ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಸ್ವಾರ್ಥ

ಕವಿತೆ ಸ್ವಾರ್ಥ ಶರಶ್ಚಂದ್ರ ತಳ್ಳಿ ಕುಪ್ಪಿಗುಡ್ಡ ಗದ್ದುಗೆಯೇರಲುಹಣವನು ಎಸೆಯಿತುಗಳಿಕೆಯ ತೃಷೆಯಲಿನಶೆಯ ನೀಡಿತುಸ್ವಾರ್ಥದ ಮತವನು ಮುತ್ತಿ ಸಲಿಗೆಯ ಸುಲಿಗೆ ಮಾಡುತಒಸರುವ ಬೆವರಿನಬುತ್ತಿಯ ಕಟ್ಟಿತುನೆತ್ತರು ಹಿಚುಕಿ,ನೆಕ್ಕಿ ಕಾಡಿತುಕತ್ತಲು ಮುಕ್ಕಿ ಅನುದಿನ ಮತ್ತಿನಲಿಅಮೃತ ತುತ್ತಿನಲಿಕಡಲಾದರೂ ಕುಡಿದು,ಗತ್ತಿನಲಿ-ವಿಗತಿಯೆಡೆಗೆಒಂದನ್ಹತ್ತು ಸೇರಿಸಿತು ಸುಖದ ತಿರುಳ ಸವಿಯುತಸೇವಕನೆಂಬುದ ಮರೆಯಿತುಅಡಿಗೊಮ್ಮೆ ಜೊಳ್ಳ ನುಡಿದು,ಪರರ ಬಾದೆಯನರಿಯದೆನ್ಯಾಯ ನೀತಿ ಮಾತಾಡಿತು ಕೃತಕ ಕೀರ್ತಿಯ ಪಡೆಯಿತುವಿಕೃತ ಸೊಗದಲಿ ಹಾಡಿತುಸುಕೃತ ಭಾವವಿರದೆಅಂಬರವೇರಿಕೈ ಬೀಸಿ ಕರಗಿತು ಯಾರೋ ಬಿತ್ತಿದ ಬೀಜಹೂ-ಕಾಯಿಗಳ ಬಿಡದೆ ತಿಂದು,ಒಳಗು ಹೊರಗೂಗಿಡದ ಬುಡದನೆರಳೂ ಬಿಡದೆ,ದೈತ್ಯ ಹುಳುವಾಗಿ ಮೆರೆಯಿತು.……************************

ಸ್ವಾರ್ಥ Read Post »

ಕಥಾಗುಚ್ಛ

ಮುಕ್ತಿ

ನಾಗಶ್ರೀ ಅವರ ‘ ಮುಕ್ತಿ ‘ ಕತೆ ತುಂಬಾ ಸಹನೆಯಿಂದ , ಜೀವನ ಪ್ರೀತಿಯಿಂದ ಬರೆದ ಕತೆ. ಮುಕ್ತಿ ಓದುವಾಗ ಮಾಸ್ತಿಯವರು ನೆನಪಾದರು. ನಾಗಶ್ರೀ ಕತೆ ಹೇಳುವ ಶೈಲಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ತರಹ. ಕುಟುಂಬ, ಜೀವನ ಪ್ರೀತಿಯ ಆಯಾಮಗಳು ಈ ಕತೆಯಲ್ಲಿವೆ.
ಕಥನ ಕಲೆ ನಾಗಶ್ರೀಗೆ ಸಿದ್ಧಿಸಿದೆ. ಯಾವ ವಸ್ತುವನ್ನು ಹೇಗೆ ನಿರ್ವಹಣೆ ಮಾಡಬೇಕು ಎಂಬುದು ಕಲಾತ್ಮಕತೆ ದಕ್ಕಿದೆ ಎನ್ನುತ್ತಾರೆ ಸಹೃದಯಿ ನಾಗರಾಜ್ ಹರಪನಹಳ್ಳಿ.
ಈ ವಾರದ ಸಂಗಾತಿಗಾಗಿ ಈ ಕತೆಯನ್ನು ಆಯ್ಕೆ ಮಾಡಿಕೊಟ್ಟಿದ್ದಾರೆ…

