ಇನ್ನು ‘ಸತ್ತ ಕಲ್ಗಳ ಮುಂದೆ ಅತ್ತು ಕರೆದುದು ಸಾಕು ಜೀವದಾತೆಯನಿಂದು ಕೂಗಬೇಕು’. ಹಾಗೇ ಅಕ್ಷರಗಳಿಂದಲೇ ಕೂಗಿ ಕರೆಯಬೇಕು ಎಲ್ಲಾ ಎಚ್ಚರಗಳಿಗೆ. ಅಪಾಯಗಳ ಬಾಯಿಗೆ ಆಹಾರವಾಗುವ ಮುನ್ನ .
ಅಂಕಣ ಬರಹ ಖ್ಯಾತ ಲೇಖಕಿ ಶೀಲಾ ಭಂಡಾರ್ಕರ್ ಅವರಿಂದ ಅಂಡಮಾನ್ ಪ್ರವಾಸದ ವಿಶಿಷ್ಟ ಅನುಭವಗಳ ಸರಣಿಬರಹ……….. ಅದ್ಯಾಯ-4 ಬೆಳಗಿನ ಜಾವ ಐದೂವರೆಗೆ ಇಲ್ಲಿಯ ಏಳುವರೆಯಷ್ಟು ಬೆಳಕು ಮತ್ತು ಎಳೆ ಬಿಸಿಲು. ಒಳ್ಳೆಯ ನಿದ್ರೆಯಾಗಿ ತಾಜಾತನ ತುಂಬಿಕೊಂಡಂತೆ ಮೈ ಮನಸ್ಸು ಉಲ್ಲಸಿತವಾಗಿತ್ತು. ಮನೆಯಲ್ಲಿದ್ದರೆ ಹಲವಾರು ಕೆಲಸಗಳು ಸಾಲಾಗಿ ಧಬಧಬನೆ ಮೈ ಮೇಲೆ ಬಿದ್ದ ಹಾಗೆ ಧಾವಿಸಿ ಬರುತಿದ್ದವು. ಇಲ್ಲಿ ಯಾವ ಕೆಲಸದ ಗೊಡವೆಯೂ ಇಲ್ಲದೆ ಹಾಯಾಗಿ ಆ ಬೆಳಗಿನ ಜಾವವನ್ನು ಆನಂದಿಸಿದೆ. ಸ್ನಾನಾದಿಗಳನ್ನು ಮುಗಿಸಿ ಬೆಳಗಿನ ಉಪಹಾರವೂ ಆಯಿತು. ಈ ದಿನ ಮೊದಲಿಗೆ ತಿರಂಗಾ ಪಾರ್ಕ್, ನಂತರ ಮ್ಯೂಸಿಯಂ ಮತ್ತು ಗವರ್ನಮೆಂಟ್ ಸಾಮಿಲ್. ಇಷ್ಟಾದ ಮೇಲೆ ನಮ್ಮ ಮೊದಲ ಹಡಗಿನ ಪ್ರಯಾಣ. ಸ್ವರಾಜ್ ದ್ವೀಪಕ್ಕೆ. ಹ್ಯಾವ್ಲೊಕ್ ಐಲ್ಯಾಂಡ್ ನ ಸ್ವದೇಶಿ ಹೆಸರು. ನೇತಾಜಿ ಸುಭಾಷ್ ಚಂದ್ರ ಬೋಸ್ ರ ಸ್ಮರಣಾರ್ಥವಾಗಿ ಸ್ವರಾಜ್ ದ್ವೀಪವೆಂದು ನಾಮಕರಣವಾಗಿದೆ. ತಿರಂಗಾ ಪಾರ್ಕ್ ನಲ್ಲಿ ಸ್ವಲ್ಪ ಹೆಚ್ಚು ಹೊತ್ತು ಕಳೆಯಲು ಬಿಟ್ಟಿದ್ದರು. ಮಕ್ಕಳೆಲ್ಲಾ ದೊಡ್ಡದಾದ ಆ ಪಾರ್ಕ್ ನ ಮೂಲೆ ಮೂಲೆಗಳಲ್ಲೂ ಫೋಟೊಗಳನ್ನು ಕ್ಲಿಕ್ಕಿಸುತಿದ್ದರು. ಸಮುದ್ರದ ದಂಡೆಯ ಮೇಲಿನ ಆ ಪಾರ್ಕ್ ಸುಂದರವಾಗಿತ್ತು. ಅಲ್ಲಿಂದ ಮ್ಯೂಸಿಯಂ ಗಳ ಕಟ್ಟಡ ಹತ್ತಿರಲ್ಲೇ ಇತ್ತು. ಅಂಡಮಾನ್ ನ ಜನ ಜೀವನ, ಅಲ್ಲಿಯ ಆದಿವಾಸಿಗಳ ಬಗ್ಗೆ ಚಿತ್ರಗಳು, ಸಮುದ್ರದಾಳದ ಜೀವ ಜಂತುಗಳ ಪರಿಚಯ, ಹವಳದ ಗಿಡಗಳು ಹೀಗೆ ಹಲವಾರು ವಸ್ತುಗಳು ಮ್ಯೂಸಿಯಮ್ ನಲ್ಲಿ ನೋಡಲು ಸಿಕ್ಕಿದವು. ಸಮುದ್ರಿಕಾ ಮರೈನ್ ಮ್ಯೂಸಿಯಮ್, ಪ್ರಾಣಿಶಾಸ್ತ್ರ ವಿಭಾಗ, ಮಾನವ ಶಾಸ್ತ್ರ, ಮತ್ಸ್ಯ, ಗುಡ್ಡಗಾಡು ಇವುಗಳ ಪ್ರತ್ಯೇಕ ಮ್ಯೂಸಿಯಮ್ ಗಳು ಹತ್ತಿರದಲ್ಲೇ ಇದ್ದುದರಿಂದ ಸುಮಾರು ಒಂದು ಗಂಟೆಗೂ ಹೆಚ್ಚಿನ ಸಮಯ ಇಲ್ಲಿ ಸುಂದರವಾಗಿ ಕಳೆಯಿತು. ಅಲ್ಲಿಂದ ಗವರ್ನಮೆಂಟ್ ಸಾಮಿಲ್, ಮರದ ಕೆತ್ತನೆಯ ಹಲವಾರು ಪೀಠೋಪಕರಣಗಳು, ಹಲವಾರು