ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಮಹಾದೇವಿ ಅಕ್ಕ

ಕವಿತೆ ಮಹಾದೇವಿ ಅಕ್ಕ ಡಾ.ಕೆ.ಶಶಿಕಾಂತ ಬರೀ ಹಗಲಭ್ರಮೆಯೊಳಗಿನಈ ಜಗಕೆ,ನಿನ್ನಬೆತ್ತಲೆತನದ್ದೇ ಚಿಂತೆ….ತನ್ನ ಬೆತ್ತಲ ಬದುಕಿನಅರಿವು ಇದ್ದರಲ್ಲವೇ…ಬಟ್ಟೆ ಹೊದ್ದಿಸಲಾಗದನಿನ್ನ ದಿಗಂಬರತನವತಿಳಿಯಲು… ಬೋಳು ಗುಡ್ಡದಂತೆಬರೀ ಮಂಡೆ ಬೋಳಾದಈ ಹಿರಿಯರ ಲೋಕದಲ್ಲಿಹುಡುಕುತ್ತಲೇ ಇದೆ ಈ ಜಗಮೋಟು ಮರಗಳ ಗುಂಪಿನಲ್ಲಿಚಿಗುರೊಡೆದ ಗಿಡವನರಸುವಂತೆಬರಡಾಗಿರುವ ಭಾವದಲಿಬಯಲ ಚೆಲುವ ಚೆನ್ನನ…. ಮರವೇ ಮರುಗುವಂತೆಗರಗರ ಸುತ್ತಿದ್ದಾಯ್ತು ,ನೀರೇ ಕಲಕುವಂತೆಮುಳುಮುಳುಗಿಮಿಂದದ್ದಾಯ್ತು ,ಅರ್ಥವನರಿಯದಗಿಳಿಯಂತೆ ನುಡಿದುತನ್ನ ಹಿರಿಮೆಯ ಸೊಲ್ಲುದನಿಯಿಲ್ಲದಾಯ್ತು,ತಲೆಮಾರುಗಳ ಕಾಲಚೆನ್ನನನು ಕಾಣದಾಯ್ತು… ದೃಢವಲ್ಲದ ಹೊಟ್ಟೆಗಾಗಿಮೃಡನನು ಗುರಿಮಾಡಿಹೇಮಕಾಮದ ಇಚ್ಛೆಗೆಚೆನ್ನನರಿವ ಮನಕೆ ಕಿಚ್ಚಿಟ್ಟುಕದಳಿಯ ದಾರಿಯರಿಯದೇದಿಕ್ಕೆಟ್ಟ ಬದುಕಿಗೆಸಾವ ವಿದ್ಯೆಯನರುಹಿದಮಹದ ಗುರು ಮಹಾದೇವಿ…. ಹರಕೆ ಕಾಣಿಕೆಗಳಿಡದಜೀವಕೋಟಿಯನಿರಿಯುವನೂರುದೇವತೆಗಳಈ ಲೋಕದಲ್ಲಿ,,ಬಿಲ್ವಬೆಳವಲಗಳಸಂದೇಹವ ಬಿಡಿಸಿಟ್ಟುಬಾಳೆಮಾವುಗಳಿಗೆನೀರೆರೆದು ಸಲಹಿದವನಕುರುಹನು ತೆರೆದಿಟ್ಟುಜಗವ ಪೊರೆದಮಹಾತಾಯಿನೀನಲ್ಲವೇ ಅಕ್ಕ… ಸತ್ತು ಅಳಿವ ಕೌಶಿಕನವಸ್ತು ನಾನಲ್ಲೆಂದುಸಾವಿಲ್ಲದ ಗಂಡನಿಗೊಲಿದಸಾವಿರದ ಚೆಲುವೆ ನೀನಕ್ಕ ನಾಮ ರೂಪಗಳನಳಿದಸೀಮೆ ಗಡಿಗಳನಳಿದಬಸವನ ಈ ಕಲ್ಯಾಣದಸುಳಿಗಾಳಿ ನೀನಕ್ಕ ಚಳಿಮಳಿ ಸೋಂಕದವಸ್ತ್ರ ಹೊದೆಯಲರಿಯದಬೆಳಕಿನ ದಿಗ್ ದಿಗಂಬರನೀನಲ್ಲವೇ ಅಕ್ಕ. ಜಗದ ಕತ್ತಲೆ ಕಳೆದಬಾಳ ಕದಳಿಯಜ್ಯೋತಿಯಾಗಿಇಹದ ಜೀವಕೆದೀವಿಗೆಯಾದಚೆನ್ನನ ಬೆಳಕು ನೀನೇ ಅಕ್ಕ.ಚೆನ್ನನ ಬೆಳಕು ನೀನೇ ಅಕ್ಕ ****************************

ಮಹಾದೇವಿ ಅಕ್ಕ Read Post »

