ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಶಿಶಿರದಲ್ಲಿ

Landscape Photography of Flower Garden

ಸಖೀ…….
ಪ್ರತಿ ಶಿಶಿರದಂತೇ
ಈ ಸಲವೂ..
ದುಬಾರಿ-
ಹೊಸ ಸೀರೆ
ಉಡುವಾಸೆಗೆ
ಉಟ್ಟಹಳೇಸೀರೆ
ಬಿಚ್ಚೊಗೆದು
ಕುಳಿತಿಹ ನೀರೆ,
ನಗ್ನ ಸುಂದರಿ-
ಎಲೆಯುದುರಿಸಿ
ಕುಳಿತಿಹ,
ಬೋಳು ಮರ-
ಚಿಗುರಿ,ಪಲ್ಲವಿಸಿ,
ಹೂ,ಹಣ್ಣು,
ಮೈದುಂಬಿ,
ಸಂಭ್ರಮಿಸುವ
ಆ…ಒಂದು ಕ಼ಣ-
ಕ್ಕಾಗಿ ಕಾಯುತ್ತಿದೆ-
ಆಸೆಯಿಂದ.
ನನ್ನೊಳಗಿನ
ನಿನ್ನಂತೆ,
ನಿನ್ನೊಳಗಿನ
ನನ್ನಂತೆ…..!!!

***********************

ಅಬ್ಳಿ,ಹೆಗಡೆ

About The Author

Leave a Reply

You cannot copy content of this page

Scroll to Top