ಹಣ್ಣು ಮಾರುವ ಹುಡುಗಿ ಮತ್ತು ನಾನು
ಹಣ್ಣು ಮಾರುವ ಹುಡುಗಿ
ಮೊನ್ನೆಯಿಂದ ಕಾಣುತ್ತಿಲ್ಲ..!!
ಹುಡುಕಾಡಿದೆ ತಡಕಾಡಿದೆ
ಹಮಾಲಿ ಬಾಬಾನನ್ನು ಕೇಳಿದೆ.
ಹಣ್ಣು ಮಾರುವ ಹುಡುಗಿ ಮತ್ತು ನಾನು Read Post »
ಹಣ್ಣು ಮಾರುವ ಹುಡುಗಿ
ಮೊನ್ನೆಯಿಂದ ಕಾಣುತ್ತಿಲ್ಲ..!!
ಹುಡುಕಾಡಿದೆ ತಡಕಾಡಿದೆ
ಹಮಾಲಿ ಬಾಬಾನನ್ನು ಕೇಳಿದೆ.
ಹಣ್ಣು ಮಾರುವ ಹುಡುಗಿ ಮತ್ತು ನಾನು Read Post »
ಕನ್ನಡ ಸಾಹಿತ್ಯವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವಲ್ಲಿ ಹಾಗೂ ಓದುಗರ ಸಂಖ್ಯೆಯನ್ನು ಹೆಚ್ಚಿಸುವ ಕಾರ್ಯವನ್ನು ಅಂತರಜಾಲ ಪತ್ರಿಕೆಗಳು ಮಾಡುತ್ತಿವೆ. ಅಲ್ಲದೇ ಅನೇಕ ಪರಿಚಯವೇ ಇಲ್ಲದ ಸಾಹಿತಿಗಳನ್ನು ಅವರ ಕೃತಿಗಳ ಮೂಲಕ ವಿಶ್ವದಾದ್ಯಂತ ವ್ಯಾಪಿಸಿರುವ ಕನ್ನಡಿಗರಿಗೆ ಗುರುತಿಸುವ ಕಾರ್ಯ ಈ ಅಂತರ್ಜಾಲ ಪತ್ರಿಕೆ ಮಾಡುತ್ತಿದ್ದು, ಕನ್ನಡ ಸಾಹಿತ್ಯವನ್ನು ಆಳವಾಗಿ ಅರಿಯಲು ನೆರವಾಗುತ್ತಿದೆ.
ಕನ್ನಡ ಸಾಹಿತ್ಯದಲ್ಲಿ ಅಂತರ್ಜಾಲ ಪತ್ರಿಕೆಗಳ ಪಾತ್ರ Read Post »
ಅಂಕಣ ಬರಹ ತೊರೆಯ ಹರಿವು ‘ವ್ಯಾಕುಲತೆಯವ್ಯವಕಲನ’ ಆ ಕರು,‘ಅಂಬಾ…’ ಎಂದುಹೊಟ್ಟೆಯಿಂದರಾಗಕಡೆಸಿಮುಖತುಸುಮೇಲೆತ್ತಿಕೂಗುತ್ತಿದ್ದರೆ, ಅದುಮಾಮೂಲಿಕೂಗಿನಂತೆಕೇಳಲಿಲ್ಲ. ಅಡ್ಡರಸ್ತೆನಡುರಸ್ತೆಗಳಲ್ಲಿಗಾಬರಿಬಿದ್ದು, ಬೀದಿನಾಯಿಹಿಂಡಿನಬೊಗಳುವಿಕೆಗೆಬೆದರಿ, ಕಂಗಾಲಾಗಿಓಡುತ್ತಾ, ದೈನೇಸಿತನದಿಂದಕೂಗಿಡುತ್ತಿದ್ದರೆ, ಹೃದಯವಂತರುನಿಂತುನೋಡಿಕರಗುತ್ತಿದ್ದರು. ಜೊತೆಯಿದ್ದಮಕ್ಕಳು, ಕೈಗಟ್ಟಿಹಿಡಿದುಕೊಂಡುಅವರಮನದಅವ್ಯಕ್ತಭಯ-ವೇದನೆಯನ್ನುನನಗೆವರ್ಗಾಯಿಸಿದರು.ಸಂಜೆಸರಿದು, ಇರುಳುನಿಧಾನಕಾಲಿಡುತ್ತಿತ್ತು.ಕಚೇರಿಹಾಗೂಇತರೆಕೆಲಸಮುಗಿಸಿಮನೆಗೆಮರಳುತ್ತಿದ್ದುದರಿಂದಜನರಹಾಗೂವಾಹನಗಳಓಡಾಟತುಸುಜಾಸ್ತಿಯೇಇತ್ತು.