ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಪುಸ್ತಕ ಸಂಗಾತಿ

ತುಂಡು ರೊಟ್ಟಿ

ಪುಸ್ತಕ ಸಂಗಾತಿ ವರ್ತಮಾನಕ್ಕೆ ಮುಖಾಮುಖಿಯಾಗುವ ಪ್ರತಿಭಟನಾತ್ಮಕ ಕಾವ್ಯ ಜ.೩೧ ಶಿಗ್ಗಾವಿಯಲ್ಲಿದ್ದೆ. ಕನಕ ಶರೀಫ ಪ್ರಶಸ್ತಿ ಪ್ರದಾನ, ಕವಿಗೋಷ್ಠಿ, ಪುಸ್ತಕ ಬಿಡುಗಡೆ ಹೀಗೆ ಮೂರು ಆಯಾಮಗಳ ಸಮಾರಂಭವನ್ನು ಉತ್ತರ ಸಾಹಿತ್ಯ ವೇದಿಕೆ ಹಾಗೂ ನೇತಾಜಿ ಪ್ರಕಾಶನದವರು, ಗೆಳೆಯ ರಂಜಾನ್ ಕಿಲ್ಲೆದಾರ ಏರ್ಪಡಿಸಿದ್ದರು. ಈ ಕಾರ್ಯಕ್ರಮದಲ್ಲಿ ಕವನ ವಾಚನದ ನೆಪದಲ್ಲಿ ಶಿಗ್ಗಾಂವ್ ತಲುಪಿದ್ದೆ. ಅಲ್ಲಿದ್ದ ಗೆಳೆಯ ಅಲ್ಲಾಗಿರಿರಾಜ್ ಕನಕಗಿರಿ” ಸರ್ಕಾರ ರೊಕ್ಕ ಮುದ್ರಿಸಬಹುದು,ತುಂಡು ರೊಟ್ಟಿಯನ್ನಲ್ಲ .. ” ಎಂಬ ಅವರ ಕವನ ಸಂಕಲನವನ್ನು ನನ್ನ ಕೈಗಿಟ್ಟರು‌ . ಆ ಸಂಕಲನದ ರಕ್ಷಾ ಪುಟದ ಕೊನೆಗೆ ‘ ನೀವು ಎದೆಗೆ ಗುಂಡು ಹೊಡೆದರೆ’ ಎಂಬ ಕವಿತೆ ಮೊದಲ ಓದಿಗೆ ಥಟ್ಟನೆ ನನ್ನ ಗಮನ ಸೆಳೆಯಿತು. ಕ್ರಾಂತಿಯ ಕಿಡಿಯಂತೆ ಇದ್ದ ಆ ಕವಿತೆಯನ್ನು ಓದಿದ ತಕ್ಷಣ, ನನ್ನ ವ್ಯಾಟ್ಸಪ್ ಸ್ಟೇಟಸ್‌ ನಲ್ಲಿ ಹಂಚಿಕೊಂಡೆ. ೨೦೨೦ರಲ್ಲೇ ಎರಡು ಮುದ್ರಣ ಕಂಡ ಕವಿತಾ ಸಂಕಲನ ಇದಾಗಿತ್ತು. ಮೋಹನ್ ಕುರುಡಗಿ ಕಾವ್ಯ ಪ್ರಶಸ್ತಿ ಪಡೆದುಕೊಂಡ ” ತುಂಡು ರೊಟ್ಟಿ ” ಈಗಾಗಲೇ ಕನ್ನಡ ಕಾವ್ಯಾಸಕ್ತರ ಗಮನ ಸೆಳೆದಿದೆ. ‌ವರ್ತಮಾನಕ್ಕೆ ಮುಖಾಮುಖಿಯಾಗುವ ಪ್ರತಿಭಟನಾತ್ಮಕ ಕಾವ್ಯ ಸಿಟ್ಟು ,ಆಕ್ರೋಶ, ಕವಿತೆಯಾಗುವ ಪರಿ, ಪ್ರಭುತ್ವ ಹೋರಾಟದ ಧ್ವನಿ ಹತ್ತಿಕ್ಕಿದಾಗ ; ಪ್ರತಿಕ್ರಿಯೆಯಾಗಿ ಹುಟ್ಟಿದ ಕಾವ್ಯ ತುಂಡು ರೊಟ್ಟಿ. ಆಕ್ರೋಶದ ಕಾವ್ಯ ಪ್ರೀತಿ ,ಕರುಣೆ‌‌ ಹಂಚಿ, ಪ್ರಭುತ್ವದ‌ ಠೇಂಕಾರ ಸಹ ಕರಗುವಂತೆ ಕವಿತೆ ಬರೆಯುವ, ಅಲ್ಲಾಗಿರಿರಾಜ್ ಸಮಾಜದ ನಡುವೆ ನೋವಿನ ಧ್ವನಿಗಳಿಗೆ ಕಿವಿಯಾದವರು. ಸರ್ಕಾರ ರೊಕ್ಕ ಮುದ್ರಿಸಬಹುದು ತುಂಡು ರೊಟ್ಟಿಯನ್ನಲ್ಲ ಎಂಬ ಉದ್ದದ ಸಾಲನ್ನು ಕವನ ಸಂಕಲನದ‌ ಮುಖಪುಟ ಆವರಿಸಿದೆ. ತುಂಡು ರೊಟ್ಟಿ ಅಥವಾ ರೊಟ್ಟಿ ಎಂದು ಸಂಕಲನದ ಹೆಸರು ಇದ್ದರೂ ಸಾಕಿತ್ತು. ಸಂಕಲನದ‌ ತಲೆ ಬರಹ ಪರಿಣಾಮಕಾರಿಯಾಗಿಯೇ ಇರುತ್ತಿತ್ತು.ರೈತ ,ರೊಟ್ಟಿ, ರೊಕ್ಕ,‌ಪ್ರಭುತ್ವ, ಕುರುಡು ಪ್ರಭುತ್ವ ಮುಖಾಮುಖಿಯಾಗುವ ಪರಿಯೇ ಓದುಗನಲ್ಲಿ ಕಾವ್ಯದ ಎಚ್ಚರ ಮೂಡಿಸುವಂತಹದ್ದು. ತಾಯ ಮೊಲೆಹಾಲು ವಿಷವಾದ ಕಾಲವಿದು. ಕರುಳು ,ಹೃದಯವಿಲ್ಲದ ಅಧಿಕಾರ , ಆಡಳಿತ ಶಾಹಿಯನ್ನು ಎಚ್ಚರಿಸುವ ಜಾಗೃತ ಕಾವ್ಯ ನಮಗೀಗ ಬೇಕು. ಕನ್ನಡ ಪ್ರಜ್ಞೆ ಪರಿಸರ ಅಂಥದ್ದು. ಅಂತಹ ನಾಡಿ ಮಿಡಿತ ಹಿಡಿದು ಬರೆಯುವ ಕವಿ ಅಲ್ಲಾಗಿರಿರಾಜ್ ರೊಟ್ಟಿ ಕವಿತೆಯಲ್ಲಿ ಅದನ್ನು ಸಾಧಿಸಿದ್ದಾರೆ. ” ನೆತ್ತರಿನ ಮಳೆ ಬಿದ್ದ” ಕವಿತೆಯ ಮೇಲೆ ಲಂಕೇಶರ ಕೆಂಪಾದವೋ ಎಲ್ಲಾ ಕೆಂಪಾದವೋ, ಒಣಗಿದ್ದ ಗಿಡಮರ‌ ನೆತ್ತರ ಕುಡಿದ್ಹಾಂಗ ಕೆಂಪಾದವೋ…ಕವಿತೆಯ ದಟ್ಟ ಛಾಯೆಯಿದೆ. ಲಂಕೇಶರ ಕವಿತೆಯನ್ನು ಮುರಿದು ಕಟ್ಟಿದ ಹಾಗೆ ಇದೆ ನೆತ್ತರಿನ ಮಳೆ ಬಿದ್ದ ಕವಿತೆ.“ಚಪ್ಪಲಿ ಕಥೆ ” ಎಂಬ ಹೆಸರಿನ ಕವಿತೆ ವಾಚ್ಯ ಎನಿಸಿದರೂ ಅಂತಿಮ ಸಾಲಿನಲ್ಲಿ ಧ್ವನಿ ಕಾರಣ ಗೆಲ್ಲುತ್ತದೆ.“ಅಪ್ಪ ಎಂದೂ ಮುಗಿಯದ ಕನಸು” ಕವಿತೆ ಅಪ್ತವಾಗಿದೆ. ‘ಅಪ್ಪ ಕವಿತೆಯ ಕೊನೆಯ ಸಾಲಿನಂತೆ’ ಎನ್ನುವ ಸಾಲು ಮನ‌ಮೀಟುತ್ತದೆ. ಅಲ್ಲದೇ” ನನ್ನವ್ವ ತೀರಿ‌ಕೊಂಡಾಗನನ್ನಪ್ಪ ಅಂದೇ ಒಳ ಒಳಗೇಸತ್ತಿದ್ದ “ಎನ್ನುವ ಸಾಲು ಸಹೃದನನ್ನು ಕಾಡದೇ ಇರದು. ಲಾಕ್ ಡೌನ್ ಮತ್ತು ನಾಯಿ ದಿನಚರಿ ಕವಿತೆ ೨೦೨೦ ನೇ ವರ್ಷದ ಕೋವಿಡ್ ಕರಾಳತೆಯನ್ನು ರಾಚುತ್ತದೆ. ಮನುಷ್ಯರಾಗೋಣ ಕವಿತೆ ಕೋಮುಸೌಹಾರ್ದತೆ ಹಾಗೂ ಭಾರತೀಯತೆಯನ್ನು ಕಟ್ಟಿಕೊಡುತ್ತದೆ. ಕವಿಯ ಕಳಕಳಿ , ಉದ್ದೇಶ ಇಂತಹ ಕವಿತೆಗಳ ಮೂಲಕ ದಾಖಲಾಗುತ್ತದೆ.” ಲಾಲ್ ಸಲಾಂ ಚೆಗು” ಎಂಬ ಕವಿತೆಯಲ್ಲಿ ಕವಿ ಚೆಗೆವಾರನನ್ನು ನೆನಪಿಸಿಕೊಂಡಿದ್ದಾರೆ. ಇದೊಂದು ಸಶಕ್ತ ಕವಿತೆ.ಕ್ರಾಂತಿ ಗೀತೆಯಂತಿದೆ.” ನಿನ್ನ ಕಣ್ಣ ಕಿಂಡಿಯಲ್ಲಿ ಜಗದ ಹಸಿದವರ ದನಿಯಿದೆಶೋಷಿತರ ಹೆಗಲಮೇಲೆ ನಿನ್ನ ಲಾಲ್ ಝೆಂಡಾ ಇನ್ನೂ ಘರ್ಜಿಸಿದೆ” ಎನ್ನುತ್ತಾನೆ ಕವಿ.ನನ್ನ ಕವಿತೆಯಲ್ಲಿಎಂಜಲು ಅನ್ನ ಕಾಯುವ ಅನಾಥ ಬೀದಿ ಮಕ್ಕಳ ಎದೆಯ ಹಾಡು ನನ್ನ ಕವಿತೆಅಕ್ಕ ತಂಗುಯರ ಎದೆಯ ಹಾಡುಲೋಕದ‌ ಹಸಿವು ನೀಗಿಸಿದ ಅನ್ನದಾತರ‌ ಎದೆಯ ಹಾಡುನನ್ನ ಕವಿತೆನನ್ನದೇ ಅಲ್ಲಹಸಿದವರ ಹಾಡು ” ಎಂಬಲ್ಲಿ ಕವಿತೆ ಸಾರ್ವಜನಿಕರದ್ದು, ಶ್ರಮಜೀವಿಗಳದ್ದು ಎಂಬ ಸಂದೇಶವನ್ನು ಕವಿ ಸಮಾಜಕ್ಕೆ ನೀಡುತ್ತಾ ಸಾಗುತ್ತಾನೆ. ” ಅಲ್ಲಿ ವರ್ಣ- ಇಲ್ಲಿ ಧರ್ಮ ” ಎಂಬ ಕವಿತೆಯಲ್ಲಿ ವರ್ಣ ಬೇಧ , ಧರ್ಮಬೇಧ ಇರುವಾಗ ಮನುಷ್ಯರು ಮನುಷ್ಯರಾಗುವುದು ಯಾವಾಗ ? ಎಂಬ ಪ್ರಶ್ನೆ ಎತ್ತುತ್ತಾನೆ ಕವಿ.ಧರ್ಮದ ಅಮಲು ಬಣ್ಣದ ಧಿಮಾಕು ಇನ್ನೆಷ್ಟು ದಿನ ? ಇಂತಹ ಪ್ರಶ್ನೆಗಳನ್ನು ಎತ್ತುವ ಮೂಲಕ ಸಕಾಲಿಕ ,ಸಮಾಕಾಲಿನ ಸಮಸ್ಯೆಗೆ ಮುಖಾಮುಖಿಯಾಗಿ ಕಾವ್ಯವನ್ನು ಎಚ್ಚರಿಕೆಯ ಗಂಟೆಯಾಗಿ ಭಾರಿಸಿದ್ದಾರೆ.ಗೋಡೆ ಎತ್ತರವಾಗುತ್ತಿದೆ ನಿನ್ನ ನನ್ನ ನಡುವೆ , ಧರ್ಮದ ವಿಷಗಾಳಿ ಕುಡಿದು ಎನ್ನುವ ಆತಂಕ ಸಹ ಕವಿಗಿದೆ. ಮಂದಿರ‌ ಮಸೀದಿ ಮೇಲಿನ ಬಿಳಿ ಪಾರವಾಳ ರಕ್ತ ಕಾರುವ ಮುನ್ನ ಕಫನ್ ಸುತ್ತಿಕೊಳ್ಳಬೇಕು ಎಂದು ತಮಗೆ ತಾವೇ ಹೇಳಿಕೊಂಡ ಆತ್ಮಾವಾಲೋಕನದ ಕವಿತೆಗಳು ಓದುಗುನಲ್ಲಿ ಅಚ್ಚರಿಯ ಬದಲಾವಣೆ ತರದೇ ಇರಲು ಸಾಧ್ಯವೇ? ಹೀಗೆ ಕವಿ ಆತಂಕವನ್ನು ತೋಡಿಕೊಳ್ಳತ್ತಲೇ ಆಶಾವಾದವನ್ನು ಸಹ ಇಲ್ಲಿನ‌ ಕವಿತೆಗಳು ಸಾರುತ್ತವೆ. ************************************** ನಾಗರಾಜ ಹರಪನಹಳ್ಳಿ

