನೆ ಸುಗಮವಾಗುತ್ತದೆ ಮತ್ತು ಪಚನ ಶಕ್ತಿಯೂ ಹೆಚ್ಚಾಗುತ್ತದೆ ಎನ್ನುತ್ತಾರೆ. ಸಂಶೋಧಕರು. ಅದರಲ್ಲೂ ಶಾಸ್ತ್ರೀಯ ಸಂಗೀತ ಪ್ರಸ್ತುತ ಪಡಿಸುವಾಗ ಗಾಯಕರು ಅಡಿನಾಭಿಯಿಂದ ಉಸಿರೆಳದುಕೊಂಡು ಹಾಡುವುದರಿಂದ ಉದರದ ಎಲ್ಲ ಅವಯವಗಳಿಗೂ ವ್ಯಾಯಾಮವಾಗುತ್ತದೆ. ಶಾಸ್ತ್ರೀಯ ಸಂಗೀತದಲ್ಲಿರುವ, ಸಾಹಿತ್ಯದಲ್ಲಿ ಭಗವಂತನ ವರ್ಣನೆ, ಭಕ್ತಿಯ ಪರಾಕಾಷ್ಠೆ ನಮ್ಮನ್ನು ಋಣಾತ್ಮಕ ಚಿಂತನೆಯತ್ತ ಕೊಂಡೊಯ್ಯುತ್ತದೆ. ಡಾ.ಸುನಂದಾ ಬಿ.ಸಾಲವಾಡಗಿ

ಸಂಗೀತ ಒಂದು ಅಧ್ಬುತ ಶಕ್ತಿ ಡಾ.ಸುನಂದಾ ಬಿ.ಸಾಲವಾಡಗಿ Read Post »