ಪುಸ್ತಕ ಸಂಗಾತಿ

ಬಿಳಿಯ ಬಾವುಟ ಹಿಡಿದ ಕವಿತೆಗಳು

ಪುಸ್ತಕ ಸಂಗಾತಿ            ಶಾಂತಿ- ಪ್ರೀತಿಯ ಬಿಳಿಯ ಬಾವುಟ ಹಿಡಿದ ಕವಿತೆಗಳು ಕವಿತೆ ಅಂತರಂಗದ ಕನ್ನಡಿ ಆಗುವಷ್ಟರ ಮಟ್ಟಿಗೆ ಸಾಹಿತ್ಯದ ಇನ್ನ್ಯಾವ ಪ್ರಕಾರವೂ ಆಗುವುದಿಲ್ಲ ಎಂಬ ಮಾತು ಕವಿಯತ್ರಿ ಕವಿತಾ ಕುಸುಗಲ್ಲರ ’ಬೆಳಕಿನ ಬಿತ್ತನೆ’ ಕವನ ಸಂಕಲನ ಓದಿದಾಗ ತಟ್ಟಂತ ನೆನಪಾಯಿತು. ಡಾ.ಕವಿತಾ ಕುಸುಗಲ್ಲ ಅವರ ಮೂರನೆಯ, ಒಂದು ರೀತಿಯ ವಿಭಿನ್ನವಾದ ಸಂಕಲನವಿದು. ಈ ಸಂಕಲನದಲ್ಲಿ ಅವರು ನಾನು, ನೀನು, ಆನು, ತಾನು ಎಂದು ನಾಲ್ಕು ಭಾಗಗಳಾಗಿ ಮಾಡಿಕೊಂಡು ಒಂದೊಂದು ಭಾಗದಲ್ಲಿ ಮಹಿಳೆಯಾಗಿ ಮಗ, ಮಗಳು, ಗಂಡನನ್ನು ಸಂಬೋಧಿಸಿ, ಜೀವನಕ್ಕೆ ಸಂಬಂಧಿಸಿದಂತೆ ಹಾಗೂ ಸಾಮಾಜಿಕ, ಪರಿಸರ, ನಾಡು ನುಡಿ, ಸಂಸ್ಕೃತಿ ಕುರಿತಂತೆ ವೈಯಕ್ತಿಕ, ಕೌಟುಂಬಿಕ, ಆಧ್ಯಾತ್ಮ-ತಾತ್ವಿಕ, ಮತ್ತು ಸಾಮಾಜಿಕ ನೆಲೆಗಳು ಈ ನಿಟ್ಟಿನಲ್ಲಿ ಒಂದಕ್ಕೊಂದು ತಳುಕು ಹಾಕಿಕೊಂಡಿರುವುದನ್ನು ಅವರು ತಮ್ಮ ಕವಿತೆಗಳಲ್ಲಿ ಕಟ್ಟಿಕೊಡುತ್ತಾ ಹೋಗುತ್ತಾರೆ. ದೈನಂದಿನ ಆಗುಹೋಗುಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಹೆಣ್ಣಾಗಿ, ಹೆಂಡತಿಯಾಗಿ, ತಾಯಾಗಿ ನಾಗರೀಕಳಾಗಿ ತಮ್ಮ ಅನುಭವಗಳಿಗೆ ದಕ್ಕಿದ ಎಲ್ಲ ವಿಷಯ ವಸ್ತುಗಳನ್ನು ತಮಗೆ ಹೇಳಬೇಕೆನಿಸಿದ ಸರಳ ನೇರ ನುಡಿಗಳಿಂದ ಕವಿತೆಯಾಗಿಸಿದ್ದಾರೆ. ಸಾಕಷ್ಟು ಕವಿತೆಗಳು ತುಂಬಾ ಪುಟ್ಟದಾಗಿ ಹನಿಗವನಗಳಂತೆ ಅನಿಸಿದರೂ ಅರ್ಥವ್ಯಾಪ್ತಿಯಲ್ಲಿ ಅಗಾಧವಾದವುಗಳೂ ಆಗಿವೆ. ಆ ಕ್ಷಣಕ್ಕೆ ಅನಿಸಿದ್ದನ್ನುಯಾವ ಕವಿತಾ ಲಕ್ಷಣಗಳನ್ನೂ ಅಂಟಿಸದೆ, ಯಾವ ಕುಸುರಿ ಕೆಲಸ ಮಾಡದೆ ನಮ್ಮ ಮುಂದಿಡುತ್ತಾರೆ. ’ಇಸಂ’ ಗಳಿಗೆ ಒಳಗಾಗದೆ ಬರೆಯುವುದೂ ಅವರ ಐಡೆಂಟಿಟಿ ಆಗಿರಬಹುದು. ಅವರ ಅನಿಸಿಕೆಗಳು, ಭಾವನೆಗಳು ಪುಟ್ಟ ಪುಟ್ಟ ಕವಿತೆಗಳಾಗಿ ಮೈತಳೆದಿರುವಾಗ ನನಗನಿಸಿದ್ದಿಷ್ಟೇ…ಅಂದವಾದ ಹೂವಿಗೆ ರಂಗು ಬಳಿವುದೇತಕೆ  ಎಂದು… ಸದಾ ಹೆಣ್ಣು ಅನುಭವಿಸುವ ಆಡಲಾರದ ಅನುಭವಿಸಲಾರದ ಸಾವಿರ ಒಳತೋಟಿಗಳು, ತಲ್ಲಣಗಳು ಕವಿತೆಯಾಗಿ ಬರೆಸಿಕೊಂಡಿವೆ. ಇಲ್ಲಿ ಎಲ್ಲಾ ಧಾರಣಶಕ್ತಿಯ ತಾಯಿ, ತಾಯ್ತನದ ಅಭಿವ್ಯಕ್ತಿ ಉಂಟು. ಅಸಹಾಯಕತೆ , ಕುತೂಹಲ, ಸಂಭ್ರಮ, ನಿವೇದನೆ, ವಿಷಣ್ಣತೆ ಎಲ್ಲವೂ ಅಭಿವ್ಯಕ್ತಿಗೊಂಡಿದೆ.  