ತುಂಡು ರೊಟ್ಟಿ Read Post »

ಕಾವ್ಯಯಾನ, ಗಝಲ್

ಗಜ಼ಲ್

ಗಜ಼ಲ್ ಅಮರೇಶ ಎಂಕೆ ಎನ್ನೆದೆಯ ಮರುಭೂಮಿಯಲ್ಲಿ ನಿನ್ನೊಲವಿನ ಓಯಾಸಿಸ್ ಕೇಳುತ್ತಿದ್ದೆನೀ ಮರೆತಿದ್ದರೆ ಮರಳಾಗಿ ಬಿಸಿಲಿಗೆ ಸವೆದು ಹುಡಿಯಾಗಿ ಹೋಗುತ್ತಿದ್ದೆ ಎನ್ನ ಬದುಕಿನಲ್ಲಿ ಎತ್ತರದ ಸ್ಥಾನ ಖಾಲಿ ಇಲ್ಲ ನೀನು ಆವರಿಸಿರುವಾಗನಡೆದ ಹೆಜ್ಜೆ ಗುರುತನು ಅಳಿಸಿ ಹೋಗಿದ್ದರೆ ನೆನಪಾಗಿ ಉಳಿಯುತ್ತಿದ್ದೆ ಬಣ್ಣ ಬಣ್ಣದ ಚಿಟ್ಟೆಯ ಚಿಕ್ಕ ಚಿಕ್ಕ ರೆಕ್ಕೆ ಬಡಿತ ಹೃದಯದ ಬಡಿತವಾಗಿದೆಸಹಿಸದೆ ಕಪ್ಪು ಚುಕ್ಕಿ ಜೀವನದಲ್ಲಿ ಜಾಗ ಕೇಳಿದ್ದರೆ ಕುರೂಪಿ ಆಗುತ್ತಿದ್ದೆ ಆ ಮುಗುಳುನಗುವು ಅಳಿಯದೆ ಉಳಿದುಬಿಟ್ಟಿದೆ ಕಣ್ಣರೆಪ್ಪೆಯ ಒಳಗೆಕನಸಾಗಿ ಕ್ಷಣಮಾತ್ರದಲ್ಲಿ ಕಾಣೆಯಾಗಿದ್ದರೆ ಅಪಜಯ ಹೊಂದುತ್ತಿದ್ದೆ ‘ಅಮರ’ಪ್ರೇಮಕ್ಕೆ ನಿನ್ನೆಸರನ್ನೇ ಮರುನಾಮಕರಣ ಮಾಡಬೇಕೆನಿಸಿದೆನಡೆವ ದಾರಿಗೆ ದೀಪವಾಗದಿದ್ದರೆ ಕತ್ತಲೆಯಲ್ಲಿ ಗುರಿ ಸೇರದೆ ಕೊರಗುತ್ತಿದ್ದೆ ****************************************

ಗಜ಼ಲ್ Read Post »

ನಿಮ್ಮೊಂದಿಗೆ

ಭಾವ ಭುವನ

ಕವಿತೆ ಭಾವ ಭುವನ ಕಲಾ ಭಾಗ್ವತ್ ಕಾದ ನೆಲದ ಮೌನಮಡುಗಟ್ಟಿ ಮಳೆ ಸುರಿವಾಗಹೊಳಹು ಕೊಟ್ಟು ಹಾಯುವ ಮಿಂಚಿಗೆಒಮ್ಮೆ ನಿಂತು ಏನೆಂದು ಕೇಳಬಾರದೆ? ಹರಿವ ನದಿಯೊಡನೆ ಸೇರಿದ ಹನಿ ಮುತ್ತುಅಲೆ ಅಲೆಯಾಗಿ…ಹರಿವ ಮುಸ್ಸಂಜೆಗೆಮೆರುಗು ನೀಡಿ ಜಾರುವ ರಂಗಿಗೆಒಮ್ಮೆ ನಿಂತು ಪಿಸುಮಾತ ಆಲಿಸಬಾರದೇ? ಮೌನ ಮಥಿಸಿ ಪಕ್ವವಾಗಿದೆ ಈಗಮತ್ತೆಲ್ಲವೂ ಮುಚ್ಚಿಕೊಂಡಿದೆಶಿಶಿರದ ಇರುಳಿನಲಿ…ತಣ್ಣನೆ ಬಿಚ್ಚಿದೆ ಮನ ಮಾತ್ರಮುಂಜಾವು ಎಂದಿಗಿಂತಲೂ ಆರ್ದೃಬೆಚ್ಚಗೆ ಸಿಹಿಯ ಸವಿ ದೂರದಲ್ಲೇ ನಿಂತುಕಡಲ ತೆರೆಗಳ ಸೆಳೆವಾಗಹೊಳೆವ ಮುಖದಲ್ಲಿ ಅರಳುವಕನಸುಗಳು ನನಗಷ್ಟೇ ಸೀಮಿತವೀಗಬಿಗುಮಾನವೆನಗೆ ಇದಕ್ಕೆಲ್ಲ ಉತ್ತರವಹುಡುಕಲಾಗದು ನನಗೆಹುದುಗಿರುವ ಮಾತುಗಳುಸುಲಭದಲಿ ಅರ್ಥಕ್ಕೆ ದಕ್ಕದಂತೇ.. ತುದಿ ಮೊದಲಿಲ್ಲದ ಎಷ್ಟೋ ಪ್ರಶ್ನೆಗಳಕಣ್ಣಿನಾಳದಲಿ ಇಳಿದು ತಿಳಿದುಕೊಟ್ಟ ಮುಗುಳು ನಗುವಿನ ಉತ್ತರಅರ್ಥವಾಗಿದೆ ನನಗೆ ಮಾತ್ರಮಾತಾಗಿ ಬರದಿರುವುದನೆಲ್ಲಕವಿತೆಯಾಗಿ ಬರೆಯಲೇ…?ನಿನಗೆ ಮಾತ್ರ. *****************************************************

ಭಾವ ಭುವನ Read Post »