ಅಂಕಣ ಸಂಗಾತಿ, ಗಜಲ್ ಲೋಕ

ಅಂಕಣ ಸಂಗಾತಿ ಗಜಲ್ ಲೋಕ ಶೈಲಶ್ರೀಯವರ ಗಜಲ್ ಗಳಲ್ಲಿ ಪ್ರೇಮಿಗಳ ಕಲರವ… ಶೈಲಶ್ರೀಯವರ ಗಜಲ್ ಗಳಲ್ಲಿ ಪ್ರೇಮಿಗಳ ಕಲರವ… ಗಜಲ್ ಗಂಗೆ ಇಂದು ಸಂಸಾರದುದ್ದಕ್ಕೂ ಹರಿಯುತಿದ್ದಾಳೆ, ರಸಿಕರ ತನು-ಮನವನ್ನು ಸಂತೈಸುತ್ತ… ಇಂಥಹ ಗಜಲ್ ಕುರಿತು ಮಾತನಾಡುತಿದ್ದರೆ ಬೆಳದಿಂಗಳ ರಾತ್ರಿಯ ಫೀಲ್ ಆಗುತ್ತೆ…!! ಆ ಅನುಭಾವದ ಅನುಭವವನ್ನು ತಮ್ಮೊಂದಿಗೆ ಹಂಚಿಕೊಳ್ಳೋಕೆ ಖುಷಿಯೆನಿಸುತ್ತಿದೆ. ಕರುನಾಡಿನ ಪ್ರಸಿದ್ಧ ಸುಖನವರ್ ಅವರ ಪರಿಚಯದೊಂದಿಗೆ ತಮ್ಮ ಮುಂದೆ ಬರುತ್ತಿದ್ದೇನೆ. ಪ್ರೀತಿಯಿಂದ ತಾವೆಲ್ಲರೂ ಗಜಲ್ ಚಾಂದನಿಯನ್ನು ಸ್ವಾಗತಿಸುವಿರೆಂಬ ಭಾವನೆಯೊಂದಿಗೆ ನನ್ನ ಲೆಕ್ಕಣಿಕೆಗೆ ಚಾಲ್ತಿ ನೀಡುವೆ…!! “ಒಂದು ಮುಖವಿದೆ ಯಾವಾಗಲು ಕಣ್ಣುಗಳಲ್ಲಿ ನೆಲೆಸಿರುತ್ತದೆ ಒಂದು ಕಲ್ಪನೆಯಿದೆ ಅದು ಒಂಟಿಯಾಗಿರಲು ಬಿಡುವುದಿಲ್ಲ”  –ಜಾವೇದ್ ನಸೀಮಿ      ‘ಪ್ರೀತಿ’ ಎನ್ನುವ ಎರಡುವರೆ ಅಕ್ಷರ ಈ ಸಂಸಾರವನ್ನೆ ಆಳುತ್ತಿದೆ. ಇದನ್ನು ಅಭಿವ್ಯಕ್ತಿ ಪಡಿಸುವುದು, ಅನುಭವಿಸುವುದು ನಿಜಕ್ಕೂ ಸುಂದರವಾಗಿರುತ್ತದೆ. ಇಂಥಹ ಪ್ರೀತಿಯು ನವಿರಾದ ತುಟಿಗಳು ಮತ್ತು ಬೆರಳುಗಳಿಂದ, ಮೃದುವಾದ ದಿಂಬುಗಳಿಂದ ಹೃದಯವಂತರನ್ನು ಗಾಯಗೊಳಿಸುತ್ತದೆ. ಈ ಯೂನಿಕ್ ಪ್ರೀತಿಯನ್ನೇ ಉಸಿರಾಡುತ್ತಿರುವ ಜಗಮೆಚ್ಚಿದ ಕಾವ್ಯ ಪ್ರಕಾರವೆಂದರೆ ‘ಗಜಲ್’. ಗಜಲ್ ಎನ್ನುವುದು ದ್ವೀಪವಲ್ಲ, ಇದೊಂದು ಸೇತುವೆ. ಇದು ಕೇವಲ ಹಡಗಾಗಿರದೆ ಜೀವದ ನೌಕೆಯಾಗಿದೆ. ಈ ದಿಸೆಯಲ್ಲಿ ಗಜಲ್ ಎಂದರೆ ಈಜು ಅಲ್ಲ, ಪವಿತ್ರವಾದ ನೀರು. ನಿಜಕ್ಕೂ ಗಜಲ್ ಬರೆಯುವುದೆಂದರೆ, ಓದುವುದೆಂದರೆ ನಾವು ಜಳಕಕ್ಕೂ ಮುಂಚೆ ಬಟ್ಟೆಗಳನ್ನು