ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ದೂರ ನಿಂತೇ ಹರಿವ ತೊರೆ

ನೂತನ ದೋಶೆಟ್ಟಿ

Photo of Waterfalls During Fall Season

ನೆನಪು ಮೂಡಿಸಿತು ತುಟಿಯಂಚಲಿ ಹೂನಗೆ
ಸೂಸಿ ಕಣ್ಣಂಚಲಿ ಜಿನುಗು ಹನಿ
ಹೊರ ನಡೆಯಿ ನೀವುತು ಮೆಲ್ಲುಸಿರು

ತುದಿ ನಾಲಿಗೆಯ ಮೇಲೆ ನಲಿವು ಹೆಸರು
ಕಣ್ಣ ಪರದೆಯಲ್ಲಡಗಿಹ ಮಂದ ಹಾಸ
ದೂರ ನಿಂತೇ ಹರಿವ ತೊರೆ

ಬೇಕೆನ್ನಿಸುವುದಿದೆ ಒಂದು ಹಿಡಿತ
ಅದುಮಿದ ಕೈ ಇಟ್ಟ ಭಾಷೆ
ಮುಚ್ಚಿದೆವೆಗಳ ಮುಂದೆ ಮೂರ್ತ ರೂಪ

ಕಣ್ಣ ಹೊಳಪಲಿ ಕಂಡ ಹೊಸ ಅರ್ಥ
ಅಂಗೈಯಲ್ಲಿ ಬಚ್ಚಿಕೊಂಡ ಡವಗುಡುವೆದೆಗೆ
ಶೃತಿ ಸೇರಿದೆ ಭಾಸ

ಹೊಸ ನಾಳೆಗಳ ಬಾನಲ್ಲಿ ಬಿಳಿನೊರೆ
ಮಿಂಚುನಗೆಯ ನೆನಪಲ್ಲಿ
ಬಿರಿವ ಹೂಗಳು
ಎದೆಗೂಡ ಭಾರದಲ್ಲೂ ನಳನಳಿಸುವವು

ಹುಟ್ಟಿನ ತರ್ಕದಲ್ಲಿ ಜಾರಿ ಹೋಗುವ ಪ್ರೀತಿ
ಕಡೆಗೋಲಲ್ಲಿ ಕಡೆದ
ಗುಂಡಗಿನ ಬೆಣ್ಣೆ ಮುದ್ದೆ.

About The Author

6 thoughts on “”

Leave a Reply

You cannot copy content of this page

Scroll to Top