ಅಲಂಕಾರಿಕ ವಸ್ತುಗಳು. ನೋಡಿ ಕಣ್ತುಂಬಿಕೊಂಡೆವಷ್ಟೆ. ಅವುಗಳನ್ನು ಇಲ್ಲಿ ತರುವುದೂ ಕಷ್ಟ. ಮತ್ತೊಂದು.. ಪ್ರವಾಸಿಗರೆಂದು ಬೆಲೆಯೂ ಕೈಗೆಟಕದಷ್ಟಿತ್ತು. ಈ ಕಾರ್ಖಾನೆಯು 19 ನೆ ಶತಮಾನದಲ್ಲಿ 1883 ರಲ್ಲಿ ಕಟ್ಟಲ್ಪಟ್ಟಾಗ ಭಾರತದಲ್ಲಷ್ಟೇ ಅಲ್ಲ ಏಷಿಯಾದಲ್ಲೇ ಅತೀ ದೊಡ್ಡ ಮರದ ಕಾರ್ಖಾನೆಯಾಗಿತ್ತು. ಇದು ಅತ್ಯಂತ ಪುರಾತನವಾಗಿದ್ದು ಹಲವಾರು ಜಾತಿಯ ಮರದ ತೊಲೆಗಳನ್ನು, ಹಲಗೆಗಳನ್ನು ಇಲ್ಲಿ ಯಂತ್ರದ ಸಹಾಯದಿಂದ ಕೊಯ್ಯುವ ಈ ಕಾರ್ಖಾನೆಯಲ್ಲಿ ವರ್ಷಕ್ಕೆ ಸುಮಾರು 20000 ತೊಲೆಗಳನ್ನು ಸಂಗ್ರಹಿಸಿ ಪೋರೈಸಲಾಗುತ್ತದೆ. ಬ್ರಿಟಿಷರು ಈ ಕಾರ್ಖಾನೆಯನ್ನು ಸ್ಥಾಪಿಸಿ ಇಲ್ಲಿಂದ ದೊಡ್ಡ ಪ್ರಮಾಣದಲ್ಲಿ ಮರಗಳ ತೊಲೆಗಳನ್ನು, ಹಲಗೆಗಳನ್ನು ಲಂಡನ್ , ನ್ಯೂಯಾರ್ಕ್ ಮುಂತಾದ ಪಟ್ಟಣಗಳಿಗೆ ರಫ್ತು ಮಾಡುತಿದ್ದರು. 1942 ರಲ್ಲಿ ಜಪಾನಿಯರ ಬಾಂಬ್ ದಾಳಿಗೆ ತುತ್ತಾಗಿದ್ದ ಈ ಕಾರ್ಖಾನೆಯನ್ನು ಮತ್ತೆ ಪುನರ್ ನಿರ್ಮಿಸಲಾಯಿತು. ಬೆಳಿಗ್ಗೆ ನಾವು ಹೊರಡುವಾಗಲೇ ನಮ್ಮ ಲಗ್ಗೇಜ್ ಗಳನ್ನು ತಂದು ಲಾಂಜ್ ಲ್ಲಿ ಇಟ್ಟಿದ್ದುದರಿಂದ, ನಮಗಿಂತ ಮೊದಲೇ ಅವುಗಳು ನಮ್ಮ ಹಡಗು ನಿಲ್ದಾಣ ಅಥವಾ ಬಂದರಿನ ಬಳಿ ನಮಗಾಗಿ ಕಾಯುತಿದ್ದವು. ಟ್ರಾಲಿಗಳಲ್ಲಿ ತುಂಬಿಸಿ ತಳ್ಳಿಕೊಂಡು ಒಂದೆರಡು ಫರ್ಲಾಂಗ್ ದೂರ ನಡೆಯುವುದಿತ್ತು. ಸಾಮಾನುಗಳ ಟ್ರಾಲಿ ತಳ್ಳುವ ಕೆಲಸ ಶ್ರೀಪಾದ ಮತ್ತು ಧಾತ್ರಿಯದು. ಅವರೇ ಸ್ವಇಚ್ಛೆಯಿಂದ ಅದನ್ನು ಮಾಡುತಿದ್ದರು. ಹಡಗಿನ ಸ್ಟೋರೇಜ್ ಒಳಗೆ ನಮ್ಮ ಲಗ್ಗೇಜ್ ಗಳನ್ನು ಇಟ್ಟು ಹಡಗಿನ ಒಳಗೆ ಪ್ರವೇಶಿಸಿ ನೋಡಿದರೆ ವಿಮಾನದಲ್ಲಿರುವಂತೆಯೇ ಆಸನಗಳು. ಎರಡೂವರೆ ಗಂಟೆಗಳ ಪ್ರಯಾಣವಿತ್ತು ಪೋರ್ಟ್ ಬ್ಲೇರ್ ನಿಂದ ಸ್ವರಾಜ್ ದ್ವೀಪಕ್ಕೆ.ಗಾಜಿನ ಕಿಟಕಿಗಳಿಂದ ಸಮುದ್ರವನ್ನು ವೀಕ್ಷಿಸಬಹುದು. ಸಮುದ್ರದ ಮೇಲೆ ಹಡಗು ತೇಲುತ್ತಾ ಬಳುಕುತ್ತಾ ಸಾಗುವಾಗ ಏನೋ ಹೊಸ ಅನುಭವ. ದೊಡ್ಡ ಅಲೆಗಳು ಬಂದಾಗ ಹಡಗನ್ನೇ ಎತ್ತಿ ಎಸೆದಂತಾದಾಗ ಜೋರಾಗಿ ಕಿರುಚಬೇಕೆನಿಸುತ್ತದೆ. ಆದರೂ ಹಡಗಿನ ಪ್ರಯಾಣವೊಂದು ವಿಶಿಷ್ಟ ಆನಂದವನ್ನು ನೀಡಿತು. ಪ್ರಯಾಣದಲ್ಲಿನ ಹೊಟ್ಟೆ ತೊಳಸುವಿಕೆ, ತಲೆ ಸುತ್ತುವುದು ಇವೆಲ್ಲಾ ಸಾಮಾನ್ಯವಾಗಿ ಎಲ್ಲರ ಅನುಭವಕ್ಕೆ ಬರುತ್ತದೆ. ನಮಗೆ ಆ ದಿನ ಮದ್ಯಾಹ್ನದ ಊಟವನ್ನು ಪ್ಯಾಕ್ ಮಾಡಿ ತಂದು ಎಲ್ಲರಿಗೂ ಹಂಚಿದ್ದರು. ಒಬ್ಬೊಬ್ಬರಿಗೂ ಎರಡು ಚಪಾತಿ ಮತ್ತು ಪಲ್ಯ. ಮತ್ತು ವೆಜ್ ಪಲಾವ್ ಮತ್ತು ಸಲಾಡ್, ಜೊತೆಗೆ ಜ್ಯೂಸ್ ಕೊಟ್ಟಿದ್ದರು. ಪ್ರಯಾಣ ಸ್ವಲ್ಪ ಅಭ್ಯಾಸ ಆದ ಮೇಲೆ ಸೇವಿಸಲು ಹೇಳಿದ್ದರಿಂದ ಯಾರಿಗೂ ತಿನ್ನುವ ಅವಸರವಿರಲಿಲ್ಲ. ಅಲ್ಲದೇ ಹೊಟ್ಟೆ ಸಂಕಟವಾಗಿ ವಾಂತಿ ಬಂದರೆ ಎಂದು ಪೇಪರ್ ಬ್ಯಾಗ್ ಗಳನ್ನೂ ಇಟ್ಟಿದ್ದರು. ಹಡಗು ಸಾಗುತ್ತಿರುವಾಗ ಮಧ್ಯದಲ್ಲಿ ಜೋರಾದ ಗಾಳಿ ಬೀಸುವುದು, ದೊಡ್ಡ ದೊಡ್ಡ ಅಲೆಗಳು ಸಮುದ್ರದ ಅಡಿಯಿಂದ ಉಕ್ಕುವುದು ಮುಂತಾದ ಪ್ರತಿಕೂಲ ವಾತಾವರಣ ಉಂಟಾದಾಗ ವಿಮಾನದಲ್ಲಿದ್ದಂತೆಯೇ ಇಲ್ಲಿಯೂ ಮೈಕ್ ನಲ್ಲಿ ಹೇಳುತ್ತಾರೆ. ಸಣ್ಣಗೆ ಭಯವಾದರೂ ಕೂಡ ಪ್ರತಿಯೊಂದು ಕ್ಷಣವನ್ನೂ ಯಥೇಚ್ಛವಾಗಿ ಆನಂದಿಸಿದ್ದನ್ನು ಮಾತ್ರ ಮರೆಯುವಂತಿಲ್ಲ. ಮಾರ್ಗ ಮಧ್ಯದಲ್ಲಿ ಹಲವಾರು ಚಿಕ್ಕ ಚಿಕ್ಕ ದ್ವೀಪಗಳು ನೋಡಲು ಸಿಗುತ್ತವೆ. ಅಲ್ಲಿ ಜನ ಸಂಚಾರವಾಗಲಿ, ವಾಸವಾಗಲಿ ಕಾಣಲಿಲ್ಲ. ಎರಡೂವರೆ ಗಂಟೆಗಳ ಹಡಗಿನ ಪ್ರಯಾಣ ಮುಗಿಯುವುದರೊಳಗೆ ಎಲ್ಲರೂ ಊಟ ಮಾಡಿ ಮುಗಿಸಿದರು. ಸ್ವರಾಜ್ ದ್ವೀಪವನ್ನು ತಲುಪಿದಾಗ ನಮಗಾಗಿ ಬಸ್ ಕಾದು ನಿಂತಿತ್ತು. ಲಗ್ಗೇಜ್ ಗಳನ್ನೆಲ್ಲಾ ಅವರೇ ಎತ್ತಿ ಬಸ್ಸಿನ ನಾಲ್ಕು ಸೀಟಿನಲ್ಲಿ ಜೋಡಿಸಿ, ನಮ್ಮನ್ನೂ ಕೂರಿಸಿ ನಮಗಾಗಿ ಮೊದಲೇ ಕಾದಿರಿಸಿದ್ದ ರೆಸಾರ್ಟ್ ಗೆ ಕರೆತಂದರು. ಸುಂದರವಾದ ಜಾಗ, ಒಳ್ಳೆಯ ವಾತಾವರಣ, ಪಕ್ಕದಲ್ಲೇ ರೆಸ್ಟೋರೆಂಟ್ ಇತ್ತು. ನಮ್ಮ ಸಾಮಾನುಗಳನ್ನು ನಮ್ಮ ನಮ್ಮ ಕೋಣೆಯ ಒಳಗೆ ತಂದಿಟ್ಟರು. ಪರಸ್ಪರ ಪರಿಚಯಕ್ಕಾಗಿ ಎಲ್ಲರನ್ನೂ ಒಂದೇ ಸ್ಥಳದಲ್ಲಿ ಕರೆದು ನಿಲ್ಲಿಸಿದಾಗ, ಎಲ್ಲರೂ ಅವರವರ ಕುಟುಂಬವನ್ನು ಪರಿಚಯಿಸಿದರು. ಹದಿನಾರು- ಹದಿನೇಳು ವಯಸ್ಸಿರಬಹುದು, ಒಬ್ಬಳೇ ಹುಡುಗಿಯೊಬ್ಬಳು ನಮ್ಮ ಜೊತೆ ಬಂದಿದ್ದಳು. ಅವಳು ಇದು ಎರಡನೇ ಬಾರಿ ಅಂಡಮಾನ್ ಪ್ರವಾಸಕ್ಕೆ ಬರುವುದಂತೆ. ಯಾರೊಂದಿಗೂ ಮಾತಿಲ್ಲ, ಅವಳಷ್ಟಕ್ಕೆ ಅವಳು ಒಬ್ಬಳೇ ಇರುತಿದ್ದಳು. ಒಂದು ರೀತಿಯ ಖಿನ್ನತೆ ಅವಳನ್ನು ಕಾಡುತ್ತಿದೆಯೇನೋ ಅನಿಸುವಷ್ಟು ನಿರ್ಲಿಪ್ತಳಾಗಿ ಇರುತಿದ್ದಳು. ನಾವು ಉಳಿದುಕೊಂಡ ಆ ರೆಸಾರ್ಟ್ ನ ಹಿಂಭಾಗದಲ್ಲಿ ಖಾಸಗಿ ಬೀಚ್ ಇತ್ತು. ಸಣ್ಣದಾದ ತೀರ. ಅತಿಯಾದ ಅಲೆಗಳ ಅಬ್ಬರವಿಲ್ಲ. ಅಲ್ಲಿ ಹೋಗಿ ಕೂತ ನಮಗೆ ಎದ್ದು ಬರಲು ಮನಸ್ಸೇ ಬರಲಿಲ್ಲ. ರಾತ್ರಿ ಎಂಟರಿಂದಲೇ ಊಟ ಶುರು. ಯಾರಿಗೆ ಯಾವಾಗ ಬೇಕೋ ಹೋಗಿ ಊಟ ಮಾಡಬಹುದಿತ್ತು. ನಾವು ಊಟವಾದ ಮೇಲೆ ಮತ್ತೆ ಸಮುದ್ರ ತೀರಕ್ಕೆ ಹೋಗಿ ಕೂತೆವು. ಸಂಜೆಯ ಕತ್ತಲ ನೀರವತೆ, ಸಮುದ್ರದ ಸಣ್ಣನೆ ಮೊರೆತ, ಬೀಸುವ ಹಿತವಾದ ಉಪ್ಪು ನೀರಿನ ಗಾಳಿ, ಚಂದ್ರನ ಮೃದುವಾದ ಬೆಳಕು ಈ ಸಮಯವಿಲ್ಲೇ ನಿಲ್ಲಬಾರದೇ ಅನಿಸುವಂತಿತ್ತು. (ಮುಂದುವರೆಯುವುದು..) ************************* ಶೀಲಾ ಭಂಡಾರ್ಕರ್.
ಅಂಕಣ ಬರಹ ಮೌನದ ಮಾತು… ಇದನ್ನ ಈ ಮುಂಚೆ ಯಾರಾದರೂ ಹೇಳಿರಬಹುದು ..ನನಗೆ ಗೊತ್ತಿಲ್ಲ… ಈ ಕ್ಷಣ ಹೊಳೆದ ಮಾತುಗಳಿವು. ಬಹಳಷ್ಟು ಸಂದರ್ಭಗಳಲ್ಲಿ ಬಹಳಷ್ಟು ಜನರ ಮೌನವನ್ನು ದೌರ್ಬಲ್ಯ ಎಂದೇ ಪರಿಗಣಿಸಿ ಇನ್ನಷ್ಟು ತುಳಿಯಲು ಸಮಾಜದಲ್ಲಿ , ವ್ಯವಸ್ಥೆಯಲ್ಲಿ ಪ್ರಯತ್ನಗಳು ನಡೆದಿವೆ , ನಡೆಯುತ್ತಲೇ ಇವೆ .. ಮೌನ ಕಾಯುತ್ತಿರುತ್ತದೆ ..ಒಳಗೊಳಗೇ ಮಾಗುತ್ತಿರುತ್ತದೆ ..ಒಡಕು ಪಾತ್ರಗಳೆಲ್ಲ ಸದ್ದು ಮಾಡಿ ಮಾಡಿ ಸೋತು ಸುಮ್ಮನಾದ ನಂತರ ಮೌನ ಮಾತಾಗುತ್ತದೆ.. ನುಡಿದರೆ ಮುತ್ತಿನ ಹಾರದಂತಿರಬೇಕು ಎಂದು ಬರೇ ಓದಿದರೆ ಸಾಕೆ? ಕೆಲವರು ನುಡಿವುದೇ ವಿಷ ಕಾರಲು ..ನುಡಿದರೆ ವಿಷ ಕಾರಿ ನಂಜಾಗುವಂತಿರಬೇಕು ಎನ್ನುವುದೇ ಅವರುಗಳ ಜೀವನದ ತತ್ವವಾಗಿರುತ್ತದೇನೋ… ಎಷ್ಟೇ ವಿಷದ ನಾಲಿಗೆಗಳು ವಿಷವ ಕಕ್ಕಿದರೂ ಆ ಶಿವನೂ ಅದನ್ನು ಕಂಠದಲ್ಲಿ ಧರಿಸಿ ನೀಲಕಂಠನಾಗಲಿಲ್ಲವೆ ? ಮಗುವನ್ನು ಮುಂಗುಸಿ ಕೊಂದಿತೆಂದು ತಾಯಿಯೊಬ್ಬಳು ಅಜ್ಞಾನದಲ್ಲಿ ತಾನು ಸಾಲಿದ ನಿಷ್ಠಾವಂತ ಮುಂಗುಸಿಯನ್ನೇ ಹೊಡೆದು ಸಾಯಿಸಿ ಆ ನಂತರ ಆ ಮುಂಗುಸಿ ಹಾವಿನಿಂದ ಮಗುವನ್ನು ರಕ್ಷಿಸಿತೆನ್ನುವ ಸತ್ಯ ತಿಳಿದು ಪಶ್ಚತ್ತಾಪಪಟ್ಟ ಹಾಡು “ ನೋಡಿದ್ದು ಸುಳ್ಳಾಗಬಹುದು ಕೇಳಿದ್ದು ಸುಳ್ಳಾಗಬಹುದು ನಿಧಾನಿಸಿ ಯೋಚಿಸಿದಾಗ ನಿಜವು ತಿಳಿವುದು ” ನೆನಪಾಗುತ್ತಿದೆ. ಕೇವಲ ಹಣ ಸಂಪಾದನೆ , ಗುಲಾಮಗಿರಿತನ , ಸದಾ ಇನ್ನೊಬ್ಬರ ಮರ್ಜಿ ಕಾಯುವ , ಅಧಿಕಾರಿಗಳ ಬಾಯಿಯಲ್ಲಿ ತಮ್ಮ ಹೆಸರು ಬರುವುದೇ ತಮ್ಮಪೂರ್ವ ಜನ್ಮದ ಸುಕೃತ ಎಂದು ಭಾವಿಸುವವರು ಅದಕ್ಕಾಗಿ ಯಾವ ಮಟ್ಟಕ್ಕೆ ಬೇಕಾದರೂ ಇಳಿಯಬಲ್ಲರು. ಆದರೆ ಅಧಿಕಾರಿಗಳಿಗೆ ಕೇವಲ ಓಲೈಕೆ ಮಾತ್ರಾ ಬೇಕಾಗಿರುತ್ತದೆ ..