ಗಜಲ್
ಮಣಭಾರ ತಲೆಯಲ್ಲಿ ತೋಲನ ತಪ್ಪದೆ
ಪಾದಗಳ ಇಟ್ಟು ಸೊರಗುತಿದೆ ನೋಡಿ||
ಹೀಗೆ ನಿರುತ್ತರದಲ್ಲಿ ಬದುಕಿನ ಪ್ರಶ್ನೆಗಳಿಗೆ ಹಲವು ಉತ್ತರಗಳಿವೆ. ಕೆಲ ಕವಿತೆಗಳು ತಾತ್ವಿಕವಾಗಿವೆ. ಗ್ರಾಮೀಣ ಮಹಿಳೆಯ ಬದುಕಿನ ಏರಿಳಿತಗಳ ತೂಗಿಸಿಕೊಂಡು ಹೋಗುವ ಒಳನೋಟ ಸಂಗೀತ ಅವರ ಕವಿತೆಗಳಲ್ಲಿ ಕಾಣಸಿಗುತ್ತದೆ
ನಿರುತ್ತರ : ಒಂದು ಅವಲೋಕನ Read Post »
ಅಂಕಣ ಬರಹ ರಾಮಕೃಷ್ಣ ಗುಂದಿ ಅವರ ಆತ್ಮಕಥೆ—25 ಆತ್ಮಾನುಸಂಧಾನ ತುಂಬ ಪ್ರಭಾವ ಬೀರಿದ ಪ್ರಾಚಾರ್ಯರು ಪ್ರಾಧ್ಯಾಪಕರು ಪದವಿ ಶಿಕ್ಷಣದ ಕಾಲೇಜು ಜೀವನದಲ್ಲಿ ಪ್ರಾಮಾಣಿಕ ನಿಷ್ಠೆ ತೋರಿದ್ದರೆ ಅಪಾರವಾದ ಜ್ಞಾನನಿಧಿ ಕೈವಶ ಮಾಡಿಕೊಳ್ಳುವ ಎಲ್ಲ ಅವಕಾಶಗಳೂ ಇದ್ದವು. ಆದರೆ ಸೂಕ್ತ ಮಾರ್ಗದರ್ಶನ, ತಿಳುವಳಿಕೆಯ ಕೊರತೆಯಿಂದಾಗಿ ಕೇವಲ ಹರೆಯದ ಹುಡುಗಾಟಿಕೆಯಲ್ಲಿ ಪದವಿ ಶಿಕ್ಷಣದ ಮೂರು ವರ್ಷಗಳು ತೀರ ಹಗುರವಾಗಿ ಕಳೆದು ಹೋದವು. ಆದರೂ ತಮ್ಮ ಪಾಠ ಕ್ರಮದ ವಿಶಿಷ್ಠತೆ, ವೇಷಭೂಷಣ, ನಡೆನುಡಿಗಳಿಂದಲೇ ಮನಸ್ಸನ್ನು ಗಾಢವಾಗಿ ಪ್ರಭಾವಿಸಿದ ಅಧ್ಯಾಪಕರು ಮತ್ತಿತರ ವ್ಯಕ್ತಿಗಳನ್ನು ಮರೆಯಲು ಸಾಧ್ಯವಿಲ್ಲದಂತೆ ನೆನಪಾಗಿ ಉಳಿದಿದ್ದಾರೆ. ಕಾಲೇಜಿಗೆ ತಮ್ಮ ದಕ್ಷತೆ ಮತ್ತು ಶಿಸ್ತಿನಿಂದಲೇ ಘನತೆಯನ್ನು ತಂದುಕೊಟ್ಟವರು ಪ್ರಾಚಾರ್ಯರಾದ ಕೆ.ಜಿ. ನಾಯ್ಕ ಅವರು ನೀಳಕಾಯದ, ಗಂಭೀರ ನಿಲುವಿನ ಪ್ರಾಚಾರ್ಯರನ್ನು ವಿದ್ಯಾರ್ಥಿಗಳು ಭೇಟಿಯಾಗುವ ಅವಕಾಶಗಳು ಅಪರೂಪವಾಗಿರುತ್ತಿದ್ದವು. ಆದರೆ ಒಮ್ಮೆ ವರಾಂಡದಲ್ಲಿ ಕಾಣಿಸಿಕೊಂಡರೂ ಎಲ್ಲವೂ ಸ್ಥಬ್ದವಾಗಿ ಬಿಡುವ ಪ್ರಭಾವಶಾಲಿಯಾದ ವ್ಯಕ್ತಿತ್ವ ಅವರದ್ದಾಗಿತ್ತು. ಕಾಲೇಜು ಹೊಸದಾಗಿ ಆರಂಭಗೊಳ್ಳುವ ಕಾರಣ ಮಾನ್ಯ ದಿನಕರ ದೇಸಾಯಿಯವರು ಹಲವು ದಿಕ್ಕುಗಳಿಂದ ಯೋಚಿಸಿ ಶಿಕ್ಷಣ ತಜ್ಞರೊಡನೆ ಸಮಾಲೋಚಿಸಿ ಕೆ.ಜಿ. ನಾಯ್ಕರಂತ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡಿದ್ದರು. ಆಯ್ಕೆಯಾಗುವ ಮುನ್ನ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಗಣಿತಶಾಸ್ತ್ರದ ಉಪನ್ಯಾಸಕರಾಗಿದ್ದ ಕೆ.ಜಿ. ನಾಯ್ಕ ಅವರು ಅಂದು ಕರ್ನಾಟಕ ವಿಶ್ವವಿದ್ಯಾಲಯ ಮಟ್ಟದಲ್ಲಿ ಪ್ರಸಿದ್ಧಿಯನ್ನು ಪಡೆದು ಅಂದಿನ ಕುಲಪತಿಗಳಾಗಿದ್ದ ‘ಅಡಕೆ’, ರಜಿಸ್ಟ್ರಾರ್ ಆಗಿದ್ದ ‘ಒಡಿಯರ್’ ಅವರ ಅಭಿಮಾನಕ್ಕೆ ಪಾತ್ರರಾಗಿದ್ದವರು. ಕೆ.ಜಿ. ನಾಯ್ಕ ಅವರ ಅಪೂರ್ವ ಕಾಳಜಿಯಲ್ಲಿ ಕಾಲೇಜು ಸ್ಥಾಪನೆಗೊಂಡ ಅಲ್ಪಾವಧಿಯಲ್ಲಿಯೇ ರಾಜ್ಯಮಟ್ಟದಲ್ಲಿ ಖ್ಯಾತಿ ಪಡೆಯುವುದು ಸಾಧ್ಯವಾಯಿತು. ಮುಂದೆ ಇದೇ ಕಾಲೇಜಿನಲ್ಲಿ ಉಪನ್ಯಾಸಕನಾಗಿ ಕಾರ್ಯನಿರ್ವಹಿಸುವ ಅವಕಾಶ ದೊರೆತ ಬಳಿಕ ಕೆ.