ಅಸಹಾಯಕ
ಅಸಹಾಯಕತೆಯ-
ಪರಾಕಾಷ್ಟತೆಯಲ್ಲಿ
ಸಹಾಯಕ್ಕೆ……..!
ಗಜಲ್ ಜುಗಲ್ ಬಂದಿ ಇರುಳು ಮಲ್ಲೆ ಮಾಲೆ ಹಿಡಿದು ಅಮಲೇರಿಸಲು ಇದಾರು ಬಂದರುತುಂಟ ಕಣ್ಣಲಿ ಮಿಂಚಿನ ಕನಸು ತೋರಿಸಲು ಇದಾರು ಬಂದರು ವಾರದ ಪೇಟೆಯಲ್ಲಿ ಅಲೆಯುತಿರುವೆ ಕಳೆದ ಹೃದಯ ಹುಡುಕುತಾಸಂತೆಯಾ ಗದ್ದಲದಲಿ ಸಂಪಿಗೆ ಮುಡಿಸಲು ಇದಾರು ಬಂದರು ಹೃದಯ ವೀಣೆಯ ಮೀಟಿ ದೂರಾದ ವೈಣಿಕನಿಗೆ ಹಂಬಲಿಸಿದೆಮುರಿದ ಎದೆ ತಂಬೂರಿಗೆ ಶ್ರುತಿ ಸೇರಿಸಲು ಇದಾರು ಬಂದರು ನೆನಪಿನ ಮೊಗ್ಗುಗಳು ಬಿರಿದು ಏನೋ ಹೇಳಿ ಜಗವ ಮರೆಸಿದವುಮೆಲು ಹೆಜ್ಜೆ ಇಡುತ ನಯನ ಮುಚ್ಚಿ ಕಾಡಿಸಲು ಇದಾರು ಬಂದರು ಬದುಕ ಬಂಡಿ ಪಯಣ ರಣ ಬಿಸಿಲಿಗೆ ಬಾಯಾರಿ ದಣಿಯಿತು ಜೀವಬಳಲಿದ ಮೈ ಮನಕೆ ಅಧರ ಜೇನು ಕುಡಿಸಲು ಇದಾರು ಬಂದರು ಕ್ರೂರ ಕಾಲಚಕ್ರ ಸುಳಿಗೆ ಸಿಲುಕಿ ಬಾಳ ನೌಕೆ ಹೊಯ್ದಾಡಿತುಅನುರಾಗದ ಬದುಕಿನ ಒಳ ಗುಟ್ಟನು ತಿಳಿಸಲು ಇದಾರು ಬಂದರು ಶಶಿ ಇಲ್ಲದ ಏಕಾಂತದ ನಿಶೆ ಧಗೆಯಲಿ ಜೀವನವು ಸವೆಯಿತು“ಪ್ರಭೆ” ಯ ತುಟಿ ಅಂಚಿನಲಿ ನಗೆ ಹೂ ಅರಳಿಸಲು ಇದಾರು ಬಂದರು ************** ಪ್ರಭಾವತಿ ಎಸ್ ದೇಸಾಯಿ ಕಂಗಳಲಿ ಪ್ರೀತಿಯ ಬಟ್ಟಲಿದೆ ಕುಡಿಸಲು ಇದಾರು ಬಂದರುಬಾಹುಗಳಲಿ ಪ್ರೀತಿಯ ಜೋಗುಳ ಹಾಡಲು ಇದಾರು ಬಂದರು ಹುಡುಕಲೇನಿದೆ ಈ ಹೃದಯ ನಿನ್ನ ಎದೆಯಲ್ಲಿ ಮಿಲನವಾಗಿದೆಏಕಾಂತದಿ ಅಧರಕ್ಕೆ ಅಧರ ಸೇರಿಸಲು ಇದಾರು ಬಂದರು ದೂರಾಗುವ ಮಾತು ಕನಸಲ್ಲೂ ಕನವರಿಸದಿರು ಮುದ್ದು ಮರಿಆಲಿಂಗನದ ಬಿಸಿ ಅಂಟನ್ನು ಲೇಪಿಸಲು ಇದಾರು ಬಂದರು ಮರೆತವನಿಗೆ ನೆನಪುಗಳು ಊರುಗೋಲು ಆಗಬಲ್ಲವು ಗೆಳತಿಹೆಜ್ಜೆ ಮೇಲೆಜ್ಜೆಯಿಟು ಸಪ್ತಪದಿ ತುಳಿಯಲು ಇದಾರು ಬಂದರು ನಿನ್ನ ಸಾಂಗತ್ಯದಿ ದಣಿವೆನ್ನುವ ಭಾವ ಚಿರ ನಿದ್ರೆಯಲ್ಲಿದೆಮೈ ಸೋಕದೆ ಮನದಿ ಪ್ರೇಮರಸ ಬೆರೆಸಲು ಇದಾರು ಬಂದರು ಒಲವಿನ ದಡ ಸೇರದೆಯೆ ಸಂಸಾರ ನೌಕೆ ಮುಳಗದು ಬೇಗಂಸುಮೆಯ ಕಂಪನು ನನ್ನಯ ಬದುಕಲಿ ಹರಡಲು ಇದಾರು ಬಂದರು ಬನದ ತುಂಬೆಲ್ಲ ಅನುರಾಗದ ಮಣ್ಣಿದೆ ಮಲ್ಲಿಗೆಯ ಸಸಿ ನೆಡು‘ಮಲ್ಲಿ’ಯ ಬಾಳಿನ ಉಯ್ಯಾಲೆಯನು ತೂಗಲು ಇದಾರು ಬಂದರು ****** ರತ್ನರಾಯ ಮಲ್ಲ
You cannot copy content of this page