ಬಿಚ್ಚಿದಂತೆ!! ನಾವು ಬಟ್ಟೆ ಒದ್ದೆಯಾಗುತ್ತವೆ ಎಂಬ ಭಯದಿಂದ ಬಟ್ಟೆ ಕಳಚುವುದಿಲ್ಲ, ಬದಲಿಗೆ ನೀರು ನಮ್ಮನ್ನು ಸ್ಪರ್ಶಿಸಲಿ ಎಂಬ ಅನನ್ಯ ಬಯಕೆಯಿಂದ. ನಾವು ಸಂಪೂರ್ಣವಾಗಿ ನೀರಿನ ಆಹ್ಲಾದತೆಯಲ್ಲಿ ಮುಳುಗಲು ಮತ್ತು ಹೊಸ ಹುಮ್ಮಸ್ಸಿನೊಂದಿಗೆ ಹೊರಹೊಮ್ಮಲು ಬಯಸುತ್ತೇವೆ. ಈ ಕಾರಣಕ್ಕಾಗಿಯೇ ಗಜಲ್ ಮೇಲಿನ ನನ್ನ ಪ್ರೀತಿ ಯಾವಾಗಲೂ ಗಿರಿ-ಶಿಖರದಂತೆ ಆಗಸದತ್ತ ಮುಖ ಮಾಡಿಯೇ ಇರುತ್ತದೆ. ಸ್ತಬ್ಧ ಮತ್ತು ನಿರಂತರ. ಗಜಲ್ ಪ್ರೀತಿಯಲ್ಲೊಂದು ಅಮಲು ಇದೆ. ಅದಕ್ಕೇ ಈ ಜಗತ್ತು ಗಜಲ್ ನ ಮಧುಶಾಲೆಯಲ್ಲಿ ಜಗದ ಜಂಜಡವನ್ನು ಮರೆತು ಮುಳುಗುತಿದೆ. ಈ ಗಜಲ್ ಪ್ರೀತಿ ಸಹೃದಯಿಗಳನ್ನು ಹೃದಯವಂತರನ್ನಾಗಿಸುತ್ತದೆ. ಕರುನಾಡಿನಲ್ಲಿ ಇಂಥಹ ಹೃದಯವಂತರಿಗೇನೂ ಕೊರತೆಯಿಲ್ಲ. ಇಂತಹ ಗಜಲ್ ಗೋ ಅವರಲ್ಲಿ ಶ್ರೀಮತಿ ಶೈಲಶ್ರೀ ಶಶಿಧರ್ ಅವರೂ ಒಬ್ಬರು.        ಶ್ರೀಮತಿ ಶೈಲಶ್ರೀ ಶಶಿಧರ್ ಅವರು ಶ್ರೀ ಗೋಪಾಲ್ ರಾವ್ ಮತ್ತು ವನಜಾಕ್ಷಿ ರಾವ್ ದಂಪತಿಗಳ ಮಗಳಾಗಿ ದೊಡ್ಡ ಕೂಡು ಕುಟುಂಬದಲ್ಲಿ ಉಡುಪಿ ಜಿಲ್ಲೆಯ ಮಟ್ಟು ಗ್ರಾಮದಲ್ಲಿ ಜನಸಿದ್ದಾರೆ. ಇವರ ತಂದೆಯವರು ತಮಿಳುನಾಡಿನ ತಿರುನಲ್ವೇಲಿಯಲ್ಲಿ ಹೋಟೆಲ್ ವ್ಯವಹಾರದಲ್ಲಿದ್ದು ನಂತರ ಉಡುಪಿಗೆ ಬಂದು ನೆಲೆಸಿದರು. ಇವರ ವಿದ್ಯಾಭ್ಯಾಸವು ಉಡುಪಿಯಲ್ಲಾಗಿದೆ. ಶಾಲಾ ದಿನಗಳಿಂದಲೂ ಕಾವ್ಯ, ಕತೆ, ಕಾದಂಬರಿ… ಓದುವ ಹವ್ಯಾಸವನ್ನು ಹೊಂದಿದ್ದು, ಕ್ರಮೇಣವಾಗಿ ಸಾಹಿತ್ಯದಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡರು. ಮುಂದೆ ಪದವಿ ವ್ಯಾಸಂಗ ಪೂರ್ಣ ಆಗುವುದರೊಳಗೆ ವಿವಾಹವಾಗಿ, ತುಂಬು ಸಂಸಾರದ ಜವಾಬ್ದಾರಿ ಹೊತ್ತರು. ಬರಹಕ್ಕೆ ವಯಸ್ಸಿನ ಹಂಗಿಲ್ಲ ಎನ್ನುವಂತೆ ತಮ್ಮ ೪೬ ನೇ ವಯಸ್ಸಿಗೆ ಕವನ ಬರೆಯಲು ಆರಂಭಿಸಿ ಇಲ್ಲಿಯವರೆಗೆ ಸುಮಾರು ೬೦೦ಕ್ಕೂ ಹೆಚ್ಚು ಕವಿತೆಗಳನ್ನು ಬರೆದಿದ್ದಾರೆ. ಮುಂದೆ ಗಜಲ್ ವ್ಯಾಟ್ಸಪ್ ಬಳಗಗಳಿಂದ ಗಜಲ್ ಸಾಹಿತ್ಯದಲ್ಲಿ ಅಭಿರುಚಿಯನ್ನು ಹೊಂದಿ ಗಜಲ್ ಕೃಷಿಯನ್ನು ಮಾಡುತ್ತಿದ್ದಾರೆ. ಅದರ ಫಲವೆಂಬಂತೆ ಅಸಂಖ್ಯಾತ ಗಜಲ್ ಗಳನ್ನು ಬರೆಯುತ್ತ ಕನ್ನಡ ಗಜಲ್ ಪರಂಪರೆಗೆ “ಶಶಿಯಂಗಳದ ಪಿಸುಮಾತು” ಎಂಬ ಪ್ರಥಮ ಸೆಹ್ ಗಜಲ್ ಸಂಕಲನ ಕೊಡುಗೆಯಾಗಿ ನೀಡಿದ್ದು ಇವರ ಹೆಗ್ಗಳಿಕೆಯಾಗಿದೆ. ಇದರೊಂದಿಗೆ “ರಾಧಾ ಮೋಹನ ಪ್ರೇಮಾನುರಾಗ” ಎಂಬ ರಾಧೆ ಮೋಹನರ ಪ್ರೇಮದ ಗಜಲ್ ಗಳು ಮದ್ದಣ್ಣ ಮನೋರಮೆ ಅವರ ಸಂಭಾಷಣೆಯನ್ನು ನೆನಪಿಸುವಂತಿವೆ. ಇವರ ಎರಡೂ ಗಜಲ್ ಸಂಕಲನಗಳು ಪ್ಯೂರ್ ಪ್ರೇಮಭರಿತವಾಗಿದ್ದು, ಗಜಲ್ ನ ಮೂಲ ಆಶಯವನ್ನು ಹೊಂದಿವೆ. ಇದಕ್ಕೆ ಇವರು ಬಳಸುವ ತಖಲ್ಲುಸನಾಮ ‘ಶಶಿ’ ಕೂಡ ಅಪ್ಯಾಯಮಾನವಾಗಿ ಹೊಂದಿಕೊಂಡಿದೆ. ಪ್ರಸ್ತುತವಾಗಿ ಶ್ರೀಯುತರು ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಇವರ ಕಾವ್ಯ, ಗಜಲ್ ಹಾಗೂ ಇನ್ನಿತರ ಕಾವ್ಯ ಪ್ರಕಾರಗಳು ಅಂತರ್ಜಾಲ ಹಾಗೂ ದೈನಂದಿನ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಹಲವು ಗಜಲ್ ಗೋಷ್ಠಿ, ಕಾವ್ಯ ಗೋಷ್ಠಿಗಳಲ್ಲಿ ಭಾಗವಹಿಸಿರುವ ಇವರು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸದಾ ಕ್ರಿಯಾಶೀಲರಾಗಿದ್ದಾರೆ.‌ ಈ ಕ್ರಿಯಾಶೀಲತೆಯನ್ನು ಗುರುತಿಸಿ ನಾಡಿನ ಸಂಘ-ಸಂಸ್ಥೆಗಳು ಗೌರವಿಸಿ ಸತ್ಕರಿಸಿವೆ.       