ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಗಝಲ್

ಗಝಲ್ ತೂತು ಬಿದ್ದ ಹಚ್ಚಡದಲ್ಲಿ ಒದ್ದಾಡುತಿದೆದೇವನಿಟ್ಟ ಕನಸುಕಾದ ಹೆಂಚಿನ ರೊಟ್ಟಿಯಂತೆ ಸುಡುತಿದೆದೇವನಿಟ್ಟ ಕನಸು ನಿಗಿನಿಗಿ ಕೆಂಡವಾಗಿ ಮನವು ಕಂಪನೆಕಾಯ್ದು ಹೋಯಿತೇಬನದ ಸುಮದ ಆಸೆಯ ಕಮರಿಸುತಿದೆದೇವನಿಟ್ಟ ಕನಸು ತುತ್ತು ಕೂಳಿಗೂ ನಾನಾ ಬಗೆಯಲಿವೇಷ ತೊಡಿಸಿತೆಢಂಢಂಯೆಂದು ವಾದ್ಯ ಬಾರಿಸುತಿದೆದೇವನಿಟ್ಟ ಕನಸು ಶಾಪಗ್ರಸ್ತ ಅಹಲ್ಯೆಯಂತೆ ಹೃದಯಮುಕ್ತಿ ಬೇಡುತಿದೆಬಡತನದ ಬಾಣಲೆಯಲಿ ಬೇಯುತಿದೆದೇವನಿಟ್ಟ ಕನಸು ಸನ್ಯಾಸಿಯಂತೆ ಸನ್ಮಾರ್ಗ ಅರಸುತಿದೆಅಭಿನವನ ಕಾವ್ಯವಿದೂಷಕನ ತೆರದಿ ಹಾಸ್ಯ ಮಾಡುತಿದೆದೇವನಿಟ್ಟ ಕನಸು ಶಂಕರಾನಂದ ಹೆಬ್ಬಾಳ

ಗಝಲ್ Read Post »

ಕಾವ್ಯಯಾನ

ಅನುವಾದಿತ ಅಬಾಬಿಗಳು

ಅನುವಾದ ಸಂಗಾತಿ ಅನುವಾದಿತ ಅಬಾಬಿಗಳು ಆಕರ : ಕಾಲಂ ಸಾಕ್ಷಿಗಾ(ತೆಲುಗು ಅಬಾಬಿಗಳ ಸಂಕಲನ) ಮೂಲ ಲೇಖಕರು : ಷೇಕ್ ಅಬ್ದುಲ್ ಹಕೀಮ್ಕನ್ನಡಾನುವಾದ : ಧನಪಾಲ ನಾಗರಾಜಪ್ಪ ೧೩)ಮನುಷ್ಯ ಮನುಷ್ಯನನ್ನೇ ದ್ವೇಷಿಸುವಂತೆಭೇದಭಾವಗಳನ್ನು ಸೃಷ್ಟಿಸುತ್ತಅಮಾಯಕ ಜನರನ್ನು ಹಿಂಸಿಸುತ್ತಹಕೀಮಾಮೇಕೆಬಣ್ಣದ ಹುಲಿಗಳಾಗಿ ಹೊಂಚುಹಾಕಿದರಲ್ಲಾ! ೧೪)ವೇಷಧಾರಣೆಗಳೇ ಗುರುತುಗಳಾದವೆಮನುಷ್ಯ ಮನುಷ್ಯತ್ವ ಏನಾಯಿತು?ಪಶುವಿಗಾಗಿ ಪರದಾಡುತ್ತಿವೆಯಾ?ಹಕೀಮಾದೇಶದಲ್ಲಿ ಪಶುಗಳು ರಾಜ್ಯವೆ? ೧೫)ದೇಶದಲ್ಲಿ ಕಳ್ಳರು ಹೆಚ್ಚಾಗಿದ್ದಾರೆದೇಗುಲಗಳಲ್ಲಿನ ದೇವರುಗಳೇ ಇವರ ಗುರಿಅಧಿಕಾರಿದಲ್ಲಿ ಹೂ ಇದ್ದರೆ ಇಷ್ಟೇನಾ?ಹಕೀಮಾ

