ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಯಾನ

ಅವನಷ್ಟೇ

ದೇವಿಕಾ ಮ್ಯಾಕಲ್

ಸದ್ದು ಗದ್ದಲವಿಲ್ಲದೆ ನಡೆದು ಬಂದೆ
ಬಲು ಮೆಲ್ಲಗೆ ಅರಿವಾಗುವ ಮೋದಲೇ..ದಟ್ಟ ಪ್ರೇಮದ ದಿಟ್ಟ ಕುರುಹು ನೀನಲ್ಲದೆ ಬೇರೆ ಏನು ಬೇಕಿಲ್ಲ ನನಗೆ….

ಅಹಂಕಾರವಿಲ್ಲದ ನಿನ್ನ ಗುಣ
ಎಲ್ಲರೊಂದಿಗೆ ಸಂಯಮದಿಂದ ಮಾತಾಡುವ ನಿನ್ನ ವಿನಯ
ನನ್ನ ಹುಚ್ಚು ಪ್ರಶ್ನೆಗಳಿಗೆ ಉತ್ತರ ನೀಡುವ ನಿನ್ನ ತಾಳ್ಮೆ….

ಎಲ್ಲೆಲ್ಲೂ ಜೀವ ಕಳೆತುಂಬಿ ಚೇತನವಾಗಿಸಿದೆ
ಧೈರ್ಯ ತುಂಬಿ ನನ್ನ ಬೆನ್ನೆಲುಬಾಗಿ ನಿಂತೆ..ಆದರೂ ಆಗದಿದ್ದರೂ ಪ್ರಯತ್ನ ಪಡುವೆ ಕಣ್ಣಾಗಿ ನೋಡಿಕೊಳ್ಳಲು…

ಸೂರ್ಯನ ಕಿರಣಗಳು ಸೋಕಿದಾಗ ಕೆಂಪಾದ ನಿನ್ನ ಮೊಗವನ್ನು ನೋಡಲು ಏನೋ ಒಂದು ಹರುಷ..ಚೆಲುವೆಲ್ಲವು ಇಲ್ಲೆ ಬಂದು ಕುಳಿತಿತ್ತು…

ನೀನು ಹಾಗೆ ಒಮ್ಮೆ ನಕ್ಕೊಡನೆ
ಜಡ್ಡುಗಟ್ಟಿದ ಕಲ್ಲು ಬೆಟ್ಟ
ಜೀವ ಪಡೆದು ನಾಚಿತು ಶಿಲೆಯಲ್ಲಿ
ಹೆಪ್ಪುಗಟ್ಟಿದ ಹಿಮವು ನಾಚಿ ನೀರಾಗಿ ಹರಿದು ಜಾರಿ ಜಾರಿಯಾಯಿತು ವಾಲಿ….

ಹೇಳಬೇಕೆ ಎಲ್ಲವನ್ನು
ನನ್ನೊಳಗೆ ಉದಯಿಸಿದ ಹೊಸ ಭಾವನೆಗಳನ್ನು..ಖಾಲಿ ಹಾಳೆ ತುಂಬ ಮಸಿ ಕುಡಿಕೆ
ಇಂಗಿ ಹೋದ ಪದಗಳ ನಿನ್ನಾಗಮನ…..


About The Author

Leave a Reply

You cannot copy content of this page

Scroll to Top