ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಯಾನ

ಬದುಕಿನ ಅಲ್ಬಂ

ಶಂಕರಾನಂದ ಹೆಬ್ಬಾಳ

Set of old vintage dirty photo postcards on white isolated background

ಹಳೆಯ ನೆನಪುಗಳ
ವಾರ್ಧಕ್ಯ ಸಮಯದಿ
ಮೆಲುಕು ಹಾಕಿದೆ…
ಹೇಗಿದ್ದೆ…
ಹೇಗಾದೆ…..
ಈಗ ಬರಿ ನೆನಪು ಮಾತ್ರ…

ಕೇಶರಾಶಿಯಲಿ
ನ್ಯೂ ಹೇರ ಸ್ಟೈಲ್
ಆಗ
ಈಗ ಬೊಕ್ಕತಲೆ
ನೋಡುತ್ತ
ತಲೆ ಮೇಲೆ ಕೈಯಾಡಿಸಿ
ಎಲ್ಲಾ
ಈಗ ಬರಿ ನೆನಪು ಮಾತ್ರ

ನನ್ನವಳ ಮುಖಕಮಲ
ಹೊಳೆವ ತಾರೆಯಂತಿತ್ತು
ಬಳುಕುವ ನಡುವು
ಮಂದಸ್ಮಿತ ಕಳೆ
ಈಗ ಹಲ್ಲಿಲ್ಲದ ಬಾಯಿ
ಇಲಿಯ ಬಿಲದಂತೆ
ಬೊಚ್ಚುಬಾಯಾಗಿದೆ
ಆಗಿನ ಕಳೆ
ಈಗ ಬರಿ ನೆನಪು ಮಾತ್ರ

ಲಂಗಾ ಧಾವಣಿ
ಹಾಕಿ ಮಿಣಕ್ ಮಿಣಕ್
ವೈಯಾರ ಮಾಡುವ ಮಗಳು
ಈಗ ಮೂರು ಮಕ್ಕಳ ತಾಯಿ,,,,
ಆಗ ತೆಳ್ಳಗೆ ಬೆಳ್ಳಗೆ
ಲೈಟಿನ ಕಂಬದಂತವಳು
ಉಬ್ಬಿದ ತಲೆದಿಂಬಾಗಿದ್ದಾಳೆ…
ಆಗಿನ ವೈಭವ
ಈಗ ಬರಿ ನೆನಪು ಮಾತ್ರ…

ಬದುಕಿನ ರಸ ಕ್ಷಣಗಳು
ಕಣ್ಣೆದುರು ಕುಣಿಯುತ್ತಿವೆ
ಬಂದಿದ್ದು ಅನುಭವಿಸಿ
ಹಣ್ಣಾಗಿ,,,
ಬಣ್ಣಮಾಸಿ,
ಸೋತು ಸುಣ್ಣಾಗುವ
ಕೊನೆಗೊಮ್ಮೆ
ಮಣ್ಣಾಗುವ
ಜೀವ
ಪೋಟೋದಲ್ಲಿ
ಕೊನೆಗೆ
ಈಗ ಬರಿ ನೆನಪು ಮಾತ್ರ…
ಇದೆ ಬದುಕಿನ ಅಲ್ಬಂ…


About The Author

Leave a Reply

You cannot copy content of this page

Scroll to Top