ಮುಕ್ತಿ Read Post »

ಅಂಕಣ ಸಂಗಾತಿ, ಮರಣವೇ ಮಹಾನವಮಿ

ಎರಡು ವಚನಗಳನ್ನು ಗಮನಿಸಿದರೆ ಎರಡು ತನ್ನ ಭಾಷೆ, ರಾಚನಿಕ ವಿನ್ಯಾಸ ಮತ್ತು ಕೇಳುಗನ ಮೇಲೆ ಬೀರುವ ಪರಣಾಮದಲ್ಲಿ ಭಿನ್ನವಾದ ಮಾರ್ಗಗಳನ್ನು ಹಿಡಿದವುಗಳೇ ಆಗಿವೆ. ಒಂದು ಪ್ರಶ್ನಾರ್ಥಕವಾಗಿ ನಡೆದರೆ, ಮತ್ತೊಂದು ಬದಲಾದ ಕಾಲ, ಸಮಾಜಕ್ಕೆ ಹಿಂದಿನ ಮೌಲ್ಯವೊಂದನ್ನು ಸಾರಿ ಹೇಳಬೇಕಾದಾಗ ಉಂಟಾದ ಖೇಧ, ಸಿಟ್ಟುಗಳು ಕೆಲಸ ಮಾಡಿವೆ. ‘ಅರಿವುಳ್ಳೊಡೆ’ ಎಂಬ ಒಂದು ಪದವನ್ನು ಬಳಸಿ ಅರಿವನ್ನು ಉಂಟುಮಾಡುವುದರ ಕಡೆಗೆ ತನ್ನ ಉದ್ದೇಶವನ್ನು ದಾಸಿಮ್ಮಯ್ಯ ಯಶಸ್ವಿಯಾಗಿ ಹಸ್ತಾಂತರ ಮಾಡಿಬಿಡುತ್ತಾನೆ, ಆದರೆ ಬಸವಣ್ಣನವರಲ್ಲಿ ಸಿಟ್ಟು, ದೋಷಣೆಗಳು ಬಂದಿವೆ

Read Post »

ಇತರೆ, ಪ್ರಬಂಧ

ಜೀವ ಮಿಡಿತದ ಸದ್ದು

ನಮ್ಮ ಫ್ಲಾಟಿನ ಮನೆ; ನೆಲದ ಸ್ಪರ್ಶ ಮಣ್ಣ ಘಮ, ಮರಗಳ ಸ್ನೇಹ, ಬೆಕ್ಕು ನಾಯಿಗಳ ಸಾನಿಧ್ಯ ಇಲ್ಲದ ನೆಲೆಯಾದರೂ ಇಲ್ಲಿಯೂ ಜೀವಮಿಡಿತದ ಸದ್ದಿದೆ. ಮರಗಿಡಗಳ, ತಂಗಾಳಿಯ ಸ್ಪರ್ಶವಿದೆ, ವಿಧ ವಿಧ ಹಕ್ಕಿ ಹಾಡಿನ ನಿನಾದವಿದೆ.

ಜೀವ ಮಿಡಿತದ ಸದ್ದು Read Post »

ಇತರೆ, ದಾರಾವಾಹಿ

‘ಅಲ್ಲಾ ಗುರೂಜಿ, ಇದೇನಿದು..? ಇಷ್ಟು ವರ್ಷಗಳ ಕಾಲ ಬೊಂಬೈಯಲ್ಲಿದ್ದು ಬಂದವರು ನೀವು ಏನೂ ಮಾಡಲಿಲ್ಲವಾ!?’ ಎಂದು ಬಾಯಿ ತಪ್ಪಿ ಅಂದವನು ತಕ್ಷಣ ನಾಲಗೆ ಕಚ್ಚಿಕೊಂಡ. ಆದರೆ ಬಳಿಕ ಅದನ್ನೇ ಸಮರ್ಥಿಸಿಕೊಂಡಂತೆ ಅವರನ್ನು ದಿಟ್ಟಿಸಿದ. ಅಷ್ಟು ಕೇಳಿದ ಏಕನಾಥರಿಗೆ ಅಲ್ಲೇ ಸತ್ತವಷ್ಟು ಹಿಂಸೆಯಾಯಿತು.

