ಕವಿತೆ ವೀಣಾ ನಿರಂಜನರವರ ಕವಿತೆ ನಕ್ಷತ್ರಗಳನ್ನು ನೋಡುವಾಗನನ್ನ ಜೊತೆಗಿರುತ್ತಿದ್ದ ಅಕ್ಕ ತಂಗಿಯರುಈಗ ಖುದ್ದು ನಕ್ಷತ್ರವಾಗಿದ್ದಾರೆಹೀಗೆ ಇದ್ದಕ್ಕಿದ್ದಂತೆ ಎದ್ದು ಹೋಗಿನಕ್ಷತ್ರವಾಗಿ ಬಿಡುವವರ ಕುರಿತುನಾನೀಗ ಯೋಚಿಸುತ್ತಿದ್ದೇನೆ ಅಂಗಳದ ತುಂಬ ಚೆಲ್ಲಿದ್ದಮಲ್ಲಿಗೆಯ ಹೂಗಳನ್ನಾಯುತ್ತಿದ್ದವರುಹೂಗಳು ಬಾಡುವ ಮುನ್ನವೇಪರಿಮಳವ ಅಲ್ಲೇ ಬಿಟ್ಟುನಡೆದೇ ಬಿಟ್ಟರು ಸದ್ದಿಲ್ಲದೆಆ ಪರಿಮಳವಿನ್ನೂ ಹಾಗೇ ಇದೆನನ್ನ ಮನದೊಳಗೆ ರಾತ್ರಿ ನೀರವ ಮೌನದಲ್ಲಿಬಿಚ್ಚಿ ಕೊಳ್ಳುತ್ತಿದ್ದ ಬದುಕ ಕಟ್ಟುವಕನಸುಗಳು, ಪಿಸುಮಾತು, ನಸುನಗೆಹಾಡಾಗಿ ಹೊಮ್ಮುತ್ತಿದ್ದ ಭಾವಗಳುಎದೆಯ ದನಿಗೆ ರಾಗವಾಗುವ ಮುನ್ನವೇಸ್ವರಗಳ ಕಳಚಿಟ್ಟು ನಡೆದರು ಎಲ್ಲೋ ದೂರದಲ್ಲಿ ಪುಟ್ಟ ನಕ್ಷತ್ರಗಳಾಗಿಮಿನುಗುತ್ತಿರುವ ಈ ನನ್ನ ಜನಕಾಲ ಕಾಲಕ್ಕೆ ಸುರಿವ ಮಳೆಯಂತೆ,ಕಡಲ ಭೋರ್ಗರೆತದಂತೆಎಲೆ ಕಳಚಿ ಮರುಹುಟ್ಟುಪಡೆಯುವ ವೃಕ್ಷ ಸಂಕುಲದಂತೆಮರಳಿ ಬಾರರೆ… ಹೊತ್ತು ಮುಳುಗುವ ಮುನ್ನವೇತೆರೆದುಕೊಳ್ಳುವಹೊತ್ತೇರುವ ಮುನ್ನವೇಮರೆಯಾಗುವ ಈ ತಾರಾ ಲೋಕನಮ್ಮೊಳಗೊಂದು ಬೆಳಕಿನ ಕಿರಣಹಡೆದು ಬಿಡುವ ಸೋಜಿಗದಲ್ಲಿರುವೆನಾನೀಗ… ******