ಹೆಣ್ಣಾಗಿ, ತಾಯಾಗಿ, ಹೆಂಡತಿಯಾಗಿ ಹೇಗೇ ಆದರೂ ಹೆಣ್ಣಿನ ಭಾವ ಪ್ರಪಂಚವನ್ನು ಅನಾವರಣಗೊಳಿಸುವ ಕವನಗಳಾಗಿ ಹುಟ್ಟಿಕೊಂಡಿವೆ. ಮಗಳಾಗಿ ಬಾ, ಪುರುಷಾರ್ಥ  ಸಾಧನೆಗೆ, ಗಾಂಧಾರಿ, ಸೀತೆ, ಬೆಳಕು, ಬಿನ್ನಹ, ನಾನೀಗ ಬದಲಾಗಿದ್ದೇನೆ, ಕಳೆದುಕೊಂಡಿದ್ದೇನೆ ಮುಂತಾದ ಹಲವು ಕವಿತೆಗಳಲ್ಲಿ ಗಂಡಸಿನ ಅಹಂಗಳನ್ನು ನಯವಾಗಿ ದಾಖಲಿಸುತ್ತಾ ಅವನ ಅಹಂ ಕಳೆದು ಮನುಷ್ಯನನ್ನಾಗಿಸುವಲ್ಲಿ ಸಾರ್ಥಕತೆ ಕಾಣಬಯಸುವುದು ಗೋಚರಿಸುತ್ತದೆ. ಯಾವ ಸಾಲುಗಳಲ್ಲೂ ಕವಿಯತ್ರಿ ಆಕ್ರೋಶ ದಾಖಲಿಸುವುದಿಲ್ಲ. ಆದರೂ ಪುರುಷಾಕಾರವನ್ನು ನಯವಾಗಿ ಹೇಳುತ್ತಾರೆ. ಅದೇ ಈ ಕವಿತೆಗಳ ಸೊಬಗು ಹಾಗೂ ಆಶಯ ಕೂಡ… ಇನ್ನು ತಾಯಿ ಮಕ್ಕಳ ವಾತ್ಸಲ್ಯ ಕುರಿತು ಕವಿತಾ ಅವರು ಸಂಪೂರ್ಣ ವಾತ್ಸಲ್ಯಮಯಿ ಅಮ್ಮನೇ ಆಗಿ ಗೆದ್ದಿದ್ದಾರೆ. ಕೆ ಎಸ್ ನರಸಿಂಹಸ್ವಾಮಿಯವರು ಬರೆದಿರುವ ಮಕ್ಕಳ ಕುರಿತು ಕೆಲವು ವಾತ್ಸಲ್ಯ ಗೀತೆಗಳ ಸಾಲುಗಳನ್ನು ಕವಿತಾ ಅವರ ರಚನೆಗಳು ಮತ್ತೆ ಮತ್ತೆ ನೆನಪಿಸುತ್ತವೆ. “ ಹಾಲಿನಂತೆ ಅವನ ಮನಸ್ಸು/ ದುಂಡು ಮುತ್ತಿನಂತೆ ನುಡಿ/ ಅವನ ಕೇಕೆ ನನ್ನ ಕನಸು/ದೇವರವನು ನಾನು ಗುಡಿ” ಎಂಬ ಕವಿಯ ಸಾಲುಗಳಲ್ಲಿ “ ಅಮ್ಮನ ಬಂಗಾರ/ ಅಪ್ಪನ ಮಂದಾರ/ ಮಾತಿನ ಮಲ್ಲಿಗೆ / ಕುಣಿವ ಕಾಮನ ಬಿಲ್ಲೇ ಬಾ  “ ಎಂಬ ಕವಯಿತ್ರಿಯ ಸಾಲುಗಳಿಗೆ ನೆನಪಾಗುತ್ತವೆ. ಮಕ್ಕಳ ಪ್ರೀತಿಯ ಒಡನಾಟವೇ ತಾಯ್ತಂದೆಯರ ಭಾಗ್ಯ, ಮಕ್ಕಳಿರುವ ಮನೆಯೇ ಸೌಭಾಗ್ಯದ ನಿಧಿ ಎಂಬ ಹಿರಿಯರ ಮಾತುಗಳನ್ನೂ ಸಾಬೀತು ಪಡಿಸುವಂತೆ ಕವಿಯತ್ರಿ ತಾಯಿ ಮಗಳು ವಾತ್ಸಲ್ಯಗೀತಗಳಲ್ಲಿ ಅಪ್ಪಟ ತಾಯ್ತನದ ಹೊಳೆಯನ್ನೇ ಹರಿಸಿದ್ದಾರೆ. ಎಷ್ಟು ಬರೆದರೂ ತೃಪ್ತಿ ಇಲ್ಲದಂತೆ ತಾಯಿಯಾಗಿ ದಕ್ಕಿದ ಅನುಭವಗಳ ಕಟ್ಟಿಕೊಡುತ್ತಾ ಅರಿವಿನ ದಾರಿ ಮಗುವಿನ ದಾರಿ ಎಂದು ಮನಗಾಣಿಸುತ್ತಾರೆ. ಪುಟ್ಟ ಕಂದಮ್ಮಗಳು ತೊಟ್ಟಿಲಲ್ಲಿ ಮೈಮುರಿದು ಬಟ್ಟಲುಗಣ್ಣು ತೆರೆದು ಬೆಳಗಾಯಿತು (ದೀಪದ ಮಲ್ಲಿ-ಕೆ.ಎಸ್.ನ.) ಎಂಬ ಕವಿಯ ಸಾಲಂತೆ ಬಾಳ ಬೆಳಕು ಯಾವುದು ಎಂಬುದನ್ನು  ಎಂಬುದನ್ನು ಎತ್ತಿ ಹಿಡಿದಿರುವುದು ಚಂದವೆನಿಸುತ್ತದೆ.. ಇನ್ನು “ಕತ್ತಲೆಯಲ್ಲಿ ಬೆಳಕಿನ ಬಿತ್ತನೆ” ಕವಿತೆಯಲ್ಲಿ ಮೊದಲ ಸಾಲುಗಳಲ್ಲೇ ಸಂಕಲನದ ಶೀರ್ಷಿಕೆಯ ಆಶಯಕ್ಕೆ ಸಂಪೂರ್ಣ ಒತ್ತು ಕೊಟ್ಟಂತೆ ತುಂಬಾ ಚಂದವಾಗಿ ರಚಿತವಾಗಿದೆ. “ ರಾತ್ರಿ ಮಲಗಿದ ಮೇಲೆ ನಮ್ಮ ಹಗಲುಗಳೇಳುತ್ತವೆ” ಎಂದು ಆರಂಭವಾಗುವ ಈ ಸಾಲುಗಳೇ ಅದ್ಭುತ… ರಮ್ಯ ಕಲ್ಪನೆ… ಎಲ್ಲ ಹೆಣ್ಣುಗಳ ಅಸಹಾಯಕತೆ ಅಥವಾ ಪರಿಸ್ಥಿತಿಯ ವಕಾಲತ್ತು ವಹಿಸಿದಂತ ಕವಿತೆ ಇದು