ಜಿ. ನಾಯ್ಕರ ವ್ಯಕ್ತಿ ವಿಶೇಷದ ಗಾಢ ಅನುಭವಗಳು ಆದವು. ಮತ್ತು ಅವುಗಳಿಂದಲೇ ನನ್ನ ವ್ಯಕ್ತಿತ್ವ ವಿಕಸನಕ್ಕೆ ಹಲವು ಮುಖದ ಪ್ರಯೋಜನಗಳೂ ಆಗಿವೆ. ಅದನ್ನು ಮುಂದೆ ದೀರ್ಘವಾಗಿ ಪ್ರಸ್ತಾಪಿಸುವೆ. ನಾನು ಐಚ್ಛಿಕವಾಗಿ ಕನ್ನಡ, ಪೂರಕ ವಿಷಯಗಳಲ್ಲಿ ಇತಿಹಾಸ ಸಂಸ್ಕೃತಗಳನ್ನು ಆಯ್ದುಕೊಂಡೆ. ಸಹಜವಾಗಿಯೇ ಈ ಮೂರು ವಿಷಯಗಳಿಗೆ ಸಂಬಂಧಿಸಿದ ಅಧ್ಯಾಪಕರು ಮಾತ್ರ ಹೆಚ್ಚಿನ ಒಡನಾಟಕ್ಕೆ ದೊರೆಯುತ್ತ ವಿಶೇಷ ಪ್ರಭಾವಕ್ಕೆ ಪಾತ್ರನಾದೆ. ಅಂದು ನನಗೂ, ನನ್ನ ಅನೇಕ ಸಹಪಾಠಿಗಳಿಗೂ ಬಹು ನೆಚ್ಚಿನ ಗುರುಗಳೆಂದರೆ ಪ್ರೊ. ವಿ.ಎ. ಜೋಷಿಯವರು. ಮೂಲತಃ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಕಡೆಯವರಾದ ಜೋಷಿಯವರು ಸೊಗಸಾಗಿ ಬಯಲು ಸೀಮೆಯ ಕನ್ನಡ ಮಾತನಾಡುವ ವ್ಯಕ್ತಿ. ತಮ್ಮ ಉಪನ್ಯಾಸದುದ್ದಕ್ಕೂ ವಿದ್ಯಾರ್ಥಿಗಳ ಹೆಸರು ನೆನಪಿಟ್ಟು ಆಗಾಗ ಗುರುತಿಸಿ ಮಾತನಾಡುವ ತಮ್ಮ ಸರಳತೆ ಹಾಸ್ಯಭರಿತವಾದ ಮಾತಿನ ಶೈಲಿಯಿಂದ ಇಡಿಯ ತರಗತಿಯೂ ಚೇತೋಹಾರಿಯಾಗಿ ಇರುವಂತೆ ನೋಡಿಕೊಳ್ಳುವ ಅವರ ಕಲಿಸುವಿಕೆಯೇ ನಮಗೆ ಕನ್ನಡವನ್ನು ಪ್ರೀತಿಸುವಂತೆ ಪ್ರೇರೆಪಿಸಿದ್ದವು. ಪಾಠದ ನಡುವೆ ವಿದ್ಯಾರ್ಥಿ ಸಮುದಾಯದಲ್ಲಿ ಏನಾದರೊಂದು ಬೇಡದ ಸದ್ದು ಕೇಳಿ ಬಂದರೂ ಕೇವಲ ತಮ್ಮ ಬಾಲ್ಪೆನ್ನಿಂದ ಟಿಕ್… ಟಿಕ್…” ಸದ್ದು ಹೊರಡಿಸಿ ಶಾಂತಗೊಳಿಸುವ ಕಲೆಗಾರಿಕೆ ಅವರಿಗೆ ವಿಶಿಷ್ಟವಾಗಿತ್ತು. ಯಾವುದಾದರೂ ವಿದ್ಯಾರ್ಥಿ ಅಗತ್ಯಕ್ಕಿಂತಲೂ ಅಧಿಕ ಪ್ರತಿಕ್ರಿಯೆ ತೋರಿದರೆ, ಬಾಳ ಶಾಣ್ಯ, ಆಗಾಕ ಹೋಗಬ್ಯಾಡ… ಇದು ನಿನಗೆ ಕೊನೆಯ ವಾರ್ನಿಂಗ್… ಮತ್ತದೇ ಮುಂದುವರಿಸಿದ ಅಂದ್ರ ಒದ್ದು ಹೊರಗ ಕಳಿಸಬೇಕಾಗ್ತದ…” ಎಂದು ಎಚ್ಚರಿಸುತ್ತಿದ್ದರು. ಆದರೆ ತಮ್ಮ ವೃತ್ತಿಯುದ್ದಕ್ಕೂ ಯಾರೊಬ್ಬರನ್ನೂ ತರಗತಿಯಿಂದ ಹೊರಗೆ ಹಾಕದ ಗುರುಶ್ರೇಷ್ಠರಾಗಿಯೇ ಉಳಿದರು. ಅವರ ಸೌಜನ್ಯಶೀಲತೆ, ಪಾಠ ಹೇಳುವ ವಿಶಿಷ್ಟ ಶೈಲಿಯಿಂದಲೇ ನಮ್ಮೆಲ್ಲರನ್ನು ಪ್ರಭಾವಿಸಿದವರು ಪ್ರೊ. ವಿ.ಎ. ಜೋಷಿ. ನಮಗೆ ಕನ್ನಡ ಪಾಠ ಹೇಳಿದ ಇನ್ನೋರ್ವ ಗುರುಗಳು ಪ್ರೊ. ಕೆ.ವಿ. ನಾಯಕ. ಶ್ವೇತ ವರ್ಣದ ಎತ್ತರದ ನಿಲುವಿನ ಸ್ಪುರದ್ರೂಪಿ ತರುಣ ಉಪನ್ಯಾಸಕರಾದ ಕೆ.ವಿ. ನಾಯಕ ನಡುಗನ್ನಡ ಕಾವ್ಯಗಳನ್ನು ಕನ್ನಡ ವ್ಯಾಕರಣ ಛಂದಸ್ಸುಗಳನ್ನು ಪಾಠ ಮಾಡುತ್ತಿದ್ದರು. ಅವರ ಚಂದದ ವ್ಯಕ್ತಿತ್ವ ಮತ್ತು ನಿತ್ಯನೂತನವಾದ ವೇಷಭೂಷಣಗಳು ತುಂಬಾ ಆಕರ್ಷಕವಾಗಿ ಇರುತ್ತಿದ್ದವು. ಜೋಷಿಯವರ ಹಳೆಗನ್ನಡ ಕಾವ್ಯಾಬೋಧನೆ ಕೆ.ವಿ.ನಾಯಕರ ವ್ಯಾಕರಣ ಪಾಠಗಳು ಕನ್ನಡ ವಿಭಾಗದ ವಿದ್ಯಾರ್ಥಿ ಪ್ರೀತಿಗೆ ತುಂಬ ಪ್ರೇರಕವಾಗಿರುತ್ತಿದ್ದವು. ಅಂದು ನಮಗೆ ಸಂಸ್ಕೃತ ಕಲಿಸುತ್ತಿದ್ದವರು. ಪ್ರೊ. ಎಂ.ಪಿ. ಭಟ್ ಎಂಬ ವಿದ್ವಾಂಸರು ಇಂಗ್ಲಿಷ್ ಕನ್ನಡ ಸಂಸ್ಕೃತ ಇತ್ಯಾದಿ ಭಾಷೆಯ ಮೇಲೆ ಅದ್ಭುತ ಹಿಡಿತ ಸಾಧಿಸಿದ್ದ ಎಂ.ಪಿ. ಭಟ್ ಅವರು ರಾಮಾಯಣ ಭಾರತಾದಿ ಕಾವ್ಯಗಳಲ್ಲದೆ ಸಂಸ್ಕೃತದ ‘ಮೇಘದೂತ’ ‘ಪ್ರತಿಜ್ಞಾ ಯೌಗಂಧರಾಯಣ’ ‘ಮೃಚ್ಛಕಟಿಕ’ ಮೊದಲಾದ ಪಠ್ಯಗಳನ್ನು ತುಂಬ ಪ್ರಭಾವಶಾಲಿಯಾಗಿ ಪಾಠ ಮಾಡುತ್ತಿದ್ದರು. ಅವರು ತಮ್ಮ ಉಪನ್ಯಾಸ ನೀಡಿದ ಬಳಿಕ ಮತ್ತೆ ನಾವು ಸಂಸ್ಕೃತ ಪಠ್ಯಗಳನ್ನು ಬಿಡಿಸಿ ಓದುವ ಕಷ್ಟವನ್ನೆ ತೆಗೆದುಕೊಳ್ಳುತ್ತಿರಲಿಲ್ಲ ಆದರೂ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯ ಅಂಕಕಗಳು ಸುಲಭವಾಗಿ ದಕ್ಕುತ್ತಿದ್ದವು ಅಂದರೆ ಪ್ರೊ. ಎಂ.