ದೇವರು ಮಾರಾಟಕ್ಕಿದ್ದಾರೆ…
ಕಾಲ-ಋತುಮಾನಗಳು ಬದಲಾದರು
ಬದಲಾಗಿಲ್ಲ ಅವರ ಬಣ್ಣ
ಪೂಜಿಸುವ ಪುರುಷ ಸಮಾಜದ ಅಹಂ ನಳಿಸಿ
ತೆರೆಸಿಲ್ಲ ನಮ್ಮತ್ತ ಅವರ ಒಳಗಣ್ಣ
ದೇವರು ಮಾರಾಟಕ್ಕಿದ್ದಾರೆ… Read Post »
ಕಾಲ-ಋತುಮಾನಗಳು ಬದಲಾದರು
ಬದಲಾಗಿಲ್ಲ ಅವರ ಬಣ್ಣ
ಪೂಜಿಸುವ ಪುರುಷ ಸಮಾಜದ ಅಹಂ ನಳಿಸಿ
ತೆರೆಸಿಲ್ಲ ನಮ್ಮತ್ತ ಅವರ ಒಳಗಣ್ಣ
ದೇವರು ಮಾರಾಟಕ್ಕಿದ್ದಾರೆ… Read Post »
ಕಾಲ-ಋತುಮಾನಗಳು ಬದಲಾದರು
ಬದಲಾಗಿಲ್ಲ ಅವರ ಬಣ್ಣ
ಪೂಜಿಸುವ ಪುರುಷ ಸಮಾಜದ ಅಹಂ ನಳಿಸಿ
ತೆರೆಸಿಲ್ಲ ನಮ್ಮತ್ತ ಅವರ ಒಳಗಣ್ಣ
ದೇವರುಮಾರಾಟಕ್ಕಿದ್ದಾರೆ… Read Post »
ಕವಿತೆ ಜೋಕಾಲಿ ನಿಲ್ಲುವುದೆಲ್ಲಿ? ಕವಿತಾ ಹೆಗಡೆ ಹರಿದು ಹಂಚಿ ಹೋಗಿದೆ ಬದುಕುತೇವವಿಲ್ಲದೆ ರೂಪ ತಾಳದುಮೌನ ಸಾಮ್ರಾಜ್ಯದ ಮಹಾರಾಜ ಅವನುಮಾತಿನರಮನೆಯಲ್ಲಿ ಅರಗಿಣಿ ನಾನುಮೂಕಳಾಗಲೋ ಮಲ್ಲಿಯಾಗಲೋ ನಿರ್ಲಿಪ್ತಲೋಕದಲಿ ಲುಪ್ತ ಅವನುಚಿಮ್ಮಿ ಚೆಲ್ಲುವ ಕಾರಂಜಿ ನಾನುಗುಪ್ತಗಾಮಿನಿಯಾಗಲೋ ಧುಮ್ಮಿಕ್ಕಲೋ ಗಳಿಸುವುದಕಾಗಿ ಬದುಕುವ ಜೀವ ಅವನುಬದುಕ ಉಳಿಸಲು ಹೆಣಗುವ ಆತ್ಮ ನಾನುಯಂತ್ರವಾಗಲೋ ಜೀವಸುಧೆಯಾಗಲೋ ಅತಿ ವೈರುಧ್ಯವೂ ಅನಾಕರ್ಷಕವೆ?ಅತಿ ಸಮರ್ಪಣೆಯೂ ನಿರಾಕರಣೆಯೆ? **********************************
ಜೋಕಾಲಿ ನಿಲ್ಲುವುದೆಲ್ಲಿ? Read Post »
ಚಲನೆಯ ವೇಗ ಜಾಸ್ತಿ ಇರುವುದರಿಂದ ಅಂತರವು ಕೂಡ ಜಾಸ್ತಿಯಾಗ್ತಾ ಹೋಗ್ತಾ ಇದೆ ಆಧುನಿಕತೆ ಸ್ಪರ್ಶ ಹೆಚ್ಚಾಗಿ ನಮ್ಮ ಮೂಲ ಸಂಸ್ಕೃತಿಯನ್ನು ನಾವು ಕಳೆದುಕೊಳ್ಳುತ್ತಿದ್ದೇವೆ ಎಂದು ಅನಿಸುತ್ತದೆ.
ಕವಿತೆ ಮಳೆ ಮಾಲತಿ ಶಶಿಧರ್ ಆಗಿಂದಲೂ ಮಳೆಯೆಂದರೆಎಲ್ಲಿಲ್ಲದ ಹುಚ್ಚುಬರುತ್ತಿದ್ದ ಹಾಗೆಮೈಮೇಲಿನ ಪ್ರಜ್ಞೆಕಳೆದುಕೊಂಡುತೋಳುಗಳ ಚಾಚಿನನ್ನುದ್ದ ಅಗಲಆಳಕ್ಕೆ ಇಳಿಸಿಕೊಳ್ಳುವಷ್ಟು ಈ ಮಳೆಯದ್ದೊಂತರತಕರಾರುಬಂದರೆ ಪ್ರವಾಹಬರದಿರೆ ಬರ ಉಕ್ಕಿದ ಪ್ರವಾಹಕ್ಕೆಸಿಕ್ಕಿದ ಕಾರಿನ ಟೈರ್ ನಂತೆ ತೇಲುವುದುಬರದಲ್ಲಿ ಬರಡು ನೆಲದಂತೆಬಿರುಕು ಬಿಡುವುದು ಹೃದಯ ಎಂದೋ ಒಂದು ದಿನಸಮಾಧಾನದಲಿ ಬಂದ ಮಳೆತುಟಿ ಕಟಿ, ಎದೆ ಬೆನ್ನುಹೊಟ್ಟೆ ಹೊಕ್ಕಳುಮೀನಖಂಡ ತೊಡೆಗಳನ್ನೆಲ್ಲಾಹಾಗೆ ಮೃದುವಾಗಿ ಸೋಕಿಹೊರಟುಬಿಡುತ್ತದೆ ಆಮೇಲೆ ಅದು ಬಾನು ನಾ ಭೂಮಿಆದರೂ ಸೆಳೆತಅಯಸ್ಕಾಂತ ದಗೆ ಚಳಿ ಯಾವುದರಲ್ಲೂಸಮಯ ಸರಿಯುವುದೇ ಇಲ್ಲಾಸದಾ ಅದಕ್ಕಾಗೇ ಕಾಯೋನನ್ನೆದೆಯ ಕೇರಿ ಕೇರಿಯಲ್ಲೂಅದರದ್ದೇ ಜಾತ್ರೆ.. ******************************
ಗಜಲ್ ಪ್ರಭಾವತಿ ಎಸ್ ದೇಸಾಯಿ ಮಾದಕ ಕಣ್ಣ ನೋಟ ಕಂಡು ಚಂದಿರ ಜೋಲಿ ಹೊಡೆಯುತಿದೆಈ ಸೆರಗಿನ ಚೆಲ್ಲಾಟ ನೋಡಿ ಮೋಡವು ತೇಲಾಡುತಿದೆ ಅವಳ ದೇಹ ಮಾಟ ಅರಿತು ಶಿಲ್ಪಿ ಶಿಲೆಯಲಿ ಕಲೆ ಅರಳಿಸಿದಮೈ ತುಂಬಿದ ಮದದ ರಂಗಿಗೆ ಮದರಂಗಿ ಕೆಂಪು ನಾಚಿತಿದೆ ಒಂದಾಗಿ ಬೆಸೆದ ಮಧುರ ಗಳಿಗೆಯು ಜೊತೆಯಾಗಿದೆ ಸದಾವಿಧಿಯ ಆಟ ಬಲ್ಲವರಾರು ಅಳಿಯದ ನೆನಪು ಕಾಡುತಿದೆ ಹರೆಯದ ವಯಸ್ಸು ಅವಳ ಪಡೆಯುವ ಕನಸು ಕಾಣುತ ಕಳೆದೆಆ ಯೌವನದ ದಿನಗಳನ್ನು ಮುಸ್ಸಂಜೆ ಮೆಲುಕು ಹಾಕುತಿದೆ “ಪ್ರಭೆ”ಯನು ಮರೆಯದ ಹೃದಯ ದಹಿಸುತಿದೆ ವಿರಹ ಜ್ವಾಲೆಯಲಿಮನ ಚಕೋರವಾಗಿ ಬೆಳದಿಂಗಳ ಹನಿ ಕುಡಿಯ ಬಯಸುತಿದೆ ******************************
ಕವಿತೆ ಅನೂಹ್ಯ. ಅಬ್ಳಿ, ಹೆಗಡೆ ಮೈಮೇಲೆ ಬೇಸಿಗೆಯ ಬಿಸಿಲಕೆಂಡದ ಮಳೆ ಸುರಿಯುತ್ತಿದ್ದರೂಸ್ವಲ್ಪವೂ ವಿಚಲಿತವಾಗದೇ..ಎದೆ ತುಂಬ ಕಾಲ್ತುಳಿತದಸಣ್ಣಪುಟ್ಟ ರಕ್ತ ಸಿಕ್ತಗಾಯಗಳನ್ನೂ ಲೆಕ್ಕಿಸದೇ….ಅಂಗಾತ ಮಲಗಿರುವ ನನ್ನನೆಚ್ಚಿನ ಕಾಲು ಹಾದಿ ನನಗಾಗಿನನಗಷ್ಟೇ ನಾನೇ ನಿರ್ಮಿಸಿಕೊಂಡಿದ್ದು ಸರಳ,ಸುಂದರಗುರಿ ತಲುಪಲಷ್ಟೇ..!ಭಾರೀ ವಾಹನಗಳೋಡಾಡುವಗಟ್ಟಿಮುಟ್ಟಾದ ದಾಂಬರುರಸ್ತೆ ಇದಲ್ಲ.ವಿಲಾಸಿ,ದುಬಾರಿಕಾರುಗಳೋಡಾಡುವಮಿರಿ,ಮಿರಿ ಮಿಂಚುವರಾಜ ಮಾರ್ಗವೂ ಇದಲ್ಲ.ಜನ ನಿಬಿಡ ರಸ್ತೆಯಂತೂಇದಲ್ಲವೇ ಅಲ್ಲ.ಯಾವಾಗಲೋ ಅಪರೂಪಕ್ಕೊಮ್ಮೆನನ್ನೊಟ್ಟಿಗೆನನ್ನವರೆಂದು ಕೊಂಡವರ,ಅಥವಾ ನನ್ನವರೆಂದುಕೊಂಡುಸಿದ್ಧ ಪ್ರಸಿದ್ಧರೊಟ್ಟಗೆನಡೆವಾಗ..ಅವರ ಚಪ್ಪಲಿಯಧರ್ಪದ ಪದಾಘಾತಕ್ಕೆಆದ,ಕಾಲ ಕ್ರಮೇಣ ಮಾಯಬಹುದಾದ ಸಣ್ಣ,ಪುಟ್ಟಗಾಯಗಳಿದ್ದರೂ ನಿರಾತಂಕವಾಗಿ,ನೋವ ಸಹಿಸಿ,ಗಮ್ಯದೆಡೆ ತಲುಪಿಸುವಧ್ಯೇಯದೊಡನೆ ಅಂಗಾತಮಲಗಿ ನಿಟ್ಟುಸಿರು ಬಿಡುತ್ತಿರುವನನ್ನ ಅಚ್ಚುಮೆಚ್ಚಿನ ಸುಂದರಕಾಲು ಹಾದಿಯ ಮಧ್ಯೆಇದ್ದಕ್ಕಿದ್ದಂತೆ…ಗೋಚರಿಸಿತೊಂದುಪಾತರಗಿತ್ತಿಯ ಹೆಣ.ಸುತ್ತ ತಿನ್ನಲು ಮುಗಿಬಿದ್ದಕಟ್ಟಿರುವೆಗಳ ಸಾಲುಭಯಾನಕ,ಭೀಬತ್ಸಕೆಲವುಸಲ ಅನೂಹ್ಯಇದು ನನ್ನ ಸೋಲು. ********************************
