ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ನೆನಪ ಹೊತ್ತು

ಬಿಸಿಲಲ್ಲೇ ನಿಂತರೂ ಕೆಂಪು ಗುಲಾಬಿ ತನ್ನ ಮುಡಿದವರಿಗೆ ಮುದವ ಕೊಟ್ಟು
ಜೊತೆಗೆ ಮುಳ್ಳಿದ್ದರೂ ನಲಿವ ಹೂವ ಬಿರಿವಂತೆ ನಾನಿರುವೆ ಇಲ್ಲಿ ನಿನ್ನ ನೆನಪ ಹೊತ್ತು

ನೆನಪ ಹೊತ್ತು Read Post »

ಕಾವ್ಯಯಾನ

ಪ್ರಿಯನಿಗೆ ಓಲೆ

ನನ್ನ ಅದರಗಳ ಜೇನ ಸವಿಯುವೆಯಾ
ನನ್ನ ಉಸಿರಿಗೆ ಜೀವ ತುಂಬುವೆಯ
ನಿನ್ನ ಬಿಗಿ ಅಪ್ಪುಗೆಯ ಬಿಸಿ ಉಣಿಸುವೆಯ
ಪ್ರಣಯದೋಕುಳಿಯ ಚೆಲ್ಲುವೆಯ
ಕಮರಿದ ಜೀವದಿ ಹೊಸ ಚಿಗುರು ತರುವೆಯ

ಪ್ರಿಯನಿಗೆ ಓಲೆ Read Post »

ಕಥಾಗುಚ್ಛ

ವಾಡಿಕೆ

ಕಥಾ ಸಂಗಾತಿ ವಾಡಿಕೆ ಶ್ರಮ ಕುಮಾರ್ ಇದುವರೆಗು ನೋಡಿದ ಇಪ್ಪತ್ತು ಹುಡುಗಿಯರನ್ನು ಸಾರಾಸಗಟ್ಟಾಗಿ ಯಾವುದೇ ಕಾರಣ ನೀಡದೆ ತಿರಸ್ಕಾರ ಮಾಡಿದ್ದ‌ ಮಗನ ಮೇಲೆ ನರಸಯ್ಯನಿಗೆ ತಡೆಯಿಡಿಯಲಾರದಷ್ಟು ಕೋಪ್ವ ತರಿಸಿದ್ದರು ಹಲ್ಲು ಕಚ್ಚಿ ದೂರದ ಸಂಭಂದದಲ್ಲಿ ಸರಿಯೊಂದುವ ಒಂದು ಹುಡುಗಿ ನೋಡಿ ಬಂದಿದ್ದರು ‘ನಾಳೆ ಹೋರಡೋಕ್ ಹೇಳು ಒಳ್ಳೆಯ ಸಂಬಂಧ ಬಿಟ್ರೆ ಮೂರ್ ವರ್ಷ ಕಂಕಣಬಲ ಇಲ್ವಂತೆ ಬತ್ತ ಅಯ್ನೋರ್ನು ಮಾತಾಡ್ಸಿ ಬಂದಿವ್ನಿ ತಿದ್ದೇಳು ಅವ್ನ್ಗೆ’  ಎಂದೇಳಿ ನರಸಯ್ಯ ಹೊರಡುವಾಗ ಎಷ್ಟು ಹೇಳಿದರು ಕಿವಿಗಾಕಿಕೊಳ್ಳುವ ಜಯಮಾನ ಮಾದೇವನದಲ್ಲವೆಂದು ಗೊತ್ತಿದ್ದರೂ ತಲೆದೂಗಿದಳು ಲಕ್ಷಮ್ಮ ಎಮ್ಮೆಕೊಪ್ಪಲಿನಿಂದ ಪಾದಯಾತ್ರೆಯಲ್ಲೇ ಮಾದಪ್ಪನ ಬೆಟ್ಟವ ಅತ್ತಿಬಂದಮೇಲೆ ಮಾದೇಶ್ವರನ ವರಪ್ರಸಾದದಿಂದ ಹುಟ್ಟಿದ್ದನೆಂದು ಹುಟ್ಟಿ ಅಳುವ ಧ್ವನಿಯಲ್ಲೇ ಗಂಡು ಮಗು ನನಗೆಂದು ನರಸಯ್ಯ ಮನಸಲ್ಲೇ ಚೀರಿ ಮೂರುಬಾರಿ ಮಾದೇವ ಮಾದೇವ ಮಾದೇವನೆಂದು ಊರ ದಿಕ್ಕುಗಳಿಗು ಕೇಳುವ ಹಾಗೆ ಕೂಗಿದ್ದಾಗಿನಿಂದ ಮಾದೇವ,ಮಾದು,ಮಾದನಾಗಿ ಕರೆಸಿಕೊಳ್ಳುತ್ತಿದ್ದ ಮಾದೇವನದ್ದು ಒಣಕು  ದೇಹವಾದರು ನರಸಯ್ಯ ಹೊಡೆದು ಬಡಿದು ಹೊಲ ಮನೆಯಲ್ಲಿ ಮಾಡಿಸುತ್ತಿದ್ದ ಗ್ಯೈಮೆಯ ದೆಸೆಯಿಂದ ಗಟ್ಟಿಮುಟ್ಟಾಗಿ ಕಾಣುತ್ತಿದ್ದ ಮೆಕ್ಕೆ ಜೋಳದ ಸಾಲಿನಂತಿದ್ದ ಹಲ್ಲು,ಕಪ್ಪು ಬಿಳಿ ತಿಕ್ಕಾಡುವ ಬಣ್ಣ, ಎಡಕ್ಕೆ ಬಾಚುವ ಕೂದಲಿನ ತುದಿಯಲ್ಲಿ ಮಿಂಚುತಿದ್ದ ಕೆಂಚು ಅವನಂದವನ್ನ ಹೆಚ್ಚಿಸಿದ್ದರು ಅವನಿಗದು ನಗಣ್ಯ ಅಪ್ಪನಿಗೆ ಹೆಚ್ಚುಗೆಯೇ ಎದರಿ ಅಮ್ಮನ ಸೆರಗೊಳಗೆ ಕವುಚುತಿದ್ದ ಮಾದೇವನಿಗೆ ಅದ್ಯಾವ ಗರ ಬಡಿದಿತ್ತೊ ಅವತ್ತು ಅಪ್ಪನಿಗೇ ತಿರುಗಿ ಮಾತಾಡಿ ಅವರ ಮಾತನ್ನು ಕೇಳದೇ ಇದ್ದದ್ದು ನರಸಯ್ಯನಿಗೆ ಸಹಿಸದೇ ಹೋಗಿ ಅವತ್ತಿನಿಂದು ಅವನೊಟ್ಟಿಗೆ ಮಾತು ಬಿಟ್ಟವರು ಇವತ್ತಿನ ವರೆಗೂ ಮಾತಾಡಿಲ್ಲದ ಬಗೆಯನ್ನು ಬಟ್ಟೆ ಹೋಗೆಯುವಾಗ ಪಕ್ಕದ ಮನೆಯ ಶಾಂತನೊಂದಿಗೋ ಹಾಚೆ ಬೀದಿಯ ಕಪ್ಪೆಚನ್ನಿಯೊಂದಿಗೋ ಹೇಳುವುದು ಲಕ್ಷಮ್ಮನಿಗೆ ದಿನದ ಮಾತಿನಲ್ಲಿ ಬೆರೆಯುತ್ತಿತ್ತು,  ಮಾದೇವ ಹೆಚ್ಚಿಗೆ ಮಾತನಾಡುವವನಲ್ಲ ಲಕ್ಷಮ್ಮ ಒಂದೋ ಎರಡೋ ಮಾತು ಅವನೊಂದಿಗಾಡಿದರೆ ಹೆಚ್ಚು ಅಂಗೂ ಅವನನ್ನು ತಡೆದು  ನಿಲ್ಲಿಸಿಕೊಂಡು’ಮಗ ಮಾದು ನೀನು ಪಿಯುಸಿ ಆದ್ಮೇಲೆ ಮುಂದಿಕ್ಕೆ ಓದಲ್ಲ ಅಂದೆ ಅಪ್ಪ ಬಡಿದರೂ ಓದ್ಲಿಲ್ಲ ಬೇಸಾಯ ಮಾಡ್ತೀನಿ ಅಂದೆ ಮಾಡ್ದೆ  ಒಳ್ಳೆದಾಗಿ ಬೆಳ್ದೆ ಒಳ್ಳೆ ಮಗ ನೀನು ಅಪ್ಪ ನೋಡೋ ಹುಡ್ಗೀನ ಮದುವೆ ಹಾಗಿ ಅಪ್ಪನ ನೆಮ್ದಿ ಉಳ್ಸು ಮಾದು’ಎಂದೇಳಿದ ಲಕ್ಷಮ್ಮನ ಮಾತಿಗೆ ಸಬ್ಯಸ್ತನಂತೆ ‘ಆಗ್ಲಿ’ ಎಂದೇಳಿ ಹಾಗದೇ ಹೋಗಿದ್ದ. ‘ಹಳೆ ಕಾಲಾನೆಲ್ಲ ಶಪಿಸ್ಕೊಂಡು ಮೂರೊತ್ತು ಚಿಂತೆಯೊಳಗೇ ಇದ್ಬುಡಕೇಳು ನಿನ್ಮಗಂಗೆ ಹೆಣ್ಗಿಣ್ಣೆಲ್ಲ ಯಾಕೆ’ ನರಸಯ್ಯನ ಆಪ್ತ ಜಲ್ಲ ಮಾದೇವನ ಮದುವೆಯ ಮಾತು ಬಂದಾಗಲೆಲ್ಲ ಕೆಣಕಿದರೆ ‘ಊ ಕನಂತ್ ಹೋಲ ನಮ್ಮಯ್ದ ಗೊಡ್ಡಸ ಹಾಗಿದ್ರೆ ನೀನೆಲ್ದಂಗೆ ಮಾಡುವೆ’ ಅನ್ನುತ್ತ ಹೋಗೆಸೊಪ್ಪನ್ನು ಬೋರ್ಡಿಗಾಕುವುದರ ಇಲ್ಲ ಬಿತ್ತನೆ ತರುವುದರ ವಿಚಾರಗಳ ತೆಗೆದು ಮಾತು ಬದಲಾಯಿಸಿ ಜಮೀನನ್ನು ಎಳೆದು ತರುತ್ತಿದ್ದ. ಮಾದೇವ ತೋರಿಸುವ ಯಾವೊಂದು ಹುಡುಗಿಯರ ಒಪ್ಪದೇ ಇರುವುದ ತಿಳಿಯಲೇ ಬೇಕೆಂದು ಒಂದುಪಾಯ ಮಾಡಿ ನರಸಯ್ಯ ಮಾದೇವನ ಸ್ನೇಹಿತ ಚಂದ್ರುನನ್ನು ಬಿಟ್ಟು ಅವನ ಮನಸ್ಸಲ್ಲಿ ಯ್ಯಾರಾದರು ಇದ್ದಾರ ಕೇಳಿ ಏಳಪ್ಪ ಅಂದರು ‘ಕೇಳಿ ಹೇಳ್ತೀನಪ್ಪ’ ಎಂದ ಚಂದ್ರು ಕೊಟ್ಟ ಮಾತಿನಂತೆ ಅವನೊಳಗಿನ ಹುಡುಗಿಯನ್ನು ಕೆಣಕಿ ಕೆಣಕಿ ತೆಗೆಯಲು ನೋಡಿದ ಹುಹೂ ಅಳ್ಳಾಡದ ಮಾದೇವ ಇದೆ ಅಥವ ಇಲ್ಲ ಯಾವುದೂ ತೋರಗೊಡಲಿಲ್ಲ ಚಂದ್ರುವಿಗೆ  ಗೆಲುವಾಗದೆ ‘ಇಲ್ಲ ಅವ್ನು ಏನನ್ನು ಹೇಳ್ತಾ ಇಲ್ಲ’ ಎಂದೇಳಿ ನರಸಯ್ಯನ ಮುಂದೆ ತಲಾಬಾಗಿ ಸಪ್ಪಗಾದ ‘ಚಂದ್ರು ಅದ್ಬುಡಪ್ಪ ನಿಮ್ನಪ್ಪ ಹೊಲ್ತಾಕ್ ಬರಕ್ ಹೇಳ್ದ ಹೋಗಿ ಅದೇನು ಕೇಳೋಗು’ ಎಂದೇಳಿ ಚಂದ್ರುನನ್ನು ಕಳುಹಿಸಿ ಜಲ್ಲಯ್ಯನಿಗಾಗಿ ಊರ ಕುರ್ಜಿನ ಬಳಿ ಕಾಯುತ್ತ ಅವನು ಬಂದೊಡನೆ ‘ಇವತ್ತು ಎರಡ್ರಲೊಂದು ತಿರ್ಮಾನ ಮಾಡ್ಲಾ ಜಲ್ಲ ಅವ್ನು ನಮ್ಮ್ ಕೈಗೆ ಸಿಗಂಗ್ ಕಾಣ್ತಾ ಇಲ್ಲ ಯಾರೇನೆ ಹೇಳುದ್ರು ಕೇಳ್ದಿದ್ಮೇಲೆ ಏನ್ಮಾಡದು ಹೇಳು’ ಮುಂತಾಗಿ ಹೇಳುತ್ತ ಮನೆಯ ದಾರಿಯಲ್ಲಿ ನಡೆಯುತ್ತಿದ್ದವರಿಗೆ ಮದುವೆಯಾಗದ ಚೆಂದುಳ್ಳಿ ಹೆಣ್ಣುಗಳು ಬಗೆ ಬಗೆಯಾಗಿ ಕಾಣುತ್ತಿದ್ದವು. ನರಸಯ್ಯನನೊಂದಿಗೆ ಜಲ್ಲಯ್ಯ ಬಂದದ್ದನ್ನು ಹರೆಗಣ್ಣಲ್ಲಿ ಕಂಡೊಡನೆ ಹಳೆಯ ಟೀವಿಯೊಳಗೆ ಮೂಡಿದ್ದ ತನ್ನ ಮುಖವನ್ನೇ ನೋಡುತ್ತ ಕುಂತಲ್ಲಿಂದ ಎದ್ದುನಿಂತ ಮಾದೇವ. ಲಕ್ಷಮ್ಮನನ್ನು ಹುಣಸೇಕುಪ್ಪೆಯಿಂದ ಮದುವೆಯಾಗಿ ಕರಕೊಂಡು ಬರುವ ದಿನವನ್ನು ಗುರುಹಿರಿಯರು ಗೊತ್ತುಮಾಡುವ ದಿನ ಗೊತ್ತಾದಾಗ ನರಸಯ್ಯನು ಎತ್ತಿನಗಾಡಿಯಲ್ಲಿ ಕೆಮ್ಮಣ್ಣೊಡೆದು ಎಮ್ಮೆಕೊಪ್ಪಲಲ್ಲಿದ್ದ ಎರಡೊಕ್ಕುಲು ಕುಂಬಾರರನ್ನು ಮೀರಿಸುವವನಂತೆ ಗುಡ್ಡೆಮಾಡಿ ನೀರಿನಲ್ಲಿ ಉನಿಸಿ ಚೆನ್ನಾಗಿ ತುಳಿದು ಅದಮಾಡಿ ಒಂದಿಬ್ಬರು ಕೈಯಾಳುಗಳೊಂದಿಗೆ ಕಟ್ಟಿದ ಮನೆ ಬೆಳಕಲ್ಲು ಗೌ ಗುಡುವುದು ಅದಿದ್ದ  ಎತ್ತರದ ಕಾರಣಕ್ಕೊ ಅಥವ ಉದ್ದ ಅಗಲ ಜಾಸ್ತಿಯಾದ ಕಾರಣಕ್ಕೋ ನರಸಯ್ಯನಿಗೂ ತಿಳಿಯದು.  ಸಮವಿಲ್ಲದ ಮಣ್ಣಿನ ಗೋಡೆಗೆ ಬಳಿದ ಗುಲಾಬಿ ಬಣ್ಣದ ನೇರಕ್ಕೆ ತಿದ್ದಿದ್ದ ಪೋಟೋಗಳ ಸಾಲಿನಲ್ಲಿ ಈಶ್ವರ ಪಾರ್ವತಿಯರು ಮುಗುಳ್ನಗುತ್ತ ನೋಡುವ ಕಡೆಯಲ್ಲಿ ಇದ್ದ ಮರದ ಕುರ್ಚಿಯಲ್ಲ ಜಲ್ಲ,ನರಸ ಕೂತವರು ಮಾತು ಶುರುಮಾಡಲು ತಡವರಿಸುವವರಂತೆ ಬೀಡಿ ಕಚ್ಚಿ ಬೆಂಕಿ ತಾಕಿಸಿದರು, ಕಳ್ಳುಗಳನ್ನ ಬಳಸಿ ಹೊಗೆ ಹೋರಗೆ ಬರುತಿದ್ದರು ಮಾತಾಡಲೊಲ್ಲದೆ ಅಲ್ಲಿ ಎಲ್ಲವು ಶಬ್ದದಿಂದ ದೂರವಾದಂತಿದ್ದವು. ಇಬ್ಬರೂ ಮಾತಾಡಲೂ ಮಾತಿಲ್ಲದವರಂತೆ ಇದ್ದದ್ದನ್ನು ಕಾಣಲಾಗದೆ ಮಾತುಮುರಿದ ಲಕ್ಷ್ಮಮ್ಮ ‘ಮಾದು, ಅಪ್ಪ ಸರಿಯಾಗಿ ಊಟ ಮಾಡ್ತಾ ಇಲ್ಲಪ್ಪ ನಿಂದೇ ಯೋಚ್ನೆ ಮೂರೊತ್ತು,ಮೇಲಷ್ಟೇ ನಿನ್ಕಂಡ್ರೆ ಅಂಗಾಡೋದು ಒಳಗೊಳಗೆ ನೀನಂದ್ರೆ ಜೀವನಪ್ಪ ಅವ್ರ್ಗೆ ,ಮನ್ಸ ನೋಯಿಸ್ದೆ ಅವ್ರೇಳೋ ಹಾಗ್ ಕೇಳಿ ತಲೆಬಾಗಪ್ಪ ನಿನ್ನ್ದಮ್ಮಯ್ಯ ಅಂತೀನಿ ‘ಎರಡನಿ ಕಣ್ಣೀರ ತಂದುಕೊಂಡ ಅಂಗಲಾಚಿದಳು. ಬಂಡೆಯಂತೆ ಅಲ್ಲಾಡದೆ ನಿಂತವನು ‘ನನ್ಗಾಗಿ ಅಳ್ಬೇಡ ನೀನು ಅಪ್ಪನ್ಗು ಹೇಳು ನನ್ಗಾಗಿ ಕೊರ್ಗೊದು ಬೇಡ ಅಂತ’ಮಾದೇವನ ಮಾತು ಕನಿಕರದ ಬದಲು ಕಡ್ಡಿ ತುಂಡಾಗುವಂತಿದ್ದವು ಅದ ಕೇಳಿ ಲಕ್ಷಮ್ಮನು ಬಾಯಿ ಕಟ್ಟಿದವಳಂತಾದಳು ನರಸಯ್ಯನು