ಪಾರ್ಟಿ
ಇಷ್ಟರಲ್ಲಿ ಎಲ್ಲರಿಗೂ ನಮ್ಮ ಕುಡಿತದ ಬಗೆಗಿರುವ ಕುತೂಹಲ ಪೂರ್ಣವಾಗಿ ನಶಿಸಿತ್ತು. ಮತ್ತೆ ಕಿಚನ್ ಗೆ ಹೋಗಿ ನಮ್ಮ ನಮ್ಮ ಗ್ಲಾಸ್ ಗಳನ್ನು ಬಾಯಿಗಿಟ್ಟು ನಿಧಾನವಾಗಿ ಒಂದು ಗುಟುಕು ಹೀರಿದೆವು . ಕಹಿಯಾದ ದ್ರಾವಣ ಬಾಯಿಗೆ ಎಳ್ಳಷ್ಟು ರುಚಿಸಲಿಲ್ಲ. ಅದರ ಬಣ್ಣ ಇಷ್ಟವಾದಷ್ಟು ರುಚಿ ಇಷ್ಟವಾಗಲೇ ಇಲ್ಲ. ಹೇಗೋ ಗ್ಲಾಸ್ ನಲ್ಲಿರುವಷ್ಟು ಹೀರಿ ಊಟ ಮಾಡಿ ಮುಗಿಸಿದಾಗ ತಡರಾತ್ರಿಯಾಗಿತ್ತು.









