ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ತರಹಿ ಗಜಲ್

ಸಾನಿ ಮಿಸ್ರಾ: ಅಭಿಷೇಕ ಬಳೆ ಮಸರಕಲ್ಲ

ಅರುಣಾ ನರೇಂದ್ರ

From Darkness Comes Light Sunrise Sometimes darkness leads to the prettiest things during this Lake Sinclair sunrise. early morning sun birds stock pictures, royalty-free photos & images

ದಯಮಾಡಿ ತಂಬೆಲರಿಗೆ ತಲೆದೂಗಲು ಹೇಳಿ
ದಾರಿಯಲ್ಲಿ ಹೂವಿಗೆ ಅರಳಲು ಹೇಳಿ

ಅವನ ಕೈಯಲ್ಲಿ ನನ್ನದೇ ವಿಳಾಸವಿದೆ
ನೂರು ಕಣ್ಣ ನವಿಲಿಗೆ ನೆರವಾಗಲು ಹೇಳಿ

ಉರಿಬಿಸಿಲಲ್ಲಿ ನಡೆದು ಬರುತ್ತಿದ್ದಾನೆ
ಗಿಡ-ಮರಗಳಿಗೆ ನೆರಳಾಗಲು ಹೇಳಿ

ಪಡುವಣದ ಮುಖವೆಲ್ಲ ಕೆಂಪಾಗಿದೆ
ಸೂರ್ಯನಿಗೆ ಬೇಗನೆ ವಿಶ್ರಮಿಸಲು ಹೇಳಿ

ಪಯಣದಲಿ ಒಂಟಿತನ ಕಾಡಬಹುದು
ಜೊತೆಗಿದ್ದು ದುಂಬಿಗಳಿಗೆ ಹಾಡಲು ಹೇಳಿ

ದಾಟಿ ಬಂದ ಮೈಲುಗಲ್ಲುಗಳು ಎಷ್ಟೋ
ದಣಿವರಿಯದ ಹೆಜ್ಜೆಗಳಿಗೆ ನಿಲ್ಲಲು ಹೇಳಿ

ರಾತ್ರಿಯೆಲ್ಲಾ ಅರುಣಾ ಸುಖಿಸಬೇಕಿದೆ
ಧಾವಂತವಿಲ್ಲದೆ ಉಷೆಗೆ ಬರಲು ಹೇಳಿ

*****************************************************

About The Author

1 thought on “ತರಹಿ ಗಜಲ್”

Leave a Reply

You cannot copy content of this page

Scroll to Top