ಪಿ. ಭಟ್ ಅಂತವರಿಂದ ಸಂಸ್ಕೃತ ಕಲಿಯುವುದೇ ಒಂದು ಸೌಭಾಗ್ಯವೆಂದು ನಾವು ಬಹುತೇಕರು ಭಾವಿಸಿದ್ದೆವು. ನಮಗೆ ಇತಿಹಾಸ ಪಾಠ ಹೇಳಿದವರು ಪ್ರೊ.ಎ.ಎಚ್.ನಾಯಕ ಮತ್ತು ಟಿ.ಟಿ. ತಾಂಡೇಲ್ ಅವರು. ಪ್ರೊ. ಎ.ಎಚ್. ನಾಯ್ಕ ಅವರು ಪದವಿ ಶಿಕ್ಷಣದ ಮೊದಲ ವರ್ಷದಲ್ಲಿ ನಮಗೆ ಕೆಲವು ಕಾಲ ಇಂಗ್ಲಿಷ್ ವಿಷಯದ ಪಾಠ ಹೇಳಿದಂತೆ ನೆನಪು. ತುಂಬ ಕರ್ತವ್ಯ ದಕ್ಷ ಅಧ್ಯಾಪಕರೆಂದೇ ಗುರುತಿಸಿಕೊಂಡ ಎ.ಎಚ್. ನಾಯ್ಕ ಅವರು ತಮ್ಮ ಪಾಠದೊಂದಿಗೆ ವಿದ್ಯಾರ್ಥಿ ಕ್ಷೇಮ ಚಿಂತನೆಯನ್ನು ನಿರ್ವಹಿಸುತ್ತಿದ್ದರು. ತರಗತಿಗಳನ್ನು ತಪ್ಪಿಸುವ ವಿದ್ಯಾರ್ಥಿಗಳಿಗೆ ಮತ್ತೆ ಮತ್ತೆ ಕರೆದು ಬುದ್ಧಿ ಹೇಳುವ ಎಚ್ಚರಿಕೆ ನೀಡುವ ಹೆಚ್ಚಿನ ಕೆಲಸವನ್ನು ಎ.ಎಚ್. ನಾಯ್ಕ ಅವರಂತೆ ನಿರ್ವಹಿಸಿದ ಅಧ್ಯಾಪಕರು ಕಡಿಮೆ.ಅವರ ವ್ಯಕ್ತಿತ್ವದ ಇನ್ನೊಂದು ವಿಶೇಷತೆ ಅಂದರೆ ದೈವ ಭಕ್ತಿ! ಅಧ್ಯಾತ್ಮಿಕ ಒಲವು!ಕಾಲೇಜು ಪಕ್ಕದಲ್ಲೇ ಇರುವ ಹೊನ್ನಾರಾಕಾ ನಾಗದೇವತಾ ಮಂದಿರವನ್ನು ಪ್ರವೇಶಿಸಿ ಅಲ್ಲಿರುವ ಎಲ್ಲ ಗಂಟೆಗಳನ್ನು ಬಾರಿಸಿ ದೇವರಿಗೆ ಕೈಮುಗಿದು ಗಂಧ ಪ್ರಸಾದ ಪಡೆಯದೆ ಅವರು ಎಂದೂ ಕಾಲೇಜು ಆವರಣಕ್ಕೆ ಬರುತ್ತಿರಲಿಲ್ಲ. ಅವರ ಈ ನಡೆಯನ್ನು ವಿದ್ಯಾರ್ಥಿಗಳು ಮೋಜಿನಿಂದ ಗಮನಿಸುತ್ತಾರೆ ಎಂಬುದು ಅವರಿಗೆ ಅರಿವಾದರೂ ತಮ್ಮ ನಿಷ್ಠೆಯನ್ನು ಎಂದು ತಪ್ಪಿ ನಡೆಯುತ್ತಿರಲಿಲ್ಲ. ಅವರ ಈ ಭಗವದ್ಭಕ್ತಿಯನ್ನೇ ವಿದ್ಯಾರ್ಥಿಗಳು ಹಲವು ಬಾರಿ ಗೇಲಿ ಮಾಡುತ್ತಿದ್ದರು. ತರಗತಿಗೆ ಗೈರು ಹಾಜರಾಗುವ ವಿದ್ಯಾರ್ಥಿಗಳನ್ನು ಮುಂದಿನ ತರಗತಿಯಲ್ಲಿ ವಿಚಾರಿಸಿಕೊಳ್ಳುವುದು ಅವರ ಕ್ರಮವೇ ಆಗಿತ್ತು. ಹನೇಹಳ್ಳಿಯ ಕಡೆಯಿಂದ ಬರುವ ಪ್ರಸನ್ನ ಎಂಬ ನಮ್ಮ ಸಹಪಾಠಿಯೊಬ್ಬ ಗುರುಗಳ ದೈವ ಭಕ್ತಿಯ ನಿಷ್ಠೆಯನ್ನು ಅರಿತವನಾಗಿ ಗುರುಗಳು “ನಿನ್ನೆ ಏಕೆ ನೀನು ತರಗತಿಗೆ ಬರಲಿಲ್ಲ?” ಎಂದು ಕೇಳಿದಾಗಲೆಲ್ಲ “ಮನೆಯಲ್ಲಿ ಸತ್ಯನಾರಾಯಣ ಪೂಜೆಯಿತ್ತು ಸರ್” ಎಂದೇ ಕಥೆ ಹೇಳುತ್ತಿದ್ದ. ಅಷ್ಟಕ್ಕೆ ಅವನನ್ನು ಕ್ಷಮಿಸಿಯೇ ಬಿಡುವ ಪ್ರೊ.ನಾಯ್ಕರ ರೀತಿಯು, ನಮಗೆಲ್ಲ ಮೋಜಿನ ಸಂಗತಿಯಾಗಿ ಮನರಂಜನೆ ನೀಡುತ್ತಿತ್ತು.ದೈವ ನಿಂದನೆ, ಆತ್ಮವಂಚನೆ, ಸುಳ್ಳು ಇತ್ಯಾದಿ ಸನಿಹವೂ ಬರದಂತೆ ಬಾಳಬೇಕೆಂದು ತಮ್ಮ ಉಪನ್ಯಾಸದ ನಡುವೆ ಮತ್ತೆ ಮತ್ತೆ ಉಪದೇಶಿಸುವ ಪ್ರೊ. ಎ.ಎಚ್. ನಾಯ್ಕ ಅದಕ್ಕೆ ವಿರುದ್ಧವಾಗಿ ವರ್ತಿಸುವರನ್ನು ಕಂಡರೆ ಕೆಂಡಾಮಂಡಲರಾಗಿ ಬೈಯುವ ಅಂಥ ವ್ಯಕ್ತಿಗಳಿಂದ ದೂರವೇ ಇರುತ್ತಿದ್ದರು. ಅವರಿಂದ ಇತಿಹಾಸ ಪಾಠಕೇಳಿದಕ್ಕಿಂತಲೂ ನೈತಿಕ ಶಿಕ್ಷಣದ ಪಾಠ ಕೇಳಿದುದೇ ಅಧಿಕವೆಂಬಂತೆ ಎ.ಎಚ್. ನಾಯ್ಕ ಅವರು ವಿದ್ಯಾರ್ಥಿಗಳ ಚಿತ್ತ ಬಿತ್ತಿಯಲ್ಲಿ ನೈತಿಕ ಮೌಲ್ಯ ಪ್ರತಿಪಾದಕ ಪೂಜನೀಯರಾಗಿಯೇ ನೆಲೆ ನಿಂತಿದ್ದಾರೆ.ಇತಿಹಾಸ ಪಾಠ ಹೇಳಿದ ಇನ್ನೊಬ್ಬ ಗುರು ಪ್ರೊ. ಟಿ.