ಸಮಯ ಬಂದಾಗ ಯಾವಾಗ ಯಾವ ರೀತಿ ತಿರುಗುತ್ತರೋ ಎನ್ನುವ ಸತ್ಯದ ಅರಿವೂ ಇಂತವರಿಗೆ ಇರುವುದಿಲ್ಲ. ಖಾಲಿ ತಲೆ ಭೂತದ ಆವಾಸ ಸ್ಥಾನ ಎನ್ನುತ್ತಾರೆ ..ಹಾಗೆ ಮಾಡಲು ಕೆಲಸವಿಲ್ಲದವರಿಗೆ ಸದಾ ಇನ್ನೊಬ್ಬರ ನಡೆ ನುಡಿಗಳನ್ನೇ ಗಮನಿಸುತ್ತಿರುವುದು , ಅದನ್ನು ತಮ್ಮಿಷ್ಟಕ್ಕೆ ತಮ್ಮ ಮಟ್ಟಕ್ಕೆ ತಕ್ಕಂತೆ ಅರ್ಥೈಸಿಕೊಂಡು ಅಧಿಕಾರಿಗಳ ಕಿವಿ ಚುಚ್ಚುವುದು ..ಇದೇ ಬದುಕಾಗಿಬಿಟ್ಟಿರುತ್ತದೆ. ಇದು ಕೇವಲ ವೃತ್ತಿಯಲ್ಲಿ ಅಲ್ಲ ಮನೆಗಳಲ್ಲಿಯೂ ಕಾಣುವ ಪ್ರವೃತ್ತಿ!! ಒಂದು ಮನೆಯಲ್ಲಿ ಹತ್ತು ಜನರಿದ್ದರೆ ಅವರಲ್ಲೇ ಹದಿನೈದು ಗುಂಪುಗಳಿರುತ್ತವೆ. ಸದಾ ಒಬ್ಬರ ವಿರುದ್ಧ ಇನ್ನೊಬ್ಬರನ್ನು ಎತ್ತಿಕಟ್ಟುತ್ತಾ ಅದರ ಪರಿಣಾಮಗಳನ್ನ ನೋಡಿ ಒಳಗೊಳಗೇ ಖುಷಿ ಪಡುವ ವಿಕೃತ ಮನಸುಗಳಿಗೆ ಆದಾವ ಬೇಲಿಯಿದೆ? ತೂಕವಿಲ್ಲದಾಮಾತುಗಳುಸಾಗರದೆ ತೇಲುವಕಸಕಡ್ಡಿಕೊಳಕಿನಂತೆ ನೋಡಯ್ಯ ತೂಕದಾಮಾತುಗಳುಸಾಗರದಾಳಕಿಳಿದರಷ್ಟೆ ದೊರೆವಮುತ್ತುರತ್ನಹವಳದಂತೆ ಕಾಣಯ್ಯ ಹಗುರ ಮಾತಿಗೂ ತೂಕದ ಮಾತಿಗೂ ವ್ಯತ್ಯಾಸ ಅರಿಯದವರು ಲೋಕದಲ್ಲಿ ಇರುವವರೆಗೂ “ಆಚಾರವಿಲ್ಲದ ನಾಲಿಗೆ …ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ …” ಎಂಬ ದಾಸವಾಣಿ ಮೊಳಗುತ್ತಲೇ ಇರುತ್ತದೆ..ಮತ್ತು ಇದಕ್ಕೆ ಕೊನೆಯೇ ಇಲ್ಲ… ನಾಲಿಗೆ ಹೊರಳುವ ಮುನ್ನ ಅದಕ್ಕೊಂದಷ್ಟು ಕಡಿವಾಣ ಹಾಕಬೇಕಾದುದು ಮನಸು..ಆದರೆ ಆ ಮನಸು ಯಾವುದೇ ಸಂಸ್ಕಾರಗಳಿಗೆ ಈಡಾಗದೇ ಕಾಡು ಕಾಡಾಗೇ ಬೆಳೆದಿದ್ದರೆ ಅದೂ ನಾಲಿಗೆಯನ್ನು ಮಾತಾಡು ಮಾತಾಡು ಎಂದು ಮುಂದಕ್ಕೆ ಛೂ ಬಿಡುತ್ತಲೇ ಇರುತ್ತದೆ.. ಎದುರಿಗಿರುವ ನಾಲಿಗೆ ಏನಾದರೂ ಹೇಳಲಿ ಅದನ್ನು ಕೇಳುವ ಕಿವಿಯನ್ನೂ ಆ ಕಿವಿ ಹೊತ್ತವರ ಮನಸ್ಸು ತಿವಿದು ಎಚ್ಚರಿಸದಿದ್ದರೆ ಆ ಕಿವಿಗಳು ಹಿತ್ತಾಳೆ ಕಿವಿಗಳಾಗಲು ಬಹಳ ಹೊತ್ತೇನೂ ಬೇಕಾಗಿಲ್ಲ.. ಚಿಕ್ಕಂದಿನಲ್ಲಿ ಟೇಪ್ ರೆಕಾರ್ಡರ್ ನಲ್ಲಿ ಕೇಳಿದ ಶನಿಪ್ರಭಾವ ಚಿತ್ರಕಥೆ ಕಥೆ ನೆನಪಾಗುತ್ತಿದೆ. ಶನಿಯ ವಕ್ರ ದೃಷ್ಟಿಯ ಪ್ರಭಾವದಿಂದ ಗೋಡೆಯ ಹಂಸೆಗೆ ಜೀವ ಬಂದು ಅಲ್ಲಿದ್ದ ಮುತ್ತಿನ ಹಾರವನ್ನು ಗುಳುಕ್ಕನೇ ನುಂಗಿ ಮತ್ತೆ ನಿರ್ಜೀವ ಹಂಸೆಯಾಗುವುದೂ , ಆ ಮುತ್ತಿನ ಹಾರದ ಕಳ್ಳತನದ ಆಪಾದನೆ ನಿರ್ದೋಷಿಯ ಮೇಲೆ ( ಕಥೆ ಅರೆಬರೆ ಮಾತ್ರಾ ನೆನಪಿದೆ ಬಹುಶಃ ರಾಜಾ ವಿಕ್ರಮಾದಿತ್ಯನಾ ಅಂತ ಅನುಮಾನ ) ಬರುವುದೂ ..