ಪದೇಪದೇ‘ಅಂಬಾಅಂಬಾ…’ಎಂದುಕೂಗುತ್ತಿದ್ದಅತ್ತಕರುವೂಅಲ್ಲದಇತ್ತಬೆಳೆದುದೊಡ್ಡದಾಗಿರುವಹಸುವೂಅಲ್ಲದಆಕಳು ತನ್ನಗುಂಪಿನಸಂಪರ್ಕವನ್ನುಎಲ್ಲಿ,ಹೇಗೆಕಳೆದುಕೊಂಡಿತ್ತೋಏನೋಬಹಳಆತಂಕಪಡುತ್ತಾನೋಡುಗರನ್ನುಕಂಗೆಡಿಸಿತ್ತು. ಎಷ್ಟುಕಳವಳವಾಗುತ್ತದೆಏನನ್ನಾದರೂಕಳೆದುಕೊಂಡರೆ! ತುಂಬಾಪ್ರೀತಿಪಾತ್ರವಕ್ತಿ, ವಸ್ತುಗಳನ್ನುಕಳೆದುಕೊಂಡರೆಆಗುವಸಂಕಟವನ್ನುಬಣ್ಣಿಸುವಬಗೆತಿಳಿಯುವುದಿಲ್ಲ. ‘ಅರವತ್ತಕ್ಕೆಅರಳುಮರಳು’ಎನ್ನುವುದುಒಂದುರೂಢಿ.ವಯಸ್ಸುದಾಟಿದಂತೆ,ಸ್ಮೃತಿಕಳೆದುಕೊಳ್ಳುವುದುʼವಯೋಸಹಜಕಾಯಿಲೆʼಎನ್ನುವವೈದ್ಯವಿಜ್ಞಾನಈಗೀಗಹರೆಯದವರಲ್ಲಿಯೂನೆನಪಿನಶಕ್ತಿಕ್ಷೀಣಿಸುತ್ತಿರುವಬಗ್ಗೆಕಳವಳವ್ಯಕ್ತಪಡಿಸುತ್ತದೆ..ಆದರೆ, ಅಧಿಕಒತ್ತಡ, ಅಸಮತೋಲನದಆಹಾರ, ಯಂತ್ರೋಪಕರಣಗಳಮೇಲಿನಅತಿಯಾದಅವಲಂಬನೆ,ಪದೇಪದೇಬದಲಾಗುವದೈನಂದಿನರೂಢಿಗಳು, ನಿದ್ರಾಹೀನತೆಮೊದಲಾದವುಯುವಜನಾಂಗದಚುರುಕುನೆನಪನ್ನೂಮಾಸಲುಮಾಡುತ್ತವೆಏಕೆಎಂದುಸಂಶೋಧನೆಗಳುಚರ್ಚಿಸುತ್ತವೆ.ಅಲ್ಜೈಮರ್ಎನ್ನುವಮರೆವಿನ ಈ ಕಾಯಿಲೆಯುಯಾವರೀತಿಆಘಾತಗಳನ್ನುತರುತ್ತವೆನ್ನುವುದನ್ನೂಅಷ್ಟುಸುಲಭವಾಗಿಮರೆಯುವಂತಿಲ್ಲ. ಕೆಲವುಬಾರಿಕಹಿನೆನಪನ್ನುಕಳೆದುಕೊಳ್ಳುವುದುತುಂಬಾಸಹಕಾರಿ.ʼಸವಿನೆನಪುಗಳುಬೇಕು, ಸವೆಯಲೀಬದುಕು..ʼ, ಮರೆವುಅಥವಾಕಳೆದುಕೊಳ್ಳುವುದುಕೆಲವೊಮ್ಮೆವರದಾನವೂಹೌದು.ತೀರಾಬುದ್ಧಿವಂತರುಜಾಣಮರೆವಿನಮೊರೆಹೊಕ್ಕುಹಲವುಬಾಧೆಗಳನ್ನುಸುಲಭವಾಗಿಕಳೆದುಕೊಳ್ಳುತ್ತಾರೆ. ಬಾಲ್ಯದಲ್ಲಿಕಳೆದುಕೊಳ್ಳುವುದುಒಂದುರೀತಿಅಭ್ಯಾಸವೇಆಗಿಬಿಟ್ಟರುತ್ತದೆ.‘ಸ್ಲೇಟುಬಳಪಪಿಡಿದೊಂದ್ದಗ್ಗಳಿಕೆ’ (ಕುಮಾರವ್ಯಾಸನದ್ದುಹಲಗೆಬಳಪವಪಿಡಿಯದೊಂದ್ದಗಳಿಕೆ)ಯಕಾಲಮಾನದವರಾದನಾವುಮನೆಪಾಠಬರೆಯಲಾಗದೆ, ಉರುಹೊಡೆದುಪಾಠ/ಪದ್ಯಒಪ್ಪಿಸಲಾರದೆ, ಮೇಷ್ಟ್ರುಕೈಯಿಂದಬೀಳುವಏಟುತಪ್ಪಿಸಿಕೊಳ್ಳಲುಬೇಕಂತಲೇಬಳಪ, ಸ್ಲೇಟು, ಪುಸ್ತಕಗಳನ್ನುಕಳೆದುಕೊಳ್ಳುತ್ತಿದ್ದಅತೀಬುದ್ಧಿವಂತರು!ಸದಾಆಟದಮೇಲೆಗಮನಇಟ್ಟುಎಲ್ಲಿಬಿಟ್ಟಿದ್ದೆವೆಂಬುದನ್ನೇಮರೆತುಆಗಾಗ್ಗೆಹೊಚ್ಚಾನಹೊಸಚಪ್ಪಲಿಕಳೆದುಕೊಳ್ಳುವುದು, ಅಂಗಡಿಯಿಂದಪದಾರ್ಥತರಲುಕೊಟ್ಟಕಾಸನ್ನುಕಳೆದುಕೊಳ್ಳುವುದು, ಅಮ್ಮ, ಅಪ್ಪ, ಅಕ್ಕ, ಅಣ್ಣಹೀಗೆಯಾರೋಹೇಳಿಕಳಿಸಿದ್ದಸಂದೇಶವನ್ನುಯಥಾಪ್ರಕಾರಆಟದನೆಪದಲ್ಲಿಮರೆತುನೆನಪುಕಳೆದುಕೊಂಡದ್ದು… ಹೀಗೆ, ಒಂದೇಎರಡೇ!? ಆದರೆ, ಆನ್‌ಲೈನ್ ಪಾಠಕಲಿಯುವಈಗಿನಮಕ್ಕಳು, ಈಮೇಲ್ ನೋಟ್ಕಳೆದುಹೋಯ್ತೆಂದುನಾಟಕಆಡುವಂತಿಲ್ಲ. ಏಕೆಂದರೆ,ಕಳೆದುದುರೀಸೈಕಲ್ ಬಿನ್ನಲ್ಲಿಕುಳಿತುಕಣ್ಣುಮಿಟುಕಿಸುತ್ತಿರುತ್ತದೆ. ವರ್ಷಂಪ್ರತಿಸಾವಿರಾರುಮೈಲುದೂರದಿಂದಹಾರಿಬರುವಆಲ್ ಬಟ್ರಾಸ್ಎಂಬಕಡಲಹಕ್ಕಿಗಳುತಮ್ಮಹಾದಿಜಾಡನ್ನೆಂದೂಕಳೆದುಕೊಳ್ಳುವುದಿಲ್ಲ. ನಿಖರಗುರಿನಿರ್ದಿಷ್ಟಉದ್ದೇಶಇದ್ದಾಗಯಾರೇಆಗಲಿ, ಯಾವುದನ್ನೇಆಗಲಿಕಳೆದುಕೊಳ್ಳುವುದುಅಷ್ಟುಸುಲಭವಲ್ಲ.ಕೆಲವೊಮ್ಮೆವಸ್ತುಗಳನ್ನುಮಾತ್ರವಲ್ಲ, ಸಂಬಂಧವನ್ನೂಕಳೆದುಕೊಂಡುಬಿಡುತ್ತೇವೆ. ಹಾಗೆಕಳೆದುಕೊಂಡಸಂಬಂಧಪುನಃಸಿಗುವುದುಒಂದುಸುಕೃತ. ದಕ್ಕಿದಸಂಬಂಧ,ಹಿಂದಿನಬಿಸುಪನ್ನುಹಾಗೆೇಉಳಿಸಿಕೊಂಡು, ಎದೆಯಲ್ಲಿಆರ್ದ್ರತೆತಂದುಕೊಟ್ಟರೆ, ಅದುನಿಜವಾದಬಾಂಧವ್ಯಎನಿಸುತ್ತದೆ.ಆತ್ಮಬಂಧುವನ್ನುಮರಳಿಪಡೆದನೆಮ್ಮದಿದಕ್ಕಿಸಿಕೊಂಡವರದ್ದಾಗುತ್ತದೆ. ಕೃಷ್ಣನನ್ನುಬೆಣ್ಣೆಕಳ್ಳಎನ್ನುವಮೂಲಕನಾವುಆತನಕಳ್ಳತನವನ್ನುಸಂಭ್ರಮಿಸುತ್ತೇವೆ! ಆದರೆ,ಈಸಂಭ್ರಮವನ್ನುಇತರೆ ಕಳ್ಳರವಿಚಾರದಲ್ಲೂತೋರುತ್ತೇವೆಯಾ?ಕಳವಿನವಿಚಾರದಲ್ಲಿನಾವೇಏನನ್ನಾದರೂಕಳೆದುಕೊಳ್ಳುವುದಕ್ಕೂಬೇರೆಯವರುಕಳುವುಮಾಡುವುದಕ್ಕೂತುಂಬಾವ್ಯತ್ಯಾಸವಿದೆ.ಮೊದಲಸಂದರ್ಭದಲ್ಲಿನಮ್ಮಬೇಜವಾಬ್ದಾರಿತನಇದ್ದರೆ, ಎರಡನೆಯದರಲ್ಲಿಎದುರಿನವರಕೈಚಳಕ, ಚಾಣಾಕ್ಷತೆಮಿಗಿಲಾಗಿರುತ್ತದೆ.ಕಳವುಗೊಂಡಮಾಲುಸಮೇತಸಿಕ್ಕಿಬಿದ್ದರೆಕದ್ದಮಾಲುಹಿಂದಿರುಗಿಸುವಜೊತೆಗೆಅಗತ್ಯಶಿಕ್ಷೆಯನ್ನೂಅನುಭವಿಸಬೇಕಾದುದುಕಳ್ಳರಹಣೆಬರಹ. ಸಾಮಾನ್ಯವಾಗಿಮಕ್ಕಳನ್ನುಮುದ್ದಿನಿಂದ, ಲಿಂಗಬೇಧಮಾಡದೆ, ‘ಛೀಕಳ್ಳಾ.., ಛೀಕಳ್ಳೀ…’ಎನ್ನುವುದುರೂಢಿ.ಪಾಪ, ಆಮುಗ್ಧಶಿಶುಏನುಕದ್ದಿರುತ್ತದೆ! ಅದಕ್ಕೇನುತಿಳಿಯುತ್ತದೆ?ಎಂಬವಾದಕ್ಕೆಇಲ್ಲಿಎಡೆಯೇಇಲ್ಲ. ಅದುತನ್ನಅಪಾರಮುಗ್ಧಆಟಪಾಟಗಳಿಂದನೋಡುಗರನೋಟ, ಚಿತ್ತ, ಸಮಯವನ್ನುಸದ್ದುಗದ್ದಲವಿಲ್ಲದೇಕದ್ದು, ಮುದ್ದುಮಾಡಿಸಿಕೊಂಡು, ಪ್ರೀತಿಯಿಂದಕಳ್ಳಎಂಬಪಟ್ಟವನ್ನುಹೊತ್ತಿರುತ್ತದೆ. ಗುಂಪಿನಸಂಪರ್ಕಕಳೆದುಕೊಂಡುಹಿಂಡನಗಲಿದ್ದಆಕಳಿನಕೂಗಿನರೂಪದಲ್ಲಿ ಮಾರ್ದನಿಸಿದʼಕಳುವುʼಎಂಬವಿಚಾರನನ್ನೆದೆಯಲ್ಲಿಹಲವುವಿಚಾರಗಳನ್ನುಹೀಗೆಸಂಕಲಿಸಿತು.ಓಡಿಬಂದುಕೊರಳುತಬ್ಬುತ್ತಿದ್ದಮಕ್ಕಳುಬಹಳದಿನ ಆ ಕರುವನ್ನುನೆನಪಿಗೆತರುತ್ತಿದ್ದರು.ಅಚಾನಕ್ ಸಂಪರ್ಕಕಳೆದುಕೊಂಡಆಕಳಿನಅಸಹಾಯಕಬಂಧುಗಳುಬೇರೆಹಾದಿಯಲ್ಲೆಲ್ಲೋಪರಿತಪಿಸಿ, “ತಬ್ಬಲಿಯುನೀನಾದೆಯಾ…”ಎಂದುಚಡಪಡಿಸುವುದುನೆನಪುಕಳವಳಹುಟ್ಟಿಸುತ್ತಿತ್ತು.ಗಣಿತದಮೂಲಭೂತಪಾಠಗಳಾದಸಂಕಲನ, ವ್ಯವಕಲನ, ಗುಣಾಕಾರ, ಭಾಗಾಕಾರಗಳಲ್ಲಿವ್ಯವಕಲನಎಂದರೆ, ಕಳೆಯುವಲೆಕ್ಕವುಮುಂದೆಬದುಕಿನಲೆಕ್ಕಾಚಾರಗಳಲ್ಲಿಎಷ್ಟುಬಗೆಗಳಲ್ಲಿಕಾಡಬಹುದುಎಂಬುದುಬಾಲ್ಯದಲ್ಲಿಎಳ್ಳಷ್ಟೂಅರ್ಥವಾಗಿರಲಿಲ್ಲ. ಒಂದೆರಡುವಾರಕಳೆದಿತ್ತು, ಮನೆಯಮುಂದೆಗುಂಪಿನಲ್ಲಿಸಾಗುತ್ತಿರುವಹತ್ತಾರುಹಸುಗಳನಡುವಲ್ಲಿಮಕ್ಕಳುಅಂದಿನಕರುವನ್ನುಗುರುತಿಸಿತೋರಿದಾಗ, ನಾನೊಮ್ಮೆಹಗುರಾದೆ. ಅಂದುನಿಜವಾದಶುಭಸಂಜೆ.ವ್ಯಾಕುಲತೆತುಂಬಿದ್ದವ್ಯವಕಲನಹರ್ಷದಸಂಕಲನವಾಗಿತ್ತು. – ವಸುಂಧರಾಕದಲೂರು. ೨೦೦೪ ರ ಬ್ಯಾಚಿನ ಕೆ. ಎ. ಎಸ್. ಅಧಿಕಾರಿಯಾಗಿ ಆಯ್ಕೆಯಾಗಿ, ಕೃಷಿ ಮಾರಾಟ ಇಲಾಖೆಯಲ್ಲಿ ಸಹಾಯಕ ಹಾಗೂ ಉಪ ನಿರ್ದೇಶಕರು ಆಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಪ್ರವಾಸೋದ್ಯಮ ಇಲಾಖೆಯಲ್ಲಿ ಜಂಟಿ ನಿರ್ದೇಶಕರಾಗಿ ಆಡಳಿತ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುತ್ತಾರೆಓದು ಬರವಣಿಗೆ ಪರಮಾಪ್ತ ಹವ್ಯಾಸಗಳು. ೧. ‘ಮರೆತು ಬಿಟ್ಟದ್ದು’ ಮೊದಲ ಕವನ ಸಂಕಲನ.೨. ‘ ಕನ್ನಡ ಕವಿಕಾವ್ಯ ಕುಸುಮ-೪೦’ ಸರಣಿಯಲ್ಲಿ ಹಿರಿಯ ಕವಿಗಳೊಡನೆ ನನ್ನ ಹೆಲವು ಕವನಗಳು ಪ್ರಕಟವಾಗಿವೆ. ಕಥಾ ಸಂಕಲನ ಹಾಗೂ ಕವನ ಸಂಕಲನ ಹೊರತರುವ ಪ್ರಯತ್ನದಲ್ಲಿದ್ದಾರೆ