ಹನಿಗಳು ಸುವಿಧಾ ಹಡಿನಬಾಳ ೧) ಮೌನ ಮಾತಾಗುವ ವೇಳೆನೀ ಹೋದೆ ದೂರಎದೆಯಂತರಾಳದಲಿನೆನಪು ಬಲು ಭಾರ ೨) ಮಗು ನಿನಗೆ ಕೋಪಮಹಾ ಶತ್ರುವಂತೆಅದಕೆ ನಿನ್ನ ಮನಉರಿವ ಕುಲುಮೆಯಂತೆ ೩) ಬೆಕ್ಕೊಂದು ಕಣ್ಣು ಮುಚ್ಚಿಹಾಲು ಕುಡಿವಂತೆಸುತ್ತೆಲ್ಲ ಅವ್ಯವಹಾರಅನಾಚಾರನಡೆಯುತಿಹುದಂತೆ ೪) ನನ್ನ ಒಲವಿನ ಕವಿತೆನೀನೆಲ್ಲಿ ಅವಿತು ನಿಂತೆನಕ್ಷತ್ರವನೆಣಿಸುತ ಕುಳಿತೆಬಂದೆ ಮತ್ತೆ ಬೆಳಕಿನಂತೆ ೫) ಎದೆಯ ಗೂಡೆಂಬಗುಬ್ಬಚ್ಚಿ ಗೂಡಲ್ಲಿಬಚ್ಚಿಟ್ಟ ನನ್ನ ಪ್ರೀತಿ ಹಕ್ಕಿಗೆನೀ ಒತ್ತಿದ ಮುತ್ತಿನ ಮೊಹರುಹಾರಲು ಕಲಿಸಿದ ಹಾಗೆ ೬) ಬಡತನ ನಿವಾರಣೆಗೆಂದುಹತ್ತಾರು ಯೋಜನೆವೋಟ್ ಬ್ಯಾಂಕ್ ರಾಜಕಾರಣದಿಂದಖಾಲಿ ಸರ್ಕಾರದ ಖಜಾನೆ ೭) ನಲ್ಲ ನಿನ್ನನೆನಪು ತಂದವಿರಹ ಸಹಿಸಲಾಗದುಕಣ್ಣ ತುಂಬಾನಿನ್ನ ರೂಪಎದೆಯ ಬಿರಿಯೆಭಾವ ಲಹರಿನಿದ್ದೆ ಬಾರದು ೮) ನಾವು ಇರುವುದೆ ಹಿಂಗನಿಂತ ನೀರಿನಂಗಬಿಟ್ಟರೂ ಗ್ರಹಣ ಚಂದ್ರಂಗಬಿಟ್ಟಿಲ್ಲ ನಮಗನಾವು ಇರುವುದೆ ಹಿಂಗ ೯) ಸಾವಿಗೆ ದಿನವೂಹಲವು ಮುಖಈಗ ಹೊಸದೊಂದು ಸೇರ್ಪಡೆಕೊರೊನಾ ಜಪ ೧೦) ಕರಗುತಿದೆ ಕೊರೊನಾಸೃಷ್ಟಿಸಿದ ತಲ್ಲಣಈಗ ಎಲ್ಲೆಲ್ಲೂ ಜೋರುಲಸಿಕೆ ಅಭಿಯಾನ ೧೧) ಕನ್ನಡವೆಂದರೆಮೂಗು ಮುರಿಯಬೇಡನಿನ್ನ ಮೊದಲ ತೊದಲ್ನುಡಿಇಂಗ್ಲಿಷ್ ಎಂದರೆವ್ಯಾಮೋಹ ಬೇಡಕನ್ನಡವೆ ನಿನಗೆ ಕನ್ನಡಿ ೧೨) ರಸಿಕ ನೀನುನಗುವಿನಲ್ಲೆಮನವ ತಣಿಸುವೆಮಾತಿನಲ್ಲೆತನುವ ಕೆಣಕಿನನ್ನ ಕೊಲ್ಲುವೆ *****************************