ಅನುವಾದಿತ ಅಬಾಬಿಗಳು Read Post »

ಇತರೆ

ಸುಭಾಷಿತಗಳ ಸ್ವಾರಸ್ಯ

ಲೇಖನ ಸಂಗಾತಿ  ಸುಭಾಷಿತಗಳ ಸ್ವಾರಸ್ಯ ಎಂ. ಆರ್. ಅನಸೂಯ ಬಾಲ್ಯದಲ್ಲಿ ಅವಳು ಮನೆಯ ಹಿರಿಯರು ತಮ್ಮ ಮಾತು  ಕತೆಗಳಲ್ಲಿ ಸಮಯಾನುಸಾರ ಬಳಸುತ್ತಿದ್ದ ಗಾದೆಗಳನ್ನು  ಕೇಳಿಸಿಕೊಂಡೇ  ಬೆಳೆದವಳು. ಹೀಗಾಗಿಯೇ ನೂರಾರು  ಗಾದೆಗಳು ಅವಳ ನಾಲಿಗೆಯ ತುದಿಯಲ್ಲಿದ್ದವು. ಅವಳ ಹಿರಿಯರು ಅನಕ್ಷರಸ್ಥರಾದರೂ ಸಹ ಅವರ ನಾಲಿಗೆಯ ಮೇಲೆ ಸರಾಗವಾಗಿ ಬಳಸಲ್ಪಡುತ್ತಿದ್ದ ಗಾದೆಗಳ ಕುರಿತ ಮೆಚ್ಚುಗೆಯ ಜೊತೆಯಲ್ಲೇ ಹಿರಿಯರ ಸಂದರ್ಭೋಚಿತ ಗಾದೆಗಳ ಬಳಕೆಯ ವಾಕ್ಚಾತುರ್ಯಕ್ಕೆ ಬೆರಗಾಗುತ್ತಿದ್ದಳು ಗಾದೆಗಳಂತೆ ಸರ್ವಜ್ಞನ ಹಾಗೂ ಬಸವಣ್ಣನ ವಚನಗಳು ನಮ್ಮ ನಾಡಾಡಿಗಳ ಮಾತುಕತೆಗಳ ನಡುವೆ  ನುಸುಳಲು  ಕಾರಣ ಅವುಗಳ ಭಾಷೆಯ  ದೇಸಿತನ  ಮತ್ತು ಸರಳತೆ  ಎಂಬುದರಲ್ಲಿ ಎರಡು ಮಾತಿಲ್ಲ. ಗಾದೆಗಳನ್ನು ನಾಣ್ಣುಡಿ ಹಾಗೂ ಲೋಕೋಕ್ತಿ ಎಂದು ಸಹಾ  ಕರೆಯಲಾಗುತ್ತದೆ. ಗಾದೆಗಳು ಜನಸಾಮಾನ್ಯರ ನಡುವೆ ಬಳಕೆಯಲ್ಲಿರುವ  ಮಾತುಗಳಾಗಿರುವುದೇ ಇದಕ್ಕೆ ಕಾರಣ. ಈ ಗಾದೆಗಳು ಸಾರ್ವತ್ರಿಕ ಹಾಗೂ ಸಾರ್ವಕಾಲಿಕ ಸತ್ಯಗಳೇ ಆಗಿದ್ದೂ  ಜನರ  ಸಂಸ್ಕೃತಿಯ  ಪ್ರತಿಧ್ವನಿಗಳಾಗಿವೆ. ಅವಳು ಪ್ರೌಢಶಾಲೆಗೆ ಕಾಲಿಟ್ಟಾಗ ಅಲ್ಲಿ ಪ್ರತಿನಿತ್ಯ ಶಾಲಾ ಆರಂಭದ ವೇಳೆಯಲ್ಲಿ ಸಾಮೂಹಿಕವಾಗಿ ರಾಷ್ಟ್ರಗೀತೆ ಹಾಡಿದ ನಂತರ ಸರದಿಯ ಮೇಲೆ ಹತ್ತನೇ ತರಗತಿಯಲ್ಲಿ ಓದುವ ವಿದ್ಯಾರ್ಥಿನಿಯರು ಅಂದಿನ ವರ್ತಮಾನ ಪತ್ರಿಕೆ  ವಾಚನ ಮಾಡುವ ಪರಿಪಾಠವಿತ್ತು. ಮೊಟ್ಟಮೊದಲಿಗೇ ಅಂದಿನ ಸುಭಾಷಿತವನ್ನು ಓದಬೇಕು. ನಂತರ ಅಂದಿನ ಪತ್ರಿಕೆಯ ಮುಖ್ಯಾಂಶಗಳನ್ನು ಓದಬೇಕು. ಅಂತ್ಯದಲ್ಲಿ ಕ್ರೀಡಾ ವಾರ್ತೆಗಳು. ಸರದಿಯ ಪ್ರಕಾರ ಬಂದ ವಾರ್ತಾ ವಾಚಕಿಯು ಶಾಲೆಗೆ ಮುಂಚಿತವಾಗಿ ಬಂದು ಪತ್ರಿಕೆಯ ಮುಖ್ಯಾಂಶಗಳನ್ನು ಗುರುತು ಮಾಡಿಕೊಂಡು ಸಿದ್ಧಳಾಗ ಬೇಕಿತ್ತು. ಪ್ರತಿದಿನದ ಸುಭಾಷಿತ ಅಥವಾ ಸೂಕ್ತಿಗಳನ್ನು   ತನಗೆ ತಿಳಿದಂತೆ  ಅರ್ಥೈಸಿಕೊಳ್ಳುತ್ತಿದ್ದಳು.  ಪ್ರತಿದಿನದ ಸುಭಾಷಿತಗಳನ್ನು ಕಿವಿಗೊಟ್ಟು ಕೇಳುತ್ತ ತನಗರಿವಿಲ್ಲದೆ ಅವಳು ಅದರ ಅಭಿಮಾನಿಯಾಗಿಬಿಟ್ಟಳು. ಅದ್ಯಾವ ಪರಿಯ ಗೀಳು ಹತ್ತಿತೆಂದರೆ  ಒಂದು ನೋಟ್ ಬುಕ್ ನ್ನು ಕೊಂಡುಕೊಂಡು  ಅದರಲ್ಲಿ  ದಿನಪತ್ರಿಕೆಯಲ್ಲಿ ಬರುತ್ತಿದ್ದ ಸುಭಾಷಿತಗಳನ್ನು  ಬರೆದುಕೊಳ್ಳತೊಡಗಿದಳು. ಹತ್ತನೇ ತರಗತಿಯವರೆಗು ಮುಂದುವರಿದ ಈ ಹವ್ಯಾಸವನ್ನು ಆ ನೋಟ್ ಬುಕ್ ಕಳೆದುಹೋಗುವ ತನಕ ಮುಂದುವರಿಸಿ ಕೊಂಡು ಬಂದಿದ್ದಳು. ಮುಂದೆ ಆ  ಹವ್ಯಾಸಕ್ಕೆ ಪೂರ್ಣ ವಿರಾಮ ಇಟ್ಟರೂ, ಸುಭಾಷಿತವನ್ನು ಓದಿ ಆಸ್ವಾದಿಸುವ ಅಭಿರುಚಿ ಮಾತ್ರ ಇಂದಿನವರೆಗೂ ಮುಂದುವರಿದಿದೆ.  ಸುಭಾಷಿತಗಳು ಈಗ ಮುಖಹೊತ್ತಿಗೆ( F B )ಯಲ್ಲಂತೂ ಪ್ರೇರಣಾತ್ಮಕ ಅಥವ ಧನಾತ್ಮಕ ಉಲ್ಲೇಖಗಳೆಂಬ ಹೊಸ ದಿರಸನ್ನು  ಧರಿಸಿವೆ. ಬುದ್ಧ ನುಡಿಗಳು  ಹಾಗೂ ಝೆನ್ ನುಡಿಗಳು ಅದ್ಭುತ ! ಇಂತಹ ಉಲ್ಲೇಖಗಳನ್ನು ಓದುತ್ತ ಮನನ ಮಾಡಿಕೊಳ್ಳುವ ಖಯಾಲಿ ಈಗಲೂ  ಅವಳಿಗೆ ಕಡಿಮೆಯಾಗಿಲ್ಲ. ಧನಾತ್ಮಕ ಉಲ್ಲೇಖಗಳು ಒಮ್ಮೊಮ್ಮೆ ಎಷ್ಟು ಪರಿಣಾಮ ಬೀರುತ್ತವೆಯೆಂದರೆ ನಮ್ಮ ಬದುಕಿನ ದೃಷ್ಟಿಕೋನವನ್ನು ಬದಲಿಸುವ ಕಸುವನ್ನು ಹೊಂದಿರುತ್ತವೆ.  “ನಿಮ್ಮ ಮಕ್ಕಳು ನಿಮ್ಮ ಮಕ್ಕಳಲ್ಲ. ನಿಮ್ಮ ಮೂಲಕ ಬಂದಿದ್ದಾರೆಯೇ ಹೊರತು ನಿಮ್ಮಿಂದಲ್ಲ. ನಿಮ್ಮ ಜೂತೆಗೆ ಇದ್ದರೂ ನಿಮಗೆ ಸೇರಿದ್ದಲ್ಲ. ಅವರ ದೇಹಗಳಿಗೆ ನೀವು ಮನೆಯಾಗಬಹುದೇ ಹೊರತು ಆತ್ಮಗಳಿಗಲ್ಲ”  ಕವಿ ಖಲೀಲ್ ಗಿಬ್ರಾನ್ ನ ಈ ಮಾತುಗಳು ಮಕ್ಕಳಲ್ಲಿ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡು ನಿರಾಶರಾದಂಥ ತಂದೆ ತಾಯಿಗಳ ಮನಸ್ಥಿತಿಗೆ ಪರಿಹಾರ ಸೂಚಕವಾಗಿ ಅವರ ಚಿಂತನೆಯ ದಿಕ್ಕನ್ನು ಬದಲಾಯಿಸಬಹುದು. “ಪದೇ ಪದೇ ಕಷ್ಟಗಳು ಬರುತ್ತಿವೆ ಅಂದ್ರೆ ನಿನ್ನ ಹಣೆಯ ಬರಹ ಸರಿ ಇಲ್ಲ ಅಂತ ಅಲ್ಲ. ಮುಂದೆ ನಿನಗೋಸ್ಕರ ತುಂಬಾ ಒಳ್ಳೆಯ ದಿನಗಳು ಕಾಯುತ್ತಿವೆ ಎಂದರ್ಥ” ನಮಗೆ ದಿಕ್ಕು ತೋಚದ ಕ್ಷಣಗಳಲ್ಲಿ ಈ ಮೇಲಿನ ಮಾತು ಆಶಾಕಿರಣದಂತೆ ಕಂಡು ಭರವಸೆ ತುಂಬುತ್ತಲೇ ಹೊಸ ಹೊಳಹುಗಳನ್ನು ತೋರುತ್ತವೆ. ಆಶಾವಾದಿ ಮಾತ್ರ ಪ್ರತಿ ಕಷ್ಟದಲ್ಲೂ ಅವಕಾಶಗಳನ್ನು ಕಂಡುಕೊಳ್ಳುತ್ತಾನೆ ಎಂಬ ಮಾತು ಅದೆಷ್ಟು ನಿಜ ! ಕೆಲವೊಂದು ಉಲ್ಲೇಖಗಳನ್ನು ಓದಿದಾಗ ಅವು ನಮ್ಮ ಅಂತರಾಳದ ಅನಿಸಿಕೆಗಳೇನೋ ಎಂಬಂತೆ ಆಪ್ತವಾಗಿ ಬಿಡುತ್ತವೆ.