“ಒಣರೊಟ್ಟಿ ತಿಂದು
ತಣ್ಣೀರ ಕುಡಿ, ಫರೀದ್
ಇತರರ ತುಪ್ಪ ರೊಟ್ಟಿಯ ಕಡೆ
ನೋಡದಿರು ಹಂಬಲಿಸಿ”
-ಬಾಬಾ ಷೇಖ್ ಫರೀದ್
ಮಾಗಿದಾಗಲೆಲ್ಲ ಚಿತ್ರಗಳು
ಒತ್ತೆಯಾಳು ಕಣ್ಣ ಬೆಳಕಿನ ಕೂಳು
ಉಣ್ಣುವಾಗಲೆಲ್ಲ ನಾಲಿಗೆ ಚಿತ್ರವೂ
ಅಣಕಿಸುತ್ತದೆ
ಮಾಗಿದಾಗಲೆಲ್ಲ ಚಿತ್ರಗಳು Read Post »
ಕಾಲವೆಂಬ ಗಿರಿಯ ಏರುತ್ತಾ ಏರುತ್ತಾ ಹಿಂತಿರುಗಿ ನೋಡಿದಾಗ ಅದೆಷ್ಟೋ ಅಂದಿನ ಸಾಮಾನ್ಯ ಸಂಗತಿಗಳು ಇಂದು ವಿಶಿಷ್ಟವೆನಿಸ ತೊಡಗುತ್ತವೆ. ಕಾಡುವ ನೆನಪುಗಳಾಗಿ ಹಂಚಿಕೊಳ್ಳಲೇಬೇಕೆಂಬ ತಹತಹ ಮೂಡಿಸುತ್ತವೆ. ಅಂತಹ ನೆನಪುಗಳ ಮಾಲಿಕೆ ಈ ಅಂಕಣ. ಬನ್ನಿ ನೆನಪಿನ ದೋಣಿಯನ್ನೇರಿ ಗತ ವೆಂಬ ಸಾಗರದ ಪರ್ಯಟನೆ ಮಾಡಿ ಬರೋಣ.
ಸೋಮಣ್ಣನ ಸಂಕಟಗಳು
ಹಾಸ್ಯ ಲೇಖನ ಸೋಮಣ್ಣನ ಸಂಕಟಗಳು ಸೋಮಣ್ಣ ನಮ್ಮ ಮನೆಗೆ ಹಾಲು ಹಾಕಲು ಬರುತ್ತಾರೆ.ಮನೆ ಕಡೆ ಹೊಲ,ಗದ್ದೆ ,ತೋಟ ಅಂತ ಜಮೀನು ಕೂಡ ಚೆನ್ನಾಗಿದೆ.ಒಂದಷ್ಟು ಮನೆ ಕಟ್ಟಿ ಬಾಡಿಗೆ ಕೂಡ ಕೊಟ್ಟಿದ್ದಾರೆ.ಇಷ್ಟು ಆದಾಯ ಸಾಲದು ಅಂತ ಡೈರಿ ಏಜೆನ್ಸಿ ಕೂಡ ತೊಗೊಂಡು ಮನೆ ಮನೆಗೆ ಹಾಲು ಹಾಕುತ್ತಾರೆ.ಒಟ್ಟಾರೆಯಾಗಿ ಮನೆ ಕಡೆ ಚೆನ್ನಾಗಿದ್ದಾರೆ. ಸೋಮಣ್ಣ ಒಳ್ಳೆ ಹಸನ್ಮುಖ ವ್ಯಕ್ತಿ.ಹಾಲು ಕೊಡಲು ಬಂದಾಗ ,ನನಗೆ ರಜೆಯಿದ್ದ ದಿನವಾಗಿ, ಒಂದಷ್ಟು ಬಿಡುವಿದ್ದರೆ ಒಂದು ನಾಲ್ಕು ಕಷ್ಟ ಸುಖದ ಮಾತನಾಡಿ ಹೋಗುತ್ತಾರೆ.ಅಂತಹ ಒಂದು ದಿನ ಮಾತಾಡಿಕೊಂಡು”ಏನ್ ಸೋಮಣ್ಣ ,ಚೆನ್ನಾಗಿದ್ದೀರಾ? ಮಕ್ಳು ಏನ್ ಮಾಡ್ಕೊಂಡವ್ರೆ?” ಅಂತ ಕೇಳಿದೆ. ಸೋಮಣ್ಣ ನಿಟ್ಟುಸಿರು ಬಿಡುತ್ತಾ,”ಏನ್ ಚಂದ ಬುಡಿ ಮೇಡಂ,ಯಾಕಾದ್ರೂ ಮದ್ವೆಯಾಗಿ ಮಕ್ಳು ಮಾಡ್ಕೊಂಡೆ ಅಂತ ಆಗ್ಬುಟ್ಟದೆ” ಎಂದರು. ನನಗೆ ಆಶ್ಚರ್ಯವಾಯಿತು.” ಅಲ್ಲ ಸೋಮಣ್ಣ,ಇಬ್ರೂ ಮಕ್ಳನ್ನ ಎಂಜಿನಿಯರಿಂಗ್ ಓದ್ಸಿದ್ದಿರಾ,ಒಳ್ಳೆ ಮಕ್ಳು ನಿಮ್ಮವು, ಅದ್ಯಾಕೆ ಹಂಗಂತಿರ.?” ಅಂದೆ. ಸೋಮಣ್ಣ,” ಓದಕ್ಕೇನೋ ಓದ್ದೋ,ಆದ್ರೆ ಕೆಲ್ಸವೇ ಸಿಕ್ಕಿಲ್ಲ ನೋಡಿ, ಏನ್ಮಾಡೋದು?” ಅಂದ್ರು. ನನಗೆ ಯಾವಾಗಲೋ ಒಂದು ಸಾರಿ ಅವರು ” ಮಗ ಕ್ಲಾಸ್ ಒನ್ ಕಂಟ್ರಾಕ್ಟರ್ ಆಗಿ ಕೆಲ್ಸ ಮಾಡ್ತಾ ಅವ್ನೆ,” ಅಂದಿದ್ದು ನೆನಪಾಯಿತು. ಅದಕ್ಕೆ ಕೇಳಿದೆ, “ಯಾಕೆ? ಕಾಂಟ್ರಾಕ್ಟ್ ಮಾಡ್ಸೋದು ಬಿಟ್ ಬಿಟ್ನ,” ಎಂದಿದ್ದಕ್ಕೆ ” ಕಾಂಟ್ರಾಕ್ಟ್ ಏನೋ ಮಾಡುಸ್ತ ಅವ್ನೆ, ದುಡ್ಡು ವಸಿ ಪರವಾಗಿಲ್ಲ ಮಾಡವ್ನೆ , ಆದ್ರೆ ಅವರವ್ವಂಗೆ ಸಮಾಧಾನ್ವೆ ಇಲ್ಲ. ದಿನಾ ಬೆಳಿಗ್ಗೆ ಎದ್ರೆ,” ಮಗಂಗೆ ಗೋರ್ ಮೆಂಟ್ ಕೆಲ್ಸ ಕೊಡುಸ್ನಿಲ್ಲ ನೀನು,” ಅಂತ ಹಂಗುಸ್ತಳೆ..ನೀವೇ ಹೇಳಿ ಮೇಡಂ ಈಗ ಗೋರ್ ಮೆಂಟ್ ಕೆಲ್ಸ ಅಷ್ಟು ಸುಲಭಕ್ಕೆ ಸಿಕ್ಕದಾ? ಕಿರಿಮಗನೂ ಎಸ್ ಐ ಆಗ್ಬೇಕು ಅಂತ ಮೂರ್ ಸತಿ ಪರೀಕ್ಷೆ ಬರ್ದ,ಫಿಸಿಕಲ್ ಆಯ್ತದೆ, ಬರೆಯೋದ್ರಲ್ಲಿ ಹೊಯ್ತದೇ,ಇವ್ಳು ‘ನಮ್ಮ ಕಡೆವ್ರು ಮಿನಿಸ್ಟ್ರು ಆಗವ್ರಲ್ಲ ಅವ್ರ ಕೇಳಿ ಕೊಡ್ಸಿ’,ಅಂತ ಜೀವ ತಿಂತಾವ್ಳೆ.”