ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಗಜಲ್

ಶ್ರೀಲಕ್ಷ್ಮೀ ಅದ್ಯಪಾಡಿ.

white flower on green water

–

ಸರಿಯುತಿಹುದು ಸಮಯ ಜಿದ್ದಿಗೆ ಬಿದ್ದಂತೆ ಕಣ್ಣೆದುರು

ತಡೆದುಬಿಡು ಕ್ಷಣವನು ಇದ್ದಲ್ಲೆಇರುವಂತೆ ಕಣ್ಣೆದುರು

–

ಉಸುರದೇ ಉಳಿದುಹೋಗಿದ್ದವು ಮನದ ಮಾತುಗಳು

ಕಾದಿಹವು ಸರತಿಯ ಸಾಲಿನಲ್ಲಿ ನಿಂತಂತೆ ಕಣ್ಣೆದುರು

–

ಒಂದೊಂದೇ ಭಾವಗಳ ಹಂಚಿಕೊಳ್ಳಬೇಕಿದೆ ಮನಸಾರೆ

ನೆನಪಿನ ದಾರದಿ ಪೋಣಿಸಿದ ಒಲವ ಹೂವಂತೆ ಕಣ್ಣೆದುರು

–

ಓಡುವ ಹೊತ್ತನೂ ಮೀರುವಂತೆ ನಿನ್ನೊಳು ಬೆರೆಯಬೇಕು

ನಿನ್ನುಸಿರಿನೊಳು ನನ್ನುಸಿರು ಬೆರೆತು ಬೆವೆತಂತೆ ಕಣ್ಣೆದುರು

–

ನಿನ್ನ ಕಣ್ಣೊಲವನೇ ಬೆಚ್ಚಗೆ ಹೊದ್ದು ಮೈ ಮರೆಯಬೇಕಿದೆ

ಮಾಗಿಯ ಚಳಿಯು ಸಹ ಅಸೂಯೆ ಪಡುವಂತೆ ಕಣ್ಣೆದುರು

–

ನಿನ್ನ ಬೆರಗಿನ ಪ್ರತಿ ಗುಂಗನ್ನೂ ನನ್ನೊಳು ಪಡೆಯಬೇಕಿದೆ

ಬರುವ ನಾಳೆಗಳ ಭೇಟಿಗಳೂ ಈರ್ಷೆ ಪಡುವಂತೆ ಕಣ್ಣೆದುರು

********************************************

About The Author

1 thought on “ಗಜಲ್”

  1. ವಾಹ್ ಸೂಪರ್ ಗಜಲ್. ೫-೬ ಎರಡರ ಕಾಫಿಯಾ ಪಡುವಂತೆ ಒಂದೇ ಇದೆ. ಬದಲಿಸಿದರೆ ಇನ್ನೂ ಚೆಂದ.

Leave a Reply

You cannot copy content of this page

Scroll to Top