ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಒಡನಿದ್ದವಳೊಂದು ದಿನ……..

ಕವಿತೆ ಒಡನಿದ್ದವಳೊಂದು ದಿನ…….. ಬೆಂಶ್ರೀ ರವೀಂದ್ರ ಒಡನಿದ್ದವಳೊಂದು ದಿನ …………..………………………………ಕರಗಿಹೋದೆ ಕಾಲದಲಿರುವೆಯೆಂದುಕಾದೆ ಚೈತ್ರದ ಯುಗಾದಿಗಾಗಿ ರವಿರಶ್ಮಿಯಲಿರುವೆಯೆಂದುಕಾದೆ ವೈಶಾಖದ ಬಿಸಿಲಿಗಾಗಿ ಬುವಿಯಲಿರುವೆಯೆಂದುಕಾದೆ ಜೇಷ್ಠದ ಕಾರಹುಣ್ಣಿಮೆಗಾಗಿ ಗಾಳಿಯಲಿರುವೆಯೆಂದುಕಾದೆ ಆಷಾಢದ ಸುಳಿಗಾಗಿ ಮೋಡದಲಿರುವೆಯೆಂದುಕಾದೆ ಶ್ರಾವಣ ಮಳೆಗಾಗಿ ಬುದ್ದಿಶಕ್ತಿಲಿರುವೆಯೆಂದುಕಾದೆ ಭಾದ್ರಪದದ ಚೌತಿಗಾಗಿ ಗೊಂಬೆಯಲಿರುವೆಯೆಂದುಕಾದೆ ಆಶ್ವಯುಜದ ದಸರೆಗಾಗಿ ದೀಪದಲಿರುವೆಯೆಂದುಕಾದೆ ಕಾರ್ತಿಕದ ದೀಪಾವಳಿಗಾಗಿ ಕೃಷ್ಣನುಡಿಯಲಿರುವೆಯೆಂದುಕಾದೆ ಮಾರ್ಗಶಿರದ ಗೀತಾಹಬ್ಬಕಾಗಿ ಸುಗ್ಗಿಯಲಿರುವೆಯೆಂದುಕಾದೆ ಪುಷ್ಯದ ಸಂಕ್ರಾಂತಿಗಾಗಿ ವಿರಾಗದಲಿರುವೆಯೆಂದುಕಾದೆ ಮಾಘದ ಶಿವರಾತ್ರಿಗಾಗಿ ಬಣ್ಣಗಳಲಿರುವೆಯೆಂದುಕಾದೆ ಫಾಲ್ಗುಣದ ಹೋಳಿಗಾಗಿ ವಸಂತನ ರಮ್ಯತೆಯಲಿಗ್ರೀಷ್ಮನ ಬಿಸಿ ಗಾಳಿಯಲಿವರ್ಷನ ಮರುಹುಟ್ಟಿನಲಿಶರದನ ಸಡಗರದಲಿಹೇಮಂತನ ಹಿಮದಲಿಶಿಶಿರನ ವಿರಕ್ತಿ ರಕ್ತಿಯಲಿಹುಡುಕಿದೆ ಹುಡುಗಿಈಗಅರಿವಾಯ್ತು ನೀ ಕರಗಿನನ್ನೊಳಗೇ ಇರುವೆಯೆಂದು. ***********************

ಒಡನಿದ್ದವಳೊಂದು ದಿನ…….. Read Post »

ಅಂಕಣ ಸಂಗಾತಿ, ತೊರೆಯ ಹರಿವು

ಹೀಗೆ ಆಸೆ ಮಾಡುವ ಅನಾಹುತಗಳು ಒಂದೇ ಎರಡೇ? ಸಾಯೋ ಮುಂಚೆ ಮಕ್ಕಳ-ಮೊಮ್ಮಕ್ಕಳ ಮದುವೆ ನೋಡ್ಬೇಕು ಅನ್ನುವ ಹಿರಿಯರ ಕ್ಷುಲ್ಲಕ ಆಸೆ ಎಷ್ಟೋ ಮಕ್ಕಳ ಭವಿಷ್ಯವನ್ನೇ ಬದಲಿಸಿರುತ್ತೆ. ಬೇರೆಯವರ ಪ್ರಾಣಕ್ಕೆ ಕಂಟಕ ತರುವಂತಹ ಆಸೆಗಳನ್ನು ಆ ಹೆಸರಿನಿಂದ ಕರೆಯೋದು ಹೇಗೆ? ಅದು ಆಸೆಯಲ್ಲ, ಪಾಶ.

Read Post »

You cannot copy content of this page

Scroll to Top