ವಾರ್ಷಿಕ ವಿಶೇಷ-2021 ಕನ್ನಡ ಸಾಹಿತ್ಯ ಮತ್ತು ಧರ್ಮ ಶಾಂತಲಾ ಮಧು ಕನ್ನಡದ ಮೊದಲ ಗ್ರಂಥವೆಂದು ಒಪ್ಪಿಕೊಳ್ಳಲಾದ `ಕವಿರಾಜಮಾರ್ಗ’ದಲ್ಲಿ `ಕಸವರವೆಂಬುದು ನೆರೆ ಸೈರಿಸಲಾರ್ಪೊಡೆ ಪರ ವಿಚಾರಮುಮಂ ಪರಧರ್ಮಮುಮಂ’ ಎಂಬ ಚಿನ್ನದಂತಹ ಮಾತೊಂದಿದೆ. ಈ ಮಾತಿನ ಅರ್ಥ `ನಿಜವಾದ ಐಶ್ವರ್ಯ (ಕಸವರ) ಪರವಿಚಾರಗಳನ್ನು ಧರ್ಮಗಳನ್ನು ಸಹಿಸುವುದೇ ಆಗಿದೆ’ ಎನ್ನುವುದು. `ಅನ್ಯರ ವಿಚಾರಗಳನ್ನು ಧರ್ಮಗಳನ್ನು ಸಹಿಸುವುದೇ ನಿಜವಾದ ಸಂಪತ್ತು’ ಎನ್ನುವ ಈ ಸೂಕ್ತಿ ಕನ್ನಡನಾಡು ಧರ್ಮಗಳ ವಿಚಾರಗಳಲ್ಲಿ ಉದ್ದಕ್ಕೂ ತಾಳಿದ ನಿಲುವಿಗೆ ಬರೆದ ಒಂದು ವ್ಯಾಖ್ಯಾನದಂತಿದೆ, ಕರ್ನಾಟಕದ ಸಂಸ್ಕೃತಿಯ ವೈಶಿಷ್ಟ್ಯವೆಂದರೆ ಅದರ ಧರ್ಮ ಸಹಿಷ್ಣುತೆ. ಕನ್ನಡ ನಾಡು ಅನೇಕ ಧರ್ಮಗಳಿಗೆ ನೆಲೆಯಾದದ್ದಲ್ಲದೆ ಎಲ್ಲ ಧರ್ಮಗಳು ಜೊತೆಗೂಡಿ ವರ್ಧಿಸಲು ಅವಕಾಶ ಕಲ್ಪಿಸಿಕೊಡುತ್ತಾ ಬಂದಿರುವುದೇ. ಕರ್ನಾಟಕದಲ್ಲಿ ಪ್ರವರ್ಧಮಾನವಾದ ಮುಖ್ಯ ಧರ್ಮಗಳು ಜೈನ, ವೀರಶೈವ ಮತ್ತು ವೈಷ್ಣವ. ಕವಿ ಮತ್ತು ಕಾಲ ಪರಸ್ಪರ ಪೋಷಿತ ಮತ್ತು ಪೂರಕ, ಕಾಲದಿಂದ ತಾನೇನು ಪಡೆಯುತ್ತಾನೋ ಅದನ್ನು ಪರಿಷ್ಕರಿಸಿ, ವಿಸ್ತರಿಸಿ ಮಾರ್ಪಡಿಸಿ ಅಲಂಕರಿಸಿ ಕಾಲಕ್ಕೆ ಹಿಂದಿರುಗಿಸುತ್ತಾನೆ ಕವಿ, ಮಹಾಕವಿ ಕಾಲಕ್ಕೆ ಕೊಡುವುದೇ ಹೆಚ್ಚಾಗಿರುತ್ತದೆ. ಅಂತಹ ಕವಿಯ ಮೂಲಕ ಋತು ಶಕ್ತಿ ಕವಿ ಕೃತು ಶಕ್ತಿಯಾಗಿ ಸಮಾಜಕ್ಕೆ ಸಂಜೀವಿನಿಯಾಗುತ್ತದೆ. ಕವಿಗಳ ಕಾವ್ಯ ರಚನೆಯಲ್ಲಿ ಹಲವು ಮೂಲ ಪ್ರೇರಣೆಯನ್ನು ಗಮನಿಸಬಹುದು. ೧. ಕವಿ ಹುಟ್ಟಿ ಬೆಳೆದ ಪರಿಸರ. ಕವಿ ಶ್ರದ್ಧೆಯಿಂದ ಒಪ್ಪಿಕೊಂಡ ಪ್ರಮುಖವಾದ ಮತ-ಧರ್ಮ ನಂಬಿಕೆಗಳು. ೨. ಕವಿಗಳಿಗೆ ಜೀವನದುದ್ದಕ್ಕೂ ಆಶ್ರಿತ ಹಾಗೂ ಪ್ರೋತ್ಸಾಹ ಒದಗಿಸಿದ ರಾಜನ ಆಸ್ಥಾನಗಳು ಮತ್ತು ಕೃತಿಯ ವಸ್ತು ಹಾಗೂ ಭಾಷೆ ಮೇಲೆ ಪ್ರಬಲ ಪ್ರಭಾವವನ್ನು ಬೀರುತ್ತಾ ಬಂದ ಸಂಸ್ಕೃತ ಸಾಹಿತ್ಯ ಪರಂಪರೆ. ಇವು ಒಂದು ರೀತಿಯಲ್ಲಿ ಪ್ರೇರಣೆ ಮತ್ತೊಂದು ರೀತಿಯಲ್ಲಿ ಕವಿಗೆ ಆತಂಕ, ಸವಾಲು ಆಗಿರುವುದು ಮರೆಯುವಂತಿಲ್ಲ. ಧರ್ಮವೇ ಜೀವದ ಉಸಿರೆಂದು ಹೇಳಿಸಿಕೊಂಡು