ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಝಲ್

ಶಂಕರಾನಂದ ಹೆಬ್ಬಾಳ

Humanity hands by luuqas on DeviantArt

ಮುರುಕು ಗುಡಿಸಲಿನ ಬಡವರ ನೋವಿಗೆ
ದನಿಯಾಗದ ನಿನ್ನ ಜನ್ಮ ಸಾರ್ಥಕವೆ
ತಿರಿದು ತಿನ್ನುವ ಹಸಿದೊಡಲಿಗರ ಅನ್ನವನು
ಹಾಕಲಾಗದ ನಿನ್ನ ಜನ್ಮ ಸಾರ್ಥಕವೆ

ಸ್ವಾರ್ಥ ಸಾಧನೆಗೆ ಹಗಲಿರುಳು ಅಧಿಕಾರಕೆ
ದುಂಬಾಲು ಬಿದ್ದೆಯಲ್ಲವೆ
ವ್ಯರ್ಥ ಜೀವನದಲಿ ಪರರಿಗೆ ಸಹಾನುಭೂತಿ
ತೋರಲಾಗದ ನಿನ್ನ ಜನ್ಮ ಸಾರ್ಥಕವೆ

ನೀಡುವ ಗುಣವನ್ನು ಧರಿಸಿ ಹೊಳೆವ
ಮಾಣಿಕ್ಯನಾಗು ಜಗದಿ
ಸೂಡಿಯ ತೆರದಲಿ ತನ್ನನ್ನು ಸುಟ್ಟುಕೊಂಡು
ಬೆಳಕಾಗದ ನಿನ್ನ ಜನ್ಮ ಸಾರ್ಥಕವೆ

ಕ್ಷಮೆ,ದಯೆ,ವಾತ್ಸಲ್ಯಗಳ ಮಹಾಮೂರ್ತಿ
ಸದ್ಗುಣಿಯಾಗು ದೊರೆಯೆ
ಪ್ರಮಾದಗೈದವರಿಗೆ ಪಶ್ಚಾತಾಪದ ಚಣವನ್ನು
ಕೊಡಲಾಗದ ನಿನ್ನ ಜನ್ಮ ಸಾರ್ಥಕವೆ

ಹರಿವ ಹೊಳೆಯಂತೆ ಬಾಳಬಂಡಿಯ
ಎಡರು ತೊಡರುಗಳ ದಾಟು
ಮರೆಯದ ಅಭಿನವನ ಕವಿತೆಯ ಶ್ಲಾಘನೆ
ಮಾಡಲಾಗದ ನಿನ್ನ ಜನ್ಮ ಸಾರ್ಥಕವೆ


About The Author

Leave a Reply

You cannot copy content of this page

Scroll to Top