ಅದರಿಂದ ಆತ ನಾನಾ ವಿಧದ ಸಂಕಷ್ಟಗಳಿಗೆ ಈಡಾದರೂ ಸೋಲದೆ ಎಲ್ಲವನ್ನೂ ಎದುರಿಸಿ ಕೊನೆಗೆ ಶನಿಯ ಪ್ರಭಾವ ಇಳಿದ ಮೇಲೆ ಸತ್ಯ ಎಲ್ಲರಿಗೂ ತಿಳಿದ್ದೂ ಆರೋಪ ಹೊರಿಸಿದವರೂ ಅದನ್ನು ನಂಬಿದವರೂ ಪಶ್ಚತ್ತಾಪ ಪಟ್ಟಿದ್ದೂ … ಎಲ್ಲ ಸನ್ನವೇಶಗಳಲ್ಲಿಯೂ ಪಶ್ಚತ್ತಾಪಕ್ಕೆ ಎಡೆ ಇರುವುದಿಲ್ಲ. ಆರೋಪ ಹೊತ್ತವನು ಹೇಗೆ ಆರೋಪಿಸಿದವನ ನಂಬಿಕೆ ಕಳೆದುಕೊಂಡಿರುತ್ತಾನೋ ಹಾಗೆಯೇ ಆರೋಪಿಸಿದವನೂ ಸಹಾ ಆರೋಪ ಹೊತ್ತವನ ನಂಬಿಕೆಯನ್ನೂ ಕಳೆದುಕೊಂಡಿರುತ್ತಾನೆ. ನಂಬಿಕೆ ಹೇಗೆ ಪರಸ್ಪರೋ ಅಪನಂಬಿಕೆಯೂ ಸಹಾ ಪರಸ್ಪರ…ಇದು ಅರಿವಾಗುವ ಹೊತ್ತಿಗೆ ಕಾಲ ಮಿಂಚಿರುತ್ತದೆ… ಬದುಕಲ್ಲೇ ಆಗಲಿ ವೃತ್ತಿಯಲ್ಲೇ ಆಗಲಿ ಒಬ್ಬರು ಇನ್ನೊಬ್ಬರ ವಿರುದ್ಧ ಕಿವಿ ಚುಚ್ಚುವ ಮುನ್ನ ಎಚ್ಚರಿಕೆಯಿರಲಿ..ಅದರಿಂದಾಗಬಹುದಾದ ಗಂಭೀರ ಪರಿಣಾಮಗಳ ಬಗ್ಗೆ ಅರಿವಿರಲಿ. ಹಾಗೇ ಕೇಳುವ ಕಿವಿಗಳೂ ನಂಬುವ ಮನಸುಗಳೂ ಎಚ್ಚರಿಕೆಯಿಂದಿರಲಿ…ಒಡೆದ ಕನ್ನಡಿಯ ಚೂರುಗಳನ್ನು ಹೇಗೆ ಮತ್ತೆ ಜೋಡಿಸಲಾಗದೋ ಒಡೆದ ನಂಬಿಕೆಗಳನೂ ಮತ್ತೆ ಜೋಡಿಸಲಾಗದು .. ಸರ್ವಜ್ಞನ ನುಡಿಯಂತೆ ಮಾತಿನಿಂ ನಗೆ ನುಡಿಯು ಮಾತಿನಸರ್ವ ಸಂಪದವು ಮಾತೇ ಮಾಣಿಕ್ಯ ಆಗಬೇಕೆ ವಿನಃ ಮಾತಿನಿಂ ಹಗೆ ಕೊಲೆಯು(ಸರ್ವಜ್ಞ) ಆಗಬಾರದು. ಹಾಗಾಗುವುದೇ ನಿಜವಾದರೆ ಅಂತಹಾ ಮಾತೇ ಬೇಡ…ಅಂತಹಾ ಮಾತಿಗಿಂತ ಮೌನವೇ ಲೇಸು… ಬಹಳಷ್ಟು ಒಡಕು ಮಾತುಗಳಿಗೆ ಮೌನ ಉತ್ತರಿಸುತ್ತದೆ. ಅದನ್ನು ಆಲಿಸುವ ಸಾಮರ್ಥ್ಯ ಇರಬೇಕಷ್ಟೆ… ಸಂತ ಶರೀಫರು ಹೇಳುವಂತೆ ಪರಸತಿ ಪರಧನ ಪರ ನಿಂದನೆಗೆ ಈ ಮನಸ್ಸಿಗೆ ಎಡೆ ಮಾಡಿಕೊಡದೆ ಜಾಗರೂಕರಾಗಿರಬೇಕು.ವಾಕ್ ಸ್ವಾತಂತ್ರ್ಯ ಇದೆ, ಹೊರಳುವ ನಾಲಿಗೆಯೂ ಇದೆ ಎಂದು ಮನಸ್ಸಿಗೆ ತೋಚಿದ್ದನ್ನೆಲ್ಲಾ ಆಡುವುದು ಅಪೇಕ್ಷಣೀಯವಲ್ಲ.ಕೆಲವರಿಗೆ ಸದಾ ಹೇಳಿದಗದನ್ನೇ ಹೇಳುವ ಚಟ! ಎದುರಿಗಿರುವವರ ಮನಸ್ಥಿತಿ ಹೇಗಿದೆ ಎಂದು ತಿಳಿದುಕೊಳ್ಳುವ ಗೋಜಿಗೆ ಹೋಗದೆ ಕಪ್ಪೆಯಂತೆ ವಟವಟಿಸುತ್ತಲೇ ಇರುತ್ತಾರೆ.