Read Post »

ಕಥಾಗುಚ್ಛ

ಹೊಸ ಬಿಳಲು….!!

ಕಥೆ ಹೊಸ ಬಿಳಲು….!! ಯಮುನಾ.ಕಂಬಾರ ಚೆನ್ನವ್ವಳ ಕೈಗೆ ಹಚ್ಚಿದ BP ಮೀಟರ ತೆಗೆದು , ನರ್ಸಮ್ಮನಿಗೆ ಸುಗರ ಚೆಕ್ಕ ಮಾಡಲು  ಡಾಕ್ಟರ ‘ಕಿರಣ ‘    ಹೇಳಿದ.  ಚೆನ್ನವ್ವ ಬೆಡ್ಡ ಮೇ ಲಿಂದ ಗಡಬಡಿಸಿ ಎದ್ದು ನರ್ಸ್ಸಮ್ಮ ನನ್ನೇ ನೋಡತೊಡಗಿದಳು. ನರ್ಸ್ಸ ಕೈಯಲ್ಲಿ  ಚಿಕ್ಕದೊಂದು ಸೂಜಿಯಿತ್ತು ಅದರ ಮೇಲೆ ಅಂಟಿಸಿದ ಹಾಳೆ ಮಾಸಿತ್ತು. ಅದರ ಮೇಲೆ  ಅಲ್ಲಲ್ಲಿ ಕಂದು ಕಪ್ಪು ಕಲೆಗಳೂ ಇದ್ದವು . ಚೆನ್ನವ್ವ ತನ್ನ  ಮೈಯ ಶಕ್ತಿಯನ್ನೆಲ್ಲಾ ಒಂದುಗೂಡಿಸಿಕೊಂಡು   ” ಸೂಜಿ,  ಹೊಸದಿದ್ದ್ರ ಚುಚ್ಚರಿ …..” ಎಂದು ಹೇಳಿದಳು. “ಅವ್ರು….ಯಾವಾಗ ಬಂದ್ರುನೂ ಹಿಂಗ ಅಂತಾರ……ಹೊಸಾವ ಅದಾವ ಅಂತ ಹೇಳ್ರಿ…..! ” ಎಂಬ ಮಾತೊಂದು ತೂರಿ ಬಂತು …..ಎದುರಿನ ರೂಮಿನಿಂದ. ಚೆನ್ನವ್ವನ ಕೈ ಕಾಲುಗಳು ಕಂಪಿಸಿದವು. ಕೆಸರಿಗೆ ಕಲ್ಲು ಒಗೆದಾಗ   ಚಿಲ್ಲನೇ ಸಿಡಿವ ಕೆಸರಿನ ತರಹ ಸಲ್ಪು ನಿಧಾನತೆಯನ್ನು ತಾಳದೇ ದಾಸಪ್ಪ ಡಾಕ್ಟರ ನುಡಿದ ಮಾತುಗಳು ಚೆನ್ನವ್ವನ ಗಂಟಲಲ್ಲಿಳಿಯದೇ ಅವಳು ಒದ್ದಾಡುತ್ತಿದ್ದಳು. ಈಗಲಾದರೂ ಈತ ಸುಮ್ಮನಿರಬಾರದೇ. ….!!!ಎಂದು . ದಾಸಪ್ಪ ಡಾಕ್ಟರು ತುಂಬಾ ಜಾಣ ಡಾಕ್ಟರ ಎಂದೇ ಹೇಳಬೇಕು. ರೋಗಿಯ ಜೊತೆ ಬಹಳ ತಲೆ ಕೆಡಿಸಿಕೊಳ್ಳದೇ ರೋಗಿಯನ್ನು ಇಡಿಯಾಗಿ ನೋಡಿ ರೋಗವನ್ನು ಸರಿಯಾಗಿ ನಿರ್ಣಯಿಸುವ ರೀತಿ ರೋಗಿಗೆ ಬಲು ಮೆಚ್ಚಿಕೆಯಾಗುತ್ತಿತ್ತು. ಆದರೆ ಒಂದು ವಿಷಾಧದ ಸಂಗತಿಯೆಂದರೆ ರೋಗಿಯನ್ನು ಕೈ ಮುಟ್ಟಿ ನೋಡದೇ  ದೂರದಿಂದಲೇ ನಿಂತು ಅಳೆದು ಗುಳಿಗೆ ಬರೆಯುತ್ತಿದ್ದ ಡಾಕ್ಟರೆಂದೇ ಹೇಳಬೇಕು. ಆದರೆ ರೋಗಿಗಳು  ಅದಕ್ಕೆಲ್ಲಾ ತಲೆ ಕೆಡಿಸಿಕೊಳ್ಳದೇ ”  ತಮ್ಮ ಜ್ವರ , ತಲೆ ನೋವು,  ವಾಂತಿ ಭೇದಿ ,ಕಡಿಮೆ ಆಯಿತಲ್ಲಾ ಅಷ್ಟೇ ಸಾಕು ದೇವರೇ” ಎಂದು ತಣ್ಣಗಾಗುತ್ತಿದ್ದರು. ದಾಸಪ್ಪ ಡಾಕ್ಟರಿಗೆ ಬರುವ ರೋಗಿಗಳಲ್ಲಿ ಚೆನ್ನವ್ವ ಮಾತ್ರ ಗುಂಪಿನಿಂದ ಹೊರಗಿಟ್ಟ ಪದದಂತೆ ಇದ್ದಳು.ಜ್ವರ ಬಂದ್ರು ಆತು , ತಲೆನೋವು ಇದ್ದ್ರು ಆತು ,  ಏನಂಬಕು  ಒಂದು ಪ್ಯಾಕ್ಡ ಸಿರಂಜನ ತೆಗೆದುಕೊಂಡೇ ಬರುತ್ತಿದ್ದಳು. ದಾಸಪ್ಪ ಡಾಕ್ಟರ ಸ್ಟೆತೆಸ್ಕೋಪ ತೆಗೆದು ನಿಲ್ಲುವ ಪುರುಸೊತ್ತು ಇಲ್ಲದೇ ಇವಳು ಗಡಬಡಿಸಿ ಎದ್ದು ಮೊದಲು ನರ್ಸಳ ಕೈಯನ್ನೇ ನೋಡುತ್ತಿದ್ದಳು. ” ನಾ ಸಿರೆಂಜ ತಂದೇನ್ರಿ ….‌” ಎಂದು ದೊಡ್ಡ ಧೈರ್ಯ ಮಾಡಿ ಹೇಳಿದ್ದಳು. ಆಗ ದಾಸಪ್ಪ ಡಾಕ್ಟರ ಮುಖ ಕಪ್ಪಿಟ್ಟಿತು. ಆ ಕಪ್ಪು ಇವಳಿಗೆ ಅಳಿಸದ ನೋವಾಗುತ್ತಿತ್ತು. ದೊಡ್ಡ ದವಾಖಾನೆಯಲ್ಲಿ ರೋಗಿಯ ಕಿಡ್ನಿಯನ್ನೇ  ಡಾಕ್ಟರ ತಕ್ಕೊಂಡ್ರ್ಂತ ಎಂಬ ಸುದ್ದಿ ಕೇಳಿದ ಚೆನ್ನವ್ವ ದಂಗಾಗಿ ಹೋಗುತ್ತಿದ್ದಳು. “ತಾನು ತನ್ನ ದೇಹ ಆರೋಗ್ಯದ ಕುರಿತು ಎಚ್ಚರವಾಗಿದ್ದೇನೆ ” ಎಂಬ ಸಮಾಧಾನದಲ್ಲಿದ್ದಳು. ಅಷ್ಟೇ ಏಕೆ ತನ್ನ ತಾಯಿಗೆ  ಹೊಟ್ಟೆ ನೋವು ಬಂದಾಗ ಇದ ಡಾಕ್ಟರ  ಜ್ವರ ಗುಳಿಗೆ ಕೊಟ್ಟು ಮೂರು ಹೊತ್ತು ಮೂರು ಮೂರು ಗುಳಿಗೆ ತಗೋ ಅಂತ ಹೇಳಿದ್ದ್ರಲ್ಲಾ ಅವಾಗ ತನ್ನ ತಾಯಿಗಾದ ಆವಾಂತರ ಮರೆಯದಾಗಿದ್ದಳು ಚೆನ್ನವ್ವ. ಇಂತ ಅನಾಹುತಗಳನ್ನು ತಪ್ಪಿಸಿಕೊಳ್ಳುವ ಒಂದು ಉಪಾಯ ಚೆನ್ನವ್ವ ಹುಡುಕಿಕೊಂಡಿದ್ದಳು. ಡಾಕ್ಟರ ಏನೇ ಗುಳಿಗೆ ಕೊಟ್ರುನು ಮೊದಲು ಅದರಲ್ಲಿ ನಾಲ್ಕು ಭಾಗ ಮಾಡಿ ಒಂದ ಭಾಗ ತೆಗೆದುಕೊಂಡು ಪರೀಕ್ಷೆ ಮಾಡಿಯೇ ಮುಂದಿನ ಹೊತ್ತಿಗೆ ಪೂರ್ಣ ಗುಳಿಗೆಯನ್ನು ತೆಗೆದುಕೊಳ್ಳುತ್ತಿದ್ದಳು. ಈಗ ದಾಸಪ್ಪ ಡಾಕ್ಟರಿಗೆ ವಯಸ್ಸಾಗಿದೆ. ಆತ ತನ್ನ ವೃತ್ತಿಯನ್ನು ಮಗನಿಗೆ ವಹಿಸಿಕೊಟ್ಟಿದ್ದಾನೆ. ಈಗ ಮಗ ‘ ಕಿರಣ ‘ ಆಸ್ಪತ್ರೆಯಲ್ಲಿ  ಡಾಕ್ಟರಿಕಿ ಮಾಡುತ್ತಿದ್ದಾನೆ. ಯಾವುದೇ ವೃತ್ತಿ ಖಾಸಗಿ ವಲಯದಲ್ಲಿ ಕೈ ಹಿಡಿತ ಬೇಕಾದರೆ ಬಹಳ ಕಷ್ಟ ಎಂಬುದು ದಾಸಪ್ಪ ಡಾಕ್ಟರನಿಗೆ ಬಹಳ ಚೆನ್ನಾಗಿ ಗೊತ್ತು ಅದಕ್ಕಾಗಿ ಆತ ಟೆತೆಸ್ಕೋಪ ಕೆಳಗಿಟ್ಟು ಮನೆಯಲ್ಲಿ ಕುಳಿತುಕೊಳ್ಳಲಿಲ್ಲ.  ಮಗನ ಜೊತೆ ಬಂದು  ಆತನಿಗೆ ಟೆತೆಸ್ಕೋಪಕೊಟ್ಟು ತಾನು ಒಂದು ಕುರ್ಚ್ಚಿ ಹಾಕಿಕೊಂಡು  ಕುಳಿತು ತನ್ನ ರೋಗಿಗಳಿಗೆ ವಿಶ್ವಾಸಕೊಡುತ್ತಿದ್ದಾನೆ. “ನಾ ಯಾವುದ ದವಾಖಾನೆಗೆ ಹೋದ್ರುನೂ ಒಂದ ಹೊಸ ಸಿರಂಜನ ಒಯ್ದ ಒಯ್ಯತೇನ್ರಿ.. ” ಎಂದು ದಾಸಪ್ಪ ಡಾಕ್ಟರಿಗಾದ ಮಾನಸಿಕ ಅವಮಾನ ತೊಳೆಯಲು ಪ್ರಯತ್ನಿಸಿದಳು ಚೆನ್ನವ್ವ .”