ಕಾವ್ಯಯಾನ

ಗುಲಾಬಿ ಮುಖ

ಕವಿತೆ ಗುಲಾಬಿ ಮುಖ ಡಾ.ಕಾತ್ಯಾಯಿನಿ ಕುಂಜಿಬೆಟ್ಟು ಚೆನ್ನ ಮಲ್ಲಿಕಾಜು೯ನನಮುರಿದ ಅಲುಗು ಎದೆಯಲ್ಲಿನರಳುವ ನೋವು ಎಂದ ಅಕ್ಕನ ನೋವು ನೋಯದವರೆತ್ತ ಬಲ್ಲರು ? ನಿನ್ನ ಪದ ಪದಗಳುಹೆಜ್ಜೆ ಹೆಜ್ಜೆಗೂ ನನ್ನ ಊರು ಪಾದಗಳನ್ನು ಬಗೆದುಎದೆಯಲ್ಲಿ ಮುರಿದ ಅಲುಗುಗಳಾದರೂನೆತ್ತರು ಸುರಿಯುವ ಹೃದಯದಲ್ಲಿ ನೀನು ಹೂವಂತೆ ಅರಳುತ್ತಿರುತ್ತಿನನ್ನ ಕವನಗಳ ಒಳಗಿಂದಲೇ ಪದ ಪದಗಳ ಮುಳ್ಳುಗಳನ್ನೊಡೆದು ಗುಲಾಬಿಮುಖವರಳಿಸಿ ಮುಗುಳು ನಗುತ್ತಲೇ ಇರುತ್ತಿ … ನಿನ್ನ ನಾಲಗೆ ಚೂರಿಯಾದರೂನನ್ನ ಹೃದಯ ಕೇಕಾಗಿಯೇ ಇರುತ್ತದೆತುಂಡು ತುಂಡುಗಳು ಬಾಯ್ತೆರೆದುನೀನು ನನ್ನ ಎದೆಯಲ್ಲಿ ಹುಟ್ಟಿದದಿನವನ್ನು ನೆನಪಿಸಿಕೊಳ್ಳುತ್ತನಿನ್ನ ಮುಂದೆ‘ಹ್ಯಾಪಿ ಬತ್೯ಡೇ ಟೂ ಯೂ..’ ಹಾಡುತ್ತಮೇಣದ ಬತ್ತಿ ಊದಿ ಆರಿಸುವ ನಿನ್ನ ಹಿಂದೆ ಕತ್ತಲಿಗೆ ಮುಖ ಮಾಡಿ ಎದೆಯು ಒಳಗೊಳಗೇ ಬಿಕ್ಕಿಬಿಕ್ಕಿ ಅಳುವ ಕಂಬನಿಗಳನ್ನುಆಗಸದ ಒಂದು ತುಂಡು ಕಚೀ ೯ಫಲ್ಲಿ ಒರಸಿಕೊಂಡುಅವು ಕಾಮೋ೯ಡಗಳಾಗಿಮಳೆ ಸುರಿಯುವುದನ್ನೇ ನೋಡುತ್ತ…ಬೆನ್ನು ತಿರುವಿ ನಡೆದ ನಿನ್ನ ನೆರಳನ್ನುದೀಪ ಹಿಡಿದು ಹಿಂಬಾಲಿಸುತ್ತಒಳಗಿನ ಕತ್ತಲಲ್ಲಿ ಕುಳಿತ ನನ್ನನ್ನುಆತ್ಮದಲ್ಲೇ ಸಂತೈಸಿಕೊಳ್ಳುತ್ತ… *****************************************

ಗುಲಾಬಿ ಮುಖ Read Post »

ಪುಸ್ತಕ ಸಂಗಾತಿ

ಪರಿಮಳದ ಹನಿಗಳು

ಪುಸ್ತಕ ಸಂಗಾತಿ ಪರಿಮಳದ ಹನಿಗಳು “ಸಖ ಸತ್ತ ಹೃದಯ ಮಸಣ ಸೇರಿತು ನಿನ್ನ ಕುಡಿಮೀಸೆಯ ಕುಂಚ ದಿಂದ ತುಟಿಯ ಮಾಸ್ತಿಗಲ್ಲಿಗೆ ಹೆಸರು ಬರೆದುಬಿಡು ಭಗ್ನ ಪ್ರೇಮಿಗಳು ಅಧ್ಯಯನಕ್ಕೆ ಬರುತ್ತಾರೆ”. ಇದು ಎ. ಎಸ್. ಮಕಾನದಾರ ಅವರ “ಪ್ಯಾರಿ ಪದ್ಯ” ಹನಿಗವನ ಸಂಕಲನದ ಒಂದು ಹನಿ. “ ಮನಸ್ಸಿನ ಆಳದಲ್ಲಿ ಮುದಿವಯಸ್ಸಿನವರಿಗಿಂತ ಯುವ ಜನರೇ ಹೆಚ್ಚು ಏಕಾಂಗಿತನವನ್ನು ಅನುಭವಿಸುತ್ತಾರೆ” ಅನ್ನೋ  ಮಾತಿದೆ. ಆ ಏಕಾಂತಕ್ಕೆ ಸಂಗಾತಿಯೇ ಕವಿತೆ.  ಇಲ್ಲಿರುವ ಹನಿಗವನಗಳು ಪ್ರೀತಿ, ಪ್ರೇಮ ವಿರಹ ಹಾಗೂ ಶೋಷಣೆಯ ವಿರುದ್ಧ ತಣ್ಣಗಿನ ಹನಿಯಂತೆ ಕೆಲವು ಬಾರಿ ನುಡಿದರೆ, ಮತ್ತೊಮ್ಮೆ ಭೋರ್ಗರೆವ ನದಿಯಂತೆ ಬೊಬ್ಬಿರುತ್ತವೆ.  ಪ್ರೇಮ ಕವಿ ಪ್ರೀತಿಯ ತಳಮಳವನ್ನು ಅದರ ಜೊತೆಗೆ ಸೃಷ್ಟಿಯ ಸೊಬಗನ್ನು ಅದರ ವಿಶ್ವರೂಪ ಅನನ್ಯತೆಯನ್ನು ಶಬ್ದಗಳ ಹಾರದಲ್ಲಿ ಪೋಣಿಸುವ ಪ್ರಯತ್ನವನ್ನು ತನ್ನ ಅನುಭವಗಳ ಆಧಾರದ ಮೇಲೆ ಮಾಡುತ್ತಲೇ ಕಾವ್ಯ ಕನ್ನಿಕೆಯ ಸೆರಗಲ್ಲಿ ಪುಷ್ಪವೇಷ್ಟಿತ ಪರಿಮಳವನ್ನು ತುಂಬುವ ಪ್ರಯತ್ನ ಮಾಡುತ್ತಾನೆ. ಅಂತಹ ಪ್ರೇಮದ ತಹತಹವನ್ನು ತೋಡಿಕೊಳ್ಳುವ ಇಲ್ಲಿಯ ಸಾಲುಗಳು ವಿಚಿತ್ರವಾಗಿ ಆಕರ್ಷಿಸುತ್ತವೆ. ಇಂತಹ ಸಾಲುಗಳನ್ನು  ಉರ್ದು ಸಾಹಿತ್ಯದಲ್ಲಿ ಹೇರಳವಾಗಿ ಶಾಯರಿ ರೂಪದಲ್ಲಿ ಬಳಸುತ್ತಾರೆ. ಅಂತಹ ಆಕರ್ಷಕ ಉರ್ದು ಪದಗಳನ್ನು ಕನ್ನಡಕ್ಕೆ ಹೊಂದಿಸಿಕೊಂಡು ಇಲ್ಲಿಯ  ಹನಿಗಳಿಗೆ ತೀವ್ರತೆಯನ್ನು ನೀಡಿದ್ದಾರೆ ಎ. ಎಸ್. ಮಕಾನದಾರ. ಪ್ರೇಮ ಮತ್ತು ವಿರಹ ಇಲ್ಲಿಯ ಹನಿಗವನಗಳಲ್ಲಿ ವ್ಯಕ್ತವಾಗಿಯೂ ಅಲ್ಲಿಯೇ ಸಾಮಾಜಿಕ ಅಂತರಗಳಿಗೆ, ವಿಘಟನಾ ವಿಧಾನಗಳಿಗೆ ಸಣ್ಣ ಚಾಟಿಯನ್ನು ಬೀಸುತ್ತವೆ ಕವನಗಳು. “ಕಬರಸ್ಥಾನದಲ್ಲಿ ಜಾಗ ನಿಗದಿಯಾಗಿದೆ ಸ್ಮಾರಕ ಶಿಲೆ ಕೆತ್ತಲಾಗಿದೆ ದಿನಾಂಕ ಬಿಟ್ಟಿದ್ದಾನೆ ಕಲೆಗಾರ ಜನಾಜ್ ಇನ್ನೇನು ಬರಬಹುದು ಅನ್ನ ತಿನ್ನುವ ಕೈಗಳಿಗೆ ಧರ್ಮದ ಅಮಲು ಏರಿದೆ ಪಂಡಿತರ ಭಾಷಣ ಪಾಶಾಣಕ್ಕಿಂತ ಸಿಹಿಯಾಗಿದೆ” ಎನ್ನುವ ಸಾಲುಗಳಲ್ಲಿ ಜ್ಞಾನವಲಯವನ್ನು ತರಾಟೆಗೆ ತೆಗೆದುಕೊಂಡರೆ, ಧರ್ಮದ ಕುರುಡನ್ನು ವಿಡಂಬಿಸುತ್ತಾರೆ. ಪ್ರೇಮದಲ್ಲಿಯೇ  ಧ್ಯಾನಸ್ಥ ಸ್ಥಿತಿಯನ್ನ ಕಂಡ ಕವಿ ಪರಂಪರೆ ನಮ್ಮಲ್ಲಿದೆ.  “ಡೆತ್ ಇನ್ ಲವ್. ಲವ್ ಇನ್ ಡೆತ್” ಪ್ರೀತಿಯಲ್ಲೆ ಸಾವು, ಸಾವಿನಲ್ಲಿಯೂ ಮೂಡುವ ಪ್ರೀತಿ. ಆ ಸ್ಥಿತಿ ಇಲ್ಲಿದೆ. “ಖಬರ್‌ನಲ್ಲಿ ಲೀನವಾಗಿರುವೆ ದೀಪವಾಗಿ ಬಂದರೆ ಪತಂಗವಾಗಿ ಸುತ್ತುವೆ” ಇಂತಹ ಸೊಗಸಾದ ಸಾಲುಗಳು ನೆನಪಿನಲ್ಲಿ ಉಳಿದೇ ಬಿಡುತ್ತವೆ. “ಸಾವಿನ ಕದ ತಟ್ಟಿದ ಫಕೀರನಿಗೆ ಜೀವದ ಹಂಗೂ ಇಲ್ಲಾ ಸಾವಿನ ಹಂಗೂ ಇಲ್ಲಾ ಚಮಲಾದ ಚುಂಗ ಇದೆ ತೋಡಿದ ಗೋರಿ ಜನಾಜಾ ತಬ್ಬಿದರೂ ತಬ್ಬಲಿ ಆಗಲಾರ ಪ್ಯಾರಿ” . ಸಾಹಿತ್ಯದ ವಸ್ತು ಇತಿಹಾಸವೇ ಇರಲಿ, ಸಮಕಾಲೀನ ಸಂಗತಿಯೇ ಆಗಿರಲಿ, ಅದು ಸತ್ಯಕ್ಕೆ ವಿಮುಖವಾಗಿರಬಾರದು. ಭಾವ ಜಗತ್ತಿನ ಉತ್ಪ್ರೇಕ್ಷೆ ಇದ್ದರೂ ವಾಸ್ತವಕ್ಕೆ ನಿಕಟವಾಗಿರಬೇಕು. ಇಲ್ಲಿ ಒಂದೇ ಕವನದಲ್ಲಿ ಬಳಕೆಯಾಗಿರುವ  ಫಕೀರ, ಚಮಲಾ, ಚುಂಗ, ಜನಾಜ್ , ಪ್ಯಾರಿ ಇತ್ಯಾದಿ ಉರ್ದು ಪದಗಳು ಕಟ್ಟಿಕೊಟ್ಟ ಸಂವೇದನೆ ಮಹತ್ವದ್ದು. ಸಾವು, ಬದುಕು, ಹಂಗು, ಗೋರಿ, ತಬ್ಬಲಿ ಕನ್ನಡದಲ್ಲಿ ಮಾತಾಡಿದರೆ,ಉಳಿದವು ಉರ್ದುವಿನಲ್ಲಿ ಮಾತನಾಡಿಯೂ ಸಮಕಾಲೀನವೂ ಆಗಿವೆ ಹಾಗೇ ಇತಿಹಾಸದ ಉದ್ದಕ್ಕೂ ಹಬ್ಬಿದ ಪ್ರೇಮಜಗತ್ತಿನ ವಿಷಾದವೇ ಆಗಿದೆ. ಪ್ರೀತಿಯ ಹಂಬಲಿಕೆಯ ಇನ್ನೊಂದು ಕವನ ಹೇಳುವ ಆಶಯ ಹಳತಾದರೂ ಬಳಸಿದ ಉಪಮೆಗಳು ಮನಃಸೆಳೆಯುತ್ತವೆ. “ಸಾಕಿ ನಿನ್ನ ಪ್ರೀತಿ ಹಿಡಿ ನವಣಿಯಷ್ಟು ಪಡೆದೆ ತೀರಲು ಮಾಡಿಕೊಂಡಿರುವೆ ಸಾಲ ಪಡಿ ಹೊನ್ನಿನಷ್ಟು.” ಈ ಅಲ್ಪ ಸಾಲುಗಳು ಹೇಳುವುದು ಅಲ್ಪವೇನಲ್ಲ ಅವಳ ಪ್ರೀತಿಗಾಗಿ ಹಂಬಲಿಸಿದವನಿಗೆ ಸಿಕ್ಕಿದ್ದು ಹಿಡಿ ನವಣೆಯಷ್ಟು. ಅಲ್ಪ ಪ್ರೀತಿ. ಆದರೆ ನವಣೆ ಅಲ್ಪವಾಗುವುದಾರೂ ಹೇಗೆ? ಹಾಗೇ ಪ್ರೇಮಿ ಅದಕ್ಕಾಗಿ ಹಂಬಲಿಸಿ ಮಾಡಿದ್ದು ಪಡಿ ಹೊನ್ನಿನಷ್ಟು ಸಾಲ. ಸಾಲಗಾರನಾಗಲೂ ಹಿಂದೆ ಮುಂದೆ ನೋಡದಂತಹ ಸ್ಥಿತಿ ಅವನದು.  