ಮನುಷ್ಯ ತಾನು ಎಷ್ಟೇ ಬೌದ್ಧಿಕವಾಗಿ ದಾಪುಗಾಲಿಟ್ಟರೂ ಅದಕ್ಕೆ ಮೆರುಗು ಬರುವುದೇ ಭಾವನೆಗಳ ಗೊಂಚಲಿನಿಂದ!! ಸಾರಸ್ವತ ಲೋಕದಲ್ಲಿ ಅಸಂಖ್ಯಾತ ಕಾವ್ಯ ಪ್ರಕಾರಗಳಿವೆ. ಅವುಗಳಲ್ಲಿ ಮನಸ್ಸಿನ ಆಳದಿಂದ ಉದಯಿಸುವ ಭಾವಾಂತರಂಗದ ಜೋಕಾಲಿ, ತಂಬೆಲರೆಂದರೆ ಗಜಲ್. ಇದು ಕಂಬನಿಯನ್ನು ಪ್ರೀತಿಸುತ್ತ ಬೆಚ್ಚನೆಯ ಆಲಿಂಗನದಿ ಭಾರವಾದ ಹೃದಯಗಳನ್ನು ಸಂತೈಸುತ್ತದೆ. ಈ ನೆಲೆಯಲ್ಲಿ ಗಮನಿಸಿದಾಗ ಗಜಲ್ ಇಡೀ ಮನುಕುಲದ ಸಂಬಂಧಗಳ ಛಾವಣಿಯಾಗಿದೆ. ಇಂಥಹ ಗಜಲ್ ಇಂದು ಆಲದ ಮರದಂತೆ ನಾಡಿನಾದ್ಯಂತ ಪಸರಿಸಿದೆ. ಗಜಲ್ ಗೋ ಶೈಲಶ್ರೀ ಯವರು ತಮ್ಮ ಗಜಾಲ್ ಗಳನ್ನು  ಪ್ರೀತಿಯಿಂದ ಅಲಂಕರಿಸಿದ್ದಾರೆ, ಓದುಗರ ಹಾದಿಯುದ್ದಕ್ಕೂ ಪ್ರೀತಿಯ ಮದಿರೆಯನ್ನು ಹಂಚುತ್ತ ; ಪ್ರೀತಿ-ವಿರಹವನ್ನೆ ಪೂಜಿಸುತ್ತ ಬಂದಿದ್ದಾರೆ. ಇವರ ಗಜಲ್ ಗಳ ಪ್ರೀತಿಯಲ್ಲಿ ವಿರಹವಿದೆ, ಒಂಟಿತನವಿದೆ, ದಾಂಪತ್ಯದ ಅಮೃತವಿದೆ, ಸಿಹಿಯಾದ ದ್ರೋಹವಿದೆ. ಇವುಗಳೊಂದಿಗೆ ಪ್ರೀತಿಯಲ್ಲಿ ಸಾಕ್ಷಾತ್ಕಾರವೂ ಇದೆ. ಪ್ರೇಮಿಗಳ ಪಿಸುಮಾತು, ಏಕಾಂತದ ನಾದ, ಹೃದಯಗಳ ಸಮಾಗಮದಿಂದ ತುಂಬಿದ ಇವರ ಗಜಲ್ ಗಳು ಓದುಗರ ಪ್ರೇಮಮಿಡಿತವನ್ನು ಜಾಗೃತಗೊಳಿಸುತ್ತದೆ.——————— ಡಾ. ಮಲ್ಲಿನಾಥ ಎಸ್. ತಳವಾರ ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.‌ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ

Read Post »

ಅಂಕಣ ಸಂಗಾತಿ, ಹೊತ್ತಿಗೆಯೊಂದಿಗೆ ಒಂದಿಷ್ಟು ಹೊತ್ತು

ಬಾನು ಬೆಳಗಿತು _  ಕಾದಂಬರಿ

ಅಂಕಣ ಸಂಗಾತಿ

ಹೊತ್ತಿಗೆಯೊಂದಿಗೊಂದಿಷ್ಟುಹೊತ್ತು

ಬಾನು ಬೆಳಗಿತು _ ಕಾದಂಬರಿ

ಲೇಖಕಿ _ ತ್ರಿವೇಣಿ ಅನಸೂಯಾ ಶಂಕರ್

ಬಾನು ಬೆಳಗಿತು _  ಕಾದಂಬರಿ Read Post »

You cannot copy content of this page

Scroll to Top