ಎನ್ನಬಹುದು. ಆಧುನಿಕತೆಯ ಈ ಸಂಕ್ರಮಣ ಕಾಲದಲ್ಲಿ ಹೆಣ್ಣು ಸಾಂಸಾರಿಕ ಹಾಗು ಸಾರ್ವಜನಿಕವಾಗಿ ಅಥವಾ ಸಾಮಾಜಿಕವಾಗಿ ಅಥವಾ ವೃತ್ತಿಪರಳಾಗಿ ಹೊಣೆ ಹೊತ್ತು ಎಷ್ಟು ನಿಸ್ಸಹಾಯಕ ಪರಿಸ್ಥಿತಿಯಲ್ಲಿದ್ದಾಳೆ ಎಂದರೆ ಮನೆ ಮಕ್ಕಳು ಸಂಸಾರದ ಹೊಣೆಯನ್ನು ಅವಳಿಗೆ (ಹೊರಿಸಿದ್ದು) ಬಿಡಲಾಗುತ್ತಿಲ್ಲ, ತನ್ನ ಸ್ವಂತ ಬದುಕನ್ನೂ ರೂಪಿಸಿಕೊಳ್ಳಲು ಆಗುತ್ತಿಲ್ಲ. ಯಾವುದೋ ಕಾಣದ ಒಂದು ಅದೃಶ್ಯ ಮಂತ್ರದಂಡದಂತೆ ಅವಳನ್ನು ಕುಟುಂಬದ ಜವಾಬ್ದಾರಿಗಳು ನಿಯಂತ್ರಿಸುತ್ತಿರುವುದೆಂತಹ ದುರಂತ ಎನಿಸುತ್ತದೆ. ಪುರುಷನಿಗಿರುವ ಯಾವ ಸಹಕಾರ ಸೌಲಭ್ಯಗಳೂ ಅವಳಿಗೆ ಯಾವ ಅಡೆ ತಡೆಯಿಲ್ಲದೆ ಲಭ್ಯವಾಗುವುದಿಲ್ಲ..( ಬೇಕು ಎಂದರೆ ಎಲ್ಲವನ್ನೂ ಹೋರಾಡಿಯೇ ಪಡೆಯಬೇಕು) ಎಂಥಹುದೇ ಮನೆಯಲ್ಲಿರಲಿ ಅವಳು ತಾಯಿ, ಹೆಂಡತಿ, ಮಗಳು, ಜವಾಬ್ದಾರಿ ತೋರಿಸಬೇಕಾದ ಗೃಹಿಣಿಯಾಗಿ ಮೊದಲು ಕಾಣಬೇಕು. ಆನಂತರ ಅವಳು ಅವಳ ’ಹೆಸರಿ’ನವಳು. ಇದು ಸಾರ್ವಕಾಲಿಕ ಸತ್ಯವಾಗಿದೆ. ಹಾಗಾಗಿಯೇ ಅವಳಿಗೆ ರಾತ್ರಿ ಮಲಗಿದ ಮೇಲೆ ನಮ್ಮ ಹಗಲುಗಳೇಳುತ್ತವೆ ಎನ್ನುವಂತಾಗಿರುವುದು. ಆಗಲಾದರೂ ಅವಳ ಹಗಲಿನ ಯೋಚನೆ ಯೋಜನೆಗಳನ್ನುಇರುಳಲ್ಲಿ ಸಾಕಾರಗೊಳಿಸಿಕೊಳ್ಳಲು ಸಮಯ ಸಿಗುತ್ತದೆಯೇ? ಆಗಲೂ ಆಕೆ ತಾಯಾಗಿ ’ಪೊರೆವ’ ಕರ್ತವ್ಯ ಮುಗಿಸುವಷ್ಟರಲ್ಲಿ ಮತ್ತೆ ಬೆಳಕಾಗಿಬಿಡುವುದು ಎಂತಹ ಚೋದ್ಯ ನೋಡಿ…ಅವಳ ’ಸಮಯ’ ಅವಳಿಗೆ ಸಿಕ್ಕುವುದೇ ಇಲ್ಲ. ಇಷ್ಟಾದರೂ ಇಲ್ಲಿನ ಕವಿತೆಗಳಲ್ಲಿ ಕತ್ತಲಿನ ದಾರಿಗೆ ಬೆಳಕ ನೀಡುವ ಕಂದೀಲಿನಂತ ಆಶಯವಿದೆ. ಸಾಮಾಜಿಕ, ಸಂಸ್ಕೃತಿ ಪರಿಸರ ನಾಡುನುಡಿಗಳ ಕುರಿತ ಕವಿತೆಗಳಲ್ಲೂ ಕವಿತಾ ಅವರು ಪ್ರೀತಿಯ, ಶಾಂತಿಯ, ಸತ್ಯದ ಬಿಳಿಯ ಬಾವುಟ ಹಿಡಿದು ಬೆಳಕಿನೆಡೆಗೆ ಸಾಗಲು ಬರುವುದಕ್ಕೆ ಗಮನ ಕೊಡುತ್ತಾರೆ.  ಹಾಗಾಗಿಯೇ ಜೀವನದ ಎಲ್ಲಾ ಮಜಲುಗಳಲ್ಲಿ ಪ್ರೀತಿಯ ಬೆಳಕು ಪಸರಿಸಬೇಕು… ಅದೇ ಸತ್ಯ ಎಂಬ ನಂಬಿಕೆಯೊಂದಿಗೆ ಬರೆಯುತ್ತಾರೆ. ’ಬೆಳಕಿನ ಬಿತ್ತನೆ’ ಯೇ ಸೊಗಸಾದ ಶೀರ್ಷಿಕೆ .ಅಜ್ನಾನದ ಕತ್ತಲಿಗೆ ಪ್ರೀತಿಯ ಬೆಳಕಿನ ಬಿತ್ತನೆ ಬಿತ್ತಿ ಸಹನೀಯ – ಸಮಬಾಳ್ವೆಯ ಆಶಯ ಹೊತ್ತ ಪುಟ್ಟ ಪುಟ್ಟ ಕವಿತೆಗಳು ಸಾಲುದೀಪದಂತೆ ಸಂಕಲನದುದ್ದಕ್ಕೂ ಚೆಂದದ ಬೆಳಕು ಬೀರುತ್ತಾ ಕುಳಿತಿವೆ. ಮಹಿಳಾ ಸಂವೇದನೆಯ ಸೂಕ್ಷ್ಮ ಒಳನೋಟಗಳನ್ನು ಸರಳವಾಗಿ ದಾಖಲಿಸುವ ಆಶಯದಲ್ಲಿ ಕವಿತೆಗಳು ಮನ ತಾಕುತ್ತವೆ. ********************** ಮಮತಾಶಂಕರ್

