ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಯಾನ

ಇನ್ನಾದರೂ

Stunning Sculptures Of Women Inspired By Renaissance Art | Bored Panda

ಇಂದಿಲ್ಲವಾದರೆ ನಾಳೆ
ಈಗ ಆಗ ಆಮೇಲೆ ಹೀಗೆ
ಅಸಂಖ್ಯ ಹಗಲು ನಾನೇ ಬೇಯುತ ರಾತ್ರಿಗಳಲಿ ದೀಪ ಉರಿಸುತ ಕಾದಿದ್ದೇನೆ
ಕೇಳಲು ನಿನ್ನ ಮಾತುಗಳನು
ಜುಗ್ಗ ನೀನು ಈ ವಿಷಯದಲಿ ಮತ್ತು ನಿನ್ನಂತಹ ಎಲ್ಲರೂ

ಇದೆ ಕಾರಣ
ಅವ್ವ ಸೆಟಗೊಂಡು ಅಪ್ಪನೊಂದಿಗೆ ಬಂದು ನನ್ನ ಪಕ್ಕ ಮಲಗಿದ ಅದೆಷ್ಟೊ ರಾತ್ರಿಗಳನ್ನು ಪ್ರಶ್ನಿಸುತ್ತ ಬೆಳೆದವಳು ನಾ

ಮೊನ್ನೆ ವನಿತೆ
ಊರ ಹೊರಗಿನ ನಡುರಸ್ತೆಯಲಿ ಬಿಟ್ಟು ತನ್ನವನನು
ಒಂಟಿಯಾಗಿ ನಡೆದು ಮನಸೇರಿ ಕ್ರಮಿಸಿದ್ದು ಸಮೀಪದ ಹಾದಿಯನ್ನಲ್ಲ

ಹೀಗೆಯೇ ನಾವು
ಇಷ್ಟಪಡುವುದಿಲ್ಲ ಇಂಥವರನ್ನು

ಒಂದೇ ಗುಟುಕಿಗೆ ಚರಿಗೆ ನೀರು ಕುಡಿದಂತೆ
ನಿಮ್ಮೆದೆಯ ಭಾವವನೆಲ್ಲಾ ನಮ್ಮೆದೆಗಿಳಿಸಿ ಬಿಡುವುದನ್ನು ಕಣ್ಣರೆಪ್ಪೆಯಲಿ ತೂಗಾಡಿಸಿಕೊಂಡು ಹಾಡುವ ಜೋಗುಳಗಳ ತಲೆಮಾರಿಗೂ ದಾಟಿಸುತ್ತೇವೆ
ನಿಮ್ಮ ಕೈಬೆರಳು ತುಟಿಯ ಸೀಳು
ಒರಟು ಗಲ್ಲ ಬಿರುಸು ಪಾದಗಳೊಡನೆ
ಹಾಂ ಹುಂ ಹೋ… ಗೆಳತಿ ಮುಗಿಸುವ ಮಾತು
ನಿನ್ನೆ ಇಂದು ನಾಳೆಗೆ
ಯಾವತ್ತೂ ನಮಗೆ ಮುದುವೆನಿಸುವುದಿಲ್ಲ

ಇನ್ನಾದರೂ
ಮುಖಕ್ಕೆ ಮುಖಕೊಟ್ಟು
ಕಣ್ಣಲ್ಲಿ ಕಣ್ಣು ನೆಟ್ಟು ಮಾತಾಡುತ್ತಲಿರಿ
ಹಗಲ ಬೆಳಕಿನಂತೆ

                          ------------------------------------

About The Author

7 thoughts on “ನಿರ್ಮಲಾ ಶೆಟ್ಟರ ಹೊಸ ಕವಿತೆ”

Leave a Reply

You cannot copy content of this page

Scroll to Top