ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಗಜಲ್

ಗಜಲ್ ಅಂತರಂಗದ ಪ್ರೀತಿಯ ದೀಪ ಬೆಳಗಬೇಕಿದೆ ತೂಗುದೀಪವೇವಿರಹವು ಮಂಜಿನ ಹೂವಾಗಿ ಕರಗಬೇಕಿದೆ ತೂಗುದೀಪವೇ ಒಲುಮೆಯ ಮಧುರ ನಕ್ಷತ್ರಗಳ ಎಣಿಕೆಯ ಎಷ್ಟೋ ರಾತ್ರಿಗಳು ಕಳೆದಿವೆಹೃದಯಗಳ ಬಡಿತ ಕೇಳುತ ಕರಗಳಲ್ಲಿ ಬೆರೆಯಬೇಕಿದೆ ತೂಗುದೀಪವೇ ಬೇವಫಾ ನಾವಿಬ್ಬರೂ ಅಲ್ಲ ಜನುಮಾಂತರ ಬಂಧನ ಬದಲಾಗುವುದೆಸ್ಪಂದಿಸಿದ ಭಾವ ರಾಗ ರಾಗಿಣಿಯರು ಬಾಳಬೇಕಿದೆ ತೂಗುದೀಪವೇ ಚಾತಕ ಪಕ್ಷಿಯಂತೆ ಕಾಯುತಿರುವೆ ನಿನ್ನೊಲುಮೆಯ ಗುಟುಕಿಗಾಗಿಹೃದಯಗಳಲ್ಲಿ ಮೂಡಿದ ಪ್ರೀತಿಯು ನೀಗಬೇಕಾಗಿದೆ ತೂಗುದೀಪವೇ ಆಮಂತ್ರಣ ನೀಡದೆ ಬರುವ ಸಾವು ಬರುವ ಮುನ್ನವೇ ಮಾಜಾದುಃಖ ದುಮ್ಮಾನ ಬಿಟ್ಟು ಒಂದಾಗಬೇಕಿದೆ ತೂಗುದೀಪವೇ ಮಾಜಾನ್ ಮಸ್ಕಿ

ಗಜಲ್ Read Post »

ಇತರೆ

ಸರಣಿ ಬರಹ ಅಂಬೇಡ್ಕರ್ ಓದು ಭಾಗ-6 ಜಾತಿಯತೆಯ ಕರಾ‌ಳ ಸ್ಪರ್ಶ ಪುಸ್ತಕಗಳೆಂದರೆ ಅಂಬೇಡ್ಕರರಿಗೆ ಅದಮ್ಯ ಪ್ರೀತಿ, ನ್ಯೂಯಾರ್ಕ ನಗರದಲ್ಲಿನ ಪುಸ್ತಕ ಅಂಗಡಿಗಳಿಗೆ ಭೇಟಿಕೊಟ್ಟು ಸಾವಿರಾರು ಪುಸ್ತಕಗಳನ್ನು ಖರಿದಿಸಿ ಮುಂಬಯಿಗೆ ಕಳುಹಿಸಿ ಕೊಡುತ್ತಾರೆ. ಅಮೇರಿಕಾದ ನಿಗ್ರೋ ಜನರಿಗೆ ಸ್ವಾತಂತ್ರ್ಯ ಕಲ್ಪಿಸಿದ 14ನೇ ತಿದ್ದುಪಡಿ ಅಂಬೇಡ್ಕರರ ಮೇಲೆ ಅಗಾದ ಪ್ರಭಾವ ಬಿರಿತ್ತು. ಭೂಕರ .ಟಿ. ವಾಸಿಂಗ್ಟನ್ ರವರು 1915ರಲ್ಲಿ ನಿಧನರಾದಾಗ ಅಂಬೇಡ್ಕರರು ಅಮೇರಿಕಾದಲ್ಲಿಯೇ ಇದ್ದರು. ಅವರು ನಿಗ್ರೋ ಜನರಿಗೆ ಸ್ವಾತಂತ್ರ್ಯ, ಶಿಕ್ಷಣ ಹಾಗೂ ಉದ್ಯೋಗವನ್ನು ಕಲ್ಪಿಸಿಕೊಟ್ಟಿದ್ದರು. ಅಂಬೇಡ್ಕರರಿಗೆ ಭಾರತದಲ್ಲಿನ ಕೋಟಿ ಕೋಟಿ ಅಸ್ಪೃಶ್ಯ ಜನರಿಗೆ ಶಿಕ್ಷಣ, ಉದ್ಯೋಗ ಕಲ್ಪಸಿ ಗುಲಾಮಗಿರಿಯಿಂದ ಹೊರತರಲು ಭೂಕರ .ಟಿ. ವಾಸಿಂಗ್ಟನ್ ರವರ ಕಾರ್ಯಸಾಧನೆ ಪ್ರೇರಣೆ ನೀಡಿತು. ಅಮೇರಿಕಾದಲ್ಲಿನ ವಿದ್ಯಾಭ್ಯಾಸ ಪೂರ್ಣಗೊಂಡಿದ್ದರಿಂದ ಇಂಗ್ಲೇಂಡಿಗೆ ಹೋಗಿ ಅರ್ಥಶಾಸ್ತ್ರದಲ್ಲಿ ಡಿ.ಎಸ್.ಸಿ ಮತ್ತು ಕಾನೂನಿನಲ್ಲಿ ಬ್ಯಾರಿಸ್ಟರ್ ಪದವಿ ಪಡೆಯಬೇಕೆಂಬ ಮಹದಾಸೆ ಅಂಬೇಡ್ಕರರಿಗೆ ಬಲವಾಗಿತ್ತು. ಇಂಗ್ಲೇಂಡ್ ಅಂದು ಜಗತ್ಪ್ರಸಿದ್ದ ವಿದ್ಯಾಕೇಂದ್ರ. ಬರೋಡಾ ಮಹಾರಾಜರಿಗೆ ಪತ್ರ ಬರೆದು ಮನವಲಿಸಿ ವಿದ್ಯಾಭ್ಯಾಸ ಮುಂದುವರೆಸಲು ಅನುಮತಿ ಪಡೆದು 1916ರ ಜೂನ್ ಕೊನೆ ವಾರದಲ್ಲಿ ಇಂಗ್ಲೇಂಡಿಗೆ ಬಂದಿಳಿಯುತ್ತಾರೆ. ಅಮೇರಿಕಾದಲ್ಲಿ ಬ್ರಿಟಿಷರ ವಿರುದ್ದ ಹೋರಾಟ ಮಾಡುತ್ತಿರುವ ಗದ್ದಾರ ಸಂಘಟನೆಯ ಸದಸ್ಯನಾಗಿರಬೇಕೆಂದು, ಸಂಶಯಪಟ್ಟು ಅಂಬೇಡ್ಕರರನ್ನು ತಪಾಸಣೆಗೆ ಒಳಪಡಿಸಿದಾಗ ಅಂಬೇಡ್ಕರರು ಸೆಲಿಗ್ಮನ್ ರವರು ಕೊಟ್ಟಿದ್ದ ಪತ್ರವನ್ನು ತೋರಿಸುತ್ತಾ ತಾನು ಅರ್ಥಶಾಸ್ತ್ರ ಮತ್ತು ಕಾನೂನು ವ್ಯಾಸಂಗ ಮಾಡಲು ಬಂದಿರುವುದಾಗಿ ತಿಳಿಸಿ ಹಡಗು ಬಂದರಿನಿಂದ ಹೊರಡುತ್ತಾರೆ. ಅಂಬೇಡ್ಕರ್ ಅವರು ಈಗಾಗಲೇ ಎಂ.ಎ ಮತ್ತು ಪಿ.ಎಚ್.ಡಿ ಪದವಿ ಪಡೆದಿದ್ದರಿಂದ ನೇರವಾಗಿ ಡಿ.ಎಸ್.