ಬಂದ ಭಾರತದಲ್ಲಿ ಎಲ್ಲಾ ಕಾವ್ಯ-ಕಲೆಗಳ ಮೂಲ ಸ್ಫೂರ್ತಿಯೇ ಧರ್ಮವಾಗಿದೆ. ಇದು ಕನ್ನಡ ಸಾಹಿತ್ಯಕ್ಕೂ ಯಥಾವತ್ತಾಗಿ ಅನ್ವಯಿಸುತ್ತದೆ. ಇಲ್ಲಿ ಧರ್ಮ ಎಂಬ ಮಾತು `ಮತ ಧರ್ಮ’ ಎನ್ನುವ ಅರ್ಥದಲ್ಲಿ ಇದೆ. ಹಾಗೆ ಮುಂಬರುವ ಕಾಲದಲ್ಲಿ ಮಾನವೀಯ ಧರ್ಮದ ಹೆಚ್ಚುಗಾರಿಕೆಯೂ ಕಾಣುತ್ತದೆ. ಮುಂಬರುವ ಸಾಹಿತ್ಯದ ಪ್ರಕಾರಗಳಲ್ಲಿ ಈ ಮಾನವೀಯ ಧರ್ಮದ ಹುಡುಕಾಟ ಬರಹದಲ್ಲಿ ಹೆಚ್ಚು ಸ್ವಾತಂತ್ರ ಮನೋಭಾವ ಅಂದರೆ ಮನಬಿಚ್ಚಿ ಹೇಳುವಿಕೆ ಕಾಣುತ್ತಿರುವುದು ಸಂತೋಷದಾಯಕ ಸಂಗತಿಯಾಗಿದೆ. ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ೧೦ನೇ ಶತಮಾನ ಸುವರ್ಣ ಯುಗ ಎನ್ನಿಸಿಕೊಂಡಿದೆ. ಇಲ್ಲಿ ಮಹಾಕವಿಗಳಾದ ಪಂಪ, ಪೊನ್ನ, ರನ್ನರನ್ನು ನೆನಪಿಸಿಕೊಳ್ಳಬಹುದು. ಇವರುಗಳು ಕ್ರಮವಾಗಿ (ಪಂಪ) ಆದಿಪುರಾಣ, (ಪೊನ್ನ) – ಶಾಂತಿಪುರಾಣ, ರನ್ನ – ಅಜಿತನಾಥ ಪುರಾಣ ಎಂಬ ಧಾರ್ಮಿಕ ಕಾವ್ಯ ಹಾಗೆ (ಪಂಪ) ವಿಕ್ರಮಾರ್ಜುನ ವಿಜಯ, (ಪೊನ್ನ) ಭುವನೈಕ ರಾಮಾಭ್ಯುದಯ (ದೊರೆತಿಲ್ಲ) ಸಾಹಸಭೀಮವಿಜಯ (ರನ್ನ) ಎಂಬ ಲೌಕಿಕ ಕಾವ್ಯಗಳನ್ನು ಬರೆದರು. ಈ ಎಲ್ಲಾ ಕವಿಗಳು ಧಾರ್ಮಿಕ ಮತ್ತು ಲೌಕಿಕ ಕಾವ್ಯ ಬರೆದರೂ ಅಂದಿನ ಓದುಗರು ತೋರಿದ ಪ್ರತಿಕ್ರಿಯೆಯನ್ನು ಗಮನಿಸಿದರೆ ಧರ್ಮದ ಪ್ರಭಾವವೇ ಎತ್ತಿ ಹಿಡಿಯುತ್ತದೆ. ಲೌಕಿಕ ಕಾವ್ಯ ಪ್ರತಿಯನ್ನು ಉಳಿಸಿಕೊಳ್ಳುವಲ್ಲಿ ಉದಾಸೀನರಾಗಿದ್ದರು ಅನ್ನಿಸುತ್ತದೆ. ಈಗ ದೊರಕಿರುವ ಪ್ರತಿಗಳನ್ನು ನೋಡಿದರೆ ಉದಾ: ಪಂಪರ ವಿಕ್ರಮಾರ್ಜುನ ವಿಜಯ ಪ್ರತಿ ಸಿಕ್ಕಿರುವುದು ಮೂರು ರನ್ನನ ಗದಾಯುದ್ಧದ ಪ್ರತಿ ಕೇವಲ ಒಂದು ಒಂದೂವರೆ ಅದರೆ ಆದಿಪುರಾಣ, ಅಜಿತಪುರಾಣಗಳು ಸಾಕಷ್ಟು ದೊರಕಿದೆ. ಕವಿಯಾದವನು ಮೊಟ್ಟ ಮೊದಲಿಗೆ ತನ್ನ ಧರ್ಮಕ್ಕೆ ಕಾವ್ಯಮುಖೇನ ಅಭಿವ್ಯಕ್ತಿ ಕೊಡದೆ ಇದ್ದಾಗ ಆತನ ಕಾವ್ಯ ತಿರಸ್ಕೃತವಾದುದು ಇದೆ. ಇದಕ್ಕೆ ಉತ್ತಮ ಕಥೆಯ ಉದಾ: ಹರಿಹರ, ತನ್ನ ಸೋದರಳಿಯನಾದ ರಾಘವಾಂಕನನ್ನು ಶಿಕ್ಷಿಸಿದ ಪರಿ. ಹನ್ನೆರಡನೆಯ ಶತಮಾನ ವೀರಶೈವ ಧರ್ಮದ ಉತ್ಕೃಷ್ಟ ಕಾಲ ವಾಚನಕಾರರ ಧಾರ್ಮಿಕ ಕ್ರಾಂತಿಯ ನಂತರ ಬಂದ ಕವಿ ಹರಿಹರ-ರಾಘವಾಂಕ, ಶಿವ ಕವಿಯಾದ ಹರಿಹರ ಶಿವನನ್ನು ಶಿವಶರಣರನ್ನು ಕುರಿತು ಕಾವ್ಯ ಬರೆಯಬೇಕೇ ಹೊರತು ಮನುಜರ ಮೇಲೆ, ಕನಿಷ್ಟರ ಮೇಲೆ ಕಾವ್ಯ ಬರೆಯಬಾರದು ಎಂಬ ಧೋರಣೆಯನ್ನು ಎತ್ತಿ ಹಿಡಿದವನು. ರಾಘವಾಂಕ ಮೊದಲ ಕಾವ್ಯ ಬರೆದದ್ದು ‘ಹರಿಶ್ಚಂದ್ರ ಕಾವ್ಯ’ ಹೊನ್ನ ಹರಿವಾಣದಲ್ಲಿ ಇಟ್ಟು ಗುರುವೂ-ಸೋದರಮಾವನೂ ಆದ ಹರಿಹರನಲ್ಲಿ ಹೋದಾಗ, ಶಿವಶರಣರ ಕಥೆ ಅಲ್ಲ ಎಂಬ ಕಾರಣದಿಂದ ಅದನ್ನು ತಿರಸ್ಕರಿಸಿ ಎಡಗಾಲಿಂದ ಒದ್ದು ಕಳಿಸಿದನೆಂದು ರಾಘವಾಂಕ ನೊಂದು ಮುಂದೆ `ಶೈವ ಕೃತಿ ಪಂಚಕ’, ಸಿದ್ದರಾಮಚರಿತೆ, ಸೋಮನಾಥ ಚರಿತೆ, ಶರಭ ಚರಿತ್ರೆ, ವೀರೇಶ ಚರಿತ್ರೆ, ಹರಿಹರ ಮಹತ್ವ’ ಎಂಬ ಐದು ಕಾವ್ಯ ರಚಿಸಿದ ಎಂಬುದು ಒಂದು ಉಲ್ಲೇಖ. ಇಷ್ಟರಮಟ್ಟಿಗೆ ಧರ್ಮದ ಮುಷ್ಟಿಯಲ್ಲಿ ಸಾಹಿತ್ಯ, ಸಿಕ್ಕಿಕೊಂಡಿತು. ಹಾಗೇ ಮುಂದುವರಿದು `ಭಾಗವತ ಸಂಪ್ರದಾಯದಲ್ಲೂ ಇದೆ ಕತೆಯಾಯಿತು ಧಾರ್ಮಿಕ ಸಾಹಿತ್ಯ, ಭಕ್ತಿ ಸಾಹಿತ್ಯ, ಅನುಭಾವ ಸಾಹಿತ್ಯ’ ಎಂದು ಈ ಸಾಹಿತ್ಯವನ್ನು ಸ್ಥೂಲವಾಗಿ ಗುರುತಿಸಲಾಯಿತು. ಭಕ್ತಿ ಸಾಹಿತ್ಯ ಮತ್ತು ಅನುಭಾವ ಸಾಹಿತ್ಯ ಬರೆದವರಿಗೆ ಕೇವಲ ಧರ್ಮಶ್ರದ್ಧೆ ಮಾತ್ರವಲ್ಲ ಒಂದು ಬಗೆಯ ಆಧ್ಯಾತ್ಮಿಕ ಶ್ರದ್ಧೆ- ವೈಯಕ್ತಿಕ ಸಾಧನೆಯು ಮುಖ್ಯವಾಗಿತ್ತು. ಇಲ್ಲಿ ಕವಿ ಒಬ್ಬ ಸಾಧಕ ಕೂಡ, ವಚನಕಾರರಾದ ಬಸವಣ್ಣ, ಅಕ್ಕಮಹಾದೇವಿ, ಹಾಗೇ ದಾಸಪರಂಪರೆಯ ಪುರಂದರ ದಾಸರು ಹಾಗು ಕನಕದಾಸರುಗಳನ್ನು ನೆನಪಿಸಿಕೊಳ್ಳಬಹುದು. ಶತಮಾನದ ಉದ್ದಕ್ಕೂ ಧರ್ಮದ ನಿಯಂತ್ರಣಕ್ಕೆ ಒಳಪಟ್ಟ ಕನ್ನಡ ಸಾಹಿತ್ಯ. ಅದರಿಂದ ಲಾಭ ಪಡೆಯಿತೊ ಅಥವ ನಷ್ಟ ಪಡೆಯಿತೊ ಎನ್ನುವುದು ಒಂದು ದೊಡ್ಡ ಪ್ರಬಂಧದ ವಸ್ತು. ಸಂಕ್ಷಿಪ್ತವಾಗಿ ಹೇಳುವುದಾದರೆ ಓದುವುದು ಕೇವಲ ಪುಣ್ಯ ಸಂಪಾದನೆಗೆ ಎಂಬ ನಂಬಿಕೆಯಿಂದ ವೈಚಾರಿಕತೆಯ ಬೆಳವಣಿಗೆಗೆ ಅವಕಾಶ ಕಡಿಮೆಯೇ ಆಯಿತು. ಅಭಿವ್ಯಕ್ತಿಗೆ ಅವಕಾಶವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಯಿತು. ಸುದೈವದಿಂದ ಆಧುನಿಕ ಸಾಹಿತ್ಯ ರಚನೆಯಲ್ಲಿ ಇಂದಿನ ಕವಿಗಳಿಗೆ ಹಿಂದಿನ ಕವಿಗಳಂತೆ ಮತ ಧರ್ಮ ನಿರ್ಬಂಧನೆ ಇಲ್ಲ. ಅಷ್ಟರಮಟ್ಟಿಗೆ ಇಂದಿನ ಸಾಹಿತ್ಯ ಸಾರ್ವತ್ರಿಕವಾಯಿತು ಎನ್ನಬಹುದು. ಮತ ಧರ್ಮದ ಸ್ಥಾನವನ್ನು ಇಂದು ವಿಜ್ಞಾನ ವೈಚಾರಿಕತೆ ಆಕ್ರಮಿಸಿತು. ಅಲ್ಲದೆ ರಾಮಕೃಷ್ಣ ಪರಮಹಂಸ, ವಿವೇಕಾನಂದ, ಗಾಂಧಿ, ಅರವಿಂದರಂಥ ಮಹಾವ್ಯಕ್ತಿಗಳ ವಿಚಾರಧಾರೆಯಿಂದ ಹೊಸ ಮಾನವೀಯ ಧರ್ಮವೊಂದು ರೂಪುಗೊಂಡು ಸೌಂದರ್ಯಪ್ರಿಯತೆ ಜೀವನಪ್ರೀತಿ, ವಿಶ್ವಪ್ರಜ್ಞೆ ಇವುಗಳು. ಕವಿಯ ಧರ್ಮಶ್ರದ್ಧೆಯಾಗುತ್ತಿರುವುದು ಸಾಹಿತ್ಯ ವೈವಿಧ್ಯತೆಗೂ ಮತ್ತು ವಿನೂತನತೆಗೂ ಕಾರಣವಾಗಿರುವುದು ಸಂತೋಷದಾಯಕ ಸಂಗತಿ.
ವಾರ್ಷಿಕ ವಿಶೇಷ-2021 Read Post »
ಭಾಷೆಯೊಂದು ತನ್ನ ಗರ್ಭದಲ್ಲಿ ಅಡಗಿಸಿಕೊಂಡ ಸಾಹಿತ್ಯ ವಿಚಾರಧಾರೆಗಳು ಸಾರ್ವಕಾಲಿಕವಾದವು. ಧರ್ಮಜಾತಿಗಳನ್ನು ಮೀರಿ ಸಾಹಿತ್ಯ ಚರಿತ್ರೆಯ ಕಾಲಾನುಕ್ರಮಣಿಕೆಯ ಭಾಗವಾಗಿಯೇ ಜೈನ,ಶೈವ, ವೈದಿಕ ಸಾಹಿತ್ಯವೂ ವೈವಿಧ್ಯಮಯವಾಗಿ ಛಂದಸ್ಸು ಅಲಂಕಾರಗಳೊಂದಿಗೆ ಅನೂಚಾನವಾಗಿ ಬಂದಿರುವುದು ಕನ್ನಡ ಸಾಹಿತ್ಯದ ಹೆಗ್ಗಳಿಕೆ.
ವಾರ್ಷಿಕ ವಿಶೇಷ-2021 Read Post »
ಈ ಅನೇಕ ಬಗೆಯ ಕವಿಗಳಿಗೆ, ಲೇಖಕರಿಗೆ, ಸಾಹಿತ್ಯ ಓದುಗರಿಗೆ ವೇದಿಕೆ ನೀಡಿದ್ದು ಈ ಅಂತರ್ಜಾಲದ ಪತ್ರಿಕೆಗಳು,ಸಮಾನ ಆಸಕ್ತ ಸಮುದಾಯಗಳ ಬ್ಲಾಗ್ಗಳು, ಇ- ವೃತ್ತ ಪತ್ರಿಕೆಗಳು ಇವುಗಳ ಸೇವೆ ಅಷ್ಟಿಟ್ಟಲ್ಲ. ಜನರಿಗೆ ಧೈರ್ಯ, ಜಾಗೃತಿ ಮೂಡಿಸುವುದರ ಜೊತೆ ಜೊತೆಗೆ ಅವರಲ್ಲಿ ವಿಭಿನ್ನ ಆಸಕ್ತಿ ಮೂಡಿಸುತ್ತ ಬಂದಿತು
ವಾರ್ಷಿಕ ವಿಶೇಷ-2021 Read Post »
ಸಂಗಾತಿ ಮೂರನೇ ವರ್ಷಕ್ಕೆ ಕಾಲಿಡುತ್ತಿದೆ. ಸಂಗಾತಿ ಎಂಬ ಪುಟ್ಟ ಗಿಡ ಬೆಳೆಯುತ್ತಾ , ಬೆಳೆಯುತ್ತಾ ನೆರಳು ನೀಡುವ ಮರವಾಗುತ್ತಿದೆ..
ಪ್ರೀತಿಯ ಸಂಗಾತಿ ಬಳಗವೇ Read Post »
You cannot copy content of this page