ಬಿಳಿಯ ಬಾವುಟ ಹಿಡಿದ ಕವಿತೆಗಳು Read Post »

ಅಂಕಣ ಸಂಗಾತಿ

ವಸುಂಧರಾ ಕದಲೂರು ಹೊಸ ಅಂಕಣ ‘ತೊರೆಯ ಹರಿವು’

ಸಮೂಹ ಪ್ರಜ್ಞೆ ಜಾಗೃತವಾಗಬೇಕಾದರೆ, ಸಾಮಾಜಿಕರ ವೈಯಕ್ತಿಕವಾದ ನಿಲವುಗಳು ಸ್ಪಷ್ಟವಾಗಿರಬೇಕು. ತರ್ಕಬದ್ಧವಾಗಿರಬೇಕು. ದೈನಂದಿನ ವಿವರಗಳಲ್ಲಿ ವಿಜ್ಞಾನವನ್ನು ಕೇವಲ ಉಪಯೋಗಿತ ಉಪಕರಣಗಳಿಗೆ ಸೀಮಿತಗೊಳಿಸಿಕೊಳ್ಳದೇ, ವಿವೇಚನೆಗೆ ಮೂಲ ಇಂಧನವಾಗಿಸಿ ಕೊಳ್ಳಬೇಕು

Read Post »

ಕಾವ್ಯಯಾನ

ಆತ್ಮಸಖಿ ಅಕ್ಕಾ

ಆತ್ಮಸಖಿ ಅಕ್ಕಾ ಸುಮಾವೀಣಾ ಆತ್ಮಸಖಿ ನೀ.. ಅಕ್ಕಾಮಹಾಮನೆಯ ಮಹಾದೇವಿನೀ ವಸುಂಧರೆಯ ಆತ್ಮಸಖಿ!ಸಾವಿಲ್ಲದ ಸೀಮೆಯಿಲ್ಲದ ಮಲ್ಲ್ಲಿಕನಿಗೊಲಿದನಿನ್ನ ಸೀಮಾತೀತ ಭಾವಕ್ಕೆ ಜಗವೇ…ಜಗವೆ ಬಾರಿಸುತಿದೆ ಜಂಗಮದ ಗಂಟೆಯನು!ಸ್ತ್ರೀಕುಲವ ನೋಡುವ ಸೀಮೆಯಬದಲಾಯಿಸಿದ ನೀ ನಮ್ಮ ಆತ್ಮ ಸಖೀ!ನಿತ್ಯ ಸ್ಮರಣಕೆ ಬಂದು ನಿಲುವ ಮಹಾದೇವಿ ನೀಅಕ್ಕಾ.. ಮಹಾದೇವನಾ ಮಹಾದೇವಿಗಂಡುಹೆಣ್ಣೆಂಬ ಸೂತಕ ಕಳೆದ ಸೌಖ್ಯ ದೇವಿ!ನರನಾರೀ ಹೃದಯಗಳ ಪತಿತಭಾವದಿಂದಲೇಭಾಂಧವ್ಯ ಬೆಸೆದ ನೀ ಶರಣೆಯರ ಆತ್ಮಸಖೀ!ಸ್ತ್ರೀಕುಲದ ಸಚಿಜೀವಿನಿ. ಹೂವ ತರುವರಮನೆಗೆ ಹುಲ್ಲ ತಾರದ ನಿನ್ನ ಸೌಧರ್ಮಿಕಕೆಯಆ ಹೊನ್ನುಡಿ ನಮಗೆ ಬೆನ್ನುಡಿ,ಚೆನ್ನುಡಿ!ಆತ್ಮಬಲಕ್ಕೆ ಸಾಕ್ಷಿಯಾದ ಅಕ್ಕಾ ನೀಆತ್ಮಸಂವರ್ಧನೆಯ ತವನಿಧಿ, ಲೋಕಬಂಧುಗಳ ಆತ್ಮಸಖೀ..ಲೋಕದಾ ಸಿರಿಗೊಲಿಯದ ನಿನ್ನಶ್ರೀಶೈಲದಾ ನಾಡುಹೆಣ್ಮಕ್ಕಳ ನಿಜ ತವರು. ಉಡಿತುಂಬಾ ತುಂಬಿರುವೆನೀ ನುಡಿಬಾಗಿನವನ್ನೇ ಬೇಕಿಲ್ಲ ನಮಗೇನಿನ್ನು..ಕರೆದಾಗಲೆಲ್ಲಾ ಬರುವೆಯಾ ನೀನು ?ಬರುವೆಖಂಡಿತಾ ಬರುವೆ. ನೀ ನಮ್ಮ ಆತ್ಮಸಖೀ…ವಿಚಾರವಂತಿಕೆಯ ಮಡಿವಂತಿಕೆಯಲೆ ಎಲ್ಲರನು ತವಿಸಿರುವೆನೀ ನಮಗೆ ಆತ್ಮಸಖೀ.. ಆತ್ಮಸುಖೀನೀ ಬರೆ ಹೆಣ್ಣಲ್ಲ! ನೀ ಬರೆ ಶರಣೆಯಲ್ಲಾ!ಶರಣಾರ್ಥಿಗಳ ನಿತ್ಯ ಸ್ಮರಣಾರ್ಥೀವಸುಂಧರೆಯ ಆತ್ಮ ಸಖೀ… ಆತ್ಮ ಸುಖೀ… ******************************

