ನಾವು ಮತ್ತು ಅವರು
ಕವಿತೆ ನಾವು ಮತ್ತು ಅವರು ರೇಶ್ಮಾ ಗುಳೇದಗುಡ್ಡಾಕರ್ ಇಳೆಯಿದು ಬುದ್ದನುಬದುಕಿ ಬಾಳಿದ ಬೆಳಕಿರುವದು ಭುವಿಯಿದು ಅಲ್ಲಮನಬಯಲಿಗೆ ಬೆರಗಾದ ತಾಣವಿದು ಧರಣಿಯಿದು ಅಣ್ಣ ಬಸವಣ್ಣನಕ್ರಾಂತಿಗೆ ಸಾಕ್ಷಿಯಾದ ನೆಲವಿದು ಭಾರತವಿದು ಗಾಂಧಿಯಅಹಿಂಸೆಯ ಒಲುಮೆಯಲಿಮಿಂದೆದ್ದ ಸತ್ಯವಿದು ಕತ್ತಿಯ ಅಂಚಿಗೆ ಬಲಿಯಾಗುವವೆಇವರೆಲ್ಲ ಮಾರ್ಗಗಳು ?ಉಳಿದಿಲ್ಲವೆ ಅಥವಾ ಉಳಿಸುವದುಬೇಡವೇ ನೆಮ್ಮದಿಯ ನಾಳೆಗಳನು? ಹಸಿದ ಒಡಲಿಗೆ ದ್ವೇಷಅನ್ನ ನೀಡುವದೇ?ಸ್ನೇಹ ಬೆಸೆಯುವದೇ?ಬಾಳಿಗೆ ಹೆಗಲಾಗುವದೇ? ಸಾಮರಸ್ಯ ಅಲೆ ಇಲ್ಲದಸೌಹಾರ್ದದತೆಯ ಕಡಲು ಇರುವುದೇ?ಸಂಕೋಲೆಗಳ ಕಿತ್ತೊಸೆದುಸಂಬಂಧಗಳ ಹೊಸೆದುನಡೆಯುವ ಬನ್ನಿರಿನಮ್ಮ ಗಳ ದಾರಿಗೆ ನಾವೇಮುಳ್ಳಾಗಿ ಭಾವನೆಗಳುಕೃಷವಾಗಿ ಜೀವಿಸುವದು ಬೇಕೆ? *******************************************