ಲೆ, ಈಗ ಕಾಲ ಕೆಟ್ಟೋಗದೆ ಕಣೆ,ಹಿಂದ್ಲಂಗಲ್ಲ, ಎಲ್ಲಾ ಆನ್ಲೈನ್ ಮಾಡ್ಬುಟ್ಟವ್ರೆ. ಯಾರಿಗ್ ಕೆಲ್ಸ ಕೊಟ್ಟವ್ರೆ,ಮೆರಿಟ್ ಎಷ್ಟು ,ಎಲ್ಲಾ ಕಂಪ್ಯೂಟ್ರು ತೋರಿಸಿ ಬುಡ್ತದೆ. ಹಂಗೆ ಹಿತ್ಲು ಬಾಗ್ಲಿಂದ ಕೆಲ್ಸ ಕೊಡ್ಸಕ್ಕೆ ಹೋದ್ರೆ ಬಾಕಿ ಹೈಕ್ಳು ಬುಡಕ್ಕಿಲ್ಲ,ಕೇಸ್ ಹಾಕೊತ್ತವೆ, ಆ ಮಿನಿಸ್ಟ್ರು ಅವನ ಹಕ್ಕಳಿಗೇ ಕೆಲ್ಸ ಕೊಡ್ಸಕ್ಕಾಕ್ಕಿಲ್ಲ, ಇನ್ನು ನಮ್ ಹೈಕ್ಳಿಗೆ ಎಲ್ಲಿಂದ ಕೊಡ್ಸಾನು? ,ಸುಮ್ನಿರು ಅಂದ್ರೂ ಕೇಳಕ್ಕಿಲ್ಲ,” ಎಂದು ಬೇಜಾರಿಂದ ಹೇಳಿದರು. ” ನಿಮ್ಮ ಮನೆದೇ ಮಸ್ತಾಗಿ ಅದಲ್ಲ,ಅದು ಸಾಲ್ದ, ಒಬ್ಬ ಕಾಂಟ್ರಾಕ್ಟ್ ಮಾಡುಸ್ಲಿ, ಇನ್ನೊಬ್ಬುನ್ನ ಜಮೀನಿಗ್ ಬುಡಿ,” ಎಂದೆ. “ಮೇಡಂ,ಅದು ಆಕ್ಕಿಲ್ವಂತೆ ಅವಳ್ಗೆ, ‘ಹುಡ್ಗ ಕೆಲ್ಸದ್ ಮೇಲವ್ನೆ ಅಂದ್ರೆ ಒಳ್ಳೆ ಕಡೆ ಹೆಣ್ ಕೊಡ್ತರೆ,ಇಲ್ದಿದ್ರೆ ಯಾರ್ ಕೊಡ್ತರೆ?’ ಅಂತಳೆ.’ ಈಗ ನಾನ್ ಕೆಲ್ಸದಲ್ಲಿ ಇಲ್ದಿದ್ರೂ ನೀನು ನನ್ನ ಮದ್ವೆ ಆದ್ಯಲ್ಲ, ಹಂಗೇ ಅವುಕ್ಕೂ ಯಾರಾದ್ರೂ ಸಿಕ್ತಾರೆ ಬುಡು’,ಅಂದ್ರೆ, “ನಮ್ಮಪ್ಪಂಗೆನೋ ತಲೆ ಕೆಟ್ಟಿತ್ತು ,ನಿಂಗ್ ಕೊಟ್ಟ, ಈಗ್ಲವ್ರು ಕೊಟ್ಟಾರಾ?” ಅಂತಳೆ ಮೇಡಂ, ಹೆಚ್ಗೆ ಓದಿಲ್ಲ ಮೇಡಂ ಅವ್ಳು, ಆದ್ರೂ ಮಾತಾಡ್ ಬೇಕಾದ್ರೆ ಬರೀ ಲಾ ಪಾಯಿಂಟೇ ಬತ್ತವೆ .ನಾನ್ ಏನ್ ಹೇಳಿದ್ರೂ ಕೇಳಕ್ಕಿಲ್ಲ. ನಂಗೆ ರೋಸಿ ಹೋಗದೆ.ಯಾಕಾದ್ರೂ ಮದ್ವೆಯಾಗಿ ಮಕ್ಳು ಹುಟ್ಟುಸ್ದೆ,ಅಂತ ದಿನಾ ಕೊರಗಂಗ್ ಆಗದೆ,” ಅಂತ ಹೇಳಿ, “ಬತ್ತಿನೀ ಮೇಡಂ, ಇನ್ನೂ ಸುಮಾರ್ ಮನೆಗೆ ಹಾಲ್ ಹಾಕ್ಬೇಕು.” ಅನ್ನುತ್ತಾ ಹೋದರು.ನಾನು ನಗು ತಡೆದುಕೊಂಡು ಒಳಬಂದೆ.
ಗಜಲ್
ಗಜಲ್ ಪ್ರಕಾಶಸಿಂಗ್ ರಜಪೂತ ಒಡೆಯನಾ ಸಂದೇಶ ಒಂದಾಗಿ ಬಾಳುಬೀದಿ ಗಳು ಹಂಚಿ ಆಗದಿರು ಹಾಳು ಬರುವಾಗ ತಂದಿ ಏನು ಜಗಳಾಡಲು ಬಂದಿ ಏನುನಿನ್ನ ಕಾಡುವದು ಇಲ್ಲಿ ನಿತ್ಯ ಈ ಸವಾಲು ಒಂದೇ ಕುಲ ಒಂದು ಮತ ಒಂದು ನಿನ್ನ ಜಾತಿಕರ್ಮವೇ ಪರಿಚಯ ತಿಳಿಕೋ ನಿನ ಪಾಲು ಗುಡಿಯಲ್ಲಿ ಹುಡುಕಿದರೆ ಸಿಗುವನಾ ಒಡೆಯಾಇಳಿಯಬೇಕು ಅದಕ್ಕೆ ನೀ ಮನದ ಆಳು ಜೊತೆಯಲ್ಲಿ ಬರುವದಿಲ್ಲ ನೀ ಮಾಡಿದ ಸಂಚಯದುಖ್ಖ ನೀಡತೈತಿ ಅಯ್ಯ ನೀ ಕಟ್ಟಿದ ಜಾಲು ನೆನಪಿನಲ್ಲಿ ಇರಲಿ”ಪ್ರಕಾಶ”ನಾ ಸದಾ ಮಾತುಜಾತಿ ಮತ ಬದಿಗಿಟ್ಟು ಅರಸಾಗಿ ಆಳು
ಬಿ.ಶ್ರೀನಿವಾಸ ಎರಡು ಕವಿತೆಗಳು
ಆದರೆ ಪಾಪ …
ಅವನಿಗೆ
ಇಂಗ್ಲಿಷ್ ಬರುತ್ತಿರಲಿಲ್ಲ
ಬಿ.ಶ್ರೀನಿವಾಸ ಎರಡು ಕವಿತೆಗಳು Read Post »
ಅಕ್ಷರ ಸಂತ ಹಾಜಬ್ಬ
ಕಾವ್ಯ ಸಂಗಾತಿ ಅಕ್ಷರ ಸಂತ ಹಾಜಬ್ಬ ಕಮಲಾಕ್ಷಿ ಕೌಜಲಗಿ ಅನಕ್ಷರಸ್ಥರೆ ಆದರು ಕೂಡಅಕ್ಷರ ಸಂತರು ಹಾಜಬ್ಬನಿಮ್ಮನ್ನೋಡಿ ಇಡೀ ದೇಶಹಾರಿಸುವಂತಾಗಿದೆ ಹುಬ್ಬ! ಕಿತ್ತಳೆ ಮಾರಿ ಕಟ್ಟಿಸಿಕೊಟ್ಟಿರಿಕಲಿಯಲು ಮಕ್ಕಳಿಗೆ ಶಾಲೆಅಕ್ಕರೆಯಿಂದಲಿ ಸಾಧನೆಗೈದಿರಿನಿಮಗಿದೋ ಸಾವಿರ ಚಪ್ಪಾಳೆ! ವಿಶಾಲ ಮನಸಿನ ಕಾಯಕಯೋಗಿಸರಳತೆ ತುಂಬಿದೆ ಕಣಕಣವುನಿಮ್ಮಯ ನೆರಳಲಿ ಕಲಿತವರೆಲ್ಲರುತೀರಿಸಲುಂಟೇ ನಿಮ್ಮ ಋಣವು? ಹಸುಳೆಯ ಮನಸಿನ ಮುಗ್ಧತೆ ಅಡಗಿದೆಹೃದಯ ಶ್ರೀಮಂತಿಕೆ ನಿಮ್ಮ ಆಸ್ತಿಎಲ್ಲರು ಅಕ್ಷರ ಕಲಿಯಲಿ ಎಂಬುದೆನಿಮ್ಮಲಿ ತುಡಿಯುವ ಆಸಕ್ತಿ ಜ್ಞಾನದ ಹಸಿವನು ತೀರಿಸಲೋಸುಗತಿರುಗಾಡಿ ಮಾರುತ ಜೀವವ ತೇಯ್ದೆಈ ಪರಿ ನಿಷ್ಠೆಯ ಕಾಯಕದಿಂದಲೆಪದ್ಮಶ್ರೀ ಪ್ರಶಸ್ತಿಯು ನಿಮ್ಮನ್ನಾರಿಸಿದೆ.