ಇಂತವರ ಮುಂದೆ ಮಾತಾಡದೆ ಮೌನ ವಹಿಸುವುದೇ ಸರಿಯಾದುದು.ಇಂತಹಾ ಸಂದರ್ಭಗಳಲ್ಲಿ ಮಾತು ಸೋತುಮೌನ ಗೆಲ್ಲುತ್ತದೆ.. ಪರನಿಂದನೆಗೆ ಸದಾ ಹಾತೊರೆವ ಮನಸುಗಳೂ , ನಾಲಿಗೆಗಳೂ , ಕಿವಿಗಳೂ ಇದನ್ನ ಅರಿತು ಜಾಗೃತರಾದರೆ ವ್ಯವಸ್ಥೆಯಲ್ಲಿನ ಬಹಳಷ್ಟು ಸಮಸ್ಯೆಗಳನ್ನು ದೂರ ಮಾಡಬಹುದು. ಎಲ್ಲ ಮನಗಳೂ ನೆಮ್ಮದಿಯಿಂದ ಬದುಕಬಹುದು.. ಮೌನ ಮೌ ನ ಎಂದು ಹೇಳಿ ಇಷ್ಟೆಲ್ಲಾ ಮಾತಾಡುವುದಾ ಎಂದು ಮತ್ತೆ ಆರೋಪಿಸದಿರಿ…ಇದು ಒಡಕು ಮಾತಲ್ಲ ..ಮನದ ಮಾತು..ಮೌನದ ಮಾತು… ಮೌನ ಖಂಡಿತಾ ದೌರ್ಬಲ್ಯದ ಸಂಕೇತವಲ್ಲ… ************************************ ಶುಭಾ ಎ.ಆರ್ (ದೇವಯಾನಿ) ಕಾಲೇಜು ದಿನಗಳಿಂದ ದೇವಯಾನಿ ಹೆಸರಿನಲ್ಲಿ ಕಥೆ ,ಕವನ , ಅನುವಾದಿತ ಕಥೆ , ಪ್ರಬಂಧ ಬರೆಯುತ್ತಿದ್ದು ತುಷಾರ, ಮಯೂರ ,ಕಸ್ತೂರಿ , ಪ್ರಜಾವಾಣಿ, ವಿಕ್ರಮ , ಉತ್ಥಾನ, ಉದಯವಾಣಿ, ತರಂಗ ,ವಿಜಯ ಕರ್ನಾಟಕ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ವೃತ್ತಿಯಿಂದ ಗಣಿತ ವಿಜ್ಞಾನ ಪ್ರೌಢಶಾಲಾ ಶಿಕ್ಷಕಿ.ಇಪ್ಪತ್ತನಾಲ್ಕು ವರ್ಷಗಳಿಂದ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಪಠ್ಯಪುಸ್ತಕ ಸಮಿತಿಯ ಸದಸ್ಯರಾಗಿ ಹಲವಾರು ಸಂಪನ್ಮೂಲ ಸಾಹಿತ್ಯವನ್ನು ರಚಿಸಿದ್ದು ಹಲವಾರು ರಾಜ್ಯಮಟ್ಟದ ತರಬೇತಿಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಶಾಲಾ ಮಕ್ಕಳಿಗಾಗಿ ” ಧರೆಯನುಳಿಸುವ ಬನ್ನಿರಿ, ಮೂರು ವೈಜ್ಞಾನಿಕ ನಾಟಕಗಳು” , “ತುಟಿ ಬೇಲಿ ದಾಟಿದ ನಗು” ಕವನ ಸಂಕಲನ , “ತುಂಡು ಭೂಮಿ ತುಣುಕು ಆಕಾಶ” ಕಥಾ ಸಂಕಲನ ಪ್ರಕಟಿಸಿದ್ದು ಅನುವಾದಿತ ಕಥಾ ಸಂಕಲನ ಅಚ್ಚಿನಲ್ಲಿರುತ್ತದೆ.
ನೆನಪಿನ ನವಿಲು ಗರಿಗಳ ನೇವರಿಕೆ
ಸ್ಮಿತಾ ಅಮೃತರಾಜ್ ಅವರ ಒಂದು ವಿಳಾಸದ ಹಿಂದೆ ಪುಸ್ತಕದ ಬಗ್ಗೆ ಬರೆದಿದ್ದಾರೆ ಮಮತಾ ಶಂಕರ್
ನೆನಪಿನ ನವಿಲು ಗರಿಗಳ ನೇವರಿಕೆ Read Post »
ಬಿಸಿಲ ನೆಲ ಕಂಡ ಬೆಳದಿಂಗಳ ಚೇತನ
ನೀ ಹೋದ ಮರುದಿನ ಮತ್ತ ನಂ ಬದುಕು ಮದಲಿನಂಗ ಆಗ್ಯಾದೋ ಬಾಬಾಸಾಹೇಬ!
ನಿನ್ನಂಗ ನುಡಿವಾಂವಾ,ಕಳ ಕಳಿಯ
ಪಡುವಂವ ಬರಲಿಲ್ಲೋ ಒಬ್ಬ!!