ಆತ್ಮಸಖಿ ಅಕ್ಕಾ Read Post »

ಕಾವ್ಯಯಾನ

ಜಗದ ಜ್ಯೋತಿ

ಜಗದ ಜ್ಯೋತಿ ರೇಮಾಸಂ ದಂಡಿ ಕಟ್ಟದೇ ಮಾಡಿಕೊಂಡೆಯಲ್ಲಕೊರಳಿಗೆ ತಾಳಿಯನೂ ಬಿಗಿಯಲಿಲ್ಲಮೈಗೆ ಅರಿಶಿಣ ಮೆತ್ತಿಕೊಳ್ಳಲಿಲ್ಲಮದುವೆಯ ಹಂದರವು ಹರಿವಿರಲಿಲ್ಲಹೊಸ ಇತಿಹಾಸವ ಸೃಷ್ಟಿಸಿಬಿಟ್ಟೆಯಲ್ಲ ಸಮಾನತೆಗಾಗಿ ಧರಣಿ ಹೂಡದೆಹೆಣ್ಣೆಂದು ಅವಕಾಶವಾದಿಯಾಗದೆಅಲ್ಲಮರ ಮಂಟಪದ ಜ್ಯೋತಿಯಾದೆಉಡತಡಿ ಉಡುಗೊರೆಯಾಗಿ ಉದಯಿಸಿದೆಕದಳಿಗೆ ಕರ್ಪುರದಂತೆ ಅರ್ಪಿತಳಾದೆ ನೀ ಶರಣ ಚಳುವಳಿಯ ಚೇತನಅಲ್ಲಮರ ಸಮ ಸಂವೇದನಶೀಲಳುಅನುಭಾವಿಯುಕ್ತ ಮೇರು ಸಾಹಿತಿವಿಶಿಷ್ಟ ವೈಚಾರಿಕ ಮೌಲಿಕ ವಚನಗಾರ್ತಿಕನ್ನಡದ ಪ್ರಥಮ ಬಂಡಾಯ ಕವಯತ್ರಿ ಸಾರಿದೆ ಜಗದ ಕಣ್ಣು ಬೆತ್ತಲಾಗಿದೆಮನವು ಚಂಚಲದಿ ಬೆತ್ತಲಾಗಿದೆಇಷ್ಟ ಕಾಮ್ಯಗಳಡಿ ಸಿಕ್ಕಿಕೊಂಡಿದೆಭೌತಿಕ ಭೋಗ ಬಂಧನದಲಿದೆಯಂದೆಜಗದ ಬೆತ್ತಲ ನೀ ಸ್ವತಃ ತೋರಿದೆ ಭೋಗ ಜೀವನದ ಬಲಿದಾನಕರ್ಮಠ ಯೋಗಿಣಿಯಾಗಿ ಸಾಧನಯೋಗಾಂಗ ತ್ರಿವಿಧಿಯ ಅನುಷ್ಠಾನಅಲ್ಲಮರಿಂದ ಧೀರ ನುಡಿ ತಾಯಿ ನಮನಅಕ್ಕ ನೀ ವೈರಾಗ್ಯ ನಿಧಿ ಜ್ಞಾನ ವಿರತಿ ಘನ ಚನ್ನಮಲ್ಲಿಕಾರ್ಜುನೊಬ್ಬನೇ ಪುರುಷನೆಂದವಳುಮಿಕ್ಕವರೆಲ್ಲ ಎನಗೆ ಸ್ತ್ರೀ ಸಮಾನರೆಂದವಳುಕೇಶಾಂಬರವು ಜಗದ ಜನರ ಹಂಗಿಗೆಂದವಳುಗಟ್ಟಿಗಿತ್ತಿ ಸಾದ್ವಿ ಅಕ್ಕಮಹಾದೇವಿಯಾದಳುಅಕ್ಕ ವಿಶ್ವ ಸ್ತ್ರೀ ಕುಲದ ಜ್ಯೋತಿಯಾಗಿಹಳು **********************************

ಜಗದ ಜ್ಯೋತಿ Read Post »

ಕಾವ್ಯಯಾನ, ಗಝಲ್

ಗಜಲ್

ಅಕ್ಕಮಹಾದೇವಿ ಜನುಮದಿನದ ವಿಶೇಷ ಗಜಲ್ ಪ್ರಭಾವತಿ ಎಸ್ ದೇಸಾಯಿ ಮಾಯಾ ಮೋಹದ ಬಟ್ಟೆಯನು ಕಳಚಿ ಎಸೆದವಳುವೈರಾಗ್ಯದ ಬಟ್ಟೆಯನು ಅರಸುತ್ತಾ ಹೊರಟವಳು ಅರಮನೆಯ ವೈಭವದ ಸುಖ ದಿಕ್ಕರಿಸಿದವಳುಭವದ ಸುಳಿಗೆ ಸಿಲುಕದೆ ಬಯಲಲಿ ಒಂದಾದವಳು ಹಸಿವು ತೃಷೆ ಭಾದೆಗಳನು ಕಪೂ೯ರದಂತೆ ದಹಿಸಿದವಳುಅಂಗ ಚೇಷ್ಟೆ ಕಾಮ ಕ್ರೋಧ ಗಳ ಕವಚ ಕಳಿಚಿದವಳು ಜಗ ನಿಮಿ೯ಸಿದ ಮೌಢ್ಯ ಬೇಲಿಯನು ದಾಟಿದವಳುಸ್ತ್ರೀ ಸಂಕುಲನಕೆ ಆತ್ಮಸ್ಥೈರ್ಯ ತುಂಬಿದವಳು ಶರಣ ಸಮೋಹದಲಿ ಅಗ್ರ ರತ್ನವಾಗಿ ಬೆಳಗಿದವಳುನಿರಾಕಾರನ ಪಡೆಯಲು ಸರ್ವವನು ತ್ಯಜಿಸಿದವಳು ಅಲ್ಲಮನ ಪ್ರಶ್ನೆಗೆ ಉತ್ತರಿಸಿ ಲೋಕ ಗೆದ್ದವಳುಸಾವಿಲ್ಲದ ಕೇಡಿಲ್ಲದ ಚೆಲುವನನು ಮೆಚ್ಚಿದವಳು ಬೆಟ್ಟ ಹಳ್ಳ ಕಣವೆ ಗಳ ದಾಟುತ್ತಾ ಮುನ್ನಡಿದವಳುಬಯಲ”ಪ್ರಭೆ”ಯ ಅರಸುತ್ತಾ ಕದಳಿಗೆ ನಡೆದವಳು **********************************************