ಸಿ ಪದವಿಗೆ ಪ್ರವೇಶ ಪಡೆಯಲು ಅನುಮತಿ ದೊರೆಯುತ್ತದೆ. ಇದರಿಂದ ನೇರವಾಗಿ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಮಹಾವಿದ್ಯಾಲಯದಲ್ಲಿ ಡಿ.ಎಸ್.ಸಿ ಪದವಿಗೆ ಪ್ರವೇಶ ಪಡೆಯುತ್ತಾರೆ. ಇದಲ್ಲದೆ ಗ್ರೆಸ್ ಇನ್ ಎಂಬಲ್ಲಿ ಕಾನೂನು ಪದವಿಗೆ ಹೆಸರು ನೋಂದಾಯಿಸುತ್ತಾರೆ. ಏಕಕಾಲದಲ್ಲಿ ಎರಡು ಪದವಿಗಳ ಅಧ್ಯಯನದಲ್ಲಿ ತೊಡಗುವರು. ಅರ್ಥಶಾಸ್ತ್ರದಲ್ಲಿ “ರೂಪಾಯಿ ಸಮಸ್ಯೆ” ಕುರಿತು ಮಹಾ ಪ್ರಬಂಧ ಬರೆಯಲು ಆಯ್ಕೆ ಮಾಡಿಕೊಳ್ಳುವರು. ಪ್ರೋಫೆಸರ್ ಎಡ್ವಿನ್ ಕ್ಯಾನನ್ ರವರು ಮಾರ್ಗದರ್ಶಕರಾಗಿರುತ್ತಾರೆ. ಸೇಲಿಗ್ಮನ್ ರಂತೆ ಕ್ಯಾನನ್ ರವರು, ಅಂಬೇಡ್ಕರರಿಗೆ ಅಚ್ಚುಮೆಚ್ಚಿನ ಪ್ರಾಧ್ಯಾಪಕರಾಗುವರು. ಆದರೆ ಶಿಷ್ಯವೇತನ ಅವಧಿ ಪೂರ್ಣಗೊಂಡಿದ್ದರಿಂದ ಭಾರತಕ್ಕೆ ಮರಳಿ ಬಂದು ಬರೋಡಾ ಸಂಸ್ಥಾನದಲ್ಲಿ ಒಪ್ಪಂದದಂತೆ ಹತ್ತು ವರ್ಷಗಳ ಸೇವೆ ಸಲ್ಲಿಸಬೇಕೆಂದು ಬರೋಡಾ ಸಂಸ್ಥಾನದ  ದಿವಾನರಿಂದ ಪತ್ರ ಬರುತ್ತದೆ. ಇದು ಅಂಬೇಡ್ಕರರಿಗೆ ಬಹಳ ನಿರಾಶೆಯನ್ನುಂಟು ಮಾಡಿತು. ಪ್ರೊ.ಎಡ್ವಿನ್ ಕ್ಯಾನನರು ವಿದ್ಯಾಭ್ಯಾಸ ಮುಂದುವರೆಸುವುದಾದಲ್ಲಿ ನಾಲ್ಕು ವರ್ಷ ಕಾಲಾವಧಿ ವಿಸ್ತರಿಸಿ ಕೊಡುವುದಾಗಿ ಅಂಬೇಡ್ಕರರಿಗೆ ಭರವಸೆ ನೀಡುವರು. ಪ್ರೊ.ಕ್ಯಾನನ್ ರ ಭರವಸೆಯ ಮಾತುಗಳನ್ನು ಕೇಳಿ ಸಮಾಧಾನ ಪಟ್ಟುಕೊಂಡು ಅವರಿಗೆ ವಂದಿಸಿ ಭಾರತಕ್ಕೆ ಹಿಂದಿರುಗುತ್ತಾರೆ. ಇತ್ತ ಅಂಬೇಡ್ಕರರು ಪ್ರಯಾಣಿಸುತ್ತಿದ್ದ ಹಡಗು ಮುಳಿಗಿತೆಂದು ಸುದ್ದಿಯೊಂದು ಪಸರಿಸಿಬಿಟ್ಟಿತು, ಸುದ್ದಿ ತಿಳಿದು, ರಮಾಬಾಯಿ ಮತ್ತು ಕುಟುಂಬಸ್ತರು ದುಃಖದಿಂದ ಕಂಗಾಲಾಗುತ್ತಾರೆ. ಅಂಬೇಡ್ಕರರು ಲಂಡನದಲ್ಲಿದ್ದಾಗ ಎರಡು ಸಾವಿರ ಪುಸ್ತಕಗಳನ್ನು ಖರಿದಿಸಿ ಹಡಗೊಂದರ ಮೂಲಕ ಮುಂಬೈಯಿಗೆ ಕಳುಹಿಸಿಕೊಡುವರು. ಆಗ ಇನ್ನು ಪ್ರಥಮ ಮಹಾಯುದ್ದ ಮುಂದುವರೆದಿತ್ತು. ಮೆಡಿಟೇರಿಯನ್ ಸಮುದ್ರದಲ್ಲಿ ಆ ಹಡಗು ಜರ್ಮನಿಯ ಸಬ್ ಮೆರಿನ್ ಬಾಂಬ್ ದಾಳಿಯಿಂದ ಆ ಹಡಗು ಮುಳುಗುತ್ತದೆ. ಮುಳುಗಿದ ಹಡಗಿನಲ್ಲಿ ಅದೃಷ್ಟವಶಾತ್ ಅಂಬೇಡ್ಕರರು ಇರಲಿಲ್ಲ, ಅವರು ಕೈಸರ್-ಇ-ಹಿಂದ್ ಹಡಗಿನ ಮೂಲಕ ಪ್ರಯಾಣ ಬೆಳೆಸಿದ್ದರು. 1917ರ ಜುಲೈ ತಿಂಗಳಲ್ಲಿ ಮುಂಬೈಯಿಗೆ ಅಂಬೇಡ್ಕರರು ಸುರಕ್ಷಿತವಾಗಿ ಬಂದಿಳಿದಾಗ ಮನೆಯಲ್ಲಿ ಸಂಭ್ರಮದ ವಾತಾವರಣ ಏರ್ಪಟ್ಟಿತು.  ಹಡಗು ಮುಳುಗಿದ್ದರಿಂದ ಕಳುಹಿಸಿದ್ದ ಸುಮಾರು ಎರಡು ಸಾವಿರ ಪುಸ್ತಕಗಳು ಮುಳುಗಿ ಹೋದವು. ಪುಸ್ತಕಗಳಿಗೆ ವಿಮೆ ಮಾಡಿಸಿದ್ದರಿಂದ ಕಷ್ಟದಲ್ಲಿದ್ದ ಅಂಬೇಡ್ಕರರಿಗೆ ವಿಮೆ ಹಣ ಬರುತ್ತದೆ. ಆ ಹಣ ಅವರಿಗೆ ಬಹಳ ಉಪಯುಕ್ತವಾಗುವುದು. ಪತ್ನಿ ರಮಾಬಾಯಿಗೆ  ಖರ್ಚಿಗೆ ಅದರಲ್ಲಿ ಒಂದಿಷ್ಟು ಹಣಕೊಟ್ಟು ತಾವು ಒಂದಿಷ್ಟು ತೆಗೆದುಕೊಂಡು ಬರೋಡಾ ಸಂಸ್ಥಾನದಲ್ಲಿ ಸೇವೆ ಸಲ್ಲಿಸುವ ಕರಾರಿನಂತೆ ಕೆಲಸ ನಿರ್ವಹಿಸಲು ಬರೋಡಾಗೆ ಹೊಗುವರು. ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡಿ ಎಂ.