ಚನ್ನಣ್ಣ ವಾಲೀಕಾರ
ಬಿಸಿಲ ನೆಲ ಕಂಡ ಬೆಳದಿಂಗಳ ಚೇತನ Read Post »
ಈಗ
ಕವಿತೆ ಈಗ ಆನಂದ ಆರ್.ಗೌಡ ತಾಳೇಬೈಲ್ ರವಿವಾರದ ಸಂಜೆಅಮಲು ಚೆಲ್ಲಿದ ಎಂಥೆಂಥಾದೋಕಸ ಪೌರ ಸೇವಕರ ಪೊರಕೆಶುಚಿಗೊಳಿಸುತ್ತಿತ್ತು ರಸ್ತೆಯ ಇಕ್ಕೆಲಗಳಲ್ಲಿಆಗ ತಾನೇ ಪ್ರಸವವಾದಹೊಂಗಿರಣ ಅವರ ವದನಕ್ಕೆಮುತ್ತನೀಯುತ್ತಿತ್ತು ಅಲ್ಲಿಯೇ ಸೃಷ್ಟಿಸಿದ ನೇರಳೆಲೆಗಳನೆರಳು ಬೆಳಕಿನಾಟ ಕಲೆಗಾರನಕುಂಚದ ಕಲೆಯ ನಾಚಿಸಿದೆ ಕಾರ್ಪೋರೇಟ್ ರಸ್ತೆ ನಡುವೆನೆಟ್ಟ ಪುಟ್ಟ ಗಿಡಗಳುಆರೈಕೆ ಮಾಡಲು ತೂಗು ಹಾಕಿದದೊಡ್ಡ ದೊಡ್ಡ ವ್ಯಕ್ತಿಗಳ ನಾಮಫಲಕರಾರಾಜಿಸುತ್ತಿದೆಚುನಾವಣೆ ಮುಗಿದರೂ ಅದರಂಚಿನಲಿ ಹಾಯ್ದುಹೋಗುವ ಚಿರಯೌವನೆಅಂಗೈ ಸೋಕಿದರೆ ಹಾಲುತೊಟ್ಟಿಕ್ಕುವ ಸೊಬಗುಇನ್ನೂ ಹೊಟ್ಟೆಕಿಚ್ಚು ತರಿಸುವತೊಟ್ಟುಡುಗೆಯ ಸಿರಿವಂತಿಕೆಮುಚ್ಚಿದೆದೆಯೊಡ್ನಿಅರಿವಿಲ್ಲದೇ ಇಳಿದುಚಿಗುರಿದೆಲೆಗಳ ಸವರಿಅಮಲೇರಿಸುವ ಆ ನೋಟಮನಸ ಕೊಲ್ಲುವ ಸಂಚಲತೆಪಡ್ಡೆ ಹೈಕಳ ಹೃದಯ ಬಡಿತಇಮ್ಮಡಿಸಿದೆ ಆ ರಸ್ತೆಕತ್ತಲೆಯಲಿ ಆಗಾಗ ಶವವಾಗಿಮಲಗಿದರೆಒಮ್ಮೊಮ್ಮೆ ಚಂದಮಾಮ ಇಣುಕಿಆಟವಾಡುತ್ತಾನೆ ರಸ್ತೆಯ ಹೃದಯ ಅಗೆದು ಬಗೆದುಈಗ ಅಲ್ಲಲ್ಲಿ ಟಾಕೀ ಕಟ್ಟುತ್ತಿದ್ದಾರೆಒಳಗೊಳಗೇ ಪೈಪ್ ಲೈನ್ಕಕ್ಕಸು ಕೊಳಚೆ ಹೊರಹಾಕಲು ಜನ ಹೈರಾಣಾಗಿದ್ದಾರೆಗಾಡಿಗಳು ನೀರಿನಲೆಗಳಮೇಲೆ ಸಾಗಿ ದಡ ಮುಟ್ಟುತ್ತಿವೆಧೂಳನ್ನು ನುಂಗಿ ಬದುಕುವಮಕ್ಕಳು ಮುದುಕರು ಮೂಕರಾಗಿಕೆಮ್ಮು ಸುಂಬಳ ಇಳಿಸುತ್ತಿದ್ದಾರೆಮನೆ ಒರೆಸುವ ಮನೆಯೊಡತಿಯಮೌನದ ಕಟ್ಟೆ ಒಡೆದಿದೆ ಆದರೂ ಕೋಟಿ ಕೋಟಿಗಳ ಟೆಂಡರ್ಪಡೆದ ಲೀಡರ್ ನೋಡುತ್ತಲೇ ಇದ್ದಾನೆಅಂಬುಲೆನ್ಸ್ ನ ತಿರುಗಾಟವನ್ನುಮಂದಿ ಮೂಗು ಮುರಿದು ಅವನ ಪ್ರತಿಕ್ರಿಯೆಗೆಕಾಯುತ್ತಿದ್ದಾರೆ ! **********************************************
ಇನ್ನೂ ಎಷ್ಟು ದೂರ?
ಕವಿತೆ ಇನ್ನೂ ಎಷ್ಟು ದೂರ? ಡಾ.ಕಾತ್ಯಾಯಿನಿ ಕುಂಜಿಬೆಟ್ಟು ನಕ್ಷತ್ರ ಕದಿಯಲುಹೊರಟಿರುವೆಮೈ ತುಂಬ ನಕ್ಷತ್ರ ಹೊಂದಿರುವಆಕಾಶದಿಂದಎರಡೇ ಎರಡು ನಾನು ಕದ್ದರೆಯಾರ ಅಪ್ಪನ ಮನೆ ಗಂಟುಹೋದೀತು ಹೇಳು?ಹೊರಟಿದ್ದೇನೆಕನ್ನ ಕೊರೆಯಲುಯಾರಿಗೆ ಗೊತ್ತು?ನಕ್ಷತ್ರಗಳು ಎನ್ನುವುದುನೀಲಿ ಗೋಡೆಯ ಅಚಿನಿಂದಇನ್ನಾರೋ ಕನ್ನ ಕೊರೆದುಇಣುಕಿದ ತೂತಿರಬಹುದುಆಚೆ ಮೂಡಿರಬಹುದುಈಚೆ ಮುಳುಗಿದ ಸೂಯ೯ತನ್ನ ಕಿರಣಗಳ ಕನ್ನದ ತೂತುಗಳಿಂದಈಚಿನ ಕತ್ತಲಿಗೆ ತೂರಿರಬಹುದುಅಬ್ಬಾ! ಅಗಣಿತ ನಕ್ಷತ್ರಗಳು!ಬಹುಶಃ ಅದು ಕಳ್ಳರದ್ದೇ ಲೋಕವಿರಬಹುದುನನ್ನಂತೆ ಎರಡೇ ಎರಡುನಕ್ಷತ್ರ ಕದಿಯಲು ಹೊರಟವರು ನಡೆಯುತ್ತಲೇ ಇದ್ದೇನೆಇನ್ನೂ ಎಷ್ಟು ದೂರ? *************************