ಮನಸ್ಸನ್ನು ಉಲ್ಲಸಿತಗೊಳಿಸುವುದು ಕಾವ್ಯ. ರಸಸ್ವಾದನೆಯೇ ಕವಿತೆ ಮೂಲ ಆಶಯ. ಇಲ್ಲಿಯ ಕವಿತೆಗಳು ಪ್ರೇಮ ರಸಾನುಭವದ ಮತ್ತನ್ನು ಓದುಗನಿಗೆ ಕುಡಿಸುವಂತಿವೆ. ಪ್ರೇಮಬದುಕಿನ ಕ್ಷಣಗಳು ಸುಖದ ದುಃಖದ ನೋವಿನ, ನಿರಾಶೆಯ, ಆಕ್ರೋಶದ ಅನುಭವಗಳನ್ನು  ಇಲ್ಲಿ ಬಿಚ್ಚು ನುಡಿಗಳಲ್ಲಿ ತೆರೆದಿಡಲಾಗಿದೆ. “ಧರ್ಮ, ಧರ್ಮಗುರುವಿನ ಉಪದೇಶ ಸಾಕು ರಟ್ಟೆಯ ಬಲ ರೊಟ್ಟಿಯ ರುಚಿ ಕುರಿತು ಉಪದೇಶ ಬೇಕು. ಪ್ರೇಮದ ಒಳದನಿಯನ್ನು ಮುಕ್ತವಾಗಿ ಅಭಿವ್ಯಕ್ತಿಸುವ  ಹನಿಗವನಗಳನ್ನು ಓದುತ್ತಾ ಪ್ರೀತಿಯ ಕಾವು ಮೈಗೂ ಏರಿದಂತಾಗಿ ಓದುಗ ಮೈಮರೆಯಬಹುದು. ಪ್ರೇಮದ ಅಭಿವ್ಯಕ್ತಿಗೆ ಅಂತಹ ಹೃದಯವಿದೆ. ಕತ್ತಲೆಯಾಚೆಗಿನ ಅನೂಹ್ಯ ನಿಗೂಢತೆಗಳನ್ನು ಶೋಧಿಸುವ ಬೆಳಕಿನ ಸೂಡಿಗಾಗಿ ಹುಡುಕುತ್ತಾ, ಆ ತೇಜದ ಹಂಬಲವನ್ನೇ ಕಣ್ಣಲ್ಲಿ ಸೃಷ್ಟಿಸಿಕೊಂಡವ ಒಂದೋ  ಕವಿಯಾಗಿರಲು ಸಾಧ್ಯ. ಇಲ್ಲ ವ್ಯಾಕುಲ ಪ್ರೇಮಿಯಾಗಿರಬಹುದು. ತಂತ್ರದ ಮೂಲಕ ರಚಿಸಿದ ವಿನ್ಯಾಸ ಯಾವಾಗಲೂ ಸುಂದರವಾಗಿಯೇ ಇರುತ್ತದೆ. ಈ ಪ್ರಯತ್ನ ಎಲ್ಲ ಪ್ರಕಾರಗಳಿಗೂ ಅನ್ವಯಿಸುತ್ತದೆ. ಆದರೆ ಮಕಾನದಾರ ಅವರ ಎಲ್ಲ ಹನಿಗವನಗಳು ವಿನ್ಯಾಸಕ್ಕೆ ಪಕ್ಕಾಗಿಲ್ಲ. ಆದರೆ ಆಶಯದಲ್ಲಿ ಹಿಂದೆ ಬಿದ್ದಿಲ್ಲ. ಅರ್ಥದಲ್ಲಿ ಸೋತಿಲ್ಲ. ಹಾಗಾಗಿ ಓದುಗ ಒಮ್ಮೆ ಕೈಗೆತ್ತಿಕೊಂಡರೆ ಸರಸರನೇ ಓದಿ ಮುಗಿಸುವವರೆಗೂ ಸರಾಗವಾಗಿ ಕರೆದೊಯ್ಯುತ್ತವೆ ಹನಿಗಳು.ಕೆಲವನ್ನು ಗಪದ್ಯದ ಗತಿಯಲ್ಲಿ ಕಟ್ಟಿಕೊಟ್ಟರೆ ಇನ್ನು ಕೆಲವು ಎರಡು ಸಾಲುಗಳ ಪದ ಮಿತಿಯಲ್ಲಿ ಅರ್ಥ ಮಹತ್ತನ್ನು ಮೈಗೂಡಿಸಿಕೊಂಡಿವೆ. ಅಲ್ಲಲ್ಲಿ ಅಸ್ಪಷ್ಟ ಪದ್ಯಗಳು ಇದ್ದು ಅವು ಸಂಕಲನದ ಒಟ್ಟಂದಕ್ಕೆ ಭಂಗ ತರುವುದಿಲ್ಲ. ಕವಿ ಇನ್ನಷ್ಟು ಈ ಕವಿತಾ ಬಂಧದೊಳಗೆ ಮುಳುಗಿ ಸಾಕಿಯನ್ನು ಇನ್ನು ಒಳಗೊಳ್ಳುವ ಪ್ರಯತ್ನ ಮಾಡಿದ್ದರೆ ಹನಿಗವನಗಳು ಇನ್ನಷ್ಟು ಉತ್ಕಟವಾಗಿ ಹೊಮ್ಮುತ್ತಿದ್ದವು.  ಕವಿತೆಗಳಿಗೆ ಸುಂದರ ಚಿತ್ರಗಳ ಬರೆದು ಹನಿಗವನಗಳ ಗಹನತೆಯನ್ನು ಹೆಚ್ಚಿಸಿದ ಚಿತ್ರಕಾರನಿಗೂ ಹಾಗೂ ಕವಿಗೂ ಶುಭಾಶಯಗಳು. ******************************************** ನಾಗರೇಖಾ ಗಾಂವಕರ್

ಪರಿಮಳದ ಹನಿಗಳು Read Post »

You cannot copy content of this page

Scroll to Top