ಹೊಸಾವ ಇಟ್ಟಿರಿತೇವ್ರಿ..!  ” ದಾಸಪ್ಪ ಡಾಕ್ಟರ ವಾದ . ನೀವು ಹಿಂಗ ಸಿಟ್ಟಿಗೆದ್ದ್ರ ಹೆಂಗ್ರಿ…….!!  ” ಎನ್ನುತ್ತಾ  ಆತನ ತಪ್ಪನ್ನು ಹೈ ಲೈಟ ಮಾಡಿ ,”  ಆರೋಗ್ಯ ನಂದರಿ……!!” ಎಂದು ತನ್ನ ವಯಕ್ತಿಕ  ಬೇಡಿಕೆಯನ್ನೂ ದಾಸಪ್ಪ ಡಾಕ್ಟರ ಮುಂದಿಟ್ಟ ಳು. ದಾಸಪ್ಪ ಡಾಕ್ಟರಿಗೆ ಮುಂದೆ ಮಾತನಾಡಲು ದಾರಿ ಸಿಗಲಿಲ್ಲವೋ ಎಂಬಂತೆ  ಅವನಿಂದ ಮಾತುಗಳು ಮತ್ತೆ  ಮೂಡಿ ಬರಲಿಲ್ಲ. ತನ್ನ ವೃತ್ತಿಯನ್ನು ಮಗ ಕಿರಣನಿಗೆ ವಹಿಸಿಕೊಟ್ಟಿದ್ದ. ” ಅವೇರ್ನ್ನೆಸ್ಸ ನಿಮ್ಮ ಹಕ್ಕು ” ಎಂದನು ಕಿರಣ. ಆತನ ಮಾತುಗಳನ್ನು ಕೇಳಿದ ಚನ್ನವ್ವನಿಗೆ  ಮರದಿಂದ ಬೀಳುವ ಮನುಷ್ಯನಿಗೆ ಸಿಕ್ಕ ಮರದ ಬಿಳಲಿನಂತೆ ಆಧಾರವಾಯಿತು. ಆ ಬಿಳಲನ್ನೇ ಹಿಡಿದು ಒಂದು ಸಾರೆ ಜೀಕಿ ಬೀಗಿದಳೂ ಕೂಡಾ. ತನ್ನ ಉಪಾಯಕ್ಕೆ ಸಿಕ್ಕ” ಹೊಸ ಶಬ್ದ, ಹಾಗೂ ರೋಗಿಯ ಹಕ್ಕು ” ಎಂದು ಅರಿತುಕೊಂಡಳು. ನರ್ಸ್ಸ ಹಳೇ ಸೂಜಿ ಒಗೆದಳು.  ಬಾಕ್ಸಿನಿಂದ ಹೊಸ ಸೂಜಿ ತೆಗೆದು ” ಇದನ್ನ ನೋಡ್ರಿ ….! ? ” ಎಂದಳು.” ಹೂನ್ರಿ…..ಇಷ್ಟ ಆದ್ರ ಸಾಕ್ರಿ….” ಎನ್ನುತ್ತಾ …..ಚೆನ್ನವ್ವ ಗೆಲುವಿನಿಂದ ತನ್ನ ಬಲಗೈಯ ಬೆರಳನ್ನು ನರ್ಸ್ಸಮ್ಮನಿಗೆ  ನೀಡಿದಳು. ಆದರೆ ದಾಸಪ್ಪ ಡಾಕ್ಟರು ತಾನು ಬಿಟ್ಟ ಕಪ್ಪು ನೆರಳಿನಲ್ಲಿ ಮತ್ತಷ್ಟು ಕಪ್ಪಾಗಿ ಕಾಣತೊಡಗಿದನು. **************************