ಬದಲಾಗುತ್ತ ಹೋದ ಅವಳ ದೇವರು ಎಂ. ಆರ್. ಅನಸೂಯ ಅವಳು ಏಳೆಂಟು ವರ್ಷದವಳಿದ್ದಾಗ ಅಮ್ಮ ಹೇಳಿದ್ದು ಕೇಳಿದಾಗ ದೇವರೆಂದರೆ ಭಕ್ತಿಯಿಂದ ಕೇಳಿದರೆ ಸಾಕು ಕೇಳಿದ್ದನ್ನೆಲ್ಲಾ ಕೊಡುವಂಥಾ ಸರ್ವಶಕ್ತನೆಂಬ ನಂಬಿಕೆ. ತಾಯಿಯ ಕೈ ಹಿಡಿದು ನಡೆವ ಮಗುವಿನ ನಂಬಿಕೆ, ಮಳೆ ಬರುವುದೆಂದು ಬೀಜ ಬಿತ್ತನೆ ಮಾಡುವ ರೈತನ ನಂಬಿಕೆ ದೇವರ ಪ್ರಸಾದವೆಂದು ಕಣ್ಣಿಗೊತ್ತಿಕೊಂಡು ತಿನ್ನುವಂಥ ಭಕ್ತರ ನಂಬಿಕೆ. ಭಕ್ತಿಯೆಂದರೆ ಹೇಗಿರಬೇಕು ಎಂಬುದಕ್ಕೆ ಅಮ್ಮನ ಮಾತೇ ವೇದವಾಕ್ಯ.ದಾಸವಾಳ ಹಾಗೂ ಗಿಡದ ಮೇಲೆ ಮೊಸರು ಚೆಲ್ಲಿದಂತೆ ಮೈತುಂಬ ಹೂ ಬಿಟ್ಟ ನಂದಿ ಬಟ್ಟಲ ಹೂಗಳನ್ನು ಬಿಡಿಸಿ ತಂದು ಮಾಲೆಯನ್ನು ಕಟ್ಟಿ ಪುಟ್ಟ ದೇವರ ಗೂಡನ್ನು ಒರೆಸಿ ಸಾರಿಸಿ ದೇವರ ಭಾವ ಚಿತ್ರಗಳಿಗೆ ನಂದಿ ಬಟ್ಟಲ ಹೂವಿನ ಹಾರ ಹಾಕಿ, ದೇವರ ವಿಗ್ರಹಗಳಿಗೆ ದಾಸವಾಳ ಹೂಗಳನ್ನು ಮುಡಿಸಿ, ಹಣತೆ ಹಚ್ಚಿ ಕೈ ಮುಗಿದು ನಿಂತು ಕಣ್ಮುಚ್ಚಿ ಚಿತ್ರ ವಿಚಿತ್ರ ಬೇಡಿಕೆ ಗಳನ್ನಿಡುವುದು ಏಕೆಂದರೆ ದೇವರು ಸರ್ವಶಕ್ತ ಹಾಗೂ ದಯಾಮಯಿ ! ಆ ಮುಗ್ಧ ಮನಕ್ಕೆ ಅದೊಂದು ತನ್ಮಯಗೊಳಿಸುವ ಆಪ್ಯಾಯಮಾನವಾದಂಥ ಪ್ರೀತಿಯ ಕೆಲಸ. ಬೇಡಿಕೆಗಳು ಈಡೇರದಿದ್ದರೂ ದೇವರನ್ನೇನು ದೂರಲಿಲ್ಲ ಕಡಿಮೆಯಾಗದ ಭಕ್ತಿ ನಿಷ್ಠೆ. ಏಕೆಂದರೆ ತನ್ನ ಭಕ್ತಿಯಲ್ಲೇ ಏನೋ ಕೊರತೆಯೆಂಬ ಭಾವವಷ್ಟೆ. ಗಣೇಶೋತ್ಸವದ ಹಾಗು ರಾಮನವಮಿಯ ಹರಿಕಥೆಗಳನ್ನು ನಿದ್ದೆಮಾಡದೆ ಕೇಳಿದ ಕಥೆಗಳು ಇದಕ್ಕೆ ಪೂರಕ. ಪ್ರತಿ ನವರಾತ್ರಿಯಲ್ಲಿ ಅಮ್ಮನೂ ಅನೂಚಾನವಾಗಿ ಮಾಡಿದ ದೇವಿ ಮಹಾತ್ಮೆಪಾರಾಯಣವನ್ನು ಬಾಲ್ಯದಿಂದಲೆ ಮುಂದುವರೆಸಿದಳು ಕೌಮಾರ್ಯದ ತನಕ ಸೊಗಸಾದ ಬದುಕಿನಿಂದಾಗಿ ಎಲ್ಲ ಚಂದವೇ.