ಗಜಲ್ Read Post »

ಕಾವ್ಯಯಾನ

ನಾವು ನಿಮ್ಮ ಭಕ್ತರು

ಕವಿತೆ ನಾವು ನಿಮ್ಮ ಭಕ್ತರು ಶಿವರಾಜ್.ಡಿ ನಾವು ನಿಮ್ಮ ಭಕ್ತರುನೀವು ಕಟ್ಟುವ ಪುತ್ಥಳಿಗಳಿಗೆ,ಕ್ರೀಡಾಂಗಣಗಳಿಗೆ,ಮಹಲುಗಳಿಗೆದೇಶಭಕ್ತರ ಹೆಸರಿಡಲುಹೋರಾಟ ಮಾಡುತ್ತೇವೆ. ನಾವು ನಿಮ್ಮ ಭಕ್ತರುನಿಮ್ಮ ದೇಶಭಕ್ತಿಯ ಮಾತುಗಳಿಗೆಅಚ್ಚೆ ದಿನದ ಆಡಂಬರದ ಸುದ್ದಿಗಳಿಗೆಬಂಗಾರದ ಕಿವಿಯಾಗುತ್ತೇವೆ. ನಾವು ನಿಮ್ಮ ಭಕ್ತರುಪೆಟ್ರೋಲ್, ಡೀಸೆಲ್, ದಿನಸಿಧಾನ್ಯಗಳ ಬೆಲೆ ಏರಿದರೂದುಬಾರಿ ಜಿಎಸ್ಟಿ ತೆರಿಗೆ ಕಟ್ಟುತ್ತೇವೆ. ನಾವು ನಿಮ್ಮ ಭಕ್ತರುಚಪ್ಪಾಳೆ ತಟ್ಟುತ್ತೇವೆ,ಗಂಟೆ ಬಡಿಯುತ್ತೇವೆಕ್ಯಾಂಡಲ್ ಹಚ್ಚಿ ಕರೋನಾ ಓಡಿಸುತ್ತೇವೆ. ನಾವು ನಿಮ್ಮ ಭಕ್ತರುಆಕ್ಸಿಜನ್ ಕೊರತೆಯಾದರೂಆಸ್ಪತ್ರೆಗಳಲ್ಲಿ ಬೆಡ್ ಸಿಗದೆ ಹೋದರುನಗು ನಗುತ್ತಾ ಸಾಯುತ್ತೇವೆ. ನಾವು ನಿಮ್ಮ ಭಕ್ತರುನಿಮ್ಮ ಮನದ ಮಾತು ಕೇಳುತ್ತಾನಿಮ್ಮನ್ನು ಆರಾಧಿಸುತ್ತೇವೆನೀವು ಸುಮ್ಮನೇಮಾತಾಡಿ …ಮಾತಾಡಿ …ಮಾತನಾಡುತ್ತಲೇ ಇರಿ.. *************************************

ನಾವು ನಿಮ್ಮ ಭಕ್ತರು Read Post »

ಕಾವ್ಯಯಾನ

ನನ್ನದೇ ಎಲ್ಲ ನನ್ನವರೆ ಎಲ್ಲ

ಕವಿತೆ ನನ್ನದೇ ಎಲ್ಲ ನನ್ನವರೆ ಎಲ್ಲ ಚೈತ್ರಾ ತಿಪ್ಪೇಸ್ವಾಮಿ ನಾನು ನನ್ನದೆಲ್ಲ ನನ್ನದುನನ್ನ ಬಳಿಯಿರುವವರೆಲ್ಲನನ್ನವರೆಂಬ ಭಾವ ನಿನ್ನದು ಹೆಣ್ಣೇ ಒ ಹೆಣ್ಣೇಜೀವ ತುಂಬಿ ಭುವಿಗೆ ತಂದತಂದೆ ತಾಯಿ ನನ್ನವರುತಾಯಿ ಮಡಿಲ ಹಂಚಿಕೊಂಡಅಗ್ರಜ ಅನುಜರೆಲ್ಲ ನನ್ನವರುಕುಲ ಬಂಧು ಬಳಗವೆಲ್ಲ ನನ್ನವರುಮನೋಮಂದಿರ ಅಂಗಳದಒಡನಾಡಿಗಳೆಲ್ಲ ನನ್ನವರುಜೀವನಕ್ಕೆ ಹೊಸ ಭಾಷ್ಯೆಬರೆದ ಸಂಗಾತಿ ನನ್ನವರುಹೊಸ ಜೀವನಕ್ಕೆ ಅಡಿಯಿಟ್ಟಮನೆಯೆಲ್ಲ ನನ್ನದುಮದುವೆ ಬಂಧ ಬೆಸೆದ ಮನೆಯಬಂಧು ಬಳಗವೆಲ್ಲ ನನ್ನವರುಬಸಿರ ತುಂಬಿ ಬಂದ ಜೀವ ನನ್ನದೆಮಮತೆಯ ಮಕ್ಕಳು ನನ್ನವರುನನ್ನವರು ನನ್ನವರು ಎಂದುನನ್ನವರಿಗಾಗಿ ಬದುಕಿದ ಜನನಿ…..ಮನೆಯ ಮಗುವಾಗಿ ಬಾಲಕಿಯಾಗಿ ಕುಲವಧುವಾಗಿ ಮಡದಿಯಾಗಿ ಸೊಸೆಯಾಗಿತಾಯಿಯಾಗಿ ಮನೆಯ ಒಡತಿಯಾಗಿ ತನ್ನಲ್ಲಿರುವ ನನ್ನತನವ ತನ್ನವರಿಗರ್ಪಿಸಿಹೆಣ್ತನಕೆ ಹಿರಿಮೆಯ ಗರಿಮೆ ತಂದವಳೆನಾನು ನನ್ನದು ಎನ್ನದೆನನ್ನವರು ನನ್ನುಸಿರು ಎಂದವಳೆಎಲ್ಲರಲಿ ಎನ್ನತನವ ಬೆರೆಸಿತಾನು ಬೆಳೆದು ತನ್ನವರ ಬೆಳೆಸುವವಳೆಹೆಣ್ಣು ಹೆಣ್ಣು ಹೆಣ್ಣು ಹೆಣ್ಣು………. ******************************************