ಹೊಸ ಬಿಳಲು….!! Read Post »

ಕಾವ್ಯಯಾನ

ಗಜಲ್

ಗಜಲ್ ಸಿದ್ಧರಾಮ ಹೊನ್ಕಲ್ ದಿನಾರಾತ್ರಿ ನೆನಪುಗಳ ಕಾಡಾಟ ಅತಿಯಾಗಿ ನಾಳೆಯಿಂದವಳ ಮರೆಯಬೇಕು ಅನ್ಕೋತೇನೆಇವಳಿಂದೆನಾಗಬೇಕಿದೆ ಈ ಮನಸಿಗರಾಯಳ ಸಹವಾಸವೇ ಬಿಟ್ಟು ಬಿಡಬೇಕು ಅನ್ಕೋತೇನೆ ಸಿಟ್ಟು ಸೆಡವು ದು:ಖ ಸೊಕ್ಕು ಸ್ವಾಭಿಮಾನ ನೆನಪಾಗಿ ಕ್ಷಣ ಹೀಗಂದುಕೊಂಡಿರುತ್ತೇನೆಅವಳು ಕೊಟ್ಟ ಕಂಫರ್ಟಲಿ ಶುಭರಾತ್ರಿ ಹೇಳಿ ಮನಸಾರೆ ಮರೆಯದಿರಬೇಕು ಅನ್ಕೋತೇನೆ ಬೆಳಿಗ್ಗೆ ಎದ್ದೊಡನೆ ಹಿಂದಿನದೇನು ನೆನಪಿಡದೆ ಹೃದಯದಿ ಶುಭೋದಯ ಹೇಳಿರುತ್ತೇನೆಮಾತು ಕಥೆ ಯಥಾ ರೀತಿ ಪ್ರೀತಿ ಮೂಗಿನ ತುದಿಯ ಕೋಪವಿರಬೇಕು ಅನ್ಕೋತೇನೆ ಅನುನಯದ ಮಾತಿಗಿಂತ ಕೋಪತಾಪದ ಮಾತು ತುಸು ಜಾಸ್ತಿ ಆಗಿದೆಯೇನೋಆದರೇಕೋ ಬಿಟ್ಟೆನೆಂದರೂ ಬಿಡದೀ ಮೋಹ ಸದಾ ಸಂಗದಲ್ಲಿರಬೇಕು ಅನ್ಕೋತೇನೆ ಅವಳಿಗೆ ಏನಿವೆಯೋ ಸಂಕಟ ಹೇಳಲಾರಳು ಕೇಳಿ ಇರಲೆಂದು ಸಂತೈಸುವ ಹೃದಯವಂತೆಹೊನ್ನಸಿರಿ’ಬದುಕಿರಲಾರ ಅನುರಾಗದಿ ಸದಾ ನೀನು ಜೊತೆಗಿರಲೇಬೇಕು ಅನ್ಕೋತೇನೆ *********************************

ಗಜಲ್ Read Post »

ಕಾವ್ಯಯಾನ

ಕಲ್ಪನೆಗೂ ಜೀವ ಬರುವಂತಿದ್ದರೆ

ಮುಗಿಯದ ಕನವರಿಕೆಗಳ ನಡುವೆ
ಜೀವ ಬಾರದ ಕಲ್ಪಿನೆಗಳಿಗೆ ಕಡಿವಾಣ ಹಾಕಲಾಗದೆ ಮುನಿಸಿಕೊಂಡ ರಾತ್ರಿಗಳು
ಆಗೆಲ್ಲಾ ಒದ್ದೆಯಾಗುತ್ತಿದ್ದದ್ದು ಅಮ್ಮನ ಮಡಿಲು.

ಕಲ್ಪನೆಗೂ ಜೀವ ಬರುವಂತಿದ್ದರೆ Read Post »

You cannot copy content of this page

Scroll to Top