ಎ, ಪಿ.ಎಚ್.ಡಿ, ಪಡೆದ ತನ್ನನ್ನು ಅಸ್ಪೃಶ್ಯನಂತೆ ನೋಡಿಕೊಳ್ಳದೆ ಗೌರವದಿಂದ ನೋಡಿ ಕೊಳ್ಳುತ್ತಾರೆ, ಕಛೇರಿ ಸಿಬ್ಬಂದಿ ಸ್ವಾಗತಿಸಲು ಸ್ಟೇಷನಗೆ ಬರುತ್ತಾರೆ ಅಂತಾ ನೀರಿಕ್ಷೇಯಲ್ಲಿ ಕಾಯುತ್ತಾ ನಿಂತಿದ್ದ ಅಂಬೇಡ್ಕರರಿಗೆ ಅಲ್ಲಿ ಸ್ವಾಗತಿಸಲು ಯಾರು ಬರುವುದಿಲ್ಲ. ಈ ದೇಶದಲ್ಲಿ ಅಸ್ಪೃಶ್ಯನೊಬ್ಬ ಎಷ್ಟೇ ಓದಿ ವಿದ್ಯಾವಂತನಾದರು, ಉನ್ನತ ಹುದ್ದೆ ಹೊಂದಿದ್ದರು ಮರ್ಯಾದೆ ಕೊಡುವುದಿಲ್ಲ. ಗೌರವ ಸಿಗುವುದಿಲ್ಲವೆಂಬ ಮನವರಿಕೆ ಅವರಲ್ಲಿ ಖಚಿತವಾಗಿತ್ತು. ಉಳಿದುಕೊಳ್ಳಲು ಮನೆಯೊಂದನ್ನು ಬಾಡಿಗೆಗಾಗಿ ಅಲ್ಲಿ ಇಲ್ಲಿ ವಿಚಾರಿಸಿದರು ಆದರೆ ಅಸ್ಪೃಶ್ಯನೆಂಬ ಕಾರಣಕ್ಕಾಗಿ ಮನೆಬಾಡಿಗೆ ಕೊಡಲು ಯಾರು ಮುಂದೆ ಬರುವುದಿಲ್ಲ. ಕೊನೆಗೆ  ಪಾರಸಿ ವಸತಿ ಗೃಹ ಒಂದರಲ್ಲಿ ಯಾರಾದರೂ ವಿಚಾರಿಸಿದಾಗ ಅಸ್ಪೃಶ್ಯ ಜಾತಿಯವನೆಂದು ಹೇಳದೆ ಪಾರಸಿ ಎಂದು ಹೇಳುವುದಾಗಿ ಹೇಳಿ ದಿನ ಒಂದಕ್ಕೆ ಊಟ ವಸತಿ ಸೇರಿ ಒಂದುವರೆ ರೂಪಾಯಿಗೆ ಬಾಡಿಗೆ ನಿರ್ಧರಿಸಿ  ತಾತ್ಪೂರರ್ತಿಕವಾಗಿ ಆ ವಸತಿ ಗೃಹದಲ್ಲಿ ಉಳಿದುಕೊಳ್ಳುವರು. ವಸತಿ ಗೃಹದ ಮಹಡಿಯಲ್ಲಿನ ಕೋಣೆ ಅನುಪಯುಕ್ತ ವಸ್ತುಗಳಿಂದ ತುಂಬಿ ಹೊಗಿತ್ತು. ಅಲ್ಲಿಯೇ ಚಿಕ್ಕದಾದ ಸ್ಥಳದಲ್ಲಿ ವಾಸ, ಉಸ್ತುವಾರಿ ವ್ಯಕ್ತಿ, ಮುಂಜಾನೆ ಚಹ ತೆಗೆದುಕೊಂಡು ಬಂದರೆ ಒಂಬತ್ತುವರೆ ಗಂಟೆಗೆ ಉಪಹಾರ, ರಾತ್ರಿ ಅದೆ ಹೊತ್ತಿಗೆ ಊಟ ತಂದು ಕೊಟ್ಟರೆ ಮತ್ತೆ ಮೇಲೆ ಯಾರು ಬರುತ್ತಿರಲಿಲ್ಲ, ಹೀಗೆ  ಅಂಬೇಡ್ಕರ್ ರು ಏಕಾಂಗಿಯಾಗಿ ದಿನ ಕಳೆಯುವರು. ಬರೋಡಾ ಮಹಾರಾಜರು, ಅಂಬೇಡ್ಕರರನ್ನು ಅಕೌಂಟಂಟ್ ಜನರಲ್ ರವರ ಕಛೇರಿಯಲ್ಲಿ ಪ್ರೋಬೇಷನರ್ ಅಧಿಕಾರಿಯನ್ನಾಗಿ ನೆಮಿಸಿಕೊಳ್ಳುವರು. ಕಛೇರಿಯಲ್ಲಿ ಸಿಪಾಯಿ ಕಡತಗಳನ್ನು ಅಂಬೇಡ್ಕರ್ರ ಕೈಗೆ ಕೊಡದೆ ಮೇಜಿನ ಮೇಲೆ ಎಸೆಯುತ್ತಿದ್ದ. ಕೆಳ ಜಾತಿಯವನೆಂದು ಅವರ ಹತ್ತಿರ ಬರುವುದು, ಕೆಲಸ ಮಾಡುವುದು ಮೈಲಿಗೆ ಎಂದು ಆತ ತಿಳಿಯುತ್ತಿದ್ದ. ಅಲ್ಲಿಯ ಕಾರಕೂನರು ಅಂಬೇಡ್ಕರರ ಜೊತೆ ಮಾತನಾಡುತ್ತಿರಲಿಲ್ಲ, ಕುಡಿಯಲು ನೀರು ಕೊಡುತ್ತಿರಲಿಲ್ಲ, ಬಾಯಾರಿಕೆಯಾಗಿ ನೀರು ತೆಗೆದುಕೊಳ್ಳಲು ಹೋದರೆ ಮೈಲಿಗೆಯಾಗುವುದೆಂದು ಮುಟ್ಟಿಸಿಕೊಡುತ್ತಿರಲಿಲ್ಲ. ಈ ಸಮಾಜದಲ್ಲಿ ಅಸ್ಪೃಶ್ಯನೊಬ್ಬ ಎಷ್ಟೇ ದೊಡ್ಡ ವಿದ್ಯಾವಂತನಾದರು, ಶುಚಿಯಾಗಿದ್ದರು ಅಸ್ಪೃಶ್ಯನಾಗಿಯೇ ಬದುಕುವಂತಾಗಿದೆ ಎಂದು ಅಂಬೇಡ್ಕರರು ನೊಂದುಕೊಳ್ಳುವರು. ಸಂಸ್ಥಾನದಲ್ಲಿ ಬಂಗಲೆ ಕಲ್ಪಿಸಲು ಅರ್ಜಿ ಹಾಕಿದ್ದರು. ಆದರೆ ದಿವಾನರು ಅರ್ಜಿಯನ್ನು ಕಸದಬುಟ್ಟಿಗೆ ಹಾಕಿದಂತೆ ಇಟ್ಟುಬಿಟ್ಟಿದ್ದರು. ಸದ್ಯಕ್ಕೆ ಹಾಳುಬಿದ್ದ ಕತ್ತಲೆ ಗವಿಯಂತಿದ್ದ ಪಾರಸಿ ವಸತಿ ಗೃಹವೇ ಲೇಸೆಂದು ದಿನಗಳನ್ನು ದುಡೂವರು.             