ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಹುಡುಕಬೇಕಿದೆ..

ಪ್ರೊ85 ವಿಜಯ ಪುಟ್ಟಿ

woman standing by the window

ಕಳೆದುಕೊಳ್ಳುತ್ತಿದ್ದೇನೆ
ನನ್ನನ್ನೇ ನಾನು
ಪ್ರಾಪಂಚಿಕ
ಜಂಜಾಟಗಳಲ್ಲಿ
ಗೊಂದಲಗಳಲ್ಲಿ
ಮುಗಿಸಲಾಗದ
ಜವಾಬ್ದಾರಿಗಳಲ್ಲಿ
ಓದಲಾಗದ
ಪುಸ್ತಕಗಳಲ್ಲಿ
ಬರೆಯಲಾಗದ
ಕವನಗಳಲ್ಲಿ
ಹಾಜರಿ ಕೊಡದ
ಗೆಳೆತನಗಳಲ್ಲಿ
ಬೆಟ್ಟದಷ್ಟು
ಮನೆಗೆಲಸಗಳಲ್ಲಿ
ತಿದ್ದಲಾಗದ
ತಪ್ಪುಗಳಲ್ಲಿ
ನಿಭಾಯಿಸಲಾಗದ
ಸಂಬಂಧಗಳಲ್ಲಿ ಕಳೆದುಕೊಳ್ಳಬಯಸದ
ಅವಕಾಶಗಳಲ್ಲಿ
ಕಾಣಲಾರದ
ಕನಸುಗಳಲ್ಲಿ
ಮಾತುಗಳಿರದ
ಮೌನದಲ್ಲಿ
ತಾಧ್ಯಾತ್ಮ ಗೊಳ್ಳದ
ಧ್ಯಾನದಲ್ಲಿ
………………
ಹುಡುಕಬೇಕಾಗಿದೆ
ಇದೀಗ ನನ್ನನ್ನೇ ನಾನು..


About The Author

1 thought on “ಹುಡುಕಬೇಕಿದೆ..”

Leave a Reply

You cannot copy content of this page

Scroll to Top