ಟಿ. ತಾಂಡೇಲ್ ಅವರು. ಯುವ ಅಧ್ಯಾಪಕರಾಗಿದ್ದ ತಾಂಡೇಲ್ ಸೂಟು ಬೂಟುಗಳಲ್ಲಿ ಆಕರ್ಷಣೀಯವಾಗಿ ತರಗತಿಯನ್ನು ಪ್ರವೇಶಿಸುತ್ತಿದ್ದರು. ಅಷ್ಟೇ ನಿರರ್ಗಳವಾಗಿ ಇಂಗ್ಲೀಷಿನಲ್ಲಿ ತಮ್ಮ ಪಾಠ ಆರಂಭಿಸುತ್ತಿದ್ದುದ್ದು ಅವರ ನಡೆ-ನುಡಿಯ ಶೈಲಿ ಯುವ ಮನಸ್ಸುಗಳನ್ನು ಗಾಢವಾಗಿಯೇ ತಟ್ಟುತ್ತಿತ್ತು. ತಾಂಡೇಲ್ ಸರ್ ಅವರ ವೇಷಭೂಷಣಗಳ ಕಾಳಜಿ, ಉಪನ್ಯಾಸದ ವಿಶಿಷ್ಟ ಸ್ಟೈಲ್ ಬಹಳಷ್ಟು ವಿದ್ಯಾರ್ಥಿಗಳಿಗೆ ಪ್ರಿಯವಾಗುತ್ತಿತ್ತು.ಬಹುಶಃ ಮೀನುಗಾರರಂಥ ಹಿಂದುಳಿದ ಸಮಾಜದಿಂದ ಬಂದು ಇಂಥದೊಂದು ಕಾಲೇಜಿನಲ್ಲಿ ಉಪನ್ಯಾಸಕನಾಗುವುದು ವಿದ್ಯಾರ್ಥಿಗಳ ಮನಸ್ಸು ಗೆಲ್ಲುವುದೆಂದರೆ ಸುಲಭದ ಸಂಗತಿಯೇನೂ ಆಗಿರಲಿಲ್ಲ. ನನ್ನಂತ ದಲಿತ ವಿದ್ಯಾರ್ಥಿಯೊಬ್ಬನ ಮನಸ್ಸಿನಲ್ಲಿ ಇಂಥದೊಂದು ಸಾಧ್ಯ…” ಎಂಬ ಆಸೆಯ ಹೊಳಪೊಂದು ಮಿಂಚುವಂತೆ ಮಾಡಿದ ನನ್ನ ಆದರ್ಶ ಗುರು ಟಿ.ಟಿ. ತಾಂಡೇಲ್ ********************* ರಾಮಕೃಷ್ಣ ಗುಂದಿ ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.ಯಕ್ಷಗಾನ ಕಲಾವಿದ. ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ. ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ಕನ್ನಡಿಗರ ಎದುರು ಇಡುತ್ತಿದೆ
ದಾರಾವಾಹಿ ಆವರ್ತನ ಅಧ್ಯಾಯ: 17 ಏಕನಾಥರು, ಶಂಕರನ ಜಮೀನು ನೋಡಲು ಅವನೊಂದಿಗೆ ಹೊರಟಿದ್ದರು. ಶಂಕರ ತನ್ನ ಜಾಗದಲ್ಲಿ ಉದ್ಭವಿಸಿದ ನಾಗನ ಸಮಸ್ಯೆಗೆ ಪರಿಹಾರ ಮಾರ್ಗೋಪಾಯದ ಕುರಿತು ದಾರಿಯುದ್ದಕ್ಕೂ ಏಕನಾಥರೊಡನೆ ಕೆದಕಿ ಕೆದಕಿ ಪ್ರಶ್ನಿಸುತ್ತ ತನ್ನ ಭಯವನ್ನು ನಿವಾರಿಸಿಕೊಳ್ಳಲು ಹೆಣಗುತ್ತ ಕಾರು ಚಲಾಯಿಸುತ್ತಿದ್ದ. ಆದರೆ ಏಕನಾಥರು ಅತೀವ ಚಾಣಾಕ್ಷರು. ಅವರು, ಅವನ ಒಂದೊಂದು ಪ್ರಶ್ನೆಗೂ ಬಹಳವೇ ಯೋಚಿಸಿ ಪರಿಹಾರ ಸೂತ್ರವನ್ನು ಮರೆಮಾಚಿಯೇ ಉತ್ತರಿಸುತ್ತ, ಏನನ್ನೋ ಗಂಭೀರವಾಗಿ ಯೋಚಿಸುತ್ತ ಸಾಗುತ್ತಿದ್ದರು. ಕಾರಣ, ಅವರ ತಲೆಯೊಳಗೆ ಹೊಸ ಯೋಜನೆಯೊಂದು ರೂಪಗೊಳ್ಳುತ್ತಿತ್ತು. ‘ಬಹುಶಃ ಇಷ್ಟರವರೆಗಿನ ತಮ್ಮ ಗುಲಾಮಗಿರಿಯ ಬದುಕು ಇಂದಿಗೆ ಮುಕ್ತಾಯಗೊಂಡು ಸ್ವತಂತ್ರ ಜೀವನದ ಹೆಬ್ಬಾಗಿಲು ತೆರೆಯುತ್ತಿದೆ. ಆ ಅವಕಾಶವು ಇವನ ಮೂಲಕವೇ ತಮ್ಮನ್ನು ಹುಡುಕಿ ಬಂದಿರುವುದು ಖಚಿತವಾಗಿದೆ. ಈ ಒಂದು ಕಾರ್ಯವನ್ನು ತಾವು ಯಶಸ್ವಿಯಾಗಿ ನಡೆಸಿಕೊಟ್ಟೆವೆಂದರೆ ಆಮೇಲೆ ತಮ್ಮ ಅದೃಷ್ಟ ಕುಲಾಯಿಸಿದಂತೆಯೇ ಸರಿ! ಮುಂದಿನ ನಾಲ್ಕೈದು ವರ್ಷದೊಳಗೆ ಒಳ್ಳೆಯ ಸಂಪಾದನೆ ಕುದುರುವುದರಲ್ಲಿ ಸಂಶಯವಿಲ್ಲ. ಹಾಗಾಗಿ ಇವತ್ತು ತಾವು ಇವನ ಸಮಸ್ಯೆಯ ಎಳೆಎಳೆಯನ್ನೂ ಸೂಕ್ಷ್ಮವಾಗಿ ಅವಲೋಕಿಸಿ ಬಹಳ ಎಚ್ಚರಿಕೆಯಿಂದ ನಿಭಾಯಿಸಬೇಕು. ಇವನೂ ಒಳ್ಳೆಯ ಮನುಷ್ಯನೇನೂ ಅಲ್ಲ. ಎಷ್ಟೋ ಬಡವರ, ಅಮಾಯಕರ ಮಂಡೆ ಹೊಡೆದೇ ಮೇಲೆ ಬಂದವನು. ಇಂಥವರೊಂದಿಗೆ ವ್ಯವಹರಿಸುವಾಗ ಸ್ವಲ್ಪ ವ್ಯಾಪಾರದ ನಾಟಕವಾಡುವುದರಲ್ಲಿ ತಪ್ಪೇನಿಲ್ಲ. ಯಾಕೆಂದರೆ ನಮಗೂ ಸಂಸಾರವಿದೆ ಮತ್ತೆ ಅದಕ್ಕೊಂದು ಭವಿಷ್ಯವೂ ಇದೆಯಲ್ಲವಾ! ಅದಕ್ಕಾಗಿಯಾದರೂ ತಾವು ಬುದ್ಧಿವಂತಿಕೆಯಿಂದ ಮುಂದುವರೆಯಬೇಕು. ‘ಒಂದು ಶುಭಕಾರ್ಯಕ್ಕೆ ನೂರೆಂಟು ವಿಘ್ನಗಳಂತೆ. ಅವನ್ನೆಲ್ಲ ಮೀರಿ ಕಾರ್ಯಸಿದ್ಧಿಗೆ ಹೊರಟಾಗ ಸಣ್ಣಪುಟ್ಟ ತಪ್ಪು ಒಪ್ಪುಗಳು ನಡೆಯುವುದೂ ಸಹಜವೇ!’ ಎಂದು ಪೆದುಮಾಳರು ಹೇಳುತ್ತಿದ್ದುದು ನೆನಪಿದೆ. ಆದರೂ ತಮ್ಮ ಕಾಯಕದಲ್ಲಿ ತಾವು ವಿವೇಕದಿಂದ ವರ್ತಿಸಬೇಕು. ಎಂದಿಗೂ ಇವನಂಥ ದುರಾಸೆಯ ಮನುಷ್ಯನಾಗಬಾರದು. ತಾವು ನಂಬಿದ ದೈವ ದೇವರುಗಳು ಮೆಚ್ಚುವಂತೆಯೇ ನಡೆದುಕೊಳ್ಳಬೇಕು. ತಮ್ಮನ್ನು ನಂಬಿ ಬಂದವರಿಗೆ ಒಳ್ಳೆಯದಾಗುವಂತೆಯೇ ವ್ಯವಹರಿಸಬೇಕು. ಹಾಗೆ ಬದುಕಿದರೆ ಯಾವ ದೋಷವೂ ತಟ್ಟುವುದಿಲ್ಲ! ಎಂದು ನಿರ್ಧರಿಸಿದ ಏಕನಾಥರು ತಮ್ಮ ಚಿಂತನೆಗೆ ಮಂಗಳ ಹಾಡುವಷ್ಟರಲ್ಲಿ ಶಂಕರನ ಕಾರು ಶೀಂಬ್ರಗುಡ್ಡೆಯನ್ನು ದಾಟಿ ಸಣ್ಣ ಬೆಟ್ಟವೊಂದನ್ನೇರಿ ಬಾಕುಡಗುಡ್ಡೆಯನ್ನು ತಲುಪಿತು. ಅಲ್ಲಿನ ಕೊರಕಲು ಮಣ್ಣಿನ ರಸ್ತೆಯನ್ನು ಹಿಡಿದು ಮತ್ತಷ್ಟು ದೂರ ಸಾಗಿದ ನಂತರ ಒಂದು ಕಡೆ ಬಲಕ್ಕೆ ತಿರುಗಿ ವಿಶಾಲವಾದೊಂದು ಕುರುಚಲು ಕಾಡಿನ ಸಮೀಪ ಹೋಗಿ ನಿಂತಿತು. ಏಕನಾಥರು ಕಾರಿನಿಂದ ಇಳಿದವರು ಎದುರಿನ ಪ್ರದೇಶದ ಮೇಲೊಂದು ಪಕ್ಷಿನೋಟವನ್ನು ಬೀರುತ್ತ ನಿಂತರು. ಆ ವಿಶಾಲವಾದ ಜಮೀನಿನ ಮುಕ್ಕಾಲು ಭಾಗದ ಕಾಡುಗುಡ್ಡಗಳನ್ನು ಕಡಿದು ಜರಿದು ನಿನಾರ್ಮಗೊಳಿಸಲಾಗಿತ್ತು. ಕೆಲವೇ ತಿಂಗಳುಗಳ ಹಿಂದಷ್ಟೇ ಪಶ್ಚಿಮಘಟ್ಟದ ಒಂದು ಬೃಹತ್ ತುಣುಕಿನಂತೆ ಹಚ್ಚಹಸುರಾಗಿ ನಳನಳಿಸುತ್ತಿದ್ದ ಆ ಅರಣ್ಯವನ್ನೂ ಅಲ್ಲಿನ ಅಸಂಖ್ಯಾತ ಸ್ಥೂಲ ಮತ್ತು ಸೂಕ್ಷ್ಮ ಜೀವರಾಶಿಗಳನ್ನೂ ಜೆಸಿಬಿ, ಹಿಟಾಚಿ ಹಾಗೂ ಬುಲ್ಡೋಜರ್ಗಳಂಥ ರಾಕ್ಷಸ ಯಂತ್ರಗಳೂ, ಜನರೂ ಕೂಡಿ ಧ್ವಂಸಗೊಳಿಸಿಬಿಟ್ಟಿದ್ದರು. ಅಷ್ಟಲ್ಲದೇ ಆ ಕೆಲಸವಿನ್ನೂ ಚಾಲ್ತಿಯಲ್ಲಿತ್ತು! ಹಾಗಾಗಿ ಆ ಪರಿಸರವೂ ಅಲ್ಲಿನ ವಾತಾವರಣವೂ ಸುಡುಗಾಡಿನಂತೆ ಬಣಗುಟ್ಟುತ್ತಿತ್ತು. ಸಂಜೆಯ ಹೊಂಬಣ್ಣದ ಸೂರ್ಯನ ತಂಪಾದ ಕಿರಣಗಳ ನಡುವೆಯೂ ಆ ಭೂಮಿಯು ಬಿಸಿಯೇರಿ ನರಳುತ್ತಿತ್ತು. ರಭಸದಿಂದ ಏಳುತ್ತಿದ್ದ ಒಣಹವೆಯು ಆಕಾಶದೆತ್ತರಕ್ಕೆ ಕೆಂಧೂಳನ್ನೆಬ್ಬಿಸುತ್ತ ಅಲ್ಲಿನ ವಾತಾವರಣವನ್ನು ತೀವ್ರ ಕಲುಷಿತಗೊಳಿಸಿತ್ತು. ಆ ದೃಶ್ಯವನ್ನು ಗಮನಿಸಿದರೆ, ಮುಂದೊಂದು ದಿನ ಆ ಪ್ರದೇಶದಲ್ಲಿ ಉಂಟಾಗಬಹುದಾದ ವಿವಿಧ ರೂಪದ ಪ್ರಕೃತಿ ವಿಕೋಪದ ಸ್ಪಷ್ಟ ಮುನ್ಸೂಚನೆಯಂತಿತ್ತು. ಶತಮಾನಗಳಿಂದಲೂ ತಮ್ಮ ಸಂತತಿಯನ್ನು ಆ ಮಳೆಕಾಡಿನೊಳಗೆಯೇ ಸೃಷ್ಟಿಸಿ ಬೆಳೆಸುತ್ತ ಪರಿಸರಸ್ನೇಹಿಗಳಾಗಿ, ಸಮೃದ್ಧವಾಗಿ ಬಾಳಿ ಬದುಕಿದ ನೂರಾರು ಪಕ್ಷಿಸಂಕುಲಗಳಿಂದು ಶಂಕರನ ಅಭಿವೃದ್ಧಿ ಮತ್ತು ನಗರೀಕರಣದ ಧಾವಂತಕ್ಕೆ ಬಲಿಯಾಗಿ ತಮ್ಮ ನೆಲೆಗಳನ್ನು ಶಾಶ್ವತವಾಗಿ ಕಳೆದುಕೊಂಡು ಅನಾಥವಾಗಿಬಿಟ್ಟಿದ್ದವು. ಆದರೂ ಆ ಕಹಿ ಸತ್ಯವನ್ನು ತಿಳಿಯಲಾರದ ಅವುಗಳು ಸಂಜೆಯಾಗುತ್ತಲೇ ಅಳಿದುಳಿದ ಮರಗಿಡಗಳಲ್ಲಿ ವಿಶ್ರಮಿಸಿ ರಾತ್ರಿ ಕಳೆಯಲು ಹೆಣಗುತ್ತಿದ್ದವು. ಅಲ್ಲೂ ಸ್ಥಳಾವಕಾಶ ಸಾಲದೆ ಸೋತು ಆಕಾಶದ ತುಂಬೆಲ್ಲಾ ಹಾರಾಡುತ್ತ ಅತೀವ ವಿಚಲಿತತೆಯಿಂದ ಅರಚುತ್ತ ತಮ್ಮ ತಮ್ಮೊಳಗೇ ಕಚ್ಚಾಡಿಕೊಂಡು ಬಳಲುತ್ತಿದ್ದ ದೃಶ್ಯವು ಅಲ್ಲಿನ ಯಾವ ಮನುಷ್ಯರಲ್ಲೂ ಕನಿಕರ ಅನುಕಂಪವನ್ನು ಮೂಡಿಸದಿದ್ದುದು ಆ ಮನುಷ್ಯರೊಳಗಿನ ಅಮಾನವೀಯತೆಯನ್ನು ಬಿಂಬಿಸುತ್ತಿತ್ತು. ಅನಾದಿಕಾಲದಿಂದಲೂ ತಮ್ಮನ್ನಾಶ್ರಯಿಸಿದ ಮೂಕ ಜೀವರಾಶಿಗಳಿಗೂ, ಮೇಲಾಗಿ ಮನುಷ್ಯರಿಗೂ ಮಮತೆಯ ತೊಟ್ಟಿಲಿನಂತಿದ್ದ ದೈತ್ಯ ಮರಗಿಡಗಳು ಮತ್ತು ಅವುಗಳನ್ನು ಪ್ರೀತಿ, ವಿಶ್ವಾಸದಿಂದ ಅಪ್ಪಿಕೊಂಡು ಬೆಳೆದಿದ್ದ ವಿವಿಧ ಔಷಧಿಯ ಬಳ್ಳಿಗಳು ತಂತಮ್ಮ ಅವಯವಗಳನ್ನು ಕ್ರೂರವಾಗಿ ಕತ್ತರಿಸಲ್ಪಟ್ಟು, ಎಳೆದು ಸೀಳಲ್ಪಟ್ಟು, ಬುಡ ಸಮೇತ ಕೀಳಲ್ಪಟ್ಟು, ಅಪಘಾತಕ್ಕೀಡಾಗಿ ರಸ್ತೆಯ ನಟ್ಟನಡುವೆ ನರಳಿ ಸತ್ತ ಮೂಕ ನಾಯಿ, ನರಿ, ಬೆಕ್ಕುಗಳಂತೆಯೂ ಹಾಗೂ ಇನ್ನು ಕೆಲವು ಅರೆಜೀವಾವಸ್ಥೆಯಲ್ಲಿ ಒದ್ದಾಡುತ್ತಿರುವಂತೆಯೂ ಭಾಸವಾಗುತ್ತಿದ್ದವು. ನಿಸರ್ಗದ ನಡುವೆ ಸರಳವಾಗಿ ಬಾಳಿ ಬದುಕುವ ಯಾವ ಜೀವರಾಶಿಗಳೇ ಆಗಲಿ ಅತ್ತ ಸುಳಿಯಲಾರದಷ್ಟು ಆ ಪ್ರದೇಶವು ಶುಷ್ಕ, ರಣಭೂಮಿಯಂತೆ ಕಾಣುತ್ತಿತ್ತು. ಏಕನಾಥರು ಆ ದೃಶ್ಯವನ್ನೆಲ್ಲ ದೀರ್ಘವಾಗಿ ಮತ್ತು ಸೂಕ್ಷ್ಮವಾಗಿ ಗಮನಿಸುತ್ತ ಮುನ್ನಡೆದರು. ಆದರೆ ಆ ಭೀಕರತೆಯನ್ನು ಕಾಣುತ್ತ ಹೋದವರಿಗೆ ನಿಧಾನವಾಗಿ ತಮ್ಮ ದೇಹದೊಳಗೆ ಯಾರೋ ಒರಟು ಕೈಗಳನ್ನು ತೂರಿಸಿ ಹೃದಯವನ್ನು ಬಲವಾಗಿ ಹಿಂಡಿದಂಥ ವೇದನೆ, ವಿಷಾದ ಹುಟ್ಟಿತು. ಜೊತೆಗೆ ತಮ್ಮ ತೀಕ್ಷ್ಣ ಬುದ್ಧಿಗೂ ನಿಲುಕದಂಥ ಹತಾಶಾಭಾವವೊಂದು ಮೊಳೆತು ಮೈಯಿಡೀ ತಣ್ಣನೆ ಬೆವರುತ್ತ ಉಸಿರುಗಟ್ಟಿದಂತಾಯಿತು. ಮರುಕ್ಷಣ ‘ಛೇ, ಛೇ! ಎಂಥ ಭಯಂಕರ ದೃಶ್ಯವಿದು! ಪ್ರಕೃತಿಯ ಮೇಲೆ ಮನುಷ್ಯನೊಬ್ಬ ಈ ಮಟ್ಟಕ್ಕೆ ಅತ್ಯಾಚಾರ ಎಸಗುವುದೆಂದರೇನು…? ಇಂಥ ಕೆಟ್ಟ ಕರ್ಮದಲ್ಲಿ ತಾವೂ ಭಾಗಿಯಾಗುವುದು ಸರಿಯೇ…?’ ಎಂದು ಅವರ ಅಂತರಾತ್ಮವು ಚೀರಿ ಕೇಳಿದಂತಾಯಿತು. ಮುಂದೇನೂ ಹೊಳೆಯದೆ ಅಶಾಂತರಾಗಿಬಿಟ್ಟರು. ಆದರೆ ಅಷ್ಟರಲ್ಲಿ ಅವರ ಸಂಸಾರವು ಅನುಭವಿಸುತ್ತಿದ್ದ ದಟ್ಟದಾರಿದ್ರ್ಯವೂ ಅದನ್ನು ನಿವಾರಿಸಲಾಗದ ಅವರ ದೌರ್ಬಲ್ಯವೂ ಕಣ್ಣೆದುರು ಬಂದು ಕುಣಿಯಿತು. ಆಗ ಅವರಲ್ಲಿ ಈ ಮೊದಲು ಉದ್ಭವಿಸಿದ್ದ ಆರ್ಧ್ರ ಭಾವನೆಯು ತಟ್ಟನೆ ಮುದುಡಿ ಮನಸ್ಸಿನಾಳಕ್ಕಿಳಿದು ಮರೆಯಾಯಿತು. ಹಾಗಾಗಿ ಅಂಥ ಯೋಚನೆಗಳು ತಮ್ಮ ಮನೋದೌರ್ಬಲ್ಯದ ಸೂಚನೆಯೆಂದು ಭಾವಿಸಿದ ಅವರು ಕೂಡಲೇ ತಮ್ಮ ವ್ಯಾವಹಾರಿಕ ಬುದ್ಧಿಯನ್ನು ಚುರುಕುಗೊಳಿಸಿ ಬಂದ ಕೆಲಸದತ್ತ ಗಮನ ಹರಿಸಿದರು. ಏಕನಾಥರಂತೆ ಶಂಕರನೂ ತನ್ನ ಜಮೀನನ್ನು ನೋಡುತ್ತ ನಡೆಯುತ್ತಿದ್ದ. ಆದರೆ ಅವನಿಗೆ ಅಲ್ಲಿ ತನ್ನಿಂದಾಗಿಯೇ ಕಲುಷಿತಗೊಂಡ ವಾತಾವರಣವಾಗಲಿ, ಅತಂತ್ರಗೊಂಡ ಜೀವರಾಶಿಗಳಾಗಲಿ ಅಥವಾ ತಮ್ಮ ಅವಯವಗಳನ್ನು ಸೀಳಿಸಿಕೊಂಡು ಕುರೂಪವಾಗಿ ಬಿದ್ದಿದ್ದ ಮರಗಿಡ ಬಳ್ಳಿಗಳಾಗಲಿ ಕಾಣುತ್ತಿರಲಿಲ್ಲ. ಬದಲಿಗೆ ಅವನ ಮನಸ್ಸು, ಮುಂದೆ ಅಲ್ಲಿ ತನ್ನಿಂದ ನಿರ್ಮಾಣಗೊಳ್ಳಲಿರುವ ಬಹುಮಹಡಿ ಕಟ್ಟಡಗಳು ಮತ್ತು ಶ್ರೀಮಂತ ಬಂಗಲೆಗಳು ಬೃಹದಾಕಾರವಾಗಿ ತಲೆಯೆತ್ತಿ ನಿಲ್ಲುತ್ತಿರುವಂತೆಯೂ ಆ ಮೂಲಕ ತಾನು ಹಾಗೂ ತನ್ನ ಮುಂದಿನ ಹಲವಾರು ತಲೆಮಾರುಗಳು ಆಗರ್ಭ ಸಿರಿವಂತಿಕೆಯಿಂದ ಮೆರೆದಾಡುವಂತೆಯೂ ಕಲ್ಪಿಸಿಕೊಳ್ಳುತ್ತ ಪುಳಕಿತಗೊಳ್ಳುತ್ತಿತ್ತು. ಅದೇ ಹೆಮ್ಮೆಯಿಂದ ನಡೆಯುತ್ತಿದ್ದವನು, ‘ನೋಡಿ ಗುರೂಜೀ, ಇದೇ ನನ್ನ ಜೀವಮಾನದ ದೊಡ್ಡ ಸಾಧನೆ!’ ಎಂದ ಗರ್ವದಿಂದ. ‘ಹ್ಞೂಂ, ಹ್ಞೂಂ, ಪರ್ವಾಗಿಲ್ಲ ಮಾರಾಯಾ ನೀನೂ ಸಣ್ಣ ಕುಳವೇನಲ್ಲ! ಈ ವ್ಯವಹಾರದಲ್ಲಿ ನೀನು ಇಷ್ಟೊಂದು ಹುಷಾರಿನವನೂ ಮತ್ತು ದೂರಾಲೋಚನೆ ಇರುವವನೂ ಎಂದರೆ ನಮಗೆ ನಂಬಲಿಕ್ಕೇ ಆಗುವುದಿಲ್ಲ! ನಮ್ಮ ಚೆನ್ನಮಣೆ ಆಟ ಗೊತ್ತುಂಟಲ್ಲವಾ ನಿಂಗೆ? ಅದರ ಮಾತಿನಂತೆ, ‘ಹೊಡೆದರೆ ಪೆರ್ಗವನ್ನೇ ಹೊಡೆಯಬೇಕು!’ ಅನ್ನುವುದನ್ನು ನೀನು ನಿಜ ಮಾಡಿಬಿಟ್ಟಿದ್ದಿ ನೋಡು!’ ಎಂದು ಏಕನಾಥರು ಅವನನ್ನು ಅಟ್ಟಕೇರಿಸಿದರು. ಅದರಿಂದ ಶಂಕರ ಮತ್ತಷ್ಟು ಉಬ್ಬಿದವನು ನಗುತ್ತ ಮುಂದೆ ಸಾಗಿದ. ಆದರೂ ಆ ಪ್ರದೇಶದೊಳಗಿನ ಪುರಾತನ ನಾಗಬನವನ್ನೂ ತುಳುನಾಡಿನ ದೈವಗಳ ನೆಲೆಗಳನ್ನೂ ತಾನು ಧ್ವಂಸ ಮಾಡಿದ್ದುದರ ತೀವ್ರ ಭಯವೊಂದು ಅವನನ್ನು ಅಡಿಗಡಿಗೂ ಕಾಡುತ್ತ ಹಿಂಸಿಸುತ್ತಿತ್ತು. ಅದನ್ನು ಹತ್ತಿಕ್ಕಿಕೊಳ್ಳುತ್ತ ಒಂದಷ್ಟು ದೂರ ದಾಪುಗಾಲು ಹಾಕಿದವನು ಅಲ್ಲೊಂದು ಕಡೆ ಇನ್ನೂ ಉಳಿದಿದ್ದ ಸಣ್ಣದೊಂದು ಹಾಡಿಯತ್ತ ಏಕನಾಥರನ್ನು ಕರೆದೊಯ್ದ. ಅಲ್ಲಿ ಕೆಲವು ಜೆಸಿಬಿ ಯಂತ್ರಗಳು ರೋಷಗೊಂಡ ಘೇಂಡಾಮೃಗಗಳಂತೆ ಆಕ್ರಮಣಕ್ಕೆ ಸಿದ್ಧವಾಗಿ ನಿಂತಿದ್ದವು. ಆದರೆ ಅವು ತಮ್ಮನ್ನು ಚಲಾಯಿಸುವವರಲ್ಲಿ ಹುಟ್ಟಿದ ನಾಗದೋಷದ ಭೀತಿಗೆ ತಾವೂ ಮಣಿದು ತಮ್ಮ ಹುಟ್ಟುಗುಣವನ್ನು ಹತ್ತಿಕ್ಕಿಕೊಂಡು ಮರಳಿ ಯಾವಾಗ ತಮ್ಮ ವಿಧ್ವಂಸಕ ಕೃತ್ಯಕ್ಕೆ ಚಾಲನೆ ದೊರಕೀತೋ…? ಎಂದು ಕಾಯುತ್ತಿದ್ದುದು ಅಲ್ಲಿನ ಒಂದಷ್ಟು ಜಾಗದಲ್ಲಿ ಅಳಿದುಳಿದಿದ್ದ ಜೀವರಾಶಿಗಳಿಗೂ ಮರಗಿಡ ಬಳ್ಳಿಗಳಿಗೂ ಸೂಕ್ಷ್ಮವಾಗಿ ತಿಳಿಯುತ್ತಿತ್ತು. ಆದ್ದರಿಂದ ಅವು ತಮ್ಮ ಅಂತ್ಯಕಾಲವನ್ನು ದುಃಖದಿಂದ ಎದುರು ನೋಡುತ್ತ ಕ್ಷೀಣವಾಗಿ ಉಸಿರಾಡಿಕೊಂಡಿದ್ದವು. ಶಂಕರ ತಾನು ಕಡಿದುರುಳಿಸಿದ್ದ ಹತ್ತಾರು ಮರಗಳನ್ನು ಹಾರಿ ನೆಗೆದು ದಾಟುತ್ತ ಒಂದು ಕಡೆ ಧೂಪ, ರೆಂಜೆ, ಸುರಗಿ, ಹೊನ್ನೆ ಮತ್ತು ಹಾಲೆಮರಗಳಿದ್ದ ಜಾಗಕ್ಕೆ ಏಕನಾಥರನ್ನು ಕರೆದೊಯ್ದ. ಆ ಮರಗಳ ನಾಲ್ಕು ಸುತ್ತಲೂ ಮುರಗಲ್ಲಿನಿಂದ ಕಟ್ಟಿದ ಸುಮಾರು ಎರಡಡಿಯಷ್ಟು ಎತ್ತರದ ಹಳೆಯ ಆವರಣವಿತ್ತು. ಅದರೊಳಗೊಂದು ವಿಶಾಲವಾದ ಚಚ್ಚೌಕದ ಮತ್ತು ಸ್ವಲ್ಪ ಎತ್ತರದ ಪೀಠವಿತ್ತು. ಆ ಪೀಠದ ಮೇಲೆ ಮತ್ತು ಅದರ ಸುತ್ತಮುತ್ತಲೂ ಅನೇಕ ಜಾತಿಯ ಮರಗಳು ಅವುಗಳ ಬೇರುಗಳು ಹಾಗೂ ಗಿಡಗಂಟಿ, ಪೊದೆಗಳು ಬೆಳೆದು ನಿಂತಿದ್ದವು. ಅದರಿಂದ ಆ ಪೀಠವು ಅಲ್ಲಲ್ಲಿ ಬಿರುಕು ಬಿಟ್ಟಿತ್ತು. ಆ ಬಿರುಕಿನೆಡೆಗಳಲ್ಲೂ ಅನೇಕ ಕುಬ್ಜವೃಕ್ಷಗಳು ಹುಟ್ಟಿ ಬೆಳೆದು ಜೀವಂತಿಕೆಯಿಂದ ನಳನಳಿಸುತ್ತಿದ್ದವು. ಆದರೆ ಜೆಸಿಬಿಯಿಂದ ಬಗೆದ ರಭಸಕ್ಕೆ ಪೀಠದ ಒಂದು ಭಾಗವು ಒಡೆದು ಪುಡಿಪುಡಿಯಾಗಿತ್ತು. ಅದರಲ್ಲಿ ದೈವದ ಕುರುಹುಗಳಾಗಿ ಸ್ಥಾಪಸಿಲಾಗಿದ್ದ ಸುಮಾರು ಮೂರು ನಾಲ್ಕು ಶತಮಾನಗಳಷ್ಟು ಪುರಾತನವಾದ ಕೆಲವು ಮುರಕಲ್ಲುಗಳು ಮತ್ತು ನಾಗನಕಲ್ಲುಗಳು ಸ್ವಸ್ಥಾನದಿಂದ ಕಿತ್ತು ಹೊರಗೆ ಎಸೆಯಲ್ಪಟ್ಟು ಅನಾಥವಾಗಿ ಬಿದ್ದಿದ್ದವು. ಆ ಕೆಲವು ಶಿಲೆಗಳ ಮೇಲೆ ಹೆಡೆ ಬಿಚ್ಚಿ ಬಾಲದ ತುದಿಯಲ್ಲಿ ನಿಂತ ನಾಗಿಣಿಯ ಚಿತ್ತಾರದ ಕೆತ್ತನೆಯೂ ಅದರ ಬಾಲದಿಂದ ನಡು ಶರೀರದವರೆಗೆ ದುಂಡಗಿನ ಮೊಟ್ಟೆಗಳ ಚಿತ್ತಾರಗಳೂ ಇದ್ದವು. ಇನ್ನು ಹಲವದರಲ್ಲಿ ಜೋಡಿ ನಾಗರಗಳ ಮಿಥುನ ಶಿಲ್ಪಗಳನ್ನೂ ಕೆಲವದರಲ್ಲಿ ಗಂಭೀರ ಹೆಡೆಯುಳ್ಳ ನಾಗರಾಜನನ್ನೂ ಮತ್ತು ‘ಪವಿತ್ರ ಗಂಟು’ ಹೆಣೆದ ನಾಗರ ಚಿತ್ತಾರಗಳನ್ನೂ ಕಲಾತ್ಮಕವಾಗಿ ಕೆತ್ತಲಾಗಿತ್ತು. ಅಂಥ ಕೆಲವು ಕಲ್ಲುಗಳು ಯಂತ್ರಗಳ ಹೊಡೆತಕ್ಕೆ ಸಿಲುಕಿ ಒಡೆದು ಪುಡಿಯಾಗಿದ್ದವು. ಏಕನಾಥರು ಅವನ್ನೆಲ್ಲ ಯೋಚನಾಗ್ರಸ್ತರಾಗಿ ಪರೀಕ್ಷಿಸತೊಡಗಿದವರು ಪದೇಪದೇ ತಮ್ಮ ಮುಖದಲ್ಲಿ ಭಯ ಮತ್ತು ವಿಷಾದವನ್ನು ಪ್ರಕಟಿಸುತ್ತ ಆ ಸ್ಥಳಕ್ಕೊಂದು ದೊಡ್ಡ ಸುತ್ತು ಹೊಡೆದರು. ಅವರ ಆಗಿನ ಮುಖಭಾವವನ್ನೂ ಅದಕ್ಕೆ ತಕ್ಕಂತೆ ಬದಲಾಗುತ್ತಿದ್ದ ಅವರ ವರ್ತನೆಯನ್ನೂ ನೋಡುತ್ತಿದ್ದ ಶಂಕರನೊಳಗಿನ ಆತಂಕವೂ ಇಮ್ಮಡಿಯಾಗುತ್ತಿತ್ತು. ಅದೇ ಚಡಪಡಿಕೆಯಿಂದ ಅವನು ಪದೇಪದೇ ಉಗುರುಕಚ್ಚಿ ಉಗಿಯುತ್ತಿದ್ದವನು, ಅಯ್ಯೋ ದೇವರೇ…! ಈ ದರ್ವೇಶಿ ಏಕನಾಥ ನಾನು ಸೂಚಿಸಿದ ಕೆಲಸ ಮಾಡುವುದನ್ನು ಬಿಟ್ಟು ನನ್ನ ಮನೆಮಠ ಲಗಾಡಿ ತೆಗೆಯುವ ಉಪಾಯವನ್ನೇ ಹೂಡುತ್ತಿದ್ದಾನೋ ಏನೋ…?’ ಎಂದು ತಳಮಳಿಸುತ್ತಿದ್ದ. ಆದರೆ ಅತ್ತ ಏಕನಾಥರೂ ಶಂಕರನ ಅಶಾಂತಿಯನ್ನು ಗಮನಿಸುತ್ತಲೇ ತಮ್ಮ ಕಾರ್ಯದಲ್ಲಿ ಮಗ್ನರಾಗಿದ್ದರು. ಸುಮಾರು ಹೊತ್ತಿನವರೆಗೆ ಆ ಪ್ರದೇಶವನ್ನೂ ಅಲ್ಲಿ ಹಾನಿಗೊಂಡಿದ್ದ ನಾಗ, ಪರಿವಾರ ದೈವಗಳ ಪೀಠವನ್ನೂ ಬೇರೆ ಬೇರೆ ದೃಷ್ಟಿಕೋನಗಳಿಂದ ವಿಶ್ಲೇಷಿಸಿದ ಏಕನಾಥರು, ಕೊನೆಯಲ್ಲಿ ತಮ್ಮೊಳಗಿನ ಲೆಕ್ಕಾಚಾರಕ್ಕೂ ಒಂದು ಸ್ಪಷ್ಟರೂಪವನ್ನು ಕೊಟ್ಟುಕೊಂಡರು. ಬಳಿಕ ಆ ಜಾಗದಿಂದ ತಟ್ಟನೆ ಹೊರಗೆ ಬಂದುಬಿಟ್ಟರು. ಒಮ್ಮೆ ನಾಲ್ಕು ದಿಕ್ಕುಗಳನ್ನೂ ಮತ್ತು ಸಂಜೆಯ ಧೂಳಿನ ಓಕುಳಿ ಹರಡಿದ್ದ ಆಕಾಶವನ್ನೂ ಗಂಭೀರವಾಗಿ ದಿಟ್ಟಿಸುತ್ತ ಕಣ್ಣುಮುಚ್ಚಿದವರು ದೀರ್ಘ ಉಸಿರೆಳೆದುಕೊಂಡು ಕೆಲವು ಕ್ಷಣ ಧ್ಯಾನಸ್ಥರಾದರು. ನಂತರ ಕಣ್ಣು ತೆರೆದು ಶಂಕರನತ್ತ ದೃಷ್ಟಿ ಹೊರಳಿಸಿದರು. ಅವನು ಒಳಗೊಳಗೇ ಪರಿತಪಿಸುತ್ತಿದ್ದವನು ಬಾರದ ನಗು ಬರಿಸಿಕೊಂಡು ಅವರನ್ನು ದಿಟ್ಟಿಸಿದ. ಆಗ ಏಕನಾಥರು, ‘ಎಲ್ಲವನ್ನೂ ನೋಡಿಯಾಯಿತು ಶಂಕರ. ಇನ್ನು ಹೊರಡೋಣವಾ…?’ ಎಂದು ಗಂಭೀರವಾಗಿ ಅಂದರು. ಆದರೆ ಅಷ್ಟು ಕೇಳಿದ ಶಂಕರ ಅಶಾಂತನಾದ. ‘ಅಂದರೇ ಗುರೂಜೀ…? ತುಂಡಾದ ನಾಗನ ಕಲ್ಲುಗಳನ್ನು ಏನು ಮಾಡುವ
You cannot copy content of this page