ಒರಗಲು ಹೆತ್ತವರ ಹಾಗೂ ಒಡಹುಟ್ಟಿದವರ ಹೆಗಲು.ಮುಂದಿನ ಹಂತಗಳಲ್ಲಿ ಅವಳ ಬದುಕು ಸುಖದ ಸುಪ್ಪತ್ತಿಗೆಯಾಗಿರಲಿಲ್ಲ. ಬದುಕು ಬಂದಂತೆ ಸ್ವೀಕರಿಸದೆ ಗತ್ಯಂತರವಿಲ್ಲ. ಬದುಕಲ್ಲಿ ಬಂದ ನೋವು,ಅವಮಾನ,ತಿರಸ್ಕಾರಗಳನ್ನೆದುರಿಸುತ್ತಲೇ ಗಟ್ಟಿಯಾದಳು.ಬದುಕಕಲಿಸಿದ ಪಾಠಗಳಿಗೆ ಋಣಿಯಾದಳು. ಒಂಟಿಯಾಗಿ ಅಸಹಾಯಕಳಾಗಿ ಸೋತಾಗ ಕಣ್ಣೀರು ಹಾಕುತ್ತ ದೇವರ ಮುಂದೆ ಕೂತು ಕ್ಷಣಿಕ ನೆಮ್ಮದಿಯ ಕಂಡವಳು. ಎಂತಹ ಸೋಲಿನಲ್ಲು ಕಂಗಾಲಾಗದ ಸ್ವಾಭಿಮಾನಿಯಾದ ಅವಳ ಅವಿರತ ಶ್ರಮಕ್ಕೆ ಹಾಗು ಬಿಡದ ಪ್ರಯತ್ನಗಳಿಗೆ ಅವಳ ದೇವರು ಜೊತೆಗಿದ್ದಾನೆಂಬ ಭರವಸೆಯ ಭಾವವೊಂದೇ ಸಾಕು ಅವಳಿಗೆ ಹತ್ತಾಳಿನ ಬಲ ಕೊಡುತ್ತಿತ್ತು.ತನ್ನ ಗುರಿ ಮುಟ್ಟುವ ತನಕ ಅವಳಿಗೆ ಅದೇ ಧ್ಯಾನ ಅದೇ ಪ್ರಪಂಚ. ಅವಳ ದೇವರು ಮಂದಿರದಲ್ಲಿರದೆ ಅವಳು ತೊಡಗಿದ ಕಾಯಕದಲ್ಲಿ ಕಾಣುತ್ತಿದ್ದ. ಜ್ಞಾನ ದೇಗುಲವಾದ ಶಾಲೆಯ ಶಿಕ್ಷಕಿಯಾಗಿ ಸೇವೆ ಸಲ್ಲಿಸುವ ಅವಕಾಶವೊದಗಿದ್ದು ತನ್ನ ಸುಕೃತವೆಂದೇ ಭಾವಿಸಿದಳು. ಸರ್ಕಾರಿ ಶಾಲೆಯ ಬಡ ಮಕ್ಕಳನ್ನು ದೇವರ ಮಕ್ಕಳೆಂದೇ ಭಾವಿಸಿ ಪ್ರಾಮಾಣಿಕತೆ ಹಾಗೂ ಅರ್ಪಣಾ ಭಾವದಿಂದ ಕಲಿಸಿದಳು. ಅವಳೆಂದು ಗಂಟೆಗಟ್ಟಲೆ ಪೂಜೆ ಮಾಡಲೇ ಇಲ್ಲ.ಅವಳ ನಂಬಿಕೆಯ ದೇವರ ಮುಂದೆ ಕೈಮುಗಿದು ಕ್ಷಣ ಕಾಲ ಕಣ್ಮುಚ್ಚಿದರೆ ಸಾಕಷ್ಟೆ. ಅಶಕ್ತರಿಗೆ ಕೈಲಾದ ಸಹಾಯ, ಹಸಿದ ಹೊಟ್ಟೆಗೆ ಅನ್ನವಿಡುತ್ತ ಅನ್ನಗಳಿಕೆಯ ದಾರಿ ತೋರುವುದು ಅವಳ ದೇವರಿಗೆ ಇಷ್ಟವೆಂಬ ಸ್ವಷ್ಟ ಅರಿವಿತ್ತು. ಪುಣ್ಯ ಕ್ಷೇತ್ರಗಳ ಯಾತ್ರೆಯೆಂದರೆ ಪ್ರವಾಸದ ಅನುಭವದೊಂದಿಗೆ ದೈವ ದರ್ಶನವಷ್ಟೆ. ಕಾಶಿಯವಿಶ್ವನಾಥನ ದರ್ಶನ ಭಾಗ್ಯಕ್ಕಿಂತ ಅವಳು ಕಾಯುತ್ತಿರುವುದು ಜೀವ ಚೈತನ್ಯದಾಯಿನಿಯು ಜೀವನದಿಯಾದ ಗಂಗೆಯ ವಿಶಾಲ ಹರಿವನ್ನು ಕಣ್ತುಂಬಿ ಕೊಳ್ಳುವ ಧನ್ಯತಾ ಭಾವದ ಅಮೃತ ಘಳಿಗೆಗಾಗಿ. ಅವಳೇ ಕೈಯಾರೆ ಬೆಳೆಸಿದ ಹೂ ಗಿಡಗಳ ಹೂ ಬಿಡಿಸಿ ಮನೆಯಲ್ಲಿನ ದೇವರನ್ನು ಅಲಂಕರಿಸಿ ನೋಡಿ ತೃಪ್ತಿ ಪಡುವುದು ಇಂದಿಗೂ ಅವಳಿಗೆ ಇಷ್ಟವಾದ ಕೆಲಸವೇ. ಮನೆಯಲ್ಲಿ ಪೂಜಿಸುವಾಗ ಆಗುವ ತಲ್ಲೀನತೆಯನ್ನು ಅರೆಗಳಿಗೆಯಾದರೂ ಅನುಭವಿಸಿದ ಅವಳಿಗೆ ಇನ್ಯಾವ ಜಾತ್ರೆ, ಯಾತ್ರೆಗಳ ಜನ ಜಂಗುಳಿಯ ನಡುವೆ ಅಂಥಾ ಏಕಾಗ್ರತೆ ಲಭ್ಯವಾಗಲೇ ಇಲ್ಲ. ಜಿ.ಎಸ್.ಶಿವರುದ್ರಪ್ಪ ನವರ ಕವಿತೆಯಲ್ಲಿ ಕಾಣುವ “ಎಲ್ಲೊ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ ಇಲ್ಲೇ ಇರುವ ಪ್ರೀತಿ ಸ್ನೇಹಗಳ ಗುರುತಿಸದಾದೆನು ನಮ್ಮೊಳಗೆ” ಎಂಬ ಸಾಲುಗಳನ್ನು ಅಂತರ್ಗತ ಮಾಡಿ ಕೊಂಡವಳು ಜನ ಮಾನಸರ ನಂಬಿಕೆಯ ಶ್ರದ್ಧಾ ಕೇಂದ್ರಗಳಾಗಿರುವ ಮಂದಿರಗಳ ವಿರೋಧಿಯೇನಲ್ಲ. ಮಂದಿರದಲ್ಲಿನ ಆದಿ ಶಕ್ತಿಗೆ ಕೈ ಮುಗಿವಂತೆ ಚರ್ಚ್ ಗಳಲ್ಲಿನ ಏಸುಮಾತೆಗೂ ಕೈಮುಗಿದು ನಿಂತವಳು. ಇಡೀ ಪ್ರಪಂಚವನ್ನೆ ಆಳುವಂಥ ಅತಿಮಾನುಷ ಶಕ್ತಿಯೊಂದಿದೆ ಎಂಬುದು ಅವಳ ಅಚಲ ನಂಬಿಕೆ. ಪ್ರಕೃತಿಯೇ ದೇವರೆನ್ನುತ್ತ ತನ್ನ ಇತಿಮಿತಿಯಲ್ಲೇ ಬೀದಿ ಗಿಡಗಳಿಗೆ ನೀರೆರೆದು ಗೊಬ್ಬರ ಸುರಿದು ಬೆಳೆಸುತ್ತ ತೃಪ್ತಿ ಕಂಡವಳು.