ಸೇದುತಿದ್ದ ಬೀಡಿಯ ಹೊಗೆಯ ಜೊತೆಗೆ ಕೊಪವನ್ನು ತುಂಬಿಕೊಂಡು ಬುಸುಗುಟ್ಟಿದಾಗ ಮೂಗಿನೆಳ್ಳೆಯಿಂದ ಕೋಪವು ಹೊಗೆಯನ್ನು ಹೊರಗೆ ತಂದು ಕರಗಿಸಿತ್ತು. ಮಾವನ ಮಗಳು ಬೇಡವಾದ್ಲು,ನಿನ್ನಪ್ಪನ ಸಂಬಂದಿಗಳ ಮಕ್ಳು ಬೇಡವಾದ್ರು,ಬೇರೆ ಊರಿನ ಹೆಣ್ಣುಗಳು ಸುದ ಬೇಡವಾದ್ರು ನಿನ್ಗೆ ಇನ್ನೆಲ್ಲಿಂದಪ್ಪ ತರುವ ಹೇಳು’ಜಲ್ಲಯ್ಯ ಕೇಳಲು ಮಾದೇವ ಉಸ್ರಾಡಲಿಲ್ಲ ‘ಮಾದು ನಿನ್ನ್ ಮನ್ಸಲ್ಲಿ ಅದೆನದೆ ಹೇಳು ಇಂಗೆ ಮೂಖ್ನಂಗೆ ನಿಂತ್ಕಂಡ್ರೆ ನಾವು ಏನ್ ತಿಳ್ಕಳಾದು’ಎಂದು ಬೇಸರದಲ್ಲಿ ಹೇಳಿದಾಗಲು ಅಲ್ಲಾಡಲಿಲ್ಲ ಮಾದೇವ ‘ನಿನ್ಗೆ ಬುದ್ದಿ ತಿಳ್ದಂಗೆ ಮಾಡಪ್ಪ’ಕೂತಲ್ಲಿಂದ ಮೇಲೇಳುತ್ತ ಕೊನೆಯದಾಗಿ ಹೇಳಿ ಹೊರಟನು ಜಲ್ಲಯ್ಯ ಬೀಡಿ ಎಳೆಯುತ್ತ ಹೊಗೆಯ ಬಿಡುತ್ತ ಮೌನವನ್ನೇ ದ್ಯಾನಿಸಿದ ನರಸಯ್ಯ. ‘ಮಾದೇವಂಗೆ ಗಾಳಿ ತಾಕಿರಬೇಕು’ ‘ಯಾವ್ ಮಾದೇವನ್ಲ’ ‘ಅದೇ ಕೆಳಮನೆ ನರಸಯ್ಯನ ಮಗ’ ‘ಒಬ್ನೇ ಮಗ ಕುಂತಲ್ಲೇ ಕುರೋದಂತೆ ನಿಂತಲ್ಲೇ ನಿಲ್ಲೊದಂತೆ’ ‘ಹೊಲ್ದಲ್ ಮಾತ್ರ ಚುರ್ಕು ಬಡ್ದಿದು ಆದ್ರೆ ಯಾವ್ ಹುಡ್ಗೀರ್ನು ಒಪ್ತಿಲ್ವಂತೆ’ ಊರಲ್ಲೆಲ್ಲ ಮಾದೇವನದ್ದೆ ಸುದ್ದಿಯಾಗಿದ್ದು ನರಸಯ್ಯನಿಗೆ ಹೌಹಾರಿ ಬಂತು ‘ಜನ್ರೆಲ್ಲ ಇಲ್ಲಸಲ್ಲದ್ದು ಮಾತಾಡೋಕ್ ಸುರುಮಾಡೋರೆ ಇವನ್ಗೆ ಇನ್ನ ಹೆಣ್ಣು ಕೊಟ್ಟಂಗೆ ಎತ್ತೋರು,ಹಾಳಾದೋನು ಇದ್ದು ನಮ್ಮ್ ಹೊಟ್ಟೆ ಉರ್ಸೊಬದ್ಲು ಕಟ್ಟೆಹಾರಿ ಜೀವಹೋದ್ರೆ …’ ಮುಂದೇನು ಆಡದೆ ಗೋಡೆ ಹೊರಗಿ ಚಿಂತಿಸ ಹತ್ತಿದನು ಲಕ್ಷ್ಮಮ್ಮ ಮಲಗಿದಲ್ಲೇ ಬಿಕ್ಕಿ ಬಿಕ್ಕಿ ಅತ್ತಳು ಮಗನ ನಡವಳಿಕೆ ಒಗಟಿನ ರೀತಿಯಾಗಿ ಕಾಣತೊಡಗಿತವರಿಗೆ ತುಂಬಾ ಚುರುಕಿನ ಹುಡುಗ ಒಂದಲ್ಲ ಒಂದು ಕ್ಯಾತೆ ಮಾಡದೇ ನಿದ್ದೆಮಾಡಿದವನಲ್ಲ ಅಪ್ಪನಿಗೆ ಹೆದರಿದಷ್ಟು ಅವನು