ಅಂಕಣ ಸಂಗಾತಿ ತೊರೆಯ ಹರಿವು ‘ಸಾವಿಗೊಂದು ಘನತೆ ಕೊಡುವ…’ ಅಪ್ಪು ಎಂಬ ಮನದ ಮಗನ ಸಾವಿಗೆ ಕರ್ನಾಟಕ ಇನ್ನಿಲ್ಲದಂತೆ ಕೊರಗುತ್ತಿದೆ. ‘ಈ ಸಾವು ನ್ಯಾಯವೇ ?’ ಎಂದು ಪ್ರಶ್ನಿಸುತ್ತಿದೆ. ‘ಸಾಯೋ ವಯಸ್ಸಾ ಇದು? ವಿಧಿಗೆ ಕುರುಡೇ? ಯಮನ ಕಿಂಕರರಿಗೆ ಕರುಣೆ ಇಲ್ಲವೇ?’ ಎಂದೆಲ್ಲಾ ನೂರಾರು ಪ್ರಶ್ನೆಗಳನ್ನು ಎಲ್ಲರ ಮನಸ್ಸು ಜಗ್ಗಿ ಕೇಳುತ್ತಿದೆ. ಇದಂತೂ ಈ ಕಾಲಮಾನದಲ್ಲಿನ ಎಲ್ಲಾ ವಯೋಮಾನದವರ ಮನದಲ್ಲಿ ಉಳಿದು ಹೋದ ಅಹಿತಕರ ಘಟನೆ. ಯಾರೂ ಊಹಿಸದಿದ್ದ ಆಘಾತ! ‘ಹುಟ್ಟಿದ ಮೇಲೆ ಸಾವು ಸಹಜ’ ಎಂದರೂ ಬಾಳಿ ಬದುಕಬೇಕಾದ ಒಂದು ಒಳಿತಿನ ಜೀವಕ್ಕೆ ಇಂಥದ್ದೊಂದು ಸಾವು ಬಂದುದನ್ನು ಯಾರಿಗೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದೊಂದು ಎಂದಿಗೂ ಮಾಯದ ಗಾಯ. ಪುನೀತ್ ಕೇವಲ ನಟನಾಗಿದ್ದರೆ ಸಿನಿಪ್ರಿಯರಿಗೆ, ಅಭಿಮಾನಿಗಳಿಗೆ ಹೆಚ್ಚು ದುಃಖವಾಗುತ್ತಿದ್ದಿರಬಹುದು. ಆದರೆ ಜನಾನುರಾಗಿಯೂ ಹೃದಯವಂತನೂ ಆದ ಚೆಂದದ ವ್ಯಕ್ತಿಯೊಬ್ಬರ ಈ ಸಾವು ಎಲ್ಲಾ ವಯೋಮಾನದವರನ್ನೂ ಕಾಡಿದೆ. ಇಂಥಾ ದಿಢೀರ್ ಸಾವಿಗೆ ಕಾರಣವನ್ನು ಹುಡುಕುತ್ತಿದೆ. ಸಾವು ಸಹಜ ಎಂದ ಮೇಲೆ ಅದು ಬಂದಂತೆ ಸಹಜವಾಗಿ ಸ್ವೀಕರಿಸಬೇಕು ಎಂದು ಹೇಳುವುದು ಸುಲಭ. ಆದರೆ ಅಕಾಲದ ಸಾವನ್ನು ಸ್ವೀಕರಿಸುವುದು ಹೇಗೆ? ಅಕಾಲದ ಸಾವೆಂದರೆ ಏನು? ಸಾವಿಗೆ ಕಾಲ ಎನ್ನುವುದಿದೆಯೇ? ಎಂಬೆಲ್ಲಾ ಜಿಜ್ಞಾಸೆಗೆ ಮನ ತುಡಿಸುತ್ತದೆ. ನಮ್ಮ ಹಿರಿಯರು ಹೇಳುವಂತೆ ಅಥವಾ ನಾವು ಬೆಳೆದು ಬಂದ ರೂಢಿಯಲ್ಲಿ ತುಂಬು ಬಾಳನ್ನು ಅಪೇಕ್ಷಣೀಯ ಎನ್ನಲಾಗುತ್ತದೆ. ಇಲ್ಲಿ ‘ತುಂಬು ಬಾಳು ತುಂಬಿರುವ ತನಕ ತುಂಬಿ ತುಂಬಿ ಕುಡಿಯಬೇಕು’ ಎನ್ನುವ ಹಿರಿಮನಸ್ಸಿನ ಹಾರೈಕೆಯಿರುತ್ತದೆ. ‘ ಶತಮಾನಂ ಭವತಿ ಶತಾಯುಹ್ ಪುರುಷಃ ಶತೇಂದ್ರಿಯಃ ಆಯುಶ್ಯೇವೇಂದ್ರಿಯೇ ಪ್ರತಿತಿಷ್ಠತಿ’ ಎಂಬುದು ದೀರ್ಘಾಯುಶ್ಯ ಹಾಗೂ ಉತ್ತಮ ಆರೋಗ್ಯ ಹೊಂದಿರಿ ಎಂಬ ಸದಾಶಯ ಹೊಂದಿರುವ ಆಶೀರ್ವಾದ ಸ್ವರೂಪದ ಮಂತ್ರವನ್ನು ಆಗಾಗ್ಗೆ ಕೇಳುವ ಆಚರಣೆಗಳ ಜೊತೆ ಜೊತೆಗೆ ಬೆಳೆದು ಬಂದಿರುತ್ತೇವೆ. ಕೊನೆಗೆ ‘ನೂರು ವರ್ಷ ಸುಖವಾಗಿ ಬಾಳಿದರು’ ಎಂಬ ಸುಖಾಂತ್ಯವೇ ಆಗಿರಬೇಕೆನ್ನುವ ಅಪೇಕ್ಷೆಯಲ್ಲೇ ಎಲ್ಲಾ ಕತೆಗಳನ್ನು ಹೆಣೆಯುತ್ತೇವೆ. ಪುರಾಣಗಳಲ್ಲಿ ‘ಚಿರಂಜೀವಿ’ಗಳನ್ನು ಹುಟ್ಟಿಸಿ ವಿಚಿತ್ರ ಸಮಾಧಾನಪಡುವವರು ನಾವು. ‘ಅಶ್ವತ್ಥಾಮೋ ಬಲಿರ್ವ್ಯಾಸೋ ಹನೂಮಾಂಶ್ಚ ವಿಭೀಷಣಃ | ಕೃಪಃ ಪರಶುರಾಮಶ್ಚ ಸಪ್ತೈತೇ ಚಿರಜೀವಿನಃ ‘ ಎಂದು ಅವರನ್ನು ಹೆಸರಿಸುವ ಸಂಸ್ಕೃತ ಶ್ಲೋಕವಿದೆ. ಚಿರಂಜೀವಿಗಳಾಗಿರಿ, ಆಯುಶ್ಮಾನ್ಭವ ಎಂದು ಆಶೀರ್ವದಿಸುವ ರೂಢಿ ನಮ್ಮಲ್ಲಿದೆ. ಹೀಗಿರುವಾಗ, ಅಪಘಾತದ ಸಾವುಗಳು, ಅನಾರೋಗ್ಯದ ಕಾರಣಕ್ಕೆ ಬರುವ ಸಾವುಗಳನ್ನು ಸ್ವೀಕರಿಸುವ ಬಗೆ ಹೇಗೆ? ಮನಸ್ಸು ಯಾವಾಗಲೂ ದೀರ್ಘಾಯುಷ್ಯಕ್ಕೆ ಸಿದ್ಧವಾಗಿರುವಾಗ ಅಪಘಾತ, ಅನಾರೋಗ್ಯದ ಕಾರಣ ಅಕಾಲಿಕ ಸಾವು ಬಂದರೆ?! ಅಂಥ ಸಂದರ್ಭಗಳಲ್ಲಿ ನಮ್ಮ ಕೈ ಮೀರಿದ ವಿಷಯಕ್ಕೆ ಅತೀವ ದುಃಖವಾಗುವುದು ಸುಳ್ಳಲ್ಲ. ದೇಶಗಳ ಆಂತರಿಕ ರಾಜಕೀಯ ಕಲಹಕ್ಕೆ ಬಲಿಯಾಗಿ ಮೆಡಿಟರೇನಿಯನ್ ಸಮುದ್ರದಲ್ಲಿ ಮುಳುಗಿ ಸತ್ತ ಪುಟ್ಟ ಸಿರಿಯನ್ ಬಾಲಕ ‘ಅಲಾನ್ ಕುರ್ದಿ’ ಆಗಲಿ, ಭಾರತ ಯುದ್ಧದಲ್ಲಿ ವೀರ ಮರಣಕ್ಕೆ ಒಳಗಾದ ಪದೇ ಪದೇ ನೆನಪಿಗೆ ಬರುವ ‘ವೀರ ಅಭಿಮನ್ಯು’ವಾಗಲೀ, ಕೆವಿನ್ ಕಾರ್ಟರನ ಪುಲಿಟ್ಚರ್ ಪ್ರಶಸ್ತಿಯ ಚಿತ್ರದೊಳಗಿನ ಅಪೌಷ್ಠಿಕಾಂಶದ ‘ಆಫ್ರಿಕಾದ ಮಗು’ ವಾಗಲಿ, ಮಹಾಯುದ್ಧದ ಕ್ರೂರ ನೆನಪಾಗಿ ಕಾಡುವ ಅಣುಬಾಂಬಿನ ದಾಳಿಗೆ ಸಿಲುಕಿದ ಆ ಎರಡು ನಗರಗಳ ಕಂದಮ್ಮಗಳಾಗಲಿ.. ಅಕಾಲದ ಸಾವಿಗೆ ವಿನಾಕಾರಣ ಬಲಿಯಾದವರು. ಇಂಖಾ ಸಾವುಗಳು ಇಡೀ ಮನುಕುಲವನ್ನು ಕಾಡುತ್ತವೆ. ಹಾಗೆ ಕಾಡುವ ದೂರ ದೇಶಗಳ, ಇತಿಹಾಸ ಪುರಾಣಗಳ ಸಾವುಗಳ ನಡುನಡುವೆ ನಮ್ಮ ಸುತ್ತಳತೆಯಲ್ಲಿ ಘಟಿಸಿಬಿಡುವ ಪುನೀತರಂತಹ ಅದಮ್ಯ ಚೇತನಗಳ ಸಾವು ಕಂಗೆಡಿಸಿ ತಲ್ಲಣಗೊಳಿಸುತ್ತವೆ. ಹುಟ್ಟಿದ ಜೀವಿಗಳಿಗೆ ಸಾವು ಅನಿವಾರ್ಯವೇ. ಆದರೆ ಅದನ್ನು ನಿರೀಕ್ಷಿಸುತ್ತಾ ಯಾರೂ ಕುಳಿತಿರಲಾರರು. ಸಾವಿನಂತಹ ಅಂತಿಮ ಸತ್ಯವನ್ನು ಅರಿತಿದ್ದರೂ ಅದರ ರೀತಿ ರಿವಾಜುಗಳನ್ನು ನಮ್ಮ ಬಾಲಿಶ ಮನಸ್ಸು ಸ್ವೀಕರಿಸಲು ತಯಾರಿರುವುದಿಲ್ಲ. ವಾರ ಕಳೆದರೂ ಗರ ಬಡಿದಂತಿರುವ ಮನಸ್ಸಿಗೆ ದಿಕ್ಕು ತೋಚದಂತಾಗಿ ಬಿಡುವುದು ಸತ್ಯವೇ. ಆದರೂ ಈ ಅನಿರೀಕ್ಷಿತ ಆಘಾತದ ಸಂದರ್ಭದಲ್ಲಿ ದುಡುಕಿನ ಕೈಗೆ ಮತಿಕೊಟ್ಟು ಮಂಕಾದ ಮನಸ್ಥಿತಿಯಲ್ಲಿ ನಮ್ಮ ಸಾವಿಗೆ ನಾವೇ ಆಹ್ವಾನ ಕೊಡುವುದಿದೆಯಲ್ಲ ಅದೊಂದು ಪರಮ ಮೂರ್ಖತನದ ಕೆಲಸ. ಈಗಾಗಲೇ ಹಲವಾರು ಅಭಿಮಾನಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ಇದು ನಿಜಕ್ಕೂ ಬೇಸರದ ವಿಚಾರ. ಯಾವ ನೋವುಗಳೂ ಶಾಶ್ವತವಾಗಿರುವುದಿಲ್ಲ. ಸುಖ ದುಃಖಗಳು ಬಾಳಿನೆರಡು ಮುಖಗಳು. ಇದೊಂದು ಗಳಿಗೆ ಇದ್ದರೆ ಅದೊಂದು ಗಳಿಗೆ ಇರುತ್ತದೆ. ಇಂಗ್ಞೀಶಿನಲ್ಲಿ ಒಂದು ಪದವಿದೆ passing clouds ಎಂದು. ಇದನ್ನು ಯಾವುದಕ್ಕೂ ಹೋಲಿಸಬಹುದು. ಸುಖವಾಗಲಿ ದುಃಖವಾಗಲಿ ಸ್ಥಿರವಲ್ಲ. ಬೇಸರ ಭಾವ ಯಾವತ್ತಿಗೂ ಸ್ಥಿರವಲ್ಲ. ಹಾಗೆಯೇ ಸುಖವೂ ಶಾಶ್ವತವಲ್ಲ. ಇದನ್ನು ತಿಳಿದ ನಮ್ಮ ಹಿರಿಯರು ಬದುಕನ್ನು ಚಕ್ರಕ್ಕೆ ಹೋಲಿಸಿದ್ದರು. ಗಾಲಿ ಸುತ್ತುತ್ತಿರುವಾಗ ಬಂಡಿಯು ಚಲಿಸುವಂತೆ, ಜೀವನ ಚಕ್ರವು ಚಲಿಸಲು ಸುಖವೊಮ್ಮೆ ದುಃಖವೊಮ್ಮೆ ಮೇಲಾಟವಾಡಬಹುದು. ನಿರಂತರವಾಗಿ ಯಾವ ಅಡೆತಡೆಯೂ ಇಲ್ಲದೆ ಗುರಿಯನ್ನು ಮುಟ್ಟುವಂತೆ ಬದುಕಿನ ಬಂಡಿ ಚಲಿಸುವುದು ಅಸಾಧ್ಯ. ಸರ್ವ ಜೀವಿಗಳಿಗೂ ಅದರದ್ದೇ ಆದ ಕಷ್ಟಸುಖಗಳಿರುತ್ತವೆ. ಯಾವಾಗಲೂ ಒಂದೇ ರೀತಿಯ ಜಡಭಾವದಲ್ಲಿ ಬದುಕಲಾಗದು. ಚಲಿಸುವ ಗಾಲಿಯಂತೆ ನಮ್ಮ ಜೀವನ ಚಕ್ರವೂ ಚಲಿಸುತ್ತಿರಬೇಕು. ಬೆಳಕಿನಂಥ ಬುದ್ಧಿಯನ್ನಾವರಿಸುವ ಕತ್ತಲೆಯಂತಹ ಕ್ರೋಧ, ಮಂಕುತನವನ್ನು ನಿವಾರಿಸಿಕೊಳ್ಳಬೇಕು. ಮಬ್ಬು ಹಿಡಿಸುವ ಆಲೋಚನೆಗಳಿಂದ ಕಷ್ಟಪಟ್ಟಾದರೂ ಹೊರಬರಬೇಕು. ವಿಚಾರದ ಯೋಗ್ಯ ನಿರ್ಣಯಕ್ಕೆ ಮನಸ್ಸನ್ನು ತಾಲೀಮುಗೊಳಿಸಬೇಕು. ಈಗೀಗಂತೂ ಆತ್ಮಹತ್ಯೆಗಳು, ಕೊಲೆಗಳು ತೀರಾ ಸಾಮಾನ್ಯ ಎನ್ನುವಂತಾಗಿಬಿಟ್ಟಿವೆ. ‘ಕೊಂದರೆ ತೀರಿತೆ ಮಂದಿಯ ದುಃಖ!’ ‘ಆತ್ಮಹತ್ಯೆಯಿಂದ ಸಿಗುವುದೇ ನೋವಿಗೆ ಅಂತ್ಯ!’ ಎಂದು ಯಾರು ಯಾರನ್ನೋ ಕೇಳಬೇಕಾಗಿಲ್ಲ. ನಮ್ಮ ಮನಗಳನ್ನು ಸಂತೈಸಿಕೊಳ್ಳಬೇಕಾದ ಕಾಲವಿದು. ನಮ್ಮೊಡನೆ ಇರುವ ಕುಟುಂಬಕ್ಕೆ, ನಾವು ಬದುಕುತ್ತಿರುವ ಸಮಾಜಕ್ಕೆ ಜವಾಬ್ದಾರರಾಗಿರುವ ಬದ್ಧತೆ ನಮಗಿರಬೇಕು. ಕಳೆದುಕೊಂಡವರ ನೋವನ್ನು ಇತರರು ಹಂಚಿಕೊಳ್ಳಲಾಗದು. ‘ದುಃಖ ಭರಿಸುವ ಶಕ್ತಿ ಸಿಗಲಿ’ ಎಂಬ ನಾಲ್ಕು ಸಮಾಧಾನದ ಮಾತನಾಡುವ ಸಂದರ್ಭದಲ್ಲಿ ನಮ್ಮ ದುಡುಕಿನ ನಿರ್ಧಾರಗಳು ನೊಂದವರ ಹೃದಯವನ್ನು ಮತ್ತಷ್ಟು ಭಾರಗೊಳಿಸಬಾರದು. ಸಾವು ಬಂದಾಗ ಬರಲಿ. ಬಂದೇ ತೀರುವ ಅತಿಥಿಯನ್ನು ಇಂದೇ ಕರೆಯುವ ಹಠ ಯಾರಿಗೂ ಬೇಡ. ತಾನಾಗಿ ಬರಲಿರುನ ಸಾವಿಗೊಂದು ಘನತೆಯ ಬದುಕನ್ನು ಕಟ್ಟಿ ಕೊಡುವ… – ವಸುಂಧರಾ ಕದಲೂರು . ೨೦೦೪ ರ ಬ್ಯಾಚಿನ ಕೆ. ಎ. ಎಸ್. ಅಧಿಕಾರಿಯಾಗಿ ಆಯ್ಕೆಯಾಗಿ, ಕೃಷಿ ಮಾರಾಟ ಇಲಾಖೆಯಲ್ಲಿ ಸಹಾಯಕ ಹಾಗೂ ಉಪ ನಿರ್ದೇಶಕರು ಆಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಪ್ರವಾಸೋದ್ಯಮ ಇಲಾಖೆಯಲ್ಲಿ ಜಂಟಿ ನಿರ್ದೇಶಕರಾಗಿ ಆಡಳಿತ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುತ್ತಾರೆಓದು ಬರವಣಿಗೆ ಪರಮಾಪ್ತ ಹವ್ಯಾಸಗಳು. ೧. ‘ಮರೆತು ಬಿಟ್ಟದ್ದು’ ಮೊದಲ ಕವನ ಸಂಕಲನ.೨. ‘ ಕನ್ನಡ ಕವಿಕಾವ್ಯ ಕುಸುಮ-೪೦’ ಸರಣಿಯಲ್ಲಿ ಹಿರಿಯ ಕವಿಗಳೊಡನೆ ನನ್ನ ಹೆಲವು ಕವನಗಳು ಪ್ರಕಟವಾಗಿವೆ. ಕಥಾ ಸಂಕಲನ ಹಾಗೂ ಕವನ ಸಂಕಲನ ಹೊರತರುವ ಪ್ರಯತ್ನದಲ್ಲಿದ್ದಾರೆ