ನನ್ನದೇ ಎಲ್ಲ ನನ್ನವರೆ ಎಲ್ಲ Read Post »

ಕಾವ್ಯಯಾನ

ಮರಗಳ ಸ್ವಗತ ಸಾಂತ್ವಾನ

ಕವಿತೆ ಮರಗಳ ಸ್ವಗತ ಸಾಂತ್ವಾನ ಅಭಿಜ್ಞಾ ಪಿಎಮ್ ಗೌಡ ಹೇ ಮನುಜ.! ನಿನ್ನ ಸ್ವಾರ್ಥಕಾಗಿಪ್ರಕೃತಿಯನ್ನೆ ವಿಕೃತಿಗೈದುಇಳೆಯೊಡಲ ಬರಿದುಗೊಳಿಸಿಮಾರಣ ಹೋಮ ಮಾಡುತಧರೆಯ ಬಂಜರಾಗಿಸಿದ್ದು ನ್ಯಾಯವೆ.?ನಿನಗರಿವಿಲ್ಲದೆ ಅವಳೊಡಲನುಅಳಿವಿನಂಚಿನಲಿ ನಿಲ್ಲಿಸಿತರುಲತೆಗಳ ಕತ್ತನು ಹಿಚುಕಿಮಾರಾಟಕಿಳಿಸಿರುವೆಯಲ್ಲನೀನೆಂತಹ ಗೋಮುಖ ವ್ಯಾಘ್ರಿ.!! ಮೊಳಕೆಯಿಂದಿಡಿದು ಮರದವರೆಗೂಗಾಳಿ ನೆರಳು ನೀಡಿ ಮಳೆಯಲ್ಲಿಆಸರೆಯಾದರೆ ನನ್ನೆ ಕೊಂದುಅಹಂನ ಗದ್ದುಗೆಯಲಿ ತೇಲುತಿರುವೆಒಮ್ಮೆ ಯೋಚಿಸು ಓ.! ಮನುಜ…ಮಳೆಯಿಲ್ಲದೆ ಇಳೆ ಇರುವುದೆ.?ಇಳೆಯಿಲ್ಲದೆ ನೀನಿರುವೆಯಾ.?ನಿನ್ನ ಲಲಾಟಕೆ ನನ್ನೆ ಗುರಿಮಾಡಿರುವೆನಿನ್ನಾಟಿಕೆಯ ಅಲಂಕಾರಕೇಕೆನನ್ನ ಕಡಿದು ಮಾರಾಟಕಿಟ್ಟಿರುವೆ.? ಹವಾಮಾನ ವೈಪರಿತ್ಯಗಳುಂಟಾಗುವುದೆನಮ್ಮಿಂದ ಹೇ.!ಮನುಜ ನೀ ತಿಳಿಮಳೆ ಗಾಳಿ ನೀರಿನ ಉತ್ಪಾನ್ನದ ಮೂಲನಾವಲ್ಲವೇ.? ,ನಮ್ಮಿರುವಿಕೆಯಪ್ರಭಾವ ಮಳೆ ಬೆಳೆಯ ಸೊಬಗು!ಹೀಗಿರುವಾಗ ಕಾಡುಗಳಕಡಿದು ಕಾಂಕ್ರೀಟ್ ನಗರಗಳನಿರ್ಮಿಸಿದರೆ ಉಳಿಗಾಲವಿದೆಯೆ.?ಇಳೆಗೆ ಅನಾವೃಷ್ಟಿಯ ಭೀತಿ ಎದುರಾಗಿನಿಮ್ಮ ಕುಲದೊಂದಿಗೆ ಸಕಲಜೀವಿಗಳ ವಿನಾಶದಂಚಿಗೆ ತಳ್ಳುತಿರುವೆ.!! ಈಗಲಾದರು ಬಿಟ್ಟು ಬಿಡು ನಿನ್ನ ಸ್ವಾರ್ಥನಿಸ್ವಾರ್ಥ ನಿಷ್ಕಲ್ಮಶದಿ ಮುನ್ನಡೆದುಪರಿಸರ ಉಳಿಸಿ ಅನಾಹುತಗಳ ಆವಾರತಪ್ಪಿಸು.! ಇಲ್ಲದಿರೆ ಅನುಭವಿಸುಘನಘೋರ ಪರಿಸ್ಥಿತಿ ಅಲೆಗಳ ಆರ್ಭಟವನಾಡ ಉಳಿಸಲು ಪ್ರಯತ್ನಿಸುನಿನಗಷ್ಟೆ ಅಲ್ಲ ಈ ಪ್ರಕೃತಿ ಪರಿಸರನಿನ್ನ ಮುಂದಿನ ಪೀಳಿಗೆಗು ಉಳಿಸುತಪರಿಸರ ಸುರಕ್ಷತೆಯ ಜಾಗೃತಿ ಮೂಡಿಸಿನಾಡು ಉಳಿಸಿ ಕಾಡನ್ನು ಬೆಳಸು ಮನುಜ|| *************************************

ಮರಗಳ ಸ್ವಗತ ಸಾಂತ್ವಾನ Read Post »

You cannot copy content of this page

Scroll to Top