ಬೇರ್ಯಾರಿಗು ಹೆದರಿದವನಲ್ಲ ಅಂತ ಮಗ ಬಿಡಿಸಲಾಗದವನಂತೆ ಆಡುತ್ತಿದ್ದದ್ದು ಲಕ್ಷಮ್ಮನಿಗೆ ಕಣ್ಣೀರ ನಿಲ್ಲಿಸುತ್ತಿರಲಿಲ್ಲ. ರಾಗಿಕೂಯ್ಲಿನಲ್ಲಿ ಜಯಳೊಂದಿಗೆ ಮಾದೇವನು ನಗ್ನಾಟವಾಡುತಿದ್ದದ್ದು ನರಸಯ್ಯನಿಗೆ ಎಲ್ಲಿಲ್ಲದಷ್ಟು ಕೋಪ ತರಿಸಿತ್ತು,ಅವಳಿಗೆ ಆದಷ್ಟು ಬೈದು ಅವಳು ಕ್ಯುಯ್ಲು ಕೂಯ್ಯವುದನ್ನೆ ನಿಲ್ಲಿಸಿದ್ದನು,ಅವಳೊಬ್ಬಳೇ ಅಲ್ಲ ಊರಿನ ಯಾವ ಹೆಣ್ಣುಮಕ್ಕಳು ಅವನೊಂದಿಗೆ ಮಾತನಾಡುವುದು ನಿಷಿದ್ಧವಾಗಿತ್ತು ಮಾತಾಡಿಸುವ ಹೆಣ್ಣನ್ನ ಮಾದೇವ ಮಾಡ್ಕೊತಾನೆ ಎಂಬುದೊಂದಿತ್ತು ದಿಗಿಲು ನರಸಯ್ಯನಿಗೆ,ಈಗವನೇ ಅಕ್ಕಪಕ್ಕದ ಹುಡುಗಿಯರ ಬಿಟ್ಟು ಮಾತ್ನಾಡಿಸಿ ನಗ್ನಾಡಿಸಿ ಅವನೊಳಗೇನಿದೆ ತಿಳ್ಕೊಳ್ಳಿ ಇವೇ ಮುಂತಾದ ಸೂಚನೆ ಕೊಟ್ಟು ಕಳುಹಿಸುತ್ತಿದ್ದರು ತಿಳಿಯಗೊಡುತ್ತಿಲ್ಲ ಮಾದೇವ,ರಾತ್ರೆಯಲ್ಲ ಎದ್ದೇ ಇದ್ದು ಬೆಳಗೆಲ್ಲ ಮಲಗೇ ಇರುತಿದ್ದ ಅವನ ವರ್ತನೆಗಳ ಗಮನಿಸಿ ಬೈಲಿನಲ್ಲಿ ಗಾಳಿ ಬಡಿದಿರಬೇಕೆಂದು ಜಲ್ಲ ಹೇಳಿದ್ದು ನಿಜವೆಂದು ನಂಬಿದನು,ಮನೆದೇವರಾದ ಮಾದೇಶ್ವರರ ಮುಂತಾಗಿ ಯಾವ ದೇವರನ್ನು ಬಿಡದೆ ಎಲ್ಲ ದೇವರಿಗು ಅರಕೆ ಕಟ್ಟಿ ನನ್ಮಗ ಮೊದಲಿನಂತಾದರೆ ಅರ್ದ ಎಕ್ಕರೆ ಜಮೀನನ್ನೆ ಬಿಡುವುದಾಗಿ ಕುರ್ಜಿನ ಮಧ್ಯ ಮೂಡಿದ್ದ ಗ್ರಾಮ ದೇವತೆಯ ಬೇಡಿಕೊಂಡರು ಜಗ್ಗುತ್ತಿಲ್ಲ ಮಾದೇವ ಹಿಂದಿಗಿಂತಲೂ ಹೆಚ್ಚಾಗೇ ಬದಲಾಗುತ್ತಲೇ ಇದ್ದ. ಒಂದು ರಾತ್ರಿ ವೊಲದಲ್ಲಿ ಮುಳ್ಳಿನ ಮೇಲೆ ಕೂತವನಂತೆ ಕೂತು ಭಾರವಾಗಿದ್ದ ಅಲ್ಲಿನ ಶಬ್ದವನ್ನೇಲ್ಲ ಕೇಳುತ್ತಿದ್ದ ಮಾದೇವ,ತಂಗಾಳಿಯಲ್ಲಿ ಸಂಕ್ರಾಂತಿಯ ಚಳಿಗೂ ನಡುಗುತ್ತಿಲ್ಲ ಅವನ ಮೈಯ್ಯಿ ಗಟ್ಟಿಯಾಗಿ ಬೇರು ಬಿಟ್ಟವನಂತೆ ಭೂಮಿಯಲ್ಲಿ ಕೂಡಿಕೊಂಡು ಉತ್ತು ಬಿತ್ತ ಕ್ಷಣವನ್ನು ನೆನೆದ, ಇದ್ದಕ್ಕಿದ್ದಂತೆ ನರಸಯ್ಯನು ಲಕ್ಷಮ್ಮನ ಕೈಯಿಡಿದೆಳೆದು ತಂದು ಗೆರೆ ಮೂಡಿಸಿ ಒಂದಷ್ಟು ಹುಡುಗಿಯರನ್ನು ಸಾಲಾಗಿ ನಿಲ್ಲಿಸಿದನು ಅವರೆಲ್ಲರ ಕೈಯ್ಗಳಿಗೆ ಕಡಕತ್ತಿ ಕೊಟ್ಟು ಕಿವಿಯಲ್ಲಿ ಏನನ್ನೋ ಹೇಳಿದೊಡನೆ ಮಾದೇವನ ಬುಡದಲ್ಲಿನ ಬೇರನ್ನು ಕತ್ತಿರಿಸಲು ಮುಂದಾದರು ‘ನೀವು ಕೂಯ್ದಾಕುದ್ರು ನಾನು ಚಿಗ್ರುತೀನಿ ಸಾವಿಲ್ಲ ನನ್ನ ಬುಡಕ್ಕೆ’‌ಎಂದು ಮಾದೇವ ಒಂದೇ ಉಸಿರಿನಲ್ಲಿ ಹೇಳಿದಾಗ ಅವರೆಲ್ಲರು ಸಾಲಾಗಿ ನರಸಯ್ಯನ ಮುಂದಾಗಿ ಒಬ್ಬೊಬ್ಬರಾಗೇ ಕಡಕತ್ತಿ‌ಯ ತೂಗುತ್ತ ಮಾದೇವನ ಮುಂದೆ ಹಾದು ಹೋದರು ಅವೆಲ್ಲಕ್ಕು ಕದಡಿ ಹೋದವನಂತೆ ಅಲ್ಲಿಂದೆದ್ದು ಕಟ್ಟೆಯ ಮೇಲೊಗಿ ಕೂತು ಕೈ ಉಜ್ಜಿದ ಶಾಕದಲ್ಲಿ ಕೆನ್ನೆಗಳಿಗೆ ತಾಕಿಸಿದ ಚಳಿ ಹೆಚ್ಚುತ್ತಿತ್ತು ಗಾಳಿಯು ಇನ್ನಷ್ಟು ತಂಪಾಯಿತು ಸಣ್ಣ ಮಂಜಿನನಿಗಳು ಬೀಳತೊಡಗಿದವು ಅವನ್ನು ಸರಿಸುತ್ತ ಊರ ಹೆಂಗಸರೆಲ್ಲರು ಕಟ್ಟೆಯ ನೀರಿನಲ್ಲಿ ಈಜಿಬಂದರು ಅವರಲ್ಲೊಬ್ಬ ಹೆಂಗಸು ಮಾದೇವನೊಂದಿಗೆ ಮಾತಿಗಿಳಿದಳು  ‘ಏನಾಯ್ತು ನಿಂಗೆ ಮಾದ’ ‘ನನ್ಗೆ ದೆವ್ವ ಹಿಡ್ದದೆ’ ‘ದೆವ್ವನಾ’ ‘ಹೂ ಅದಕ್ಕೆ ನಾನು ಯಾವ್ ಹುಡ್ಗೀನು ಒಪ್ತಿಲ್ಲ,ಅದಕ್ಕೆ ನಾನು ಯಾರ್ನು ಸರಿಯಾಗಿ ಮಾತಾಡ್ಸ್ತ ಇಲ್ಲ’  ‘ಅಂಗಾದ್ರೆ ನೀನು ಮದ್ವೆ ಆಗಲ್ವ’ ‘ನಾನಾಗಲೇ ಮದ್ವೆ ಆಗಿದ್ದು ಗೊತ್ತಾಗಿಲ್ವ ನಿಂಗೆ ಅವರ್ಗೇನೋ ಗೊತ್ತಿಲ್ಲ ಅಂತ ಅನ್ಕೊಂಡಿದ್ದೆ ನಿನ್ಗು ಗೊತ್ತಿಲ್ವ’ ಎಂದೇಳಿ ಮಾದೇವ ಜೋರಾಗಿ ನಕ್ಕ ತಕ್ಷಣವೇ ಅವಳು ಮೊಕ ಸಿಂಡರಿಸಿಕೊಂಡದ್ದ ನೋಡಲಾಗದವನಂತೆ ‘ ಹೇಳ್ತೀನಿ ಕೇಳು,ಅವರು ತೋರುವ ಹುಡುಗಿಯರಂತಲ್ಲ ಅವ್ಳು ನಾಚಲ್ಲ ಹೆದ್ರಲ್ಲ ಎದುರು ನಿಂತು ಕಣ್ಣಲ್ಲಿ ಕಣ್ಣಿಟ್ಟು ಮಾತಾಡ್ತಾಳೆ,ಅವರಿಗೆ ಅವ್ಳ ಬಗ್ಗೆ ಗೊತ್ತಾಗೋದಿಲ್ಲ ಯಾಕಂದ್ರೆ ನಿನ್ನಂತೆ ಅವ್ರು ಕೇಳ್ಸ್ಕೊಳ್ಳೋ ಮನುಷ್ರಲ್ಲ ಒಂದ್ವೇಳೆ ಕೇಳಿಸ್ಕೊಂಡ್ರು ಅವರ್ಯಾರ್ಗು ಅವ್ಳು ಇಡ್ಸೊದಿಲ್ಲ,ಇಡಿಸುದ್ರು ಒಪ್ಪೋದೂ ಇಲ್ಲ , ಇನ್ನೊಂದ್ ತಿಳ್ಕೊ ಅವಳಂತ ಅವಳು ಇನ್ನೆಲ್ಲಿದಾಳು ಅವ್ರು ನಂಗೆ ಕಟ್ಟಾಕೆ’ಪ್ರತೀ ಮಾತನ್ನು ಹಿಡಿದೇಳಿ ಸುಮ್ಮನಾದ. ‘ಮುಂದೇನ್ಮಾಡ್ತೀಯ’ ಅವಳು ಕೇಳಿದಳು, ‘ಮುಂದೇನ್ಮಾಡ್ತೀಯಾ….ಕೇಳುತ್ತಲೇ ಇದ್ದವಳು ಅವನು ಏನನ್ನು ಹೇಳದ್ದ ಕಂಡು’ನೀನ್ ಹೇಳ್ದಿದ್ರೆ ಅಷ್ಟಾಯ್ತು ಹೋಗು’ಎಂದು ಮಿಕ್ಕ ಹೆಂಗಸರ ಕೂಡಿ ಈಜಿಹೋದಳು. ಅತ್ತು ಅತ್ತು ಲಕ್ಷಮ್ಮನ ಕಣ್ಣುಗಳು ಬತ್ತಿವೆ ಸರಿಯಾಗಿ ಊಟಮಾಡದೆ ನರಸಯ್ಯನ ಮಯ್ಯಿ ಒಣಗಿದೆ ಇದೆಲ್ಲವನ್ನ ನೋಡಲಾಗದೆ ನೆರೆಹೊರೆಯವರೆಲ್ಲ ಮಾದೇವನಿಗೆ ಬುದ್ದಿಹೇಳಲು ಮುಂದಾದರು ಒಂದು ವಾರವಾಗಿತ್ತು ಅವನು ಮನೆಬಿಟ್ಟು ಹೊಲದಲ್ಲೇ ಗುಡಿಸಲಾಕಿ ಅಲ್ಲೇ ಮಲಗುತ್ತಿದ್ದ ಊಟ ಎಲ್ಲಿ ಮಾಡಿತ್ತಿದನೋ ಅವನಿಗೇ ತಿಳಿಯದು, ಅಕ್ಕ ಪಕ್ಕದ ಜಮೀನಿನವರು ಕರೆದು ಕೊಟ್ಟರೆ ಸ್ವಲ್ಪ ತಿಂದು ಅವರು ಹೇಳುವ ಬುದ್ದಿಮಾತಿಗೆ ಪ್ರತಿಕ್ರಿಯಿಸದೇ ಅಲ್ಲಿಂದೆದ್ದು ಮತ್ತೆಲ್ಲಿಗೋ ಹೊರಟು ಬಿಡುತ್ತಿದ್ದ ಅದಾಗೇ ನಡೆಯುವಾಗ ಸಂಜೆ ಇಳಿಯುವ ಹೊತ್ತಿಗೆ ಮನೆಗೆ ಬಂದ ಮಾದೇವ ತೊಳೆಯದೇ ಇದ್ದ ಗುಡ್ಡೆ ಪಾತ್ರೆಗಳ ತೊಳೆದು ತೊಡೆಯದೇ ಇದ್ದ ರಾಸಿ ನಂಜ್ಗಸ ತೊಡೆದು ಒಲೆ ಅಚ್ಚಿದ, ಕನ್ಸಲ್ಲಿದ್ದೀನ ಅಂದುಕೊಂಡ ಲಕ್ಷಮ್ಮನಿಗೆ ನನಸೆಂದು ತೋರಿದಾಗ ಅಷ್ಟಿಷ್ಟಲ್ಲ ಅವಳು ಖುಷಿಪಟ್ಟಿದ್ದು, ನರಸಯ್ಯ ನೆಮ್ಮದಿಯ ಉಸಿರ ಬಿಟ್ಟಿದ್ದು ಕಾಲಿಯಂತಿದ್ದ ಮನೆಯ ಹಂಚಿನ ಸಂದಿಯಿಂದ‌ ತೂರಿಬಂದಿದ್ದ ಬೇಳಕಲ್ಲಿ

ವಾಡಿಕೆ Read Post »

You cannot copy content of this page

Scroll to Top