ತಾನು ಬೆಳೆಸಿದ ಗಿಡಗಳಲ್ಲಿ ತನ್ನೊಂದಿಗೆ ಪಕ್ಷಿ ಪ್ರಾಣಿಗಳ ಪಾಲಿದೆ ಎಂಬುದನ್ನವಳು ಅರಿತವಳು. ಹಸಿದ ಬೀದಿನಾಯಿಗೆ ಉಣಿಸಿಡುವ ಹಾಗೆಯೇ ಬೀದಿ ಬದಿಯ ಮರಗಳಿಗೆ ನೀರೆರೆಯುತ್ತಾಳೆ ಹರಿಜನರೆಂದು ಕರೆಯುತ್ತ ಹರಿದರ್ಶನಕ್ಕೆಡೆ ಮಾಡಿಕೊಡದ ಅಸ್ಮೃಶ್ಯತಾ ಆಚರಣೆಗೆ ವಿರೋಧವಿದೆ. ಅವಳ ದೇವರು ಜೀವಪರ ಕಾಳಜಿಯುಳ್ಳ ದೇವನೂರರ ಗ್ರಾಮ ದೇವತೆ ” ಮನೆ ಮಂಚಮ್ಮ” ನಲ್ಲಿದ್ದಾನೆ. ಜೀವಪರವಾದ ಮಾನವೀಯ ಮನಸ್ಸುಗಳಿಗೆ ದೇವರೊಲಿಯುತ್ತಾನೆಂಬುದು ಅವಳ ಗ್ರಹಿಕೆ. ಆದ್ದರಿಂದಲೇ “ತನು ಕರಗದವರಲ್ಲಿ ಪುಷ್ಪವನೊಲ್ಲೆಯಯ್ಯಾ ನೀನು ಮನ ಕರಗದವರಲ್ಲಿ ಗಂಧಾಕ್ಷತೆಯನೊಲ್ಲಯ್ಯಾ ನೀನು” ಎಂಬ ಅಕ್ಕನ ವಚನವನ್ನು ಅವಳೆಂದೂ ಮರೆಯಳು “ಬದಲಾವಣೆ ಜಗದ ನಿಯಮ” ವೆನ್ನುವಂತೆ ನಮ್ಮಲ್ಲಿನ ಚಿಂತನೆಗಳು ನಿಂತ ನೀರಾಗದೆ ಹರಿಯುವ ಹೊಳೆಯಾಗ ಬೇಕು. ಹೂ ಅರಳಿ ದಂತೆ ವಿಕಾಸವಾಗ ಬೇಕು. ಬಾಲ್ಯದ ಅವಳ ದೇವರಂತೆ ಮಂದಿರದ ಕೂತು ಪೂಜೆ ಪುರಸ್ಕಾರ ಇತ್ಯಾದಿಗಳಿಗೆ ಒಲಿಯುವವನಲ್ಲ ಈಗ ಆವಳ ದೇವರು ಅಶಕ್ತರ, ದೀನ ದಲಿತರ ಸೇವೆಗೆ ಒಲಿಯುವ, ಪರಿಸರದ ವಿನಾಶವನ್ನು ತಡೆಗಟ್ಟುವುದನ್ನು ಮೆಚ್ಚುವ ದೇವರು. ಹೀಗೆ ಅವಳ ದೇವರ ಸ್ವರೂಪವು ಕೂಡಾ ಬದಲಾಗಿದೆ ******************************
ಬದಲಾಗುತ್ತ ಹೋದ ಅವಳ ದೇವರು Read Post »
You cannot copy content of this page