ಹನ್ನೊಂದನೆಯ ದಿನ ಅಂಬೇಡ್ಕರರು ಮುಂಜಾನೆ ತಿಂಡಿ ಮುಗಿಸಿ ಬಟ್ಟೆತೊಟ್ಟು ಕಛೇರಿಗೆ ಹೋಗಲು ತಯಾರಾಗುತ್ತಿದ್ದಾಗ ಗಟ್ಟಿಮುಟ್ಟಾದ ಸುಮಾರು ಹತ್ತು-ಹನ್ನೆರಡು ಪಾರ್ಶಿಗಳು ಕೈಯಲ್ಲಿ ಬಡಿಗೆ ಹಿಡಿದುಕೊಂಡು ಅಂಬೇಡ್ಕರರು ಉಳಿದುಕೊಂಡಿದ್ದ ಮಹಡಿ ಮೇಲಿನ ಕೋಣೆಗೆ ಬಂದು ಸುತ್ತುವರೆದು ನಿಲ್ಲುತ್ತಾರೆ. ಅಂಬೇಡ್ಕರರಿಗೆ ಕ್ಷಣಕಾಲ ಏನು ತೋಚದಂತಾಗುತ್ತದೆ. ಆ ಪಾರ್ಸಿಗಳು ಯಾರು ನೀನು? ಇಲ್ಲಿಗೇಕೆ ಬಂದಿರುವೆ? ಪಾರ್ಸಿ  ಹೆಸರನ್ನಿಟ್ಟುಕೊಂಡು ಪಾರ್ಸಿಗಳ ವಸತಿ ಗೃಹದಲ್ಲಿ ಉಳಿದುಕೊಳ್ಳಲು ಎಷ್ಟು ಧೈರ್ಯ? ಪಾರ್ಸಿ ವಸತಿ ಗೃಹವನ್ನು ಅಪವಿತ್ರಗೊಳಿಸಿರುವಿರಿ ಎಂದು ಅಂಬೇಡ್ಕರರಿಗೆ ಪ್ರಶ್ನಿಸುತ್ತಾ ಗದರಿಸುವರು. ಪಾರ್ಸಿಗಳು ಮೈಮೇಲೆ ಧರಿಸುವ ಸದ್ರ ಮತ್ತು ಕಷ್ಠಿ ಅಂಬೇಡ್ಕರರು ಧರಿಸಿರುವುದಿಲ್ಲ ಹೀಗಾಗಿ ಸುಳ್ಳು ನಟನೆ ಮಾಡಿ ಪಾರ್ಸಿಯವನೆಂದು ಸಮರ್ಥಿಸಿಕೊಳ್ಳಲು ಹೋದರೆ ಆ ಪಾರ್ಸಿಗಳು ತನ್ನ ಮೇಲೆ ಮುಗಿಬೀಳಬಹುದು, ಜೀವಕ್ಕೆ ಅಪಾಯ ತಂದುಕೊಳ್ಳಬಾರದೆಂದು ಮೌನವಹಿಸುವರು. ಗುಂಪಿನಲ್ಲಿ ಒಬ್ಬನು  ವಸತಿ ಯಾವಾಗ ಖಾಲಿ ಮಾಡುವೆ  ಎಂದು ಕೇಳಿದಾಗ ಸಂಸ್ಥಾನದ ಮಂತ್ರಿಯವರಿಗೆ ಬಂಗಲೆ ಏರ್ಪಾಡು ಮಾಡಿಕೊಡಲು ಅರ್ಜಿಹಾಕಿದ್ದು ಇಷ್ಟರಲ್ಲಿ ಇತ್ಯರ್ಥವಾಗಬಹುದು ಒಂದು ವಾರದವರೆಗೆ ಇಲ್ಲಿರಲು ಅವಕಾಶ ಮಾಡಿಕೊಡಲು ಕೇಳಿಕೊಳ್ಳುವರು. ಪಾರ್ಸಿಗಳಿಗೆ ಅಂಬೇಡ್ಕರ್ರ ಬೇಡಿಕೆ ಆಲಿಸುವ ಸಂಯಮ ಅವರಲ್ಲಿರಲಿಲ್ಲ. ಸಂಜೆಯ ವೇಳೆಗೆ ವಸತಿಗೃಹ ಖಾಲಿ ಮಾಡಬೇಕು, ಯಾವುದಕ್ಕೂ ಇಲ್ಲಿಯೇ ಉಳಿದುಕೊಳ್ಳುವಂತಿಲ್ಲ ಹುಷಾರ್! ಎಂದು ಎಚ್ಚರಿಕೆ ನೀಡಿ ಅಲ್ಲಿಂದ ಅವರು ಕಾಲು ಕಿತ್ತುವರು. ಇನ್ನು ಎಲ್ಲಿ ಉಳಿದುಕೊಳ್ಳಬೇಕೆಂದು ಅಂಬೇಡ್ಕರರು ಚಿಂತೆಗೊಳಗಾಗುತ್ತಾರೆ. ಒಬ್ಬ ಹಿಂದೂ ಇನ್ನೊಬ್ಬ ಕ್ರಿಶ್ಚಿಯನ್ ಸ್ನೇಹಿತರಿದ್ದರು ಅವರಲ್ಲಿಗೆ ಹೋಗಿ ವಿಚಾರಿಸಿದಾಗ ಅಸ್ಪೃಶ್ಯನೆಂಬ ಕಾರಣಕ್ಕಾಗಿ ವಸತಿ ಕೊಡಲು ಇಚ್ಚಿಸದೆ ಇದ್ದುದ್ದರಿಂದ ಬೇರೆ ಸಬೂಬು ಹೇಳುವರು. ಆ ಸ್ನೇಹಿತರು ಇರಲು ಮನೆ ಕೊಡುವುದಿಲ್ಲವೆಂಬುವುದು ಅಂಬೇಡ್ಕರರಿಗೆ ಅರಿವಾಗುತ್ತದೆ. ಅಲ್ಲಿಂದ ಅವರು ಹೊರಬರುವರು ಆಗ ಸಂಜೆ ನಾಲ್ಕು ಗಂಟೆಯಾಗಿತ್ತು. ಮುಂಬಯಿಗೆ ರೈಲು ರಾತ್ರಿ 9 ಗಂಟೆಗೆ ಇತ್ತು. ಅಲ್ಲಿಯವರಗೆ ಕಾಲ ಕಳೆಯಲು ಕಾಂಟೋನಮೆಂಟ್ ಪ್ರದೇಶದಲ್ಲಿನ ಕಾಮಥಿ ಭಾಗ ಸಾರ್ವಜನಿಕ ಉಧ್ಯಾನದಲ್ಲಿ ಬಂದು ಕುಳಿತುಕೊಳ್ಳುವರು. ಸಂಸ್ಥಾದಲ್ಲಿ ಬಂಗಲೆ ಸಿಗುವುದು ಖಾತ್ರಿ ಇಲ್ಲ; ಇತ್ತ ಪಾರ್ಸಿ ವಸತಿ ಗೃಹದಲ್ಲಿ ಇರುವಂತಿಲ್ಲ. ಅಸ್ಪೃಶ್ಯ ಜಾತಿಯವನೆಂಬ ಕಾರಣಕ್ಕೆ ಬೇರೆ ಯಾರು ಮನೆ ಬಾಡಿಗೆ ನೀಡುತ್ತಿಲ್ಲ. ಸಂಸ್ಥಾನದಲ್ಲಿನ ಅಧಿಕಾರಿಹುದ್ದೆ ಬಿಟ್ಟು ಹೋಗಬೆಕಾದ ಸ್ಥಿತಿ ತಲುಪಿ ದುಃಖ ಉಮ್ಮಳಿಸಿ ಕಣ್ಣಲ್ಲಿ ನೀರು ಬರುವುದು. ಅಮೇರಿಕಾ ಮತ್ತು ಇಂಗ್ಲೇಂಡನಲ್ಲಿ ಕೆಲ ಗಣ್ಯರ ಪರಿಚಯವಿತ್ತು. ಉನ್ನತ ವ್ಯಾಸಂಗ ಪಡೆದಿದ್ದರಿಂದ ಅವರು ಇಚ್ಚಿಸಿದ್ದಲ್ಲಿ ಅಲ್ಲಿಯೇ ಉದ್ಯೋಗ ಸಿಗುವ ಅವಕಾಶವಿತ್ತು. ಆದರೆ ಬರೋಡಾ ಸಂಸ್ಥಾನದಲ್ಲಿ ಮಾತು ಕೊಟ್ಟಂತೆ ಶಿಷ್ಯ ವೇತನದ ಪ್ರತಿಯಾಗಿ ಕೆಲಸ ಮಾಡಲು ಬಂದರೆ, ಬರೋಡಾದಲ್ಲಿ ವಸತಿ ಗೃಹ ಸಿಗದೆ, ಪಾರ್ಸಿ ವಸತಿ ಗೃಹ ಖಾಲಿ ಮಾಡಿಸಿದ್ದರಿಂದ ದುಃಖಿತರಾಗಿ ಮುಂಬಯಿಗೆ ಮರಳಿ ಬಂದರು. ಅಸ್ಪೃಶ್ಯತೆಯಿಂದಾಗಿ ಅಧಿಕಾರಿ ಹುದ್ದೆಯ ಕೆಲಸವನ್ನು ಕಳೆದುಕೊಳ್ಳುವಂತಾಯಿತು.                                                  (ಮುಂದುವರೆಯುವುದು)                                                — ಸೋಮಲಿಂಗ  ಗೆಣ್ಣೂರ

Read Post »

ಅಂಕಣ ಸಂಗಾತಿ, ಗಜಲ್ ಲೋಕ

ಅಂಕಣ ಸಂಗಾತಿ ಗಜಲ್ ಲೋಕ ಶ್ರೀದೇವಿಯವರ ಗಜಲ್ ಸಿರಿ ಸಂಪತ್ತು ಹಲೋ…. ಏನು ಮಾಡ್ತಾ ಇದ್ದೀರಾ, ಏನು ಓದುತ್ತಾ ಇದ್ದೀರಾ …? ಇಂದು ತಮ್ಮ ಮನವನ್ನು ತಣಿಸಿದ, ತಣಿಸುತ್ತಿರುವ ಓರ್ವ ಗಜಲ್ ಗೋ ಅವರ ಹೆಜ್ಜೆ ಗುರುತುಗಳೊಂದಿಗೆ ನಿಮ್ಮ ಮುಂದೆ ಬಂದಿದ್ದೇನೆ. ಶುಭ ಮುಂಜಾವು.. ಭುವನೇಶ್ವರಿಯ ಮಕ್ಕಳಾದ ಕನ್ನಡದ ಮನಸುಗಳಿಗೆ ನಮಸ್ಕಾರಗಳು….  “ಸ್ವರ್ಗದ ವಾಸ್ತವತೆ ನಮಗೆ ತಿಳಿದಿದೆ ಆದರೆ ಹೃದಯವನ್ನು ಸಂತೋಷವಾಗಿಟ್ಟುಕೊಳ್ಳಲು ಇದೊಂದು ಒಳ್ಳೆಯ ಆಲೋಚನೆ ‘ಗಾಲಿಬ್‘”                                     –ಮಿರ್ಜಾ ಗಾಲಿಬ್         ಮನುಷ್ಯ ಭಾವನೆಗಳ ಗೊಂಚಲು. ಆ ಭಾವನೆಗಳ ತಾಯಿಬೇರು ಪ್ರೀತಿ! ಇದೊಂದು ಅನುಪಮವಾದ ಅನುಭಾವ. ಈ ಅನುಭಾವದ ಪ್ರಸಾದ ಹಂಚುತ್ತಿರುವ ಆಲಯವೆಂದರೆ ಅದು ನೊಂದ-ಬೆಂದ-ಸ್ಥಿತಪ್ರಜ್ಞ ಮನಸುಗಳ ಕುಲುಮೆಯಲ್ಲಿ ಪಕ್ವಗೊಂಡ ಸಾರಸ್ವತ ಜಗತ್ತು. ಈ ಪರಪಂಚ ಮನುಕುಲದ ಅಂತರಂಗ ಹಾಗೂ ಬಹಿರಂಗಗಳೆರಡರ ದರ್ಪಣದ ಜೊತೆ ಜೊತೆಗೆ ಮನುಷ್ಯನ ಕೃತ್ಯಗಳನ್ನು ಸಾಣೆ ಹಿಡಿಯುವ ಸೂಕ್ಷ್ಮ ಕೆಲಸವನ್ನೂ ಮಾಡುತ್ತಿದೆ. ಈ ನೆಲೆಯಲ್ಲಿ ಬರಹ ಭಾವನೆಗಳ ತವರೂರು. ‘ಬರಹ ಸಂಭ್ರಮಿಸುವ ಪಲ್ಲಕ್ಕಿಯಲ್ಲ, ಸಂತೈಸುವ ತೊಟ್ಟಿಲು.’ ಅನಾಥ ಹೃದಯಗಳಿಗೂ ತನ್ನ ಮಡಿಲಲ್ಲಿ ಮಲಗಿಸಿಕೊಂಡು ಜೋಗುಳ ಹಾಡುತ್ತ ಬಂದಿದೆ. ಈ ಮಾತು ಎಲ್ಲ ಭಾಷೆಯ ಅಕ್ಷರದವ್ವನಿಗೂ ಅನ್ವಯಿಸುತ್ತದೆ. ಮರಭೂಮಿಯ ಕಾವು, ಆತಿಥ್ಯದ ವಿನಯದಲ್ಲಿ ಅರಳಿದ ಗಜಲ್ ಹೃದಯವಂತಿಕೆಯ ಕುರುಹಾಗಿ ಇಡೀ ಮನುಕುಲವನ್ನೆ ವ್ಯಾಪಿಸಿದೆ. ಕಳೆದ ೨-೩ ವಸಂತಗಳಲ್ಲಿ ‘ಗಜಲ್’ ಪೈರು ಹುಲುಸಾಗಿ ಬೆಳೆಯುತ್ತಿದೆ. ಆ ‘ಗಜಲ್’ ಕೃಷಿಕಾರರಲ್ಲಿ ಶ್ರೀಮತಿ ಶ್ರೀದೇವಿ ಕೆರೆಮನೆಯವರೂ ಒಬ್ಬರು.        ಉತ್ತರ ಕನ್ನಡ ಜಿಲ್ಲೆಯ ಹಿರೇಗುತ್ತಿಯಲ್ಲಿ ಜನಿಸಿರುವ ಶ್ರೀದೇವಿ ಕೆರೆಮನೆಯವರು ಶಿರಸಿಯ ಜಾನ್ಮನೆ ಎಂಬಲ್ಲಿ ಪ್ರಾಥಮಿಕ ಶಿಕ್ಷಣ, ಸಂಪಖಂಡ ಎನ್ನುವಲ್ಲಿ ಮಾಧ್ಯಮಿಕ ಶಿಕ್ಷಣವನ್ನು ಪೂರೈಸಿ, ಶಿರಸಿಯ ಎಂ.ಎಂ. ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಪದವಿ ಮುಗಿಸಿ ಕುಮಟಾದಲ್ಲಿ ಬಿ.ಇಡಿ ಪದವಿಯನ್ನು ಮುಗಿಸಿದ್ದಾರೆ. ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಮತ್ತು ಇಂಗ್ಲೀಷ್ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಶ್ರೀಯುತರು ಕಳೆದ17 ವರ್ಷಗಳಿಂದ ಸಿ ಬರ್ಡ್ ನಿರಾಶ್ರಿತರ ಕಾಲೋನಿಗಳಲ್ಲಿ ಇಂಗ್ಲೀಷ ಭಾಷಾ ಶಿಕ್ಷಕಿಯಾಗಿ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.‌ ಪ್ರಸ್ತುತವಾಗಿ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಚಿತ್ತಾಕುಲ ಗ್ರಾಮದ ಸರಕಾರಿ ಪ್ರೌಢಶಾಲೆ (ಪುನರ್ವಸತಿ) ಯಲ್ಲಿ ಆಂಗ್ಲ ಭಾಷೆಯ ಶಿಕ್ಷಕಿಯಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಸಂಪನ್ಮೂಲ ವ್ಯಕ್ತಿಯಾಗಿ ೫೦ ಕ್ಕೂ ಹೆಚ್ಚು ತರಬೇತಿಯನ್ನು ಜಿಲ್ಲಾ ಹಾಗೂ ತಾಲೂಕಾ ಹಂತದಲ್ಲಿ ನೀಡಿದ್ದಾರೆ. ಬೋಧನೆಯ ಜೊತೆ ಜೊತೆಗೆ ತಮ್ಮನ್ನು ಬರಹದಲ್ಲಿ ತೊಡಗಿಸಿಕೊಂಡಿರುವ ಶ್ರೀಮತಿ ಶ್ರೀದೇವಿ ಕೆರೆಮನೆ ಅವರು ಹಲವಾರು ಮೌಲಿಕ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸಿದ್ದಾರೆ. ಕಾವ್ಯ, ಕಥೆ, ವಿಮರ್ಶೆ, ಪ್ರಬಂಧ, ಅಂಕಣ ಬರಹ ಹಾಗೂ ಗಜಲ್ ಲೋಕದಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಅವರ ಕೃತಿಗಳ ಪರಿಚಯದತ್ತ ಹೆಜ್ಜೆ ಹಾಕೋಣ ಬನ್ನಿ..!! ಪ್ರಕಟಣೆಗಳು- ಕವನ ಸಂಕಲನಗಳು : ನಾನು ಗೆಲ್ಲುತ್ತೇನೆ, ಮೌನದ ಮಹಾ ಕೋಟೆಯೊಳಗೆ, ಗೆಜ್ಜೆ ಕಟ್ಟದ ಕಾಲಲ್ಲಿ, ಬೈಟೂ ಚಹಾ ಕವನಗಳು,  ಮೈ ಮುಚ್ಚಲೊಂದು ತುಂಡು ಬಟ್ಟೆ… ಕೆರೆಮನೆಯವರು ಹಲವಾರು ವಾರ ಪತ್ರಿಕೆ, ಮಾಸ ಪತ್ರಿಕೆಗಳಿಗೆ ಪ್ರಸ್ತುತ ಸಾಮಾಜಿಕ ವ್ಯವಸ್ಥೆಯ ಮೇಲೆ ಬೆಳಕು ಚೆಲ್ಲುವಂತಹ ಅಂಕಣ ಬರಹಗಳನ್ನು ಬರೆದಿದ್ದಾರೆ. ಆ ಎಲ್ಲ ಬಿಡಿ ಬಿಡಿ ಅಂಕಣ ಬರಹಗಳನ್ನು ಒಂದೆಡೆ ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದಾರೆ. ಅವುಗಳಲ್ಲಿ ‘ಪ್ರೀತಿ ಎಂದರೆ ಇದೇನಾ?,’ ‘ಹೆಣ್ತನದ ಆಚೆ-ಈಚೆ’, ಉರಿವ ಉಡಿ’, ‘ಮನದಾಳದ ಮಾತು,’ ‘ವರ್ತಮಾನದ ಉಯ್ಯಾಲೆ,’ … ಮುಂತಾದವುಗಳು. ಕಥಾಸಂಕಲನಗಳು : ಬಿಕ್ಕೆ ಹಣ್ಣು, ಚಿತ್ತ ಚಿತ್ತಾರ.. ಇವುಗಳೊಂದಿಗೆ “ಅಂಗೈಯೊಳಗಿನ ಬೆಳಕು” ವಿಮರ್ಶಾ ಸಂಕಲನವಾದರೆ, “ಗೂಡು ಕಟ್ಟುವ ಸಂಭ್ರಮದಲ್ಲಿ” ಪ್ರಬಂಧ ಬರಹಗಳ ಸಂಕಲನವಾಗಿದೆ. ಗಜಲ್ ಸಂಕಲನಗಳು : ‘ಅಲೆಯೊಳಗಿನ ಮೌನ’, ‘ನನ್ನ ದನಿಗೆ ನಿನ್ನ ದನಿಯು’, (ಇದೊಂದು ಗಜಲ್ ಜುಗಲ್ ಸಂಕಲನ)         ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸದಾ ಪಾದರಸದಂತೆ ಕ್ರಿಯಾಶೀಲರಾಗಿರುವ ಕೆರೆಮನೆ ಅವರಿಗೆ ಹಲವಾರು ಸಂಘ ಸಂಸ್ಥೆಗಳು ಪ್ರಶಸ್ತಿಗಳೊಂದಿಗೆ ಗೌರವಿಸಿ ಸತ್ಕರಿಸಿವೆ. ಅವುಗಳಲ್ಲಿ ಶ್ರೀ ವಿಜಯ ಪ್ರಶಸ್ತಿ, ಸಾರಾ ಅಬೂಬಕರ್ ಪ್ರಶಸ್ತಿ, ದೇವಾಂಗನಾ ಶಾಸ್ತ್ರಿ ಕಥಾ ಪ್ರಶಸ್ತಿ, ಅಂತರಾಷ್ಟ್ರೀಯ ಮಹಿಳಾ ವರ್ಷದ ದತ್ತಿ ಪ್ರಶಸ್ತಿ, ರಾಜೀವ್ ಗಾಂಧಿ ಸದ್ಭಾವನಾ ಪ್ರಶಸ್ತಿ, ಬಸವರಾಜ ಕಟ್ಟಿಮನಿ ಪ್ರಶಸ್ತಿ, ಬೇಂದ್ರೆ ಯುವ ಗೃಂಥ ಪುರಸ್ಕಾರ, ಸಿಂಗಾಪುರ ಕಥಾ ಪ್ರಶಸ್ತಿ , ಜಿಲ್ಲಾ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ, ಸಾವಿತ್ರಿಬಾಯಿ ಫುಲೆ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ, ಅಮ್ಮ ಪ್ರಶಸ್ತಿ… ಪ್ರಮುಖವಾಗಿವೆ.