ಕೆಳಗಿನ ಸಾಲುಗಳು ಅದೆಷ್ಟು ಆಪ್ತವಾಗುತ್ತವೆ ” ನನ್ನ ಬಿಟ್ಟು ಹೋದವರಿಗೆ ಎರಡು ವಿಷಯ ಹೇಳೋಕೆ  ಇಷ್ಟಪಡ್ತೀನಿ. ಒಂದು sorry ಮತ್ತೊಂದು Thank you Sorry  ಯಾಕಂದ್ರೆ ನಾನು ನಿನ್ನನ್ನು ತುಂಬಾ ಹಚ್ಕಂಡಿದ್ದಕ್ಕೆ Thank you  ಯಾಕಂದ್ರೆ ನನಗೆ ಏಕಾಂಗಿಯಾಗಿ ಬದುಕುವುದು ಹೇಗೆ ಅಂತ ತೋರಿಸಿದ್ದಕ್ಕೆ “ ಸಶಕ್ತ ಉಲ್ಲೇಖಗಳು ನಮ್ಮನ್ನು ನಾವೇ ಸ್ವವಿಮರ್ಶೆಗೆ ತೊಡಗಿಸಿಕೊಳ್ಳುವಲ್ಲಿ ದಾರಿ ತೋರುತ್ತವೆ. ಕೆಳಗಿರುವ ಸಾಲುಗಳು ಇದಕ್ಕೊಂದು ನಿದರ್ಶನ.  “ನಿನ್ನ ಬಲಹೀನತೆಗಳ ಅರಿವಿದ್ದರೆ ನೀನು ಅತ್ಯಂತ ಬಲಶಾಲಿ ನಿನ್ನ ದೋಷಗಳನ್ನು ಗುರುತಿಸುವಿಯಾದರೆ ಬಲು ಸಾಹಸಿ  ಮತ್ತು ನಿನ್ನ ತಪ್ಪುಗಳನ್ನು ನೀನೇ ತಿದ್ದಿಕೊಳ್ಳುವೆಯಾದರೆ ಬಲು ಬುದ್ಧಿವಂತ” ರಚನಾತ್ಮಕ ಉಲ್ಲೇಖಗಳು ನಾವು ಆತ್ಮವಂಚನೆ ಮಾಡಿ ಕೊಳ್ಳದಂತೆ ತಡೆಯುವಂಥ ತಾಕತ್ತನ್ನು ಹೊಂದಿರುತ್ತವೆ.  “ಮನಸ್ಸಿನ ನ್ಯಾಯಾಲಯದಲ್ಲಿ  ಮನಸ್ಸಾಕ್ಷಿಯೇ ನ್ಯಾಯಾಧೀಶ” “ಜನ್ಮಪೂರ್ತಿ ಪುಸ್ತಕ ಓದಿದೆ ಏನು ಕಲಿಯಲಾಗಲಿಲ್ಲ   ಹತ್ತಿರದಿಂದ ಕೆಲವು ಮುಖಗಳ ಓದಿದೆ ನೂರಾರು ಪಾಠ ಕಲಿತೆ ”  ಬದುಕು ಕಲಿಸುವ ಪಾಠ ಇದೇ ಅಲ್ಲವೇ ?  ಸಕಾರಾತ್ಮಕವಾದ ದೃಷ್ಟಿಕೋನವುಳ್ಳ ಉಲ್ಲೇಖಗಳು ನಮ್ಮೊಳಗಿನ ಹುಡುಕಾಟಕ್ಕೆ ಅನುವು ಮಾಡಿಕೊಡುವಲ್ಲಿ ಯಶಸ್ವಿಯಾಗುತ್ತವೆ.   ” ದೇವರನ್ನು ಯಾರೋ ಕೇಳಿದರು ನಿನ್ನ ಪ್ರೀತಿ ಮತ್ತು  ಮನುಷ್ಯನ ಪ್ರೀತಿಯ ನಡುವೆ ಏನು ವ್ಯತ್ಯಾಸವಿದೆ ಎಂದು?  ದೇವರು ಹೇಳಿದ ಆಗಸದಲ್ಲಿ ಹಾರುವ ಹಕ್ಕಿಯ ನೋಡಿ ಖುಷಿ ನೋಡುವುದೇ ನನ್ನ ಪ್ರೀತಿ. ಅದೇ ಹಕ್ಕಿಯನ್ನು ಪಂಜರದಲ್ಲಿ ಇರಿಸಿಕೊಳ್ಳುವುದೇ ಮನುಷ್ಯನ ಪ್ರೀತಿ”   ಅದೆಷ್ಟು ಅರ್ಥಗರ್ಭಿತ ! ಅಂತಃಕರಣಕ್ಕೆ ಹತ್ತಿರವಾಗುವ  ಉಲ್ಲೇಖಗಳು ನಮ್ಮ ಬದುಕಿನ ಹಿನ್ನೋಟ ನೋಡಲು ಅವಕಾಶ ಒದಗಿಸುತ್ತವೆ “ಜೀವನದಲ್ಲಿ ಖುಷಿಯಾಗಿರಬೇಕು ಅಂದ್ರೆ ಯಾರಿಂದಲೂ ಏನನ್ನು ಬಯಸಬಾರದು”   ಹಾಗೂ “ಯಾವುದೇ ಒಬ್ಬ ವ್ಯಕ್ತಿಯ ಮೇಲೆ  ಅತಿ ನಂಬಿಕೆಯಿಟ್ಟು ನೋಡಿ  ‌. .  ಅದೇ ವ್ಯಕ್ತಿ ಬೇರೆ ಯಾರನ್ನೂ ನಂಬಲಾರದ ಹಾಗೆ  ಪಾಠ ಕಲಿಸುತ್ತಾನೆ “ ಮನ ಮುಟ್ಟುವ ಉಲ್ಲೇಖಗಳು ನಾವು ನಡೆದು ಬಂದ  ಹಾದಿಯನ್ನು ನೆನಪಿಸುತ್ತ ಮನವನ್ನು ಆರ್ದ್ರಗೊಳಿಸಿ ಕಾಠಿಣ್ಯತೆಯನ್ನು ಕರಗಿಸುವ ಸಹೃದಯಿ ಸಾಲುಗಳಾಗ ಬಹುದು. ಕೆಲವು ಉಲ್ಲೇಖಗಳೂ ನಮ್ಮ ಮನದಾಳದ ಮಾತುಗಳ ಮಾರ್ದ್ವನಿಗಳಾಗಿ ಹೊರಹೊಮ್ಮಿಬಿಡುತ್ತವೆ. “ಕಾಲಿಗಾದ ಗಾಯ ಹೇಗೆ ನಡೆಯಬೇಕೆಂದು ಕಲಿಸಿದರೆ ಮನಸ್ಸಿಗಾದ ಗಾಯ ಹೇಗೆ ಬದುಕಬೇಕೆಂದು ಕಲಿಸುತ್ತದೆ      ಕೆಲವು ಭಾವಪೂರ್ಣ ಸೂಕ್ತಿಗಳಂತೂ ನಮ್ಮ ಸಂಕಟದ  ಸಂದರ್ಭಗಳಲ್ಲಿ ಸಖಿಯಂತೆ ಸಾಂತ್ವನಗೊಳಿಸ ಬಲ್ಲವು   ಕೆಳಗಿನ ಸಾಲುಗಳನ್ನು ನೋಡಿ ” ನಿನಗಾದ ನೋವನ್ನು ಮರೆತುಬಿಡು ಆದರೆ ಅದರಿಂದ ಕಲಿತ  ಪಾಠವನ್ನು ಎಂದಿಗೂ ಮರೆಯಬೇಡ “ ನನಗೆ ನಾನೇ ಎನ್ನುವಂಥ ಉತ್ಕಟ ಕ್ಷಣಗಳಲ್ಲಿ ಏಕಾಂಗಿ ಯಾಗಿ ನಿಂತಿರುವಾಗ ಸ್ಪೂರ್ತಿದಾಯಕ ಉಲ್ಲೇಖಗಳು ನಮ್ಮ ಜೊತೆಯಾಗಿ ಕೈ ಹಿಡಿದು ನಡೆಸುತ್ತವೆ.  ಡಿ.ವಿ.ಜಿ. ಅವರ  ಈ ಸಾಲುಗಳು ಚೈತನ್ಯ ತುಂಬುವ ಪರಿಗೆ ನಾವು ಬೆರಗಾಗಲೇ ಬೇಕು. ” ಓರ್ವನೇ ನಿಲುವಿಗೆ ನೀನುತ್ಕಟ  ಕ್ಷಣಗಳಲಿ ಧರ್ಮಸಂಕಟಗಳಲಿ ಜೀವನ ಸಮರದಲಿ ನಿರ್ವಾಣ ದೀಕ್ಷೆಯಲಿ , ನಿರ್ಯಾಣ  ಘಟ್ಟದಲ್ಲಿ ನಿರ್ಮಿತ್ರನಾಗಿರಲು  ಕಲಿ  –  ಮಂಕುತಿಮ್ಮ ಇಂತಹ ಮಹಾಶಕ್ತಿ ಲೋಕೋಕ್ತಿಗಳಿಗಿರುವುದರಿಂದಲೇ ಸಹೃದಯಿಗಳ ಮನಗಳಲ್ಲಿ ನೆಲೆ ನಿಂತು ಆತ್ಮವಿಶ್ವಾಸ ತುಂಬಿ  ಸಾಧನೆಗೆ  ಮೌನವಾಗಿ ಪೂರಕವಾಗಿವೆ. ಇನ್ನು ಋಣಾತ್ಮಕ ಭಾವ ಸ್ಪುರಿಸುವ ಉಲ್ಲೇಖಗಳನ್ನು ಮರೆಯುವಂತಿಲ್ಲ. ವಿಷಾದ ಭಾವ ಆವರಿಸಿದ ಮನಕ್ಕೆ  ಕ್ಷಣ ಕಾಲವಾದರೂ ಸಮಾಧಾನ ಸಿಗಬಹುದು. ಖಿನ್ನತೆ ತುಂಬಿದ ಮನಗಳಿಗೆ ಹಿತವಾಗಿಯೆ ಕಂಡರೂ ಅವರನ್ನು ಮತ್ತಷ್ಟು ಖಿನ್ನತೆಗೆದೂಡುವಂಥ ಸಾಧ್ಯತೆಗಳನ್ನು ತಳ್ಳುವ ಹಾಗಿಲ್ಲ. ಸಮಸ್ಯೆಗಳು ಎದುರಾದಾಗ ಪಲಾಯನವಾದಿ ಮಾರ್ಗವನ್ನನುಸರಿಸದೆ ಅವುಗಳನ್ನು ಎದುರಿಸಿ ನಿಲ್ಲುವ ಆತ್ಮವಿಶ್ವಾಸವು ನಮ್ಮದಾಗಬೇಕು. ಈ ದಿಸೆಯಲ್ಲಿ ನಿಂತು ಯೋಚಿಸಿದಾಗ ಜೀವನೋತ್ಸಾಹ ತುಂಬುವ ಧನಾತ್ಮಕ ಸೂಕ್ತಿಗಳು ಅಥವಾ ಚಿಂತನೆಗಳು ಅತ್ಯವಶ್ಯಕ.ಇಂತಹ ಚಿಂತನೆಗಳು ನಮ್ಮನ್ನು ದ್ವೇಷದಿಂದ ವಿಮುಖರನ್ನಾಗಿಸಿ ಸಹಿಷ್ಣುತಾ ಮನೋಭಾವ ಬೆಳೆಸುತ್ತ ಸ್ವಾರ್ಥವೆನ್ನುವುದು ಕಡಿಮೆಯಾಗಿ ನಮ್ಮನ್ನು ಸಮಾಜ ಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಸಹೃದಯಿ ಮನದ ದೃಷ್ಟಿಕೋನವನ್ನು ಬೆಳೆಸುತ್ತವೆ. ಅಂತರ್ಮುಖಿ ವ್ಯಕ್ತಿಗಳಾಗಿ ಆತ್ಮಸಾಂಗತ್ಯ ಹೊಂದುತ್ತ ನಮ್ಮನ್ನು ನಾವು ಸ್ಟವಿಮರ್ಶೆ ಮಾಡಿಕೊಂಡಾಗ ಮಾತ್ರವೇ ನಮ್ಮೊಳಗಿನ  ಅರಿವಿನ ಪ್ರಣತಿ ಬೆಳಗುತ್ತದೆ. 

ಸುಭಾಷಿತಗಳ ಸ್ವಾರಸ್ಯ Read Post »

You cannot copy content of this page

Scroll to Top