‌         ಕಾವ್ಯದ ಸಿಂಡರೇಲಾ ಎಂದರೆ ಅದು ‘ಗಜಲ್’ ಪ್ರಕಾರ. ಗಜಲ್ ಎನ್ನುವುದು ಸಾಮಾನ್ಯನ ಯೋಗ. ಈ ಹಿನ್ನೆಲೆಯಲ್ಲಿ ಗಜಲ್ ರಚನೆಗೆ ಗಜಲ್ ಗೋ ಪ್ರೀತಿ ಪೂರ್ಣ ಹೃದಯವನ್ನು ಹೊಂದಿರುವುದು ಮುಖ್ಯ. ಗಜಲ್ ಗೋ ಸವಿನುಡಿಯ ಸಿರಿಗುಡಿ ಕಟ್ಟುವ ಶಿಲ್ಪಿ. ಗಜಲ್ ಜನತೆಯ ಎದೆ ತಣಿಸುವುದರ ಜೊತೆಗೆ ಅವರ ಬಾಳಿಗೆ ಊರುಗೋಲಾಗುತ್ತದೆ, ಊರುಗೋಲಾಗಬೇಕು. ಕೆಲವೊಮ್ಮೆ ಗಜಲ್ ಸವಿಯಾಗಿರುವಂತೆ ಕಂಡರೂ ಪೊಡವಿಯನ್ನೆಲ್ಲ ತಲ್ಲಣಿಸುವ ಸಿಡಿಲಿನ ಮಿಂಚಾಗಿಯೂ ಕಂಗೊಳಿಸುತ್ತದೆ. ಗಜಲ್ ಎಂದರೆ ಸೊನ್ನೆಯಲ್ಲಿ ಸ್ವರ್ಗವನ್ನೂ, ಶೂನ್ಯದಲ್ಲಿ ಪೂರ್ಣತ್ವವನ್ನೂ ಸೃಜಿಸಿ ನಿಲ್ಲುವ ಹೃದಯಗಳ ಮಿಡಿತ. ಈ ನೆಲೆಯಲ್ಲಿ ಗಜಲ್ ಭವ್ಯವೂ ಹೌದು ; ದಿವ್ಯವೂ ಹೌದು!! ಕೆರೆಮನೆ ಅವರ ಗಜಲ್ ಗಳಲ್ಲಿ ಈ ಎಲ್ಲ ಅಂಶಗಳು ಒಳಗೊಂಡಿವೆ. ಬದುಕಿನ ಎಲ್ಲ ಮಗ್ಗುಲುಗಳು ಇಲ್ಲಿ ಸಾಕ್ಷಾತ್ಕಾರಗೊಂಡಿವೆ. “ಕತ್ತಿಯೂ ಇಲ್ಲದೇ ಮಾತಿಂದಲೇ ಇರಿಯಬಹುದೆಂದು ಗೊತ್ತಿರಲಿಲ್ಲ ನನಗೆ ಕೊಲ್ಲಲು ಮೌನವನ್ನೂ ಅಸ್ತ್ರವಾಗಿ ಬಳಸಬಹುದೆಂದು ತಿಳಿದಿರಲಿಲ್ಲ ನನಗೆ” ಈ ಮೇಲಿನ ಷೇರ್ ಮಾತು ಮತ್ತು ಮೌನಗಳ ವಿವಿಧ ಆಯಾಮಗಳನ್ನು ಪರಿಚಯಿಸುತ್ತಿದೆ. “ಭಾಷೆಯೆಂಬ ಜ್ಯೋತಿ ಬೆಳಗದೆ ಹೋದರೆ ಇಡೀ ಮನುಕುಲವೇ ಕತ್ತಲಲ್ಲಿ ಮುಳುಗಿರುತಿತ್ತು” ಎಂಬ ದಂಡಿಯ ಹೇಳಿಕೆ ಭಾಷೆಯ, ಮಾತಿನ ಮಹತ್ವವನ್ನು ಸಾರುತ್ತದೆ. ಅಬಾಲವೃದ್ಧರಾದಿಯಾಗಿ ಎಲ್ಲರ ನಡುವೆ ಸಂಬಂಧದ ಕೊಂಡಿ ಬೆಸೆಯುವುದು, ಸಂಬಂಧದ ಕೊಂಡಿ ಕಳಚುವುದು ‘ಮಾತು’ ಎನ್ನುವ ಅಸ್ತ್ರವೇ! ಈ ದಿಸೆಯಲ್ಲಿ ಮಾತು ನಮ್ಮ ಶಕ್ತಿಯೂ ಹೌದು, ದೌರ್ಬಲ್ಯವೂ ಹೌದು. ಅದರ ಬಳಕೆಯ ಮೇಲೆ ಅವಲಂಬಿಸಿರುತ್ತದೆ. ಭಾವ ತೀವ್ರತೆ ಬಾಯಿಯನ್ನು ಹೇಗ್ಹೇಗೋ ಹರಿಯಬಿಟ್ಟಾಗ ಕತ್ತಿಗಿಂತಲೂ ಮೊನಚಾಗಿ ಎದುರಿರುವ ವ್ಯಕ್ತಿಯನ್ನು ಘಾಸಿ ಮಾಡುತ್ತದೆ. ಸೌಜನ್ಯ, ದಾಕ್ಷಿಣ್ಯ, ಪರರ ಮನೋಧರ್ಮ ಸಹಿಷ್ಣುತೆ, ಶಿಷ್ಟಾಚಾರ ಪಾಲನೆ ಎಲ್ಲವನ್ನೂ ಭಾವತೀವ್ರತೆ ತಿಂದು ಹಾಕಿಬಿಡುತ್ತದೆ ಎಂಬುದು ಕೆರೆಮನೆಯವರ ಅಂಬೋಣವಾಗಿದೆ. ಭಾವ ಮಾತಾಗುವ ಮೊದಲು ತುಸು ಶಿಷ್ಟಾಚಾರದ ಹಿತನುಡಿಗೆ ಕಿವಿಕೊಡುವ ತಾಳ್ಮೆ ಅಗತ್ಯ ಎಂಬುದು ಮನವರಿಕೆಯಾಗುತ್ತದೆ. ಇದರಂತೆಯೇ ಮೌನಕ್ಕೂ ಅಗಾಧವಾದ ಶಕ್ತಿಯಿದೆ. ಇದರಲ್ಲಿ ಶಾಂತಿಯೂ ಇದೆ, ಕ್ರಾಂತಿಯೂ ಇದೆ. ಕಡಿಮೆ ಮಾತನಾಡಿದರೆ ನಾವು ಹಲವಾರು ಸಮಸ್ಯೆಗಳಿಂದ ಮುಕ್ತರಾಗಬಹುದು. ಆದರೆ ಎಷ್ಟೊ ಸಲ ಮೌವವೇ ಎದುರಿಗಿರುವ ವ್ಯಕ್ತಿಯನ್ನು ಕೊಲ್ಲುವ ಅಸ್ತ್ರವೂ ಆಗುತ್ತದೆ ಎಂಬುದನ್ನು ಗಜಲ್ ಗೋ ಅವರು ತುಂಬಾ ಸೂಕ್ಷ್ಮವಾಗಿ ಇಲ್ಲಿ ದಾಖಲಿಸಿದ್ದಾರೆ.       ಬರವಣಿಗೆಗೆ ಒಂದು ಅದ್ಭುತ ಶಕ್ತಿಯಿದೆ. ಅಂತೆಯೇ ಆಲ್ಫ್ರೆಡೋ ಕಾಂಡೆಯವರು ಹೇಳಿದ ಈ ಮಾತು ಅಕ್ಷರಶಃ ಸತ್ಯವಾಗಿದೆ. “ಬರಹಗಾರನಾಗುವುದು ಜೀವನವನ್ನು ಸಾವಿನಿಂದ ಕದಿಯುವುದು”. ಈ ನೆಲೆಯಲ್ಲಿ ಗಮನಿಸಿದಾಗ ಬರವಣಿಗೆ ನಮ್ಮ ಆತ್ಮಸಂಗಾತಿಯೇ ಹೌದು. ನಮ್ಮ ನೋವಿಗೆ ಮಿಡಿಯುತ್ತದೆ, ಕಂಬನಿಯನ್ನು ಒರೆಸುತ್ತದೆ, ಧೈರ್ಯ ತುಂಬುತ್ತದೆ, ಆತ್ಮವಿಶ್ವಾಸದಿಂದ ಬಾಳಲು ಪ್ರೇರೇಪಿಸುತ್ತದೆ. ಈ ಕಾರಣಕ್ಕಾಗಿಯೇ ಗಜಲ್ ಗೋ ಶ್ರೀದೇವಿ ಕೆರೆಮನೆ ಅವರು ತಮ್ಮ ಈ ಒಂದು ಷೇರ್ ನಲ್ಲಿ ಬರವಣಿಗೆಯ ಹಿಂದಿನ ಬೆಳಕನ್ನು ಓದುಗರ ಮನದ ಮಂದೆ ಪ್ರಕಟಿಸಿದ್ದಾರೆ. “ಕಣ್ಣಂಚಿಂದ ಜಾರಿದ ಹನಿಯ ಹಿಡಿದಿಡಲಾಗದೆ ಬರೆಯುತಿದ್ದೇನೆ ಎದೆಯೊಳಗೆ ಹಚ್ಚಿಟ್ಟ ಪುಟ್ಟ ಹಣತೆ ಆರದಿರಲೆಂದು ಬರೆಯುತ್ತಿದ್ದೇನೆ“ ಕಂಗಳಿಂದ ಜಾರಿದ ಕಂಬನಿ ಕೆನ್ನೆಯನ್ನು ತೇವಗೊಳಿಸುತ್ತದೆ ಅವನಿಗೆ ಚುಂಬಿಸುತ್ತದೆ. ಅದನ್ನು ಹಿಡಿದಿಡಲು ಸಾಧ್ಯವಿಲ್ಲ. ಆ ನೋವಿನ ಛಾಯೆಯಾಗಿಯೆ ಬರವಣಿಗೆ ರೂಪ ಪಡೆದಿರುವುದನ್ನು ಇಲ್ಲಿ ಗಮನಿಸಬಹುದು. ಇಲ್ಲಿ ಬಳಕೆಯಾದ ‘ಹಣತೆ’ ಈ ಷೇರ್ ನ ಧ್ವನಿಯಾಗಿದೆ. ಅದನ್ನು ಮನೋಮಂದಿರದಲ್ಲಿ ಆರದಂತೆ ಕಾಪಿಡುವುದೆ ಈ ಬರವಣಿಗೆ, ಈ ಸಾಹಿತ್ಯ ಎನ್ನಬಹುದು.           ನಾವು ಉಸಿರಾಡುತ್ತಿರುವ ಜಗತ್ತಿನಲ್ಲಿ ಕರುಣೆ ಹಾಗೂ ಕ್ಷಮೆ ಮಾನವತ್ವದ ಬಹುದೊಡ್ಡ ಆಧಾರ ಸ್ಥಂಭಗಳು. ಈ ಕರುಣೆ ಹಾಗೂ ಕ್ಷಮೆಯನ್ನು ಮರೆತವರು ಮಾನವನೆಂಬ ಮುಖವಾಡದ ನೆರಳಿನಲ್ಲಿ ಜೀವಿಸಬೇಕಾಗುತ್ತದೆ. ಕರುಣೆ ಹಾಗೂ ಕ್ಷಮೆಯನ್ನು ಮರೆತ ಸಮಾಜಕ್ಕೆ ಶಾಂತಿಯನ್ನು ಹುಡುಕಿದರೂ ಸಿಗಲಾರದು.‌ ಈ ಹಿನ್ನೆಲೆಯಲ್ಲಿ ‘ಗಜಲ್’ ಮಧುಬಟ್ಟಲು ಕರುಣಾರಸದಿಂದಲೆ ತುಂಬಿದೆ. ನೋವಿಗೂ ನೋವಾಗದಂತೆ ಅಪ್ಪಿ ಮುದ್ದಿಸುವ ಜೀವ ಚೈತನ್ಯ ಇದಕ್ಕಿದೆ. ಈ ಕಾರಣಕ್ಕಾಗಿಯೇ ಇಂದು ಗಜಲ್ ಜನಸಾಮಾನ್ಯರ ಹೃದಯದಲ್ಲಿ ಶಾಶ್ವತವಾಗಿ ನೆಲೆಯೂರಿದೆ. ಈ ದಿಸೆಯಲ್ಲಿ ಶ್ರೀಮತಿ ಶ್ರೀದೇವಿ ಕೆರೆಮನೆ ಅವರಿಂದ ಮತ್ತಷ್ಟು, ಮೊಗೆದಷ್ಟೂ ಗಜಲ್ ಗಳು ಉದಯಿಸಲಿ ಎಂದು ಆಶಿಸುತ್ತ, ಶುಭ ಕೋರುತ್ತೇನೆ. “ಹಗೆತನವಾದರೂ ಸರಿ ಮನಸನ್ನು ನೋಯಿಸಲು ಬಾ ಬಾ ಮತ್ತೊಮ್ಮೆ ನನ್ನನ್ನು ತೊರೆದು ಹೋಗಲು ಬಾ“                               –ಅಹಮದ್ ಫರಾಜ್ ಮುಂದಿನ ವಾರ.. ಅಂದರೆ ಗುರುವಾರ, ಮತ್ತೊಬ್ಬ ತಮ್ಮ ಕುತೂಹಲ ತಣಿಸುವ ಗಜಲ್ ಮಾಂತ್ರಿಕರೊಂದಿಗೆ ನಿಮ್ಮ ಮುಂದೆ ಬಂದು ನಿಲ್ಲುವೆ. ಅಲ್ಲಿಯವರೆಗೂ ತುಂಬು ಹೃದಯದ ಧನ್ಯವಾದಗಳು… ಡಾ. ಮಲ್ಲಿನಾಥ ಎಸ್. ತಳವಾರ ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.